Coronavirus In India: ರಾಜಸ್ಥಾನದಲ್ಲಿ ಮತ್ತೆ 9 ಕೊರೋನಾ ಸೋಂಕು ಪ್ರಕರಣ ಪತ್ತೆ

ಇದುವರೆಗೂ ಭಾರತದಲ್ಲಿ 1,834 ಜನರಿಗೆ ಕೊರೋನಾ ಸೋಂಕು ತಗುಲಿದ್ದು ಕೊರೋನಾದಿಂದ ಸತ್ತವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.

news18-kannada
Updated:April 2, 2020, 12:09 PM IST
Coronavirus In India: ರಾಜಸ್ಥಾನದಲ್ಲಿ ಮತ್ತೆ 9 ಕೊರೋನಾ ಸೋಂಕು ಪ್ರಕರಣ ಪತ್ತೆ
ಪ್ರಾತಿನಿಧಿಕ ಚಿತ್ರ.
  • Share this:
ಜೈಪುರ (ಏ.2): ರಾಜಸ್ಥಾನದಲ್ಲಿ ಗುರುವಾರ 9 ಹೊಸ ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 129 ಕ್ಕೆ ತಲುಪಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

9 ಪ್ರಕರಣಗಳಲ್ಲಿ ಏಳು ಪ್ರಕರಣಗಳು ಜೈಪುರದ ರಾಮ್‌ಗಂಜ್ ಮತ್ತು ತಲಾ ಒಂದು ಜೋಧ್‌ಪುರ ಮತ್ತು ಜುಂಜುಂ ಪ್ರದೇಶದ ಪ್ರಕರಣಗಳಾಗಿವೆ ಎಂದು ವೈದ್ಯಕೀಯ ಮತ್ತು ಆರೋಗ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಇದುವರೆಗೂ ಭಾರತದಲ್ಲಿ 1,834 ಜನರಿಗೆ ಕೊರೋನಾ ಸೋಂಕು ತಗುಲಿದ್ದು ಕೊರೋನಾದಿಂದ ಸತ್ತವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಮಹಾಮಾರಿ ಕೊರೋನಾ ನರ್ತನಕ್ಕೆ ಜನ ತತ್ತರಿಸಿದ್ದಾರೆ. ಅಲ್ಲದೇ ಕೊರೋನಾ ಹರಡುವುದುದನ್ನು ತಡೆಯಲು ದೇಶದಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ.

(ವರದಿ: ಸಂಧ್ಯಾ ಎಂ)

ಇದನ್ನೂ ಓದಿ: ವೈದ್ಯರ ಮೇಲೇ ಉಗುಳ್ತಾರೆ!; ಇದು ದೆಹಲಿ ನಿಜಾಮುದ್ದೀನ್ ಸಭೆಯಲ್ಲಿ ಪಾಲ್ಗೊಂಡವರ ಅಸಭ್ಯ ವರ್ತನೆ
First published: April 2, 2020, 12:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading