• ಹೋಂ
  • »
  • ನ್ಯೂಸ್
  • »
  • Corona
  • »
  • CoviShield - ಡಿಸೆಂಬರ್​ನಷ್ಟರಲ್ಲಿ ಕೊರೋನಾ ಲಸಿಕೆ ತಯಾರಿಕೆ ಸಾಧ್ಯ ಎಂದ ಸೆರಮ್ ಇನ್ಸ್​ಟಿಟ್ಯೂಟ್

CoviShield - ಡಿಸೆಂಬರ್​ನಷ್ಟರಲ್ಲಿ ಕೊರೋನಾ ಲಸಿಕೆ ತಯಾರಿಕೆ ಸಾಧ್ಯ ಎಂದ ಸೆರಮ್ ಇನ್ಸ್​ಟಿಟ್ಯೂಟ್

ಸೆರಮ್ ಇನ್ಸ್​ಟಿಟ್ಯೂಟ್​ನ ಸಿಇಒ ಆಡಾರ್ ಪೂನಾವಾಲ

ಸೆರಮ್ ಇನ್ಸ್​ಟಿಟ್ಯೂಟ್​ನ ಸಿಇಒ ಆಡಾರ್ ಪೂನಾವಾಲ

ಬ್ರಿಟನ್​ನಲ್ಲಿ ನಡೆಯುತ್ತಿರುವ ಪ್ರಯೋಗಗಳಲ್ಲಿ ಸಕಾರಾತ್ಮಕ ಫಲಿತಾಂಶ ಬರುವುದು ಮುಂದುವರಿದರೆ ಹಾಗೂ ಭಾರತದಲ್ಲಿ ಲಸಿಕೆಗೆ ಅನುಮೋದನೆ ಸಿಕ್ಕರೆ ಡಿಸೆಂಬರ್​ನಷ್ಟರಲ್ಲಿ ಕೋವಿಶೀಲ್ಡ್ ಕೊರೋನಾ ವ್ಯಾಕ್ಸಿನ್ ಮಾರುಕಟ್ಟೆಗೆ ಬರಲಿದೆ.

  • News18
  • 2-MIN READ
  • Last Updated :
  • Share this:

ನವದೆಹಲಿ(ಅ. 28): ಜಗತ್ತಿನ್ನೆಲ್ಲೆಡೆ ಅಟ್ಟಹಾಸ ಮಾಡುತ್ತಿರುವ ಕೊರೋನಾ ಮಾರಿಗೆ ಕಡಿವಾಣ ಹಾಕಲು ವಿವಿಧೆಡೆ ವ್ಯಾಕ್ಸಿನ್​ಗಳು ಸಿದ್ಧಗೊಳ್ಳುತ್ತಿವೆ. ಅಂತಿಮ ಹಂತದ ಪ್ರಯೋಗಗಳಲ್ಲಿರುವ ಲಸಿಕೆಗಳಲ್ಲಿ ಆಫ್ಸ್​ಫರ್ಡ್ ವಿವಿ ಸಹಯೋಗದಲ್ಲಿ ತಯಾರಾಗುತ್ತಿರುವ ಕೋವಿಶೀಲ್ಡ್ (Covishield) ವ್ಯಾಕ್ಸಿನ್ ಕೂಡ ಒಂದು. ಭಾರತದಲ್ಲಿ ಈ ಲಸಿಕೆ ತಯಾರಿಸಲು ಆಸ್ಟ್ರಾಜೆನೆಕಾ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿರುವ ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಡಿಸೆಂಬರ್​ನಷ್ಟರಲ್ಲಿ ಲಸಿಕೆ ಹೊರತರಲು ಸಿದ್ಧವಾಗಿದೆ. ಸಿರಮ್ ಇನ್ಸ್​ಟಿಟ್ಯೂಟ್​ನ ಸಿಇಒ ಆಡಾರ್ ಪೂನಾವಾಲ ಅವರು ಈ ವಿಚಾರವನ್ನು ತಿಳಿಸಿದ್ದು, ಡಿಸೆಂಬರ್​ನಷ್ಟರಲ್ಲಿ ಲಸಿಕೆ ಹೊರತರಲು ತಮ್ಮ ಸಂಸ್ಥೆ ಸಿದ್ಧವಿದೆಯಾದರೂ ಅದು ನೆರವೇರಲು ಎರಡು ಷರತ್ತುಗಳನ್ನ ಮುಂದಿಟ್ಟಿದ್ದಾರೆ.


ಒಂದು, ಬ್ರಿಟನ್ ದೇಶದಲ್ಲಿ ಮುಂದಿನ ದಿನಗಳಲ್ಲಿ ಪ್ರಯೋಗದ ಫಲಿತಾಂಶದ ಡಾಟಾ ಹಾಗೂ ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ ಡಿಸಿಜಿಐ ಅನುಮೋದನೆ ಮೇಲೆ ಇದು ಅವಲಂಬಿತವಾಗಿದೆ ಎಂದು ಪೂನಾವಾಲ ತಿಳಿಸಿದ್ದಾರೆ. ಒಂದು ವೇಳೆ ಬ್ರಿಟನ್​ನಲ್ಲಿ ನಡೆಯುತ್ತಿರುವ ಪ್ರಯೋಗಗಳು ಸಕಾರಾತ್ಮಕವಾಗಿದ್ದರೆ ಭಾರತದಲ್ಲಿ ಲಸಿಕೆ ತಯಾರಿಕೆಗೆ ತುರ್ತಾಗಿ ಅನುಮೋದನೆ ಕೊಡುವಂತೆ ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಡಿಸಿಜಿಐಗೆ ಮನವಿ ಮಾಡಿಕೊಳ್ಳುವ ನಿರೀಕ್ಷೆ ಇದೆ.


ಇದನ್ನೂ ಓದಿ: ಚೀನಾದ ಭಾಗ ಲಡಾಖ್ ಎಂದು ಯಡವಟ್ಟು; ಟ್ವಿಟ್ಟರ್ ವಿವರಣೆ ಸಮರ್ಪಕವಲ್ಲ ಎಂದ ಸಂಸದರ ಸಮಿತಿ


ಆಕ್ಸ್​ಫರ್ಡ್ ಯೂನಿವರ್ಸಿಟಿ ಮತ್ತು ಆಸ್ಟ್ರಾಜೆನೆಕಾ ಫಾರ್ಮಾ ಕಂಪನಿ ಜೊತೆಯಾಗಿ ಅಭಿವೃದ್ಧಿಪಡಿಸುತ್ತಿರುವ ಕೋವಿಶೀಲ್ಡ್ ಕೊರೋನಾ ಲಸಿಕೆ ಈಗ ಮೂರನೇ ಹಂತದ ಪ್ರಯೋಗದಲ್ಲಿದೆ. ಭಾರತದಲ್ಲಿ ಸೆರಮ್ ಇನ್ಸ್​ಟಿಟ್ಯೂಟ್ ಇದರ ಪ್ರಯೋಗ ಮಾಡುತ್ತಿದೆ. ಇಲ್ಲಿ 1,600 ಮಂದಿಯ ಮೇಲೆ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಇವರ ಪ್ರಾಯೋಗಿಕ ಲಸಿಕೆಯು ಚಿಕ್ಕ ಪ್ರಾಯದ ಹಾಗು ವಯಸ್ಕರು ಇಬ್ಬರಲ್ಲಿಯೂ ರೋಗಪ್ರತಿರೋಧಕ ಶಕ್ತಿಯನ್ನು ಜಾಗೃತಗೊಳಿಸುತ್ತಿರುವುದು ಕಂಡುಬಂದಿದೆ.

First published: