14 ದಿನ ರಾಜ್ಯಾದ್ಯಂತ 144 ಸೆಕ್ಷನ್ ಜಾರಿ, ವೀಕೆಂಡ್ ಕರ್ಫ್ಯೂ; ರಾಜ್ಯ ಸರ್ಕಾರದ ಹೊಸ ನಿಯಮಗಳು

ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿಗಳನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಇಂದು ಪ್ರಕಟಿಸಿದರು. ನಾಳೆಯಿಂದಲೇ ಹೊಸ ನಿಯಮಗಳು ಜಾರಿಗೆ ಬರಲಿವೆ. ಹೊಸ ಮಾರ್ಗಸೂಚಿಯ ಪ್ರಕಾರ ಹೊಸ ನಿರ್ಬಂಧಗಳು ಹೀಗಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು(ಏ. 20): ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಇಂದು ಇದೇ ವಿಷಯವಾಗಿ ರಾಜ್ಯಪಾಲರ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಎಲ್ಲರ ಸಲಹೆ ಪಡೆದು, ಬಳಿಕ ಅಂತಿಮವಾಗಿ ಹಲವು ಕಠಿಣ ಕ್ರಮಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಈ ಕ್ರಮಗಳು ಮುಂದಿನ 14 ದಿನಗಳ ಕಾಲ ರಾಜ್ಯದಲ್ಲಿ ಜಾರಿಯಲ್ಲಿ ಇರಲಿದೆ.

    ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿಗಳನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಇಂದು ಪ್ರಕಟಿಸಿದರು. ನಾಳೆಯಿಂದಲೇ ಹೊಸ ನಿಯಮಗಳು ಜಾರಿಗೆ ಬರಲಿವೆ. ಹೊಸ ಮಾರ್ಗಸೂಚಿಯ ಪ್ರಕಾರ ಹೊಸ ನಿರ್ಬಂಧಗಳು ಹೀಗಿವೆ.

    ಇದನ್ನು ಓದಿ: PM Modi Speech | ಜನರಿಗೆ ನಿರಾಳ, ಮತ್ತೆ ಲಾಕ್​ಡೌನ್​ ಇಲ್ಲ; ಪ್ರಧಾನಿ ಮೋದಿ ಸ್ಪಷ್ಟನೆ

    • ಮುಂದಿನ 14 ದಿನಗಳವರೆಗೆ ಅಂದರೆ ಮೇ 4ರವರೆಗೆ ಹೊಸ ಮಾರ್ಗಸೂಚಿ ಜಾರಿ

    • ರಾತ್ರಿ 9ರಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್ ಕರ್ಫ್ಯೂ

    • ಶನಿವಾರ ಮತ್ತು ಭಾನುವಾರ ಇಡೀ ರಾಜ್ಯ ಫುಲ್ ಡೇ ವೀಕೆಂಡ್ ಕರ್ಫ್ಯೂ

    • ಸಿನಿಮಾ ಹಾಲ್, ಜಿಮ್, ಕ್ರೀಡಾಂಗಣ, ಆಡಿಟೋರಿಯಂ, ಈಜುಕೊಳ ಎಲ್ಲವೂ ಬಂದ್

    • ಸ್ವಿಮಿಂಗ್ ಫೆಡರೇಶನ್ ಪ್ರಾಕ್ಟೀಸ್ ಇದೆ ಅವರಿಗೆ ಮಾತ್ರ ಅವಕಾಶ 

    • ದೇವಸ್ಥಾನದ ಪೂಜೆ ಅರ್ಚಕರಿಗೆ ಮಾತ್ರ ಸೀಮಿತ.

    • ಹೋಟೆಲ್, ರೆಸ್ಟೋರೆಂಟ್​ನಲ್ಲಿ ಪಾರ್ಸಲ್​ಗೆ ಮಾತ್ರ ಸೀಮಿತ.

    • ಕೈಗಾರಿಕೆ, ವ್ಯವಸಾಯ, ದಿನಸಿ ಮಳಿಗೆಗೆ ಅನುಮತಿ, ತರಕಾರಿ ಮಾರುಕಟ್ಟೆ ತೆರೆದ ಪ್ರದೇಶದಲ್ಲಿ ಏ.23ರಿಂದ ಮಾರಾಟ

    • ಕಟ್ಟಡ ನಿರ್ಮಾಣ ಕೆಲಸ ನಡೆಯಲಿದೆ.

    • ಮಾಲ್ ಗಳು ಕ್ಲೋಸ್

    • ಮಾರುಕಟ್ಟೆ ಹೊರವಲಯಕ್ಕೆ ಶಿಫ್ಟ್​

    • ಲಿಕ್ಕರ್ ಶಾಪ್, ‌ಬಾರ್​ನಲ್ಲಿ ಪಾರ್ಸಲ್​ಗೆ ಮಾತ್ರ ಅವಕಾಶ

    • ಇ ಕಾಮರ್ಸ್ ಗೆ ಅವಕಾಶ

    • ಸರ್ಕಾರಿ ಕಚೇರಿ ಶೇ. 50 ರಷ್ಟು ಮಾತ್ರ ಅವಕಾಶ

    • ಐಟಿ ಬಿಟಿ ವರ್ಕ್ ಫ್ರಮ್ ಹೋಮ್

    • ಅಂತರಾಜ್ಯ ಓಡಾಟಕ್ಕೆ ಅವಕಾಶ

    • ಸಾರಿಗೆ ಬಸ್​ಗಳಲ್ಲಿ ಶೇ.50 ಮಾತ್ರ ಅವಕಾಶ

    • ಮದುವೆ ಸಮಾರಂಭದಲ್ಲಿ 50 ಜನ ಮಾತ್ರ ಭಾಗಿಯಾಗಲು ಅವಕಾಶ

    • ಶವಸಂಸ್ಕಾರದಲ್ಲಿ 30 ಜನ ಪಾಲ್ಗೊಳ್ಳಬಹುದು

    • 144 ಸೆಕ್ಷನ್ ಇಡೀ ರಾಜ್ಯದಲ್ಲಿ ಜಾರಿ

    • ಕೈಗಾರಿಕೆ ನೈಟ್ ಶಿಫ್ಟ್​ ಇರುತ್ತೆ

    • ದೂರ ಪ್ರಯಾಣ ಮಾಡುವವರು ಟಿಕೆಟ್ ತೋರಿಸಿ ಹೋಗಬೇಕು

    Published by:HR Ramesh
    First published: