• Home
  • »
  • News
  • »
  • coronavirus-latest-news
  • »
  • ಲಾಕ್ ಡೌನ್ ಅವಧಿಯಲ್ಲಿ ಶೋಕಿಗಾಗಿ ದರೋಡೆ ; ಅಪ್ರಾಪ್ತ ಬಾಲಕ ಸೇರಿ 9 ಜನರ ಬಂಧನ

ಲಾಕ್ ಡೌನ್ ಅವಧಿಯಲ್ಲಿ ಶೋಕಿಗಾಗಿ ದರೋಡೆ ; ಅಪ್ರಾಪ್ತ ಬಾಲಕ ಸೇರಿ 9 ಜನರ ಬಂಧನ

ಬಂಧಿತ ಆರೋಪಿಗಳು

ಬಂಧಿತ ಆರೋಪಿಗಳು

ದರೋಡೆಕೋರರು ಚಾಕೂ ತೋರಿಸಿ ಹಲ್ಲೆ ನಡೆಸಿದ ಆ ಚಾಲಕನ ಬಳಿಯಿದ್ದ 1.28 ಲಕ್ಷ ರೂಪಾಯಿ ಹಣ, ಎರಡು ಮೊಬೈಲ್ ದೋಚಿ ಹಲ್ಲೆ ನಡೆಸಿದ್ದರು. ಅಲ್ಲದೇ, ಲಾರಿ ಕೀಯನ್ನು ತೆಗೆದುಕೊಂಡು ಪರಾರಿಯಾಗಿದ್ದರು.  

  • Share this:

ವಿಜಯಪುರ(ಮೇ.27): ಲಾಕ್​​ ಡೌನ್ ಸಡಿಲುಗೊಂಡಿದ್ದೆ ತಡ. ಈ ಯುವಕರ ತಂಡ ಹೊಸದೊಂದು ಸ್ಕೆಚ್ ಹಾಕಿತ್ತು. ಮೇ 22 ರಂದು ಇವರು ಮಾಡಿದ ಮೊದಲ ಪ್ಲ್ಯಾನ್​ ಯಶಸ್ವಿಯಾಗಿತ್ತು. ವಾಮಮಾರ್ಗದ ಮೂಲಕ ಶೋಕಿ ನಡೆಸಲು ಮಾಡಿದ ದರೋಡೆ ಸಕ್ಸಸ್ ಆಗಿತ್ತು. ಇಂಥ ಕೃತ್ಯದಲ್ಲಿ ತೊಡಗಿದ್ದ ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ 9 ಜನರನ್ನು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.  


ಮೇ 22 ರಂದು ಇಂಡಿಯ ಧರ್ಮರಾಜ ಹೂಗಾರ ಎಂಬ ಚಾಲಕ ತನ್ನ ಲಾರಿಯನ್ನು ತೆಗೆದುಕೊಂಡು ಮಾವಿನ ಹಣ್ಣು ತರಲು ಹೊರಟಿದ್ದ. ಈತನ ಲಾರಿ ವಿಜಯಪುರ ಕಡೆಯಿಂದ ದಾವಣಗೆರೆಗೆ ಲಾರಿಯೊಂದು ಹೊರಟಿತ್ತು. ಈ ಲಾರಿಯನ್ನು ಮನಗೂಳಿ ಬಳಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50 ರಲ್ಲಿ ತಡೆದ ಈ ದರೋಡೆಕೋರರು ಚಾಕೂ ತೋರಿಸಿ ಹಲ್ಲೆ ನಡೆಸಿದ ಆ ಚಾಲಕನ ಬಳಿಯಿದ್ದ 1.28 ಲಕ್ಷ ರೂಪಾಯಿ ಹಣ, ಎರಡು ಮೊಬೈಲ್ ದೋಚಿ ಹಲ್ಲೆ ನಡೆಸಿದ್ದರು. ಅಲ್ಲದೇ, ಲಾರಿ ಕೀಯನ್ನು ತೆಗೆದುಕೊಂಡು ಪರಾರಿಯಾಗಿದ್ದರು.


ಈ ಪ್ರಕರಣವನ್ನು ಬೆನ್ನತ್ತಿದ್ದ ಬಸವನ ಬಾಗೇವಾಡಿ ಡಿವೈಎಸ್ಪಿ ಶಾಂತವೀರ ಮತ್ತು ಸಿಪಿಐ ಸೋಮಶೇಖರ ಜುಟ್ಟಲ್, ಮನಗೂಳಿ ಪಿಎಸ್ಐ ಎನ್. ಬಿ. ಶಿವೂರ, ನಿಡಗುಂದಿ ಪಿಎಸ್ಐ ಸಿ. ಬಿ. ಚಿಕ್ಕೋಡಿ, ಬಸವನ ಬಾಗೇವಾಡಿ ಪಿಎಸ್ಐ ಬಿ. ಎಮ್. ಬಸವನಗೌಡರ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಅಲ್ಲದೇ, ಮತ್ತೋಂದು ದರೋಡೆಗೆ ಸಂಚು ರೂಪಿಸಿದ್ದ ಓರ್ವ ಅಪ್ರಾಪ್ತ ಬಾಲಕ ಸೇರಿ ಒಟ್ಟು 9 ಜನರ ತಂಡವನ್ನು ಬಂಧಿಸಿದೆ. ಅಲ್ಲದೇ, ಆರೋಪಿಗಳು ಈ ಹಿಂದೆ ದರೋಡೆಗೆ ಬಳಸಿದ್ದ ಅಟೋ ಮತ್ತು ಬೈಕ್ ಹಾಗೂ ಇತರ ಸಲಕರಣೆಗಳನ್ನು ವಶಕ್ಕೆ ಪಡೆದಿದ್ದಾರೆ.


ಈ ಆರೋಪಿಗಳು ಹಗಲು ಹೊತ್ತಿನಲ್ಲಿ ಇತರರಂತೆ ಅಟೋ ಓಡಿಸುವುದು, ಬಟ್ಟೆ ಮಾರಾಟ ಮಾಡುವುದು ಸೇರಿದಂತೆ ಇತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಶೋಕಿ ಜೀವನಕ್ಕಾಗಿ ಇದೇ ಮೊದಲ ಬಾರಿಗೆ ದರೋಡೆ ನಡೆಸಿದ ಒಂದು ವಾರದೊಳಗೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.


ಇದನ್ನೂ ಓದಿ :  ಟ್ರಾವೆಲ್ ಹಿಸ್ಟರಿ, ರೋಗಲಕ್ಷಣ ಇಲ್ಲದ ವ್ಯಕ್ತಿಗೆ ಕೊರೋನಾ ಸೋಂಕು; ಬೆಚ್ಚಿಬಿದ್ದಿದೆ ತುಮಕೂರು


ಈ ದರೋಡೆಯಲ್ಲಿ ತೊಡಗಿದ್ದ ಬಸವನ ಬಾಗೇವಾಡಿ ತಾಲೂಕಿನ ಸಂಗಮೇಶ ಮಡಿವಾಳಪ್ಪ ಅಗಸರ, ಬಸವರಾಜ ತಿಪ್ಪಣ್ಣ ಮಡಿವಾಳರ, ಬಸವರಾಜ ಅಪ್ಪಾಸಾಹೇಬ ಮೇಟಿ, ಶಿವಶಂಕರ ಮುರುಗೇಶ ಕಂಟೆ, ರವಿ ಬಸಪ್ಪ ಬಿರಾದಾರ, ಭೀಮರಾಯ ಮಡಿವಾಳಪ್ಪ ಅಗಸರ, ಶೇಖಪ್ಪ ಬಸಪ್ಪ ಮಡಿವಾಳ, ಬಸವರಾಜ ಮಲ್ಲನಗೌಡ ಬಿರಾದಾರ ಹಾಗೂ ಒಬ್ಬ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ. ಅಲ್ಲದೇ, ಅವರ ಬಳಿಯಿದ್ದ 89,000 ರೂಪಾಯಿ ನಗದು ಹಣ, ದರೋಡೆಗೆ ಬಳಸಿದ ಅಟೋ ರಿಕ್ಷಾ, ಬೈಕ್, ಮಚ್ಚು, ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

Published by:G Hareeshkumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು