Vaccine Cost: ಕೋವಿಡ್ ಲಸಿಕೆಗೆ ದರ ನಿಗದಿ; ಒಂದು ಡೋಸ್​​ಗೆ ಎಷ್ಟು ಗೊತ್ತಾ?

ಮುಂದಿನ ತಿಂಗಳ ವೇಳೆಗೆ ನಿಯಮಿತ ಮಾರುಕಟ್ಟೆ ಅನುಮೋದನೆಯನ್ನು ನಿರೀಕ್ಷಿಸಿರುವುದರಿಂದ, ಸರ್ಕಾರವು ಈಗ ಎರಡು ಲಸಿಕೆಗಳ ಬೆಲೆ ನಿಗದಿ ಪಡಿಸುವ ಸಮಸ್ಯೆಯನ್ನು ಪರಿಹರಿಸುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಳೆದ ಎರಡು ವರ್ಷಗಳಿಂದ ಇಡೀ ವಿಶ್ವವನ್ನೇ ಬೆಂಬಿಡದೆ ಕಾಡುತ್ತಿರುವ ಕೋವಿಡ್-19 ಸಾಂಕ್ರಾಮಿಕ (Epidemic) ರೋಗಕ್ಕೆ ರಾಮಬಾಣ ಎಂಬಂತೆ ಕೇಂದ್ರ ಸರ್ಕಾರವು (Central Government) ಔಷಧಿ ತಯಾರಕ ಕಂಪನಿಗಳು (Vaccines Manufactured) ತಯಾರಿಸಿದ ಕೋವಿಶೀಲ್ಡ್ (CovieShield) ಮತ್ತು ಕೋವ್ಯಾಕ್ಸಿನ್ ಎರಡು ಲಸಿಕೆಗಳನ್ನು ಒಂದು ವರ್ಷದ ಹಿಂದೆಯೇ ಜನರಿಗೆ ಲಭ್ಯವಿರುವಂತೆ ಮಾಡಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಇದೀಗ ಬಹುತೇಕರು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಈ ಎರಡು ಲಸಿಕೆಗಳಲ್ಲಿ ಒಂದನ್ನು ಎರಡು ಡೋಸ್‌ಗಳಂತೆ ಪಡೆದಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಲಸಿಕೆಗಳಿಗೆ ದುಡ್ಡು ತೆತ್ತಾಬೇಕಾಗಬಹುದು
ಈ ಎರಡು ಕೋವಿಡ್-19 ಲಸಿಕೆಗಳು ಇದುವರೆಗೆ ಜನರಿಗೆ ಉಚಿತವಾಗಿಯೇ ದೊರೆಯುತ್ತಿತ್ತು, ಆದರೆ ಇನ್ಮುಂದೆ ಈ ಲಸಿಕೆಗಳನ್ನು ಹಾಕಿಸಿಕೊಳ್ಳಲು ಹೋದರೆ ಜೇಬಿನಲ್ಲಿ ದುಡ್ಡು ಇಟ್ಟುಕೊಂಡು ಹೋಗಬೇಕಾದ ಪರಿಸ್ಥಿತಿ ಬಂದೊದಗಬಹುದು.

ಹೌದು.. ಭಾರತೀಯ ಔಷಧ ನಿಯಂತ್ರಕ ಜನರಲ್ (ಡಿಸಿಜಿಐ) ನಿಂದ ನಿಯಮಿತ ಮಾರುಕಟ್ಟೆ ಅನುಮೋದನೆ ಪಡೆದ ನಂತರ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ಪ್ರತಿ ಡೋಸ್ ಗೆ 275 ರೂಪಾಯಿಯನ್ನು ನಿಗದಿಪಡಿಸಲು ಕೇಂದ್ರ ಸರ್ಕಾರವು ಯೋಜಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬೆಲೆಗಳನ್ನು ಸಮಂಜಸವಾಗಿಡಲು ಒತ್ತು ಇದ್ದರೂ, ಸರ್ಕಾರವು 150 ರೂಪಾಯಿ ಸೇವಾ ಶುಲ್ಕವನ್ನು ಅನುಮತಿಸಬಹುದು ಎಂದು ಹೇಳಲಾಗುತ್ತಿದೆ.

ನ್ಯಾಯೋಚಿತ ಬೆಲೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೂಲಗಳ ಪ್ರಕಾರ, ಇತ್ತೀಚಿನ ಸಭೆಯಲ್ಲಿ ಎರಡು ಲಸಿಕೆಗಳ ಬೆಲೆಗಳನ್ನು ಮಿತಿಗೊಳಿಸುವ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಹಾಜರಿದ್ದ ಆದರೆ ತಮ್ಮ ಗುರುತನ್ನು ತಿಳಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಸುದ್ದಿ ಮಾಧ್ಯಮವೊಂದಕ್ಕೆ "ಸರ್ಕಾರವು ಲಸಿಕೆಗಳನ್ನು ಪ್ರತಿ ಡೋಸ್ ಅನ್ನು ಸುಮಾರು 205 ರೂಪಾಯಿಗೆ ಬೃಹತ್ ಪ್ರಮಾಣದಲ್ಲಿ ಖರೀದಿಸುತ್ತಿದೆ.

ಇದನ್ನೂ ಓದಿ: Corona Vaccine: 12-14 ವರ್ಷದೊಳಗಿನ ಮಕ್ಕಳಿಗೂ ಕೊರೋನಾ ಲಸಿಕೆ, ಯಾವಾಗಿಂದ ಹಂಚಿಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಆದ್ದರಿಂದ ನಾವು 205 ರೂಪಾಯಿಕ್ಕಿಂತಲೂ 33 ಪ್ರತಿಶತ ಲಾಭದ ಅಂತರವು ತಯಾರಕರಿಗೆ ನ್ಯಾಯೋಚಿತ ಬೆಲೆ ಎಂದು ಭಾವಿಸಿದ್ದೇವೆ. ಇದಕ್ಕಾಗಿಯೇ ನಾವು ಅದನ್ನು ಪ್ರತಿ ಡೋಸ್ ಗೆ 275 ರೂಪಾಯಿಯನ್ನು ನಿಗದಿ ಪಡಿಸಲು ಯೋಜಿಸುತ್ತಿದ್ದೇವೆ” ಎಂದು ಹೇಳಿದರು.

ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ
ತುರ್ತು ಬಳಕೆಯ ದೃಢೀಕರಣದ ಅಡಿಯಲ್ಲಿ, ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಲಸಿಕೆಯ ಪ್ರತಿ ಡೋಸ್ ಗೆ 1,200 ರೂಪಾಯಿಯನ್ನು ನಿಗದಿ ಪಡಿಸಿದೆ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಖಾಸಗಿ ಆಸ್ಪತ್ರೆಗಳಿಗೆ ಕೋವಿಶೀಲ್ಡ್ ಅನ್ನು 780 ರೂಪಾಯಿಯನ್ನು ನಿಗದಿ ಪಡಿಸಿದೆ. ಈ ಲಸಿಕೆಗಳ ಬೆಲೆಗಳಲ್ಲಿ 150 ರೂಪಾಯಿ ಸೇವಾ ಶುಲ್ಕ ಸಹ ಸೇರಿದೆ ಎಂದು ಹೇಳಲಾಗುತ್ತಿದೆ.

ಮುಂದಿನ ತಿಂಗಳ ವೇಳೆಗೆ ನಿಯಮಿತ ಮಾರುಕಟ್ಟೆ ಅನುಮೋದನೆಯನ್ನು ನಿರೀಕ್ಷಿಸಿರುವುದರಿಂದ, ಸರ್ಕಾರವು ಈಗ ಎರಡು ಲಸಿಕೆಗಳ ಬೆಲೆ ನಿಗದಿ ಪಡಿಸುವ ಸಮಸ್ಯೆಯನ್ನು ಪರಿಹರಿಸುತ್ತಿದೆ. ಲಸಿಕೆಗಳನ್ನು ಸಾಮಾನ್ಯ ಜನರಿಗೆ ಕೈಗೆಟುಕುವಂತೆ ಮಾಡಲು ಬೆಲೆಯನ್ನು ಮಿತಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಲು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರಕ್ಕೆ ನಿರ್ದೇಶಿಸಲಾಗಿದೆ.

ಡ್ರಗ್ಸ್ ಕಂಟ್ರೋಲರ್ ಜನರಲ್ ಗೆ ಅರ್ಜಿ
ಮೂಲಗಳ ಪ್ರಕಾರ, ಆರೋಗ್ಯ ಸಚಿವಾಲಯವು ಎರಡೂ ಕಂಪನಿಗಳಿಗೆ ನ್ಯಾಯಯುತ ಬೆಲೆಯನ್ನು ಸ್ವತಃ ರೂಪಿಸುವಂತೆ ಕೇಳಿದೆ. ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆಯ ವಿಷಯ ತಜ್ಞರ ಸಮಿತಿಯು ಜನವರಿ 19 ರಂದು ಎರಡು ಲಸಿಕೆಗಳಿಗೆ ನಿಯಮಿತ ಮಾರುಕಟ್ಟೆ ಅನುಮೋದನೆ ನೀಡಲು ಶಿಫಾರಸು ಮಾಡಿದ್ದರಿಂದ ಈ ಯೋಜನೆಯು ತುರ್ತು ಪಡೆದುಕೊಂಡಿದೆ.

ಇದನ್ನೂ ಓದಿ: Booster Dose: ನೀವು ಬೂಸ್ಟರ್ ಡೋಸ್ ಪಡೆಯಲು ಅರ್ಹರೆ? ಎಲ್ಲಾ ಅನುಮಾನಗಳಿಗೆ ವೈದ್ಯರ ಉತ್ತರ ಇಲ್ಲಿದೆ

ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಕೋವಿಶೀಲ್ಡ್ ಗೆ ನಿಯಮಿತ ಮಾರುಕಟ್ಟೆ ಅನುಮೋದನೆ ಕೋರಿ ಅಕ್ಟೋಬರ್ 25 ರಂದು ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಗೆ ಅರ್ಜಿ ಸಲ್ಲಿಸಿತ್ತು, ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಗೆ ನಿಯಮಿತ ಮಾರುಕಟ್ಟೆ ದೃಢೀಕರಣವನ್ನು ಕೋವ್ಯಾಕ್ಸಿನ್ ಗೆ ನಿಯಮಿತ ಮಾರುಕಟ್ಟೆ ದೃಢೀಕರಣವನ್ನು ಕೋರುವಾಗ ಪೂರ್ವ ವೈದ್ಯಕೀಯ ಮತ್ತು ವೈದ್ಯಕೀಯ ದತ್ತಾಂಶದೊಂದಿಗೆ ಉತ್ಪಾದನೆ ಮತ್ತು ನಿಯಂತ್ರಣಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಲ್ಲಿಸಿತ್ತು.
Published by:vanithasanjevani vanithasanjevani
First published: