• ಹೋಂ
  • »
  • ನ್ಯೂಸ್
  • »
  • Corona
  • »
  • Covishield Vaccine: ಕೋವಿಶೀಲ್ಡ್‌ ಲಸಿಕೆಯ 2 ಡೋಸ್‌ಗಳ ನಡುವಿನ ಅಂತರ ಹೆಚ್ಚಿಸಲು ಕಾರಣವೇನು?

Covishield Vaccine: ಕೋವಿಶೀಲ್ಡ್‌ ಲಸಿಕೆಯ 2 ಡೋಸ್‌ಗಳ ನಡುವಿನ ಅಂತರ ಹೆಚ್ಚಿಸಲು ಕಾರಣವೇನು?

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

Covishield Vaccine | ಮೇ 13ರಂದು 6-8 ವಾರಗಳಿಂದ 12-16 ವಾರಗಳಿಗೆ ಕೋವಿಶೀಲ್ಡ್​ ಲಸಿಕೆಯ 2 ಡೋಸ್​ಗಳ ನಡುವಿನ ಅಂತರವನ್ನು ಬದಲಾಯಿಸುವ ನಿರ್ಧಾರವನ್ನು ಆರೋಗ್ಯ ಸಚಿವಾಲಯ ಘೋಷಿಸಿತು.

  • Share this:

ಬ್ರಿಟನ್‌ನ ಆಸ್ಟ್ರಾಜೆನಿಕಾ (ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆ) ಕೋವಿಡ್ -19 ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು ಭಾರತ ಸರ್ಕಾರ ವೈಜ್ಞಾನಿಕ ಗುಂಪಿನ ಒಪ್ಪಿಗೆಯಿಲ್ಲದೆ ದ್ವಿಗುಣಗೊಳಿಸಿದೆ. ಸದಸ್ಯರು ಅಂತರ ಹೆಚ್ಚಳವನ್ನು ಶಿಫಾರಸು ಮಾಡಿದ್ದರಾದರೂ 12-16 ವಾರಗಳಿಗೆ ಬದಲಾಯಿಸುವ ಬಗ್ಗೆ ಯಾವುದೇ ರೀತಿಯ ಸಲಹೆ ನೀಡಿರಲಿಲ್ಲ ಎಂದು ಸಲಹಾ ಸಂಸ್ಥೆಯ ಮೂವರು ಸದಸ್ಯರು ರಾಯಿಟರ್ಸ್‌ಗೆ ಹೇಳಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ಹೇಳಿದರು.


ಮೇ 13 ರಂದು 6-8 ವಾರಗಳಿಂದ 12-16 ವಾರಗಳಿಗೆ ಕೋವಿಶೀಲ್ಡ್​ ಲಸಿಕೆಯ 2 ಡೋಸ್​ಗಳ ನಡುವಿನ ಅಂತರವನ್ನು ಬದಲಾಯಿಸುವ ನಿರ್ಧಾರವನ್ನು ಆರೋಗ್ಯ ಸಚಿವಾಲಯ ಘೋಷಿಸಿತು. ಆ ಸಮಯದಲ್ಲಿ ಕೊರೊನಾ ಲಸಿಕೆ ಡಿಮ್ಯಾಂಡ್‌ಗೆ ತಕ್ಕಷ್ಟು ಲಸಿಕೆ ಸಿಗುತ್ತಿರಲಿಲ್ಲ. ಮತ್ತು ದೇಶಾದ್ಯಂತ ಸೋಂಕು ತೀವ್ರಗತಿಯಲ್ಲಿ ಹೆಚ್ಚಾಗುತ್ತಿತ್ತು.


ಮುಖ್ಯವಾಗಿ ಬ್ರಿಟನ್‌ ನೀಡಿದ ಸಾಕ್ಷ್ಯಗಳ ಆಧಾರದ ಮೇಲೆ ಅಂತರ ಹೆಚ್ಚಿಸಲು NTAGI ಶಿಫಾರಸು ಮಾಡಿದೆ ಎಂದು ಆ ವೇಳೆ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಹೇಳಿದೆ. ಆದರೂ, 14 "ಪ್ರಮುಖ ಸದಸ್ಯರಲ್ಲಿ" ಮೂವರು NTAGI ವಿಜ್ಞಾನಿಗಳು, ಅಂತಹ ಶಿಫಾರಸು ಮಾಡಲು NTAGI ಬಳಿ ಸಾಕಷ್ಟು ಡೇಟಾ ಹೊಂದಿಲ್ಲ ಎಂದು ಮಾಹಿತಿ ನೀಡಿದರು.


ಇದನ್ನೂ ಓದಿ: Petrol Price Today: ಮತ್ತೆ ಹಲವೆಡೆ ಶತಕ ಬಾರಿಸಿದ ಪೆಟ್ರೋಲ್ ಬೆಲೆ; ಗಗನಕ್ಕೇರಿದ ಡೀಸೆಲ್ ದರ


ಅಲ್ಲದೆ, ಎರಡು ಡೋಸ್‌ಗಳ ನಡುವಿನ ಅಂತರವನ್ನು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಯಂತೆ 8-12 ವಾರಗಳಿಗೆ ಹೆಚ್ಚಿಸಲು ಎನ್‌ಟಿಎಜಿ ಶಿಫಾರಸು ಮಾಡಿತ್ತು. ಆದರೆ, 12 ವಾರಗಳನ್ನು ಮೀರಿದ ಅಂತರದ ಪರಿಣಾಮಗಳಿಗೆ ಸಂಬಂಧಿಸಿದಂತೆ ಈ ಗುಂಪಿನ ಬಳಿ ಯಾವುದೇ ಮಾಹಿತಿಯಿಲ್ಲ ಎಂದು ರಾಜ್ಯ-ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆಯ ಮಾಜಿ ನಿರ್ದೇಶಕ ಎಂಡಿ ಗುಪ್ಟೆ ಹೇಳಿದರು.


''8 - 12 ವಾರಗಳ ನಡುವಿನ ಅಂತರ ನಾವೆಲ್ಲರೂ ಒಪ್ಪಿಕೊಂಡ ವಿಷಯ. ಆದರೆ, ಕೇಂದ್ರ ಸರ್ಕಾರವೇ 12 ರಿಂದ 16 ವಾರಗಳ ನಡುವಿನ ಅಂತರವನ್ನು ಹೊರತಂದಿದೆ". ಅಲ್ಲದೆ, ಇದು ಸರಿಯಾದ ನಿರ್ಧಾರವೂ ಆಗಿರಬಹುದು. ಆಗಿಲ್ಲದೆಯೂ ಇರಬಹುದು. ಅದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಹೇಳಿದರು.


NTAGI ಸಹೋದ್ಯೋಗಿ ಮ್ಯಾಥ್ಯೂ ವರ್ಗೀಸ್ ಸಹ ಇದನ್ನೇ ಹೇಳಿದ್ದು, ನಮ್ಮ ಗುಂಪು 8-12 ವಾರಗಳವರೆಗೆ ಮಾತ್ರ ಶಿಫಾರಸು ಮಾಡಿತ್ತು ಎಂದು ಹೇಳಿದ್ದರು.


ಇದನ್ನೂ ಓದಿ: Gold Price Today: ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ; ಬೆಳ್ಳಿ ಬೆಲೆಯೂ ಒಂದೇ ದಿನ 200 ರೂ. ಕುಸಿತ

ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ ನಡುವಿನ ಅಂತರದ ನಿರ್ಧಾರವು ವೈಜ್ಞಾನಿಕ ಪುರಾವೆಗಳನ್ನು ಆಧರಿಸಿದೆ ಎಂದು COVID-19 ಕುರಿತು NTAGI ಯ ಕಾರ್ಯನಿರತ ಗುಂಪಿನ ಮುಖ್ಯಸ್ಥರನ್ನು ಉಲ್ಲೇಖಿಸಿ ಆರೋಗ್ಯ ಸಚಿವಾಲಯ ಹೇಳಿಕೆ ನೀಡಿತ್ತು. ಅಲ್ಲದೆ, ಎನ್‌ಟಿಎಜಿಐ ಸದಸ್ಯರಲ್ಲಿ ಯಾವುದೇ ಭಿನ್ನಾಭಿಪ್ರಾಯದ ಧ್ವನಿಗಳಿಲ್ಲ ಎಂದೂ ಟ್ವೀಟ್‌ ಮಾಡಿತ್ತು. ಲಸಿಕೆ ಕೊರತೆಯನ್ನು ನೀಗಿಸಲು ಅಂತರವನ್ನು ಹೆಚ್ಚಿಸಲಾಗಿಲ್ಲ. ಆದರೆ ಇದು "ವೈಜ್ಞಾನಿಕ ನಿರ್ಧಾರ" ಎಂದು ಸರ್ಕಾರಿ ಆರೋಗ್ಯ ಅಧಿಕಾರಿಗಳು ಮೇ 15 ರಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಲಸಿಕೆ ಡೋಸೇಜ್ ಮಧ್ಯಂತರವನ್ನು ಹೆಚ್ಚಿಸುವ ಬಗ್ಗೆ ಎನ್‌ಟಿಎಜಿಐನಲ್ಲಿ ಚರ್ಚೆಗಳು ನಡೆದಿವೆ. ಆದರೆ, ಈ ಸಂಸ್ಥೆ 12-16 ವಾರಗಳನ್ನು ಶಿಫಾರಸು ಮಾಡಿಲ್ಲ, ಆ ನಿರ್ದಿಷ್ಟ ಸಂಖ್ಯೆಯನ್ನು ಉಲ್ಲೇಖಿಸಲಾಗಿಲ್ಲ ಎಂದು 7 ಕೋವಿಡ್ ಕಾರ್ಯ ಸಮೂಹದ ಸದಸ್ಯ ಜೆ.ಪಿ.ಮುಲಿಯಿಲ್ ಹೇಳಿದ್ದಾರೆ.

ಇನ್ನೊಂದೆಡೆ, ಕೋವಿಡ್‌ ಕಾರ್ಯ ಸಮೂಹದ ಮುಖ್ಯಸ್ಥ ಎನ್.ಕೆ. ಅರೋರಾ, ತನ್ನ ಶಿಫಾರಸುಗಳ ಬಗ್ಗೆ ರಾಯಿಟರ್ಸ್‌ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಆದರೆ NTAGI ಸಲಹೆಯಂತೆ ಒಟ್ಟಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.


ದಕ್ಷಿಣ ಕೊರಿಯಾ ಕಳೆದ ತಿಂಗಳ ಆರಂಭದಲ್ಲಿ ಬಿಡುಗಡೆ ಮಾಡಿದ ರಿಯಲ್‌ ವರ್ಲ್ಡ್‌ ಡೇಟಾ ಪ್ರಕಾರ ಆಸ್ಟ್ರಾಜೆನಿಕಾ ಮತ್ತು ಫೈಜರ್‌ ಲಸಿಕೆಗಳ ಒಂದು ಡೋಸ್ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಸೋಂಕನ್ನು ತಡೆಗಟ್ಟುವಲ್ಲಿ 86.6% ಪರಿಣಾಮಕಾರಿ ಎಂದು ತೋರಿಸಿದೆ. ಈ ಹಿನ್ನೆಲೆ ಎರಡನೇ ಡೋಸ್‌ ಅನ್ನು ವಿಳಂಬ ಮಾಡುವುದು ಹಾನಿಕಾರಕವಲ್ಲ ಎಂಬ ಅಂಶ ಸಲಹಾ ಸಂಸ್ಥೆಯ ವಿಶ್ವಾಸವನ್ನು ಹೆಚ್ಚಿಸಿತು ಎಂದು ಮುಲಿಯಿಲ್ ಹೇಳಿದರು.


ಇದನ್ನೂ ಓದಿ: Bengaluru Crime: ಬೆಂಗಳೂರಿನ ಪಿಜಿಯಿಂದಲೇ ಗಾಂಜಾ ಮಾರಾಟ; ಪ್ರಿಯಕರನ ಮಾತು ಕೇಳಿ ಜೈಲುಪಾಲಾದ ಯುವತಿ!


ಭಾರತದಲ್ಲಿ ನೀಡಲಾಗಿರುವ 257.5 ಮಿಲಿಯನ್ ಲಸಿಕೆ ಪ್ರಮಾಣಗಳಲ್ಲಿ ಆಸ್ಟ್ರಾಜೆನಿಕಾ ಲಸಿಕೆಯ ಪಾಲು ಸುಮಾರು 90% ನಷ್ಟಿದೆ. ಇನ್ನೊಂದೆಡೆ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸೋಂಕುಗಳ ಹೆಚ್ಚಳಕ್ಕೆ ಕಾರಣವಾದ ಹೊಸ ವೈರಸ್ ರೂಪಾಂತರಕ್ಕೆ ಸರ್ಕಾರ ಸ್ಪಂದಿಸಲು ನಿಧಾನವಾಗಿದೆ ಎಂದು ಕೆಲವು ವಿಜ್ಞಾನಿಗಳ ಟೀಕೆಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರದ ವಿವಾದ ಉಂಟಾಗಿದೆ.

ಆದರೆ, ಸೋಂಕನ್ನು ಎದುರಿಸಲು ಪ್ರತಿಕ್ರಿಯೆ ನೀಡಲು ನಿಧಾನವಾಗಿರುವುದನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ಸರ್ಕಾರಿ-ಪ್ರಯೋಗಾಲಯಗಳು ರಿಯಲ್‌ ಟೈಮ್‌ನಲ್ಲಿ ಅಧ್ಯಯನ ಮಾಡಿವೆ ಮತ್ತು ಅಗತ್ಯ ಕ್ರಮ ತೆಗೆದುಕೊಳ್ಳಲು ಸ್ಥಳೀಯ ಅಧಿಕಾರಿಗಳೊಂದಿಗೆ ಡೇಟಾವನ್ನು ಹಂಚಿಕೊಂಡಿವೆ ಎಂದು ಹೇಳಿದರು.


ಸಾಂಕ್ರಾಮಿಕ ರೋಗದ ಬಗ್ಗೆ ಹೊಸದಿಲ್ಲಿಯನ್ನು ಟೀಕಿಸಿದ ನಂತರ ಇತ್ತೀಚೆಗೆ ವೈರಸ್ ರೂಪಾಂತರಗಳ ಕುರಿತ ಸರ್ಕಾರಿ ಸಮಿತಿಯಿಂದ ಹೊರಹೋದ ಭಾರತದ ಉನ್ನತ ವೈರಾಲಜಿಸ್ಟ್ ಶಾಹಿದ್ ಜಮೀಲ್, ಡೋಸ್‌ಗಳ ನಡುವಿನ ಅಂತರವನ್ನು ದ್ವಿಗುಣಗೊಳಿಸುವ ನಿರ್ಧಾರಕ್ಕೆ ನೀಡಿರುವ ಕಾರಣಗಳ ಬಗ್ಗೆ ಅಧಿಕಾರಿಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದರು.

ಕೊರೊನಾ ರೂಪಾಂತರ ಹರಡುತ್ತಿರುವ ಬಗ್ಗೆ ಆತಂಕವನ್ನು ಹೊಂದಿರುವ ಪರಿಸ್ಥಿತಿಯಲ್ಲಿ, ನಾವು ನಿಜವಾಗಿಯೂ ಜನರಿಗೆ ಲಸಿಕೆ ಹಾಕಬೇಕು ಮತ್ತು ಅವರು ರಕ್ಷಿಸಲ್ಪಟ್ಟಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.


Published by:Sushma Chakre
First published: