Covovax Vaccine: ಭಾರತಕ್ಕೆ ಮತ್ತೊಂದು ಕೋವಿಡ್ ಲಸಿಕೆ; ಸೆರಂ ಇನ್​ಸ್ಟಿಟ್ಯೂಟ್​ನಿಂದ ಕೊವಾವ್ಯಾಕ್ಸ್ ಉತ್ಪಾದನೆ ಆರಂಭ

Covovax Vaccine: ಪುಣೆಯಲ್ಲಿ ಮೊದಲ ಬ್ಯಾಚ್​ನ ಕೊವಾವ್ಯಾಕ್ಸ್ ಲಸಿಕೆಯನ್ನು ಉತ್ಪಾದಿಸಲಾಗಿದ್ದು, ಈ ಲಸಿಕೆಯನ್ನು ಅಮೆರಿಕದ ನೊವಾವ್ಯಾಕ್ಸ್ ಎಂಬ ಜೈವಿಕ ತಂತ್ರಜ್ಞಾನ ಕಂಪನಿ ಅಭಿವೃದ್ಧಿಪಡಿಸಿದೆ.

ಕೊವೋವ್ಯಾಕ್ಸ್

ಕೊವೋವ್ಯಾಕ್ಸ್

 • Share this:
  ಹೈದರಾಬಾದ್ (ಜೂನ್ 26): ನೊವಾವ್ಯಾಕ್ಸ್ ಕೊರೋನಾ ಲಸಿಕಾ ಕಂಪನಿಯ ಕೊವಾವ್ಯಾಕ್ಸ್ (Covovax) ಲಸಿಕೆಯ ಮೊದಲ ಬ್ಯಾಚ್ ಅನ್ನು ಸೆರಂ ಇನ್​ಸ್ಟಿಟ್ಯೂಟ್ (Serum Institute Of India)​ ಸಿದ್ಧಪಡಿಸುತ್ತಿದೆ. ಈ ಮೂಲಕ ಕೊವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್ ಜೊತೆಗೆ ಮತ್ತೊಂದು ಕೊರೋನಾ ಲಸಿಕೆ ಭಾರತೀಯರಿಗೆ ಲಭ್ಯವಾಗಲಿದೆ.

  ಈ ಬಗ್ಗೆ ಪುಣೆಯ ಸೆರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ ಮುಖ್ಯಸ್ಥ ಅದಾರ್ ಪೂನಾವಾಲ ಮಾಹಿತಿ ನೀಡಿದ್ದು, ಮೊದಲ ಬ್ಯಾಚ್ನಲ್ಲಿ ಕೊವಾವ್ಯಾಕ್ಸ್ (Covovax Vaccine) ಲಸಿಕೆಯನ್ನು ಉತ್ಪಾದನೆ ಮಾಡುತ್ತಿರುವ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪುಣೆಯಲ್ಲಿ ಮೊದಲ ಬ್ಯಾಚ್​ನ ಕೊವಾವ್ಯಾಕ್ಸ್ ಲಸಿಕೆಯನ್ನು ಉತ್ಪಾದಿಸಲಾಗಿದ್ದು, ಈ ಲಸಿಕೆಯನ್ನು ಅಮೆರಿಕದ ನೊವಾವ್ಯಾಕ್ಸ್ ಎಂಬ ಜೈವಿಕ ತಂತ್ರಜ್ಞಾನ ಕಂಪನಿ ಅಭಿವೃದ್ಧಿಪಡಿಸಿದೆ. ಈ ಲಸಿಕೆ ಕೊರೋನಾವನ್ನು ತಡೆಗಟ್ಟುವಲ್ಲಿ ಶೇ. 89ರಷ್ಟು ಪರಿಣಾಮಕಾರಿಯಾಗಿದೆ. ಅಲ್ಲದೆ, ರೂಪಾಂತರಿ ಕೊರೋನಾವೈರಸ್ ವಿರುದ್ಧವೂ ಈ ಲಸಿಕೆ ಹೋರಾಡಲಿದೆ.

  ಈ ಕೊವಾವ್ಯಾಕ್ಸ್ ಲಸಿಕೆ 18 ವರ್ಷದೊಳಗಿನ ವಯೋಮಾನದವರನ್ನು ಕೊರೋನಾದಿಂದ ರಕ್ಷಿಸುವ ಸಾಮರ್ಥ್ಯ ಹೊಂದಿದೆ. ಸೆಪ್ಟೆಂಬರ್ ವೇಳೆಗೆ ಈ ಕೊವಾವ್ಯಾಕ್ಸ್ ಲಸಿಕೆ ಲಭ್ಯವಾಗುವ ಸಾಧ್ಯತೆಯಿದೆ. ಅಮೆರಿಕದಲ್ಲಿ ನೊವಾವ್ಯಾಕ್ಸ್ ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿರುವ ಈ ಲಸಿಕೆಯನ್ನು ಭಾರತದಲ್ಲಿ ಕೊವಾವ್ಯಾಕ್ಸ್ ಎಂದು ಕರೆಯಲಾಗುತ್ತಿದೆ.

  ಸದ್ಯಕ್ಕೆ ಭಾರತದಲ್ಲಿ ಹೈದರಾಬಾದ್​ನ ಭಾರತ್ ಬಯೋಟೆಕ್​ನ ಕೋವ್ಯಾಕ್ಸಿನ್, ರಷ್ಯಾದ ಸ್ಪುಟ್ನಿಕ್ ವಿ, ಸೆರಂ ಇನ್​ಸ್ಟಿಟ್ಯೂಟ್​ನ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗುತ್ತಿದೆ.
  Published by:Sushma Chakre
  First published: