Covid-19 Updates: ಭಾರತದಲ್ಲಿ 1 ಲಕ್ಷಕ್ಕಿಂತ ಕಡಿಮೆ ಕೊರೋನಾ ಸೋಂಕಿತರು ಪತ್ತೆ; ಸಾವಿನ ಸಂಖ್ಯೆಯೂ ಇಳಿಮುಖ

Coronavirus Updates in India: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 86,498 ಕೊರೋನಾ ಪ್ರಕರಣಗಳು ಪತ್ತೆ ಆಗಿವೆ. ಇವು ಕಳೆದ 66 ದಿನಗಳಲ್ಲಿ ಕಂಡು ಬಂದ ಕಡಿಮೆ ಪ್ರಕರಣಗಳು. ಇದರಿಂದ ದೇಶದ ಕೊರೋನಾ ಸೋಂಕಿತರ ಸಂಖ್ಯೆ 2,89,96,473ಕ್ಕೆ ಏರಿಕೆ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ, ಜೂ. 8: ಅಬ್ಬಾ! ಅಂತೂ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದು ಲಕ್ಷಕ್ಕಿಂತ ಕಡಿಮೆ ಆಯಿತು. ಅದು ಬರೊಬ್ಬರಿ 63 ದಿನಗಳ ಬಳಿಕ. ಜೊತೆಗೆ ಕೊರೋನಾದಿಂದ ಸಾಯುವವರ ಸಂಖ್ಯೆ ಕೂಡ ಇಳಿಮುಖವಾಗಿದೆ. ಇನ್ನೊಂದೆಡೆ ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಚಿಗುರುತ್ತಿದೆ. ಇದರಿಂದಾಗಿ ಈಗ ಕೊರೋನಾ ಎರಡನೇ ಅಲೆ ಕೊನೆಯಾಗಬಹುದು ಎಂಬ ಸ್ಪಷ್ಟ ಲಕ್ಷಣಗಳು ಗೋಚರಿಸತೊಡಗಿವೆ. ನಿನ್ನೆ (ಜೂನ್ 7ರಂದು) ದೇಶದಲ್ಲಿ ಕಂಡು ಬಂದ ಕೊರೋನಾ ಕೇಸುಗಳು, ಸಾವು, ಗುಣ ಆದವರ ಮುಖ್ಯ ಅಂಕಿ ಅಂಶಗಳು ಈ ಕೆಳಕಂಡಂತಿವೆ.

*ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 86,498 ಕೊರೋನಾ ಪ್ರಕರಣಗಳು ಪತ್ತೆ ಆಗಿವೆ. ಇವು ಕಳೆದ 66 ದಿನಗಳಲ್ಲಿ ಕಂಡು ಬಂದ ಕಡಿಮೆ ಪ್ರಕರಣಗಳು. ಇದರಿಂದ ದೇಶದ ಕೊರೋನಾ ಸೋಂಕಿತರ ಸಂಖ್ಯೆ 2,89,96,473ಕ್ಕೆ ಏರಿಕೆ ಆಗಿದೆ.
* ನಿನ್ನೆ ಕೊರೋನಾದಿಂದ 2,123 ಜನರ ಸಾವನ್ನಪ್ಪಿದ್ದಾರೆ.‌ ಈವರೆಗೆ ಕೊರೋನಾ ಮಹಾಮಾರಿಗೆ ಬಲಿ ಆದವರು 3,51,309 ಜನ.
* ಕಳೆದ 24ಗಂಟೆಯಲ್ಲಿ ಗುಣ ಆದವರು 1,82,282 ಜನ. ಇದರಿಂದ ಈವರೆಗೆ ಕೊರೋನಾದಿಂದ 2,73,41,462 ಜನ ಗುಣ ಆದಂತಾಗಿದೆ.
* ಶೇಕಡಾವಾರು ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 40ಕ್ಕೆ ಇಳಿದಿದೆ. ಮೇ 8ರಂದು 37.8 ಲಕ್ಷ ಸಕ್ರಿಯ ಪ್ರಕರಣಗಳಿದ್ದವು. ಸದ್ಯ ದೇಶದಲ್ಲಿ ಇರುವ ಸಕ್ರಿಯ ಪ್ರಕರಣಗಳ ಸಂಖ್ಯೆ 13,03,702 ಮಾತ್ರ.
* ಚೇತರಿಕೆಗಳು ಸತತ 26ನೇ ದಿನವೂ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸಿದೆ. ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಶೇಕಡಾ 94.29ಕ್ಕೆ ಹೆಚ್ಚಾಗಿದೆ.
* ಸಾಪ್ತಾಹಿಕ ಸಕಾರಾತ್ಮಕ ದರ ಪ್ರಸ್ತುತ ಶೇಕಡ 5.94ಕ್ಕೆ ಇಳಿದಿದೆ. ದೈನಂದಿನ ಸಕಾರಾತ್ಮಕತೆ ದರ ಶೇಕಡಾ 4.62ಕ್ಕೆ ಇಳಿದಿದೆ. ಸತತವಾಗಿ 15 ದಿನ ಶೇಕಡಾ 10ಕ್ಕಿಂತ ಕಡಿಮೆ ಆಗಿದೆ.
* ಕೊರೋನಾ ಪರೀಕ್ಷಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಗಿದೆ. ಈವರೆಗೆ 36.8 ಕೋಟಿ ಜನರಿಗೆ ಟೆಸ್ಟ್ ಮಾಡಲಾಗಿದೆ‌.
* ದೇಶದಲ್ಲಿ ಒಟ್ಟು 23,61,98,726 ಕೋಟಿ ಡೋಸೇಜ್ ಅನ್ನು ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ನೀಡಲಾಗಿದೆ. ಈ ಪೈಕಿ 18.93 ಕೋಟಿ ಜನರಿಗೆ ಮೊದಲ ಡೋಸ್ ಹಾಗೂ 5.65 ಕೋಟಿ ಜನರಿಗೆ ಎರಡು ಡೋಸ್ ಲಸಿಕೆ ಹಂಚಿಕೆ ನೀಡಲಾಗಿದೆ.

ಇದನ್ನೂ ಓದಿ: Explained: 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೊರೋನಾ ಲಸಿಕೆ; ಭಾರತದ ಹೊಸ ಲಸಿಕಾ ನೀತಿಯ ಹೈಲೈಟ್ಸ್​ ಇಲ್ಲಿದೆ

ಮೇ ತಿಂಗಳ ಮಧ್ಯ ಭಾಗದಲ್ಲಿ ಕೊರೋನ ಎರಡನೇ ಅಲೆ ತಾರಕಕ್ಕೇ ಏರುತ್ತದೆ. ತಿಂಗಳ ಕೊನೆಯಲ್ಲಿ ಕಡಿಮೆ ಆಗುತ್ತದೆ ಎಂಬ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಅದೇ ರೀತಿ ಮೇ 6ರಂದು 4,14,188 ಪ್ರಕರಣಗಳು ಕಂಡುಬಂದಿದ್ದು ದೇಶದಲ್ಲಿ ದಿನ ಒಂದರಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣಗಳಾಗಿದ್ದವು. ನಂತರ ಕೆಳಮುಖವಾಗಿ ಸಾಗಿ ಮೇ 16ರಂದು ಮೊದಲ ಬಾರಿಗೆ ಮೂರು ಲಕ್ಷಕ್ಕೂ ಕಡಿಮೆ ಪ್ರಕರಣಗಳು (2,81,386) ಕಂಡು ಬಂದಿದ್ದವು. ಮೇ 24ರಂದು ಮೊದಲ ಬಾರಿಗೆ ಎರಡು ಲಕ್ಷಕ್ಕಿಂತ ಕಡಿಮೆ (1,96,427) ಪ್ರಕರಣಗಳು ಪತ್ತೆ ಆಗಿದ್ದವು.

ನಿನ್ನೆ ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತದಲ್ಲಿ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಘೋಷಣೆ ಮಾಡಿದ್ದಾರೆ. ಜೂನ್ 21ರಿಂದ ಭಾರತದ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಉಚಿತವಾಗಿ ಕೊರೋನಾ ಲಸಿಕೆ ನೀಡಲಾಗುತ್ತದೆ. ಈ ಮೂಲಕ ರಾಜ್ಯ ಸರ್ಕಾರಗಳ ಮೇಲಿದ್ದ ಲಸಿಕೆಯ ಖರ್ಚಿನ ಹೊರೆಯನ್ನು ಕೇಂದ್ರ ಸರ್ಕಾರ ಇಳಿಸಿದೆ. ಜೂನ್ 21ರ ನಂತರ ಯಾವ ರಾಜ್ಯ ಸರ್ಕಾರವೂ ಕೊರೋನಾ ಲಸಿಕೆಗಾಗಿ ಖರ್ಚು ಮಾಡಬೇಕಾಗಿಲ್ಲ. ಈ ಮೊದಲು 45 ವರ್ಷ ಮೇಲ್ಪಟ್ಟವರು ಉಚಿತ ಲಸಿಕೆಗಳನ್ನು ಪಡೆಯುತ್ತಿದ್ದರು. ಇನ್ನು 18 ವರ್ಷ ಮೇಲ್ಪಟ್ಟವರಿಗೂ ಅದು ಅನ್ವಯವಾಗಲಿದೆ.
Published by:Sushma Chakre
First published: