ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಎದುರಿಸಲು ವಿವಿಧ ಕ್ರಮಗಳಿಗೆ ತಜ್ಞರ ಸಮಿತಿ ಶಿಫಾರಸು

ಜನವರಿ ಮತ್ತು ಫೆಬ್ರವರಿಯಲ್ಲಿ ಕೋವಿಡ್​ನ ಎರಡನೇ ಅಲೆಯ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಆ ಪರಿಸ್ಥಿತಿ ಎದುರಿಸಲು ಸಾಧ್ಯವಾಗುವಂತೆ ತಜ್ಞರ ಸಮಿತಿ ಕೆಲ ಕ್ರಮಗಳನ್ನ ಶಿಫಾರಸು ಮಾಡಿದೆ.

ಸಚಿವ ಕೆ.ಸುಧಾಕರ್

ಸಚಿವ ಕೆ.ಸುಧಾಕರ್

  • News18
  • Last Updated :
  • Share this:
ಬೆಂಗಳೂರು(ಡಿ. 04): ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿನ ಎರಡನೇ ಅಲೆ ಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಏನೇನು ಕ್ರಮ ಕೈಗೊಳ್ಳಬಹುದು ಎಂಬುದು ಅವಲೋಕಿಸಿ ತಾಂತ್ರಿಕ ಸಲಹಾ ಸಮಿತಿ ತನ್ನ ವರದಿ ನೀಡಿದೆ. ಮುಂದಿನ 45 ದಿನಗಳು ನಿರ್ಣಾಯಕ ಹಂತವಾಗಿದ್ದು ಕೋವಿಡ್ ನಿಯಮಗಳನ್ನ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕರ್ಫ್ಯೂ ಹೇರುವ ಅಗತ್ಯವಿಲ್ಲ. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಬೇಕು ಎಂದು ತಜ್ಞರ ಈ ಸಮಿತಿ ಸಲಹೆ ನೀಡಿದೆ.

ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ್, ತಜ್ಞರ ಸಮಿತಿ 54 ಬಾರಿ ಸಭೆಗಳನ್ನ ನಡೆಸಿ ವರದಿ ನೀಡಿರುವುದನ್ನು ತಿಳಿಸಿದ್ದಾರೆ. ಜನವರಿ ಅಥವಾ ಫೆಬ್ರವರಿಯಲ್ಲಿ ಎರಡನೇ ಅಲೆ ಬರುವ ಸಾಧ್ಯತೆ ಇದೆ. ಈ ಎರಡನೇ ಕೋವಿಡ್ ಅಲೆ ತಡೆಯಲು ಮುಂದಿನ 45 ದಿನ ಬಹಳ ನಿರ್ಣಾಯಕ ಹಂತವಾಗಿದೆ. ಹಾಗಾಗಿ ಸೋಂಕು ಹರಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಅಗತ್ಯ ಎಂದು ಸಮಿತಿ ಶಿಫಾರಸು ಮಾಡಿದೆ. ಸರ್ಕಾರ ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದೆ. ಇವತ್ತಿನಿಂದಲೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ಧಾರೆ.

ಇದನ್ನೂ ಓದಿ: Karnataka Bandh: ಕನ್ನಡಕ್ಕೆ ಎಲ್ಲಾ ಆದ್ಯತೆ ಕೊಡುತ್ತೇನೆ, ಬಂದ್ ಮಾಡಬೇಡಿ: ಸಿಎಂ ಮನವಿ

ಗ್ರಾಮ ಪಂಚಾಯಿತಿ ಚುನಾವಣೆ ನಡೆದರೆ ಮನೆಮನೆಗೆ ವೈರಸ್ ಹರಡಲು ಅವಾಶ ಆಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ. ದೇವಸ್ಥಾನ, ರಾಜಕೀಯ ಸಮಾರಂಭಗಳಲ್ಲಿ ಹೆಚ್ಚು ಜನರು ಸೇರ್ಪಡೆಯಾಗದಂತೆ ನೋಡಿಕೊಳ್ಳಿ ಎಂದು ಕೋವಿಡ್ ತಜ್ಞರ ಸಮಿತಿ ಹೇಳಿದೆ ಎಂದು ಸುಧಾಕರ್ ಅವರು ಗ್ರಾಮ ಪಂಚಾಯತ್ ಚುನಾವಣೆ ಆಯೋಜನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಡಿಸೆಂಬರ್ ಮೂರನೇ ವಾರದಲ್ಲಿ ಶಾಲೆ ಕಾಲೇಜುಗಳನ್ನ ತೆರೆಯುವ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಲಸಿಕೆ ನೀಡಲು ಖಾಸಗಿ ವಲಯದ ಅಗತ್ಯ ಬಿದ್ದರೆ ಬಳಸಿಕೊಳ್ಳಲಾಗುವುದು. ನೈಟ್ ಕರ್ಫ್ಯೂ ಬಗ್ಗೆ ಸಮಿತಿ ಸಲಹೆ ಕೊಟ್ಟಿಲ್ಲ. ಆದರೆ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಹೌದು, ನಾನು ನಿಯತ್ತಿನ ನಾಯಿ; ವಾಟಾಳ್​ ನಾಗರಾಜ್​ಗೆ ರೇಣುಕಾಚಾರ್ಯ ತಿರುಗೇಟು

ತಜ್ಞರ ಸಮಿತಿ ಮಾಡಿರುವ ಶಿಫಾರಸುಗಳೇನು?
* ಜನವರಿ ಅಥವಾ ಫೆಬ್ರವರಿಯಲ್ಲಿ ರಾಜ್ಯದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆ ಪ್ರಾರಂಭವಾಗಬಹುದು
* ಡಿಸೆಂಬರ್ 20ರಿಂದ ಜನವರಿ 2ರವರೆಗೆ ಕೋವಿಡ್ ನಿಯಮಗಳನ್ನ ಎಚ್ಚರಿಕೆಯಿಂದ ಜಾರಿಗೊಳಿಸಬೇಕು
* ಜನರು ಗುಂಪುಗುಂಪಾಗಿ ಸೇರುವುದನ್ನು ತಡೆಯಿರಿ
* ಮದುವೆ ಸಮಾರಂಭದಲ್ಲಿ 100ಕ್ಕಿಂತ ಹೆಚ್ಚು ಮಂದಿ ಸೇರಬಾರದು
* ರಾಜಕೀಯ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ 200ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ.
* ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ 50 ಮಂದಿ ಮಾತ್ರ ಸೇರಬೇಕು.
* ಹೊಸ ವರ್ಷಾಚರಣೆಯಲ್ಲಿ ಜನಸಂದಣಿ ಆಗದಂತೆ ನೋಡಿಕೊಳ್ಳಬೇಕು
* ಪ್ರತೀ ದಿನ 12,500 ಕೋವಿಡ್ ಪರೀಕ್ಷೆ ನಡೆಸಬೇಕು
* ರೋಗಲಕ್ಷಣ ಇದ್ದವರಿಗೆ ವಿಶೇಷವಾಗಿ ಕೋವಿಡ್ ಟೆಸ್ಟ್ ಮಾಡಿಸಬೇಕು.

ವರದಿ: ಚಿದಾನಂದ ಪಟೇಲ್
Published by:Vijayasarthy SN
First published: