Cricket Australia: ಕೊರೋನಾ ನಡುವೆ ಆಸೀಸ್ ಆಟಗಾರರಿಗೆ ಭರ್ಜರಿ ಗಿಫ್ಟ್​ ನೀಡಿದ ಕ್ರಿಕೆಟ್ ಆಸ್ಟ್ರೇಲಿಯಾ!

ಶಾನ್ ಮಾರ್ಷ್, ನೇಥನ್ ಕಲ್ಟರ್ ನೈಲ್, ಮಾರ್ಕಸ್ ಸ್ಟಾಯಿನಿಸ್ ಕೂಡ ಈ ಬಾರಿ ಕ್ರಿಕೆಟ್ ಆಸ್ಟ್ರೇಲಿಯಾ ಕೇಂದ್ರೀಯ ಒಪ್ಪಂದ ಪಡೆಯಲು ವಿಫಲರಾಗಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ

ಕ್ರಿಕೆಟ್ ಆಸ್ಟ್ರೇಲಿಯಾ

 • Share this:
  ಮಾರಕ ಕೊರೋನಾ ವೈರಸ್​ನಿಂದಾಗಿ ಇಡೀ ವಿಶ್ವವೇ ತತ್ತರಿಸಿಹೋಗಿದೆ. ಎರಡು ಲಕ್ಷಕ್ಕೂ ಅಧಿಕ ಜನರು ಈಗಾಗಲೇ ಸಾವನ್ನಪ್ಪಿದ್ದು, 31 ಲಕ್ಷಕ್ಕೂ ಹೆಚ್ಚಿನ ಜನರಿಗೆ ಸೋಂಕು ತಗುಲಿದೆ. ಕೊರೋನಾದಿಂದಾಗಿ ಸದ್ಯ ಕ್ರಿಕೆಟ್ ಜಗತ್ತು ಕೂಡ ಸ್ತಬ್ದಗೊಂಡಿದೆ. ಇನ್ನೂ ಕನಿಷ್ಠ ಎರಡು- ಮೂರು ತಿಂಗಳ ಕಾಲ ಯಾವುದೇ ಕ್ರಿಕೆಟ್ ಪಂದ್ಯ ನಡೆಯುವುದು ಅನುಮಾನ ಎಂದು ಹೇಳಲಾಗಿದೆ.

  ಈ ನಡುವೆ ಆಸ್ಟ್ರೇಲಿಯಾದಲ್ಲೂ ಕೊರೋನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಂಗರೂಗಳ ನಾಡಲ್ಲಿ 6,746 ಜನರಿಗೆ ಸೋಂಕು ತಗುಲಿರುವುದು ಕನ್ಫರ್ಮ್​​​ ಆಗಿದ್ದು, 90 ಮಂದಿ ಸಾವನ್ನಪ್ಪಿದ್ದಾರೆ. ಹೀಗಿರುವಾಗಲೇ ಕ್ರಿಕೆಟ್ ಆಸ್ಟ್ರೇಲಿಯಾ ತಮ್ಮ ಆಟಗಾರರಿಗೆ ಭರ್ಜರಿ ಉಡುಗೊರೆಯೊಂದನ್ನು ನೀಡಿದೆ.

  Rohit Sharma Birthday Special: ಟೀಂ ಇಂಡಿಯಾ ಉಪ ನಾಯಕ ರೋಹಿತ್ ಮಾಡಿರುವ ಈ ಸಾಧನೆ ನಾಯಕ ಕೊಹ್ಲಿಯೂ ಮಾಡಿಲ್ಲ!

  ಕ್ರಿಕೆಟ್ ಆಸ್ಟ್ರೇಲಿಯಾ 2020-21ನೇ ಸಾಲಿನ ಆಟಗಾರರ ಸೆಂಟ್ರಲ್ ಕಾಂಟ್ರಾಕ್ಟ್ ಲಿಸ್ಟ್ ಪ್ರಕಟಮಾಡಿದೆ. ಈ ಕಾಂಟ್ರಾಕ್ಟ್ ಲಿಸ್ಟ್​ನಲ್ಲಿ ಕಳೆದೊಂದು ವರ್ಷದಿಂದ ಕಳಪೆ ಪ್ರದರ್ಶನ ನೀಡುತ್ತಿದ್ದ ಸ್ಟಾರ್ ಆಟಗಾರರನ್ನೇ ಕೈಬಿಡಲಾಗಿದೆ. ಪ್ರಮುಖವಾಗಿ ಟೆಸ್ಟ್ ಸ್ಪೆಷಲಿಸ್ಟ್ ಎಡಗೈ ಬ್ಯಾಟ್ಸ್​ಮನ್ ಉಸ್ಮಾನ್ ಖ್ವಾಜಾರನ್ನ ಕಾಂಟ್ರಾಕ್ಟ್ ಲಿಸ್ಟ್​ನಿಂದ ಕೈಬಿಟ್ಟಿರುವ ಸಿಎ, ಹಿರಿಯ ಆಟಗಾರನಿಗೆ ಶಾಕ್ ನೀಡಿದೆ.

     ಇದರ ಜೊತೆಗೆ ಶಾನ್ ಮಾರ್ಷ್, ನೇಥನ್ ಕಲ್ಟರ್ ನೈಲ್, ಮಾರ್ಕಸ್ ಸ್ಟಾಯಿನಿಸ್ ಕೂಡ ಈ ಬಾರಿ ಕ್ರಿಕೆಟ್ ಆಸ್ಟ್ರೇಲಿಯಾ ಕೇಂದ್ರೀಯ ಒಪ್ಪಂದ ಪಡೆಯಲು ವಿಫಲರಾಗಿದ್ದಾರೆ.

  Rishi Kapoor Passes Away: ರಿಷಿ ಕಪೂರ್ ನಿಧನಕ್ಕೆ ಕ್ರಿಕೆಟ್ ಜಗತ್ತು ಸಂತಾಪ..!

  ಕ್ರಿಕೆಟ್ ಆಸ್ಟ್ರೇಲಿಯಾ ಕೇಂದ್ರೀಯ ಒಪ್ಪಂದ ಪಡೆದ ಮತ್ತು ಕಳೆದುಕೊಂಡ ಆಟಗಾರರ ಪಟ್ಟಿ ಇಲ್ಲಿದೆ.

  ಒಪ್ಪಂದದಲ್ಲಿರುವ ಆಟಗಾರರು:

  ಆ್ಯಷ್ಟನ್ ಅಗರ್, ಜೋ ಬರ್ನ್ಸ್, ಅಲೆಕ್ಸ್ ಕೇರಿ, ಪ್ಯಾಟ್ ಕಮ್ಮಿನ್ಸ್, ಆ್ಯರೋನ್ ಫಿಂಚ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಮಾರ್ನಸ್ ಲಾಬುಶೇನ್, ನೇಥನ್ ಲಿಯಾನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಪೈನ್, ಜೇಮ್ಸ್ ಪ್ಯಾಟಿನ್ಸನ್, ಜೇ ರಿಚರ್ಡ್‌ಸನ್, ಕೇನ್ ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಂ ಜಂಪಾ.

  ಒಪ್ಪಂದದಿಂದ ಕೈಬಿಟ್ಟ ಆಟಗಾರರು:

  ಉಸ್ಮಾನ್ ಖ್ವಾಜಾ, ನೇಥನ್ ಕಲ್ಟರ್-ನೈಲ್, ಪೀಟರ್ ಹ್ಯಾಂಡ್ಸ್ಕಾಂಬ್, ಮಾರ್ಕಸ್ ಹ್ಯಾರಿಸ್, ಶಾನ್ ಮಾರ್ಷ್, ಮಾರ್ಕಸ್ ಸ್ಟಾಯಿನಿಸ್, ಆ್ಯಷ್ಟನ್ ಟರ್ನರ್, ಪೀಟರ್ ಸಿಡಲ್.
  First published: