ಒಂದು ತಿಂಗಳ ಲಾಕ್ಡೌನ್ ಡೆಲ್ಟಾ ವೈರಸ್ –ರೂಪಾಂತರವನ್ನು ತಡೆಯಲು ವಿಫಲವಾಗಿರುವುದನ್ನು ಒಪ್ಪಿಕೊಂಡಿರುವ ನ್ಯೂ ಸೌತ್ವೇಲ್ಸ್ ರಾಜ್ಯವು, ತುರ್ತಾಗಿ ಹೆಚ್ಚಿನ ಲಸಿಕೆಗಳು ಮತ್ತು ಸಂಪನ್ಮೂಲಗಳನ್ನು ಕಳಿಸುವಂತೆ ಕ್ಯಾನ್ಬೆರಾಗೆ ಮನವಿ ಮಾಡಿದೆ.
ಏಕಾಏಕಿ ರಾಷ್ಟ್ರೀಯ ತುರ್ತು ಸ್ಥಿತಿಯನ್ನು ಘೋಷಿಸುವುದರಿಂದ ಬಿಕ್ಕಟ್ಟನ್ನು ತಡೆಯುವಲ್ಲಿ, ಫೆಡರಲ್ ಸರ್ಕಾರದ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ದಾರಿ ಮಾಡಿ ಕೊಡಬಹುದು. “ವೈರಸ್ ಸಂಖ್ಯೆಗಳು ಸರಿಯಾದ ದಿಕ್ಕಿನಲ್ಲಿ ಹೋಗುತ್ತಿಲ್ಲ ಎಂಬುದರಲ್ಲಿ ಸಂದೇಹವಿಲ್ಲ “ ಎಂದು ನ್ಯೂ ಸೌತ್ ವೇಲ್ಸ್ ಪ್ರಿಮೀಯರ್ ಗ್ಲಾಡಿಸ್ ಬೆರೆಜಿಕ್ಲಿಯಾನ್ ಹೇಳಿದ್ದಾರೆ.
ಅವರ ರಾಜ್ಯದಲ್ಲಿ ಶುಕ್ರವಾರ 136 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,782 ಕ್ಕೆ ತಲುಪಿದೆ. ವೈರಸ್ “ಎಲ್ಲೆಡೆ ಹರಡುತ್ತಿದೆ” ಮತ್ತು ದೇಶದ ಅರ್ಧದಷ್ಟು ಮಂದಿ ಲಾಕ್ಡೌನ್ನಲ್ಲಿ ಇದ್ದಾರೆ, ಸರ್ಕಾರವು ಲಸಿಕೆಗಳನ್ನು ಹೆಚ್ಚಿಸುವ ಬಗ್ಗೆ ಯೋಚಿಸಬೇಕು ಎಂದಿದ್ದಾರೆ.
ಕೇವಲ 12 ಶೇಕಡಾ ಅಸ್ಟ್ರೇಲಿಯನ್ನರಿಗೆ ಮಾತ್ರ ಸಂಪೂರ್ಣ ಲಸಿಕೆ ನೀಡಲಾಗಿದೆ ಫೈಜರ್ ಲಸಿಕೆ ಸರಬರಾಜಿನ ಸಮಸ್ಯೆಗಳು ಮತ್ತು ಆಸ್ಟ್ರಾಜೆನೆಕಾ ಲಸಿಕೆಯ ಸುರಕ್ಷತೆ ಬಗ್ಗೆ ಸಂದೇಹಗಳೇ ಇದಕ್ಕೆ ಕಾರಣ. ಸಿಡ್ನಿಯ ಐದು ಮಿಲಿಯನ್ ನಿವಾಸಿಗಳಿಗೆ, ನಿರ್ಭಂಧಗಳು ಅಕ್ಟೋಬರ್ ವರೆಗೆ ಮುಂದುವರೆಯಬಹುದು ಎಂದು ಎಚ್ಚರಿಸುವಾಗ, “ನಮಗೆ ಕನಿಷ್ಟ ಪಕ್ಷ, ಅತ್ಯಧಿಕ ಮೊದಲ ಫೈಜರ್ ಡೋಸ್ಗಳು ಬೇಕಾಗಿದೆ” ಎಂದು ಅವರು ಹೇಳಿದ್ದಾರೆ. ಲಾಕ್ಡೌನ್ ಮುಂದಿನ ವಾರದ ವರೆಗೆ ವಿಸ್ತಾರವಾಗಲಿರುವುದು ಬಹುತೇಕ ಖಚಿತವಾಗಲಿದ್ದು, ಸಿಡ್ನಿಯ ನಿರ್ದಿಷ್ಟ ಪ್ರದೇಶಗಳ ಅನಿವಾರ್ಯ ಅಲ್ಲದ ಕಾರ್ಮಿಕರು ಹೊರ ಹೋಗದಂತೆ ನಿರ್ಭಂಧಿಸಲಾಗುವುದು ಎಂದು ಅವರು ಘೋಷಿಸಿದರು.
ದೇಶದಲ್ಲಿ ಲಸಿಕೆ ಅಭಿಯಾನ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಪ್ರಧಾನ ಮಂತ್ರಿ ಸ್ಕಾಟ್ ಮೊರಿಸಾನ್ ಕ್ಷಮೆ ಕೇಳಿದ್ದಾರೆ.
‘ಸ್ಟೀಲ್ ರಿಂಗ್’
ಸಿಡ್ನಿಯ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ, ವಿಕ್ಟೋರಿಯಾದ ಪ್ರೀಮಿಯರ್ ಡ್ಯಾನ್ ಆ್ಯಂಡ್ರೀವ್ಸ್ , ನಗರದ ಒಳಗೆ ಹೋಗುವ ಮತ್ತು ಬರುವ ಪ್ರಯಾಣವನ್ನು ನಿಷೇಧಿಸಿ, ಅದರ ಮೇಲೊಂದು ‘ಸ್ಟೀಲ್ ರಿಂಗ್’ ಎಸೆಯಬೇಕೆಂದು ಹೇಳಿದ್ದಾರೆ. ನ್ಯೂಜಿಲೆಂಡ್ ಪ್ರಧಾನಿ ಜೆಸಿಕಾ ಅಂಡ್ರೆನ್ , ಕನಿಷ್ಟ ಎಂಟು ವಾರಗಳ ವರೆಗೆ ಎರಡೂ ದೇಶಗಳ ನಡುವಿನ ಪ್ರಯಾಣವನ್ನು ರದ್ದುಗೊಳಿಸಲಾಗುವುದು ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾದವರಿಗೆ ಇನ್ನು ಮುಂದೆ ನ್ಯೂಜಿಲ್ಯಾಂಡ್ಗೆ ಕ್ವಾರಂಟೈನ್ ಮುಕ್ತ ಪ್ರವೇಶ ಇರುವುದಿಲ್ಲ, ಆದರೆ ನ್ಯೂಜಿಲ್ಯಾಂಡ್ನವರಿಗೆ ತಮ್ಮ ದೇಶಕ್ಕೆ ಮರಳಲು ಆಸ್ಟ್ರೇಲಿಯಾದಿಂದ ವಿಮಾನದ ಏರ್ಪಾಡು ಮಾಡಲಾಗುವುದು.
“ಒಂದು ವರ್ಷಕ್ಕೂ ಹೆಚ್ಚು ಕಾಲದ ಗಡಿ ನಿರ್ಭಂದದ ಬಳಿಕ, ಏಪ್ರಿಲ್ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ಪ್ರಯಾಣ ಮರು ಆರಂಭ ಮಾಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ