Vaccine Certificate: ಇನ್ಮೇಲೆ ವ್ಯಾಕ್ಸಿನ್ ಸರ್ಟಿಫಿಕೇಟ್​ನಲ್ಲಿ ಹುಟ್ಟಿದ ದಿನಾಂಕ ಕಡ್ಡಾಯ, ಎಲ್ಲೆಲ್ಲಿ ಇದರ ಅವಶ್ಯಕತೆ ಇದೆ?

ಈ ಹೊಸ ಫೀಚರ್ ಹಾಗೂ ಜನ್ಮದಿನಾಂಕದ ಫಾರ್ಮ್ಯಾಟ್ "yyy-mm-dd" ಅಂತರಾಷ್ಟ್ರೀಯ ಪ್ರಯಾಣಿಕರಿಗೆ​ ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ(ಸೆ.26): ಕೋವಿಡ್-19(COVID-19) ಎರಡು ಡೋಸ್ ಲಸಿಕೆ ತೆಗೆದುಕೊಂಡಿರುವರು ಹಾಗೂ ವಿದೇಶ ಪ್ರಯಾಣ ಮಾಡಲು ಬಯಸುತ್ತಿರುವವರು ತಮ್ಮ ಕೋವಿನ್ ಪ್ರಮಾಣ ಪತ್ರದಲ್ಲಿ(CoWin Certificate) ಪೂರ್ಣ ಪ್ರಮಾಣದ ಜನ್ಮದಿನಾಂಕವನ್ನು(Date of Birth) ಹೊಂದಿರಬೇಕು ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆಯ(National Heath Organization CEO) ಸಿಇಒ ಡಾ.ಆರ್​ಎಸ್​ ಶರ್ಮಾ(Dr. RS Sharma) ಹೇಳಿದ್ದಾರೆ.

  ಲಸಿಕೆ ಪಡೆದವರ ಜನ್ಮ ದಿನಾಂಕವು ಕೋವಿನ್ ಸರ್ಟಿಫಿಕೇಟ್​ನಲ್ಲಿ "yyy-mm-dd" (Year-Month-Day) ಫಾರ್ಮ್ಯಾಟ್​ನಲ್ಲಿ ಇರಬೇಕು. ಇದು ಅಂತರಾಷ್ಟ್ರೀಯ ಪ್ರಯಾಣಿಕರಿಗೆ(International Travellers) ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳಂತೆ ಇರುತ್ತದೆ.

  ಎನ್​ಐ ಜೊತೆ ಮಾತನಾಡಿದ ಡಾ.ಶರ್ಮಾ, ಕೋವಿಡ್​ ಬಳಿಕ ವಿಶ್ವವು ನಿಧಾನವಾಗಿ ಉದ್ಯಮ ಚಟುವಟಿಕೆಗಳನ್ನು ಪ್ರಾರಂಭಿಸುತ್ತಿದೆ. ಜೊತೆಗೆ ಪ್ರವಾಸೋದ್ಯಮದ ಮೇಲೆ ಹೇರಿದ್ದ ನಿರ್ಬಂಧವನ್ನು ಹಂತ - ಹಂತವಾಗಿ ತೆಗೆದುಹಾಕಲಾಗುತ್ತಿದೆ. ಅಂತರಾಷ್ಟ್ರೀಯ ಪ್ರಯಾಣಿಕರು ಒತ್ತಡ ರಹಿತವಾಗಿ ಪ್ರಯಾಣಿಸಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಈ ಹೊಸ ಫೀಚರ್ ಹಾಗೂ ಜನ್ಮದಿನಾಂಕದ ಫಾರ್ಮ್ಯಾಟ್ "yyy-mm-dd" ಅಂತರಾಷ್ಟ್ರೀಯ ಪ್ರಯಾಣಿಕರಿಗೆ​ ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯಾಗಿದೆ.

  ಇದನ್ನೂ ಓದಿ:COVID-19 Second Wave: ಮೊದಲ ಅಲೆಗಿಂತ 2ನೇ ಅಲೆ 5 ಪಟ್ಟು ವೇಗವಾಗಿ ರೂಪಾಂತರಿ ಕೊರೋನಾ ವೈರಾಣು ಹಬ್ಬಿತ್ತು: ಸಚಿವ ಕೆ.ಸುಧಾಕರ್

  ಕೋವಿನ್​ನಲ್ಲಿ ತಮ್ಮ ವ್ಯಾಕ್ಸಿನೇಷನ್​ ಸರ್ಟಿಫಿಕೇಟ್​ನ್ನು ಅಪ್​ಡೇಟ್ ಮಾಡಿ​ ಪ್ರತಿಯೊಬ್ಬರೂ ಸಹ ವಿದೇಶ ಪ್ರಯಾಣ ಮಾಡಬಹುದಾಗಿದೆ. ಅಲ್ಲಿ ತಮ್ಮ ಪಾಸ್​ಪೋರ್ಟ್​​ನಲ್ಲಿ ಉಲ್ಲೇಖಿಸಿರುವಂತೆಯೇ ಜನ್ಮದಿನಾಂಕವನ್ನು ನಮೂದಿಸಬೇಕು. ಬಳಿಕ ಮತ್ತೆ ತಮ್ಮ ವ್ಯಾಕ್ಸಿನೇಷನ್​ ಸರ್ಟಿಫಿಕೇಟ್​ ನ್ನು ಡೌನ್​ಲೋಡ್ ಮಾಡಿಕೊಳ್ಳಬೇಕು.

  ಸರ್ಟಿಫಿಕೇಟ್​​ನಲ್ಲಿ ವ್ಯಕ್ತಿಯ ವಯಸ್ಸನ್ನು ತೋರಿಸುವ ಹುಟ್ಟಿದ ವರ್ಷವನ್ನು ಮಾತ್ರ ನಾವು ಈಗ ಸಂಗ್ರಹ ಮಾಡುತ್ತಿದ್ದೇವೆ ಎಂದು ಡಾ.ಶರ್ಮಾ ಹೇಳಿದರು. ಯುನೈಟೆಡ್ ಕಿಂಗ್​ಡಮ್ ಸೆಪ್ಟೆಂಬರ್ 22ರಂದು ಹೊಸ ಟ್ರಾವೆಲ್​ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು.

  ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
  Published by:Latha CG
  First published: