ಆ ಒಂದು ಹುಸಿ ಕೆಮ್ಮಿನಿಂದ ಬರೋಬ್ಬರಿ 26 ಲಕ್ಷ ಕಳೆದುಕೊಂಡ ಸೂಪರ್ ಮಾರ್ಕೆಟ್ ಮಾಲೀಕ!

ಅಮೆರಿಕದ ಪೆನ್ಸಿಲ್ವೇನಿಯಾದ ಸೂಪರ್ ಮಾರ್ಕೆಟ್​ಗೆ ಹೋಗಿದ್ದ ಮಹಿಳೆ ತನಗೆ ಬೇಕಾದ ಸಾಮಾನುಗಳನ್ನು ಖರೀದಿಸಿ ಬಿಲ್ಲಿಂಗ್ ಸೆಂಟರ್​ನತ್ತ ತೆರಳಿದ್ದಳು. ಆಗ ಸುತ್ತಲೂ ಸೇರಿದ್ದ ಜನರಿಗೆ ಪ್ರಾಂಕ್ ಮಾಡಲೆಂದು ಜೋರಾಗಿ ಎರಡು ಬಾರಿ ಕೆಮ್ಮಿದಳು.

Sushma Chakre | news18-kannada
Updated:March 27, 2020, 10:32 AM IST
ಆ ಒಂದು ಹುಸಿ ಕೆಮ್ಮಿನಿಂದ ಬರೋಬ್ಬರಿ 26 ಲಕ್ಷ ಕಳೆದುಕೊಂಡ ಸೂಪರ್ ಮಾರ್ಕೆಟ್ ಮಾಲೀಕ!
ಅಮೆರಿಕದ ಸೂಪರ್ ಮಾರ್ಕೆಟ್
  • Share this:
ಎಲ್ಲೆಡೆ ಕೊರೋನಾ ಆತಂಕ ಹೆಚ್ಚಾದ ನಂತರ ಯಾರಾದರೂ ಕೆಮ್ಮಿದರೆ, ಸೀನಿದರೆ ಭಯ ಪಡುವಂತಾಗಿದೆ. ಸೋಂಕಿತ ವ್ಯಕ್ತಿ ಕೆಮ್ಮುವುದರಿಂದ, ಸೀನುವುದರಿಂದ ಸುಲಭವಾಗಿ ಬೇರೆಯವರಿಗೆ ಕೊರೋನಾ ಹರಡುವುದರಿಂದ ಮಾಸ್ಕ್​ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಸೂಪರ್ ಮಾರ್ಕೆಟ್​ನಲ್ಲಿ ಇದ್ದವರನ್ನು ಹೆದರಿಸುವ ಸಲುವಾಗಿ ಮಹಿಳೆಯೊಬ್ಬರು ಜೋರಾಗಿ ಕೆಮ್ಮಿದ್ದರಿಂದ ಆ ಶಾಪ್​ನ ಮಾಲೀಕರಿಗೆ ಬರೋಬ್ಬರಿ 26 ಲಕ್ಷ ರೂ. ನಷ್ಟವಾಗಿದೆ ಎಂದರೆ ನೀವು ನಂಬಲೇಬೇಕು!

ಅಮೆರಿಕದ ಪೆನ್ಸಿಲ್ವೇನಿಯಾದ ಸೂಪರ್ ಮಾರ್ಕೆಟ್​ಗೆ ಹೋಗಿದ್ದ ಮಹಿಳೆ ತನಗೆ ಬೇಕಾದ ಸಾಮಾನುಗಳನ್ನು ಖರೀದಿಸಿ ಬಿಲ್ಲಿಂಗ್ ಸೆಂಟರ್​ನತ್ತ ತೆರಳಿದ್ದಳು. ಆಗ ಸುತ್ತಲೂ ಸೇರಿದ್ದ ಜನರಿಗೆ ಪ್ರಾಂಕ್ ಮಾಡಲೆಂದು ಜೋರಾಗಿ ಎರಡು ಬಾರಿ ಕೆಮ್ಮಿದಳು. ಈಗಾಗಲೇ ಅಮೆರಿಕದಲ್ಲಿ ಕೊರೋನಾ ಸಾವಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರುವುದರಿಂದ ಆಕೆ ಕೆಮ್ಮುತ್ತಿದ್ದಂತೆ ಸುತ್ತಲೂ ಇದ್ದವರು ಭಯದಿಂದ ದೂರ ಸರಿದರು. ಆದರೆ, ಅದು ಇಷ್ಟಕ್ಕೇ ಮುಗಿಯಲಿಲ್ಲ.

ಇದನ್ನೂ ಓದಿ: ಕೊರೋನಾಗೆ ತತ್ತರಿಸಿದ ವಿಶ್ವದ ದೊಡ್ಡಣ್ಣ; ಒಂದೇ ದಿನ ಅಮೆರಿಕದಲ್ಲಿ 10 ಸಾವಿರ ಹೊಸ ಪ್ರಕರಣ

ಆಕೆ ಕೆಮ್ಮಿದ್ದರಿಂದ ಗ್ರಾಹಕರೆಲ್ಲರೂ ಆ ಸೂಪರ್ ಮಾರ್ಕೆಟ್​ನ ವಸ್ತುಗಳನ್ನು ಹೊರಹಾಕಿ, ಇಡೀ ಶಾಪನ್ನು ಶುದ್ಧಗೊಳಿಸಿ, ಹೊಸ ವಸ್ತುಗಳನ್ನು ತರಿಸಬೇಕೆಂದು ಒತ್ತಾಯಿಸಿದರು. ಆ ಮಹಿಳೆಯ ಹುಸಿ ಕೆಮ್ಮಿನಿಂದಾಗಿ 35,000 ಡಾಲರ್ (ಸುಮಾರು 26 ಲಕ್ಷ ರೂ.) ಮೌಲ್ಯದ ವಸ್ತುಗಳನ್ನು ಹೊರಹಾಕಬೇಕಾಯಿತು ಎಂದು ಅಲ್ಲಿನ ಪತ್ರಿಕೆ ವರದಿ ಮಾಡಿದೆ.ಈ ಬಗ್ಗೆ ಆ ಸೂಪರ್ ಮಾರ್ಕೆಟ್ ಕೂಡ ತನ್ನ ಫೇಸ್​ಬುಕ್ ಪೇಜಿನಲ್ಲಿ ಪೋಸ್ಟ್​ ಮಾಡಿದ್ದು, ನಮ್ಮ ಗ್ರಾಹಕರೊಬ್ಬರು ಬೇಕೆಂದೇ ಕೆಮ್ಮಿದ್ದರಿಂದ ಇಡೀ ಸೂಪರ್ ಮಾರ್ಕೆಟ್​ನ ವಸ್ತುಗಳನ್ನು ಹೊರಹಾಕಬೇಕಾಯಿತು. ನಂತರ ಮಧ್ಯಾಹ್ನ 2 ಗಂಟೆಗೆ ಸೂಪರ್ ಮಾರ್ಕೆಟ್​ಗೆ ಹೊಸತಾಗಿ ವಸ್ತುಗಳನ್ನು ತರಿಸಲಾಯಿತು. ಇದರಿಂದ ನಮಗೆ ಲಕ್ಷಾಂತರ ರೂ. ನಷ್ಟವಾಗಿದೆ. ದಯವಿಟ್ಟು ಈ ರೀತಿ ಯಾರೂ ಮಾಡಬೇಡಿ ಎಂದು ಮನವಿ ಮಾಡಿದೆ.

ಇದನ್ನೂ ಓದಿ: ಕೊರೋನಾ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಗೆ ಸೋಂಕೇ ಇರಲಿಲ್ಲ; ವರದಿಯಲ್ಲಿ ದೃಢ
First published: March 27, 2020, 10:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading