• Home
  • »
  • News
  • »
  • coronavirus-latest-news
  • »
  • Covid Death: ಕೊರೋನಾಗೆ HALನ 100 ಉದ್ಯೋಗಿಗಳು ಬಲಿ; ಕಂಪನಿಗೆ ಸಾವಿರಾರು ಕೋಟಿ ರೂ. ನಷ್ಟ!

Covid Death: ಕೊರೋನಾಗೆ HALನ 100 ಉದ್ಯೋಗಿಗಳು ಬಲಿ; ಕಂಪನಿಗೆ ಸಾವಿರಾರು ಕೋಟಿ ರೂ. ನಷ್ಟ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೋವಿಡ್‌-19 ಕನಿಷ್ಠ 100 ಎಚ್ಎಎಲ್ ಉದ್ಯೋಗಿಗಳನ್ನು ಬಲಿ ತೆಗೆದುಕೊಂಡಿದೆ ಎನ್ನಲಾಗಿದೆ. ಇದರಿಂದ ಸುಮಾರು 1,200 ಕೋಟಿ ರೂ. ಮೌಲ್ಯದ ಆದಾಯ ನಷ್ಟವಾಗುತ್ತಿದೆ ಎಂದು ಅಂದಾಜಿಸಲಾಗುತ್ತಿದೆ.

  • Share this:

ನಮಗೆಲ್ಲ ತಿಳಿದ ಹಾಗೆ ಕೊರೋನಾ ಎರಡನೇ ಅಲೆಗೆ ದೇಶವೇ ತತ್ತರಿಸಿದ್ದು. ಅದರಲ್ಲೂ ಬೃಹತ್ ಮತ್ತು ಸಣ್ಣ ಉದ್ಯಮ ಸಂಸ್ಥೆಗಳು ತೀವ್ರವಾದ ಆರ್ಥಿಕ ಬಿಕ್ಕಟ್ಟಿನಲ್ಲಿ ಚೇತರಿಸಿಕೊಳ್ಳಲಾಗದೆ ಉಸಿರಾಟದ ತೊಂದರೆ ಅನುಭವಿಸುತ್ತಿವೆ ಎನ್ನುವುದು ಸಾರ್ವಜನಿಕ ಜೀವನಕ್ಕೆ ಕೊಡಲಿ ಪೆಟ್ಟು ನೀಡಿದೆ. ಜೊತೆಗೆ ದೇಶದ ಆರ್ಥಿಕ ವ್ಯವಸ್ಥೆ ಪಾತಾಳಕ್ಕೆ ಕುಸಿಯುತ್ತಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಸುಧಾರಣೆಗೆ ತರಲು ಆರ್ಥಿಕ ತಜ್ಞರು ಹಗಲು ರಾತ್ರಿಯೆನ್ನದೆ ಶ್ರಮಿಸುತ್ತಿದ್ದಾರೆ. ಇದೀಗ ನಮ್ಮ ದೇಶದ ಹೆಮ್ಮೆಯ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಕೂಡ ಕೋವಿಡ್ ಅಲೆಗೆ ಸಿಲುಕಿ ತತ್ತರಿಸುತ್ತಿದೆ. ಸಂಸ್ಥೆ ಕೈಗೊಳ್ಳುತ್ತಿರುವ ರಕ್ಷಣಾ ಸಾರ್ವಜನಿಕ ವಲಯದ ಉದ್ಯಮವು ಕೋವಿಡ್-19ನಿಂದ ತೀವ್ರವಾಗಿ ಹಾನಿಗೊಳಗಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.


ಕೋವಿಡ್‌ - 19 ಕನಿಷ್ಠ 100 ಎಚ್ಎಎಲ್ ಉದ್ಯೋಗಿಗಳನ್ನು ಬಲಿ ತೆಗೆದುಕೊಂಡಿದೆ ಎನ್ನಲಾಗಿದೆ. ಅಲ್ಲದೆ, ಸರಿಸುಮಾರು ನಾಲ್ಕು ಸಾವಿರ ಉದ್ಯೋಗಿಗಳಿಗೆ ಮತ್ತು ಗುತ್ತಿಗೆದಾರರಿಗೆ ಕೊರೋನಾ ಸೋಂಕು ತಗುಲಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಿರ್ಮಾಣದ ಹಂತದಲ್ಲಿರುವ ಲೈಟ್ ಕಾಂಬ್ಯಾಟ್ ಏರ್ ಕ್ರಾಫ್ಟ್ (ಎಲ್ ಸಿಎ) ತೇಜಸ್ ಮತ್ತು ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (ಎಲ್ ಸಿಎಚ್) ನಂತಹ ನಿರ್ಣಾಯಕ ರಕ್ಷಣಾ ಯೋಜನೆಗಳ ಮೇಲೆ ಪರಿಣಾಮ ಬೀರಿದೆ.


ಇದನ್ನೂ ಓದಿ: Rohini Sindhuri: ಸಿಂಧೂರಿ ಸಹವಾಸ ಮಾಡಿದ IAS​ ಅಧಿಕಾರಿ ಸಾವಿನ ಬಗ್ಗೆ ನಾವೂ ಸಿನಿಮಾ ಮಾಡ್ತೀವಿ; ಸಾ.ರಾ ಮಹೇಶ್ ಘೋಷಣೆ


450ಕ್ಕೂ ಹೆಚ್ಚು ಗುತ್ತಿಗೆದಾರರು ಮತ್ತು ಮಾರಾಟಗಾರರು ಈ ಯೋಜನೆಗಳಲ್ಲಿ ಭಾಗಿಯಾಗಿದ್ದು, ಜೊತೆಗೆ ಈ ಕೋವಿಡ್ ಅಲೆಯಿಂದ ಎಚ್ಎಎಲ್ ಸಂಸ್ಥೆಯು ಆಂತರಿಕವಾಗಿ ಬಲವಾದ ಪೆಟ್ಟು ತಿಂದಿದೆ ಎನ್ನಲಾಗಿದೆ. ಮತ್ತು ಹೊರಗಿನ ವ್ಯವಹಾರಗಳಿಗೂ ಸಹ ಹೊಡೆತ ಬಿದ್ದಿದೆ. 83 ಎಲ್‌ಸಿಎ ಎಂಕೆ-ಐಎಗಳನ್ನು ತಯಾರಿಸಲು ಭಾರತೀಯ ಕಂಪನಿಗೆ ಅತಿದೊಡ್ಡ ರಕ್ಷಣಾ ಒಪ್ಪಂದವನ್ನು HAL 2020 - 21ರ ಆರ್ಥಿಕ ವರ್ಷದಲ್ಲಿ ಪಡೆದುಕೊಂಡಿತ್ತು. ಆದರೆ, ಈ ಸಾಂಕ್ರಾಮಿಕದಿಂದ ಉಂಟಾದ ಅಡಚಣೆಯಿಂದಾಗಿ ಪಿಎಸ್‌ಯು ಯೋಜಿಸಿದಂತೆ ಉತ್ಪನ್ನಗಳನ್ನು ತಲುಪಿಸಲು ಸಾಧ್ಯವಾಗದ ಕಾರಣ 2021-22ರ ಮೊದಲ ತ್ರೈಮಾಸಿಕದ ಮೊದಲ ಎರಡು ತಿಂಗಳು ಸುಮಾರು 1,200 ಕೋಟಿ ರೂ. ಮೌಲ್ಯದ ಆದಾಯವು ನಷ್ಟವಾಗುತ್ತಿದೆ ಎಂದು ಅಂದಾಜಿಸಲಾಗುತ್ತಿದೆ.


ಇದನ್ನೂ ಓದಿ: Kanpur Accident: ಕಾನ್ಪುರದ ರಸ್ತೆ ಅಪಘಾತದಲ್ಲಿ 17 ಜನ ಸಾವು; ಪ್ರಧಾನಿ ಮೋದಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ


"ಯೋಜನೆಗಳಿಗೆ ಪೂರಕವಾದ ವಿತರಣೆಗಳು ಒಮ್ಮೆ ನಮ್ಮ ಕೈ ಸೇರಿದರೆ, ಬಹುಶಃ ನಮ್ಮ ಉದ್ಯಮ ಚೇತರಿಸಿಕೊಳ್ಳುತ್ತದೆ. ಜೊತೆಗೆ ನಿರಂತರ ಪರಿಶ್ರಮದಿಂದ ಕಳೆದು ಹೋದ ನಷ್ಟವನ್ನು ಪುನಶ್ಚೇತನಗೊಳಿಸಿ ಸಂಸ್ಥೆಯ ಗಾಂಭೀರ್ಯತೆಯನ್ನು ಕಾಪಾಡಲಾಗುವುದು" ಎಂದು ಎಚ್ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್ ಮಾಧವನ್ ತಿಳಿಸಿದ್ದಾರೆ.


ಕಳೆದ ಎರಡು ತಿಂಗಳುಗಳಿಂದ ಉತ್ಪಾದನಾ ಚಟುವಟಿಕೆ ಕಡಿಮೆಯಾಗಿದೆ ಎನ್ನಲಾಗಿದೆ. ಉದ್ಯೋಗಿಗಳು ಕೆಲಸ ಮಾಡುತ್ತಿದ್ದರೂ, ಯೋಜನೆಗೆ ಪೂರಕವಾದ ವಸ್ತುಗಳನ್ನು ಹೊರಭಾಗದಿಂದ ಅವಲಂಬಿಸಿದ್ದೇವೆ. ಮತ್ತು ನಿರೀಕ್ಷಿಸಿದ ಮಟ್ಟಿಗೆ ಮೂಲಭೂತ ಸಾಮಗ್ರಿಗಳು ತಲುಪದ ಕಾರಣ ಯೋಜನೆಯ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಕೋವಿಡ್ ಕಾರಣದಿಂದ ಅಂತರರಾಷ್ಟ್ರೀಯ ವಿಮಾನ ಕಾರ್ಯಾಚರಣೆ ಅಡ್ಡಿಯಾಗಿದ್ದು, ಒಇಎಂಗಳಿಂದ ಸಾಮಗ್ರಿಗಳ ಪೂರೈಕೆಯ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.


ಹಣಕಾಸು ವಿಷಯಗಳಿಗೆ ಸಂಬಂಧಿಸಿದಂತೆ ಮೊದಲ ತ್ರೈಮಾಸಿಕವು ಸ್ವಲ್ಪ ನಿರಾಶಾದಾಯಕವಾಗಿರುತ್ತದೆ. ಮುಂದಿನ ವಾರದಿಂದ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಕಳೆದ ಬಾರಿಯಂತೆ ನಾವು ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಕಾರ್ಯವೈಖರಿ ಇರಲಿದೆ ಎಂದು ಮಾಧವನ್ ಅವರು ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ.

Published by:Sushma Chakre
First published: