Covid Mask: 5 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಮಾಸ್ಕ್‌ ಕಡ್ಡಾಯವಿಲ್ಲ! ಹೊಸ ರೂಲ್ಸ್‌

ಕೋವಿಡ್ ಸೋಂಕು ಇದ್ದ ಸಮಯದಲ್ಲಿ ಮಕ್ಕಳ ಯಾವುದಾದರು ಅಂಗಗಳಿಗೆ ಹಾನಿಯಾದಲ್ಲಿ ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಬೇಕು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕೊರೋನಾ (Corona) ಬಂದಾಗಿನಿಂದ ಒಂದಲ್ಲ ಒಂದು ಹೊಸ ಹೊಸ ನಿಯಮಗಳು ಬರುತ್ತಲೇ ಇವೆ. ಸದ್ಯ 5 ವರ್ಷದ ಕೆಳಗಿನ ಮಕ್ಕಳಿಗೆ (Children's) ಮಾಸ್ಕ್ (Mask) ಕಡ್ಡಾಯವಲ್ಲ ಎಂಬ ಹೊಸ ನೀತಿ ಜಾರಿಗೆ ಬಂದಿದೆ. ಕೊರೋನ ಬಂದಾಗಿನಿಂದ ಮಕ್ಕಳ ಪಾಡಂತು ಹೇಳತೀರದು. ಶಾಲೆಗೆ(School) ಹೋಗುವಂತಿಲ್ಲ, ಹೊರಗೆ(Outdoors) ಆಡುವಂತಿಲ್ಲ, ಅಪ್ಪಿ-ತಪ್ಪಿ ಹೊರಗೆ ಹೋಗಬೇಕೆಂದರೆ ಮಾಸ್ಕ್ ಧರಿಸಲೇಬೇಕು.

ಮಾಸ್ಕ್ ದೊಡ್ಡ ಸಮಸ್ಯೆ
ದೊಡ್ಡವರಿಗೆ ಮಾಸ್ಕ್ ಪದ್ದತಿ ನಿತ್ಯ ಜೀವನಕ್ಕೆ ಒಗ್ಗಿಕೊಂಡು ಬಿಟ್ಟಿದೆ. ಆದರೆ ಪಾಪ ಮಕ್ಕಳಿಗೆ ಮಾಸ್ಕ್ ದೊಡ್ಡ ಸಮಸ್ಯೆಯಾಗಿದೆ. ಇನ್ನೂ 5 ವರ್ಷಕ್ಕಿಂತ ಕೆಳಗಿರುವ ಮಕ್ಕಳಂತೂ ಮಾಸ್ಕ್ ಹಾಕಿದರೆ ಸಾಕು ಕಿತ್ತು, ಕಿತ್ತು ಎಸೆಯುತ್ತಾರೆ. ಸಣ್ಣ ಮಕ್ಕಳಿಗೆ ಮಾಸ್ಕ್ ಅಭ್ಯಾಸ ಮಾಡಿಸುವುದೇ ಪೋಷಕರಿಗೆ ದೊಡ್ಡ ಸವಾಲಿನ ಕೆಲಸವಾಗಿ ಬಿಟ್ಟಿದೆ. ಮಾಸ್ಕ್ ಇಲ್ಲದೇ ಹೋದರೆ ಪೊಲೀಸರು ಬಿಡುವುದಿಲ್ಲ ದಂಡ ಹಾಕಿ ಕಳಿಸುತ್ತಾರೆ. ಹೀಗಿರುವಾಗ ಮಕ್ಕಳಿಗೆ ಮಾಸ್ಕ್ ಹಾಕಿಸಲು ಸರ್ಕಸ್ ಮಾಡಬೇಕಿತ್ತು.

ಆದರೆ ಇನ್ನೂ ಮುಂದೆ ಈ ಸಮಸ್ಯೆ ಇರುವುದಿಲ್ಲ. ಹೌದು 5 ವರ್ಷದ ಕೆಳಗಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯವಲ್ಲ ಎಂಬ ಹೊಸ ನೀತಿ ಜಾರಿಗೆ ಬಂದಿದೆ. ಇದರನ್ವಯ ಸಣ್ಣ ಮಕ್ಕಳಿಗೆ ಮಾಸ್ಕ್ ಅನ್ನು ಕಡ್ಡಾಯವಾಗಿ ಹಾಕಲೇಬೇಕಂತಿಲ್ಲ. 5 ವರ್ಷ ಕೆಳಗೆ ಮತ್ತು ಮೇಲ್ಪಟ್ಟ ಅಂದರೆ 18 ವರ್ಷ ಒಳಗಿನ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಕೋವಿಡ್ -19 ನಿರ್ವಹಣೆಗಾಗಿ ಪರಿಷ್ಕೃತ ಸಮಗ್ರ ಮಾರ್ಗಸೂಚಿಯನ್ನು ಕೇಂದ್ರ ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿದೆ. ಈ ನಿಯಾಮವಳಿಗಳ ಪ್ರಕಾರ 5 ವರ್ಷದ ಕೆಳಗಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯವಲ್ಲ ಮತ್ತು ಕೆಲವು ಇತರೆ ಅಂಶಗಳನ್ನು ಸೇರಿಸಿದೆ.

ಇದನ್ನೂ ಓದಿ: N95 Maskನ್ನು ಎಷ್ಟು ಬಾರಿ ಬಳಕೆ ಮಾಡ್ಬೇಕು? ಹೆಚ್ಚು ಬಾರಿ ಬಳಸಿದ್ರೆ ಏನೇನು ಅಪಾಯಗಳಿವೆ? ಫುಲ್ ಡೀಟೆಲ್ಸ್

ಪರಿಷ್ಕೃತ ಸಮಗ್ರ ಮಾರ್ಗಸೂಚಿಯಲ್ಲಿ ಏನೇನಿದೆ..?
1) ಔಷಧಿ:
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೋಂಕಿನ ತೀವ್ರತೆಯನ್ನು ಲೆಕ್ಕಿಸದೆ ಆ್ಯಂಟಿವೈರಲ್ ಅಥವಾ ಮೊನೊಕ್ಲೋನಲ್ ಪ್ರತಿಕಾಯಗಳ ಬಳಕೆ ಶಿಫಾರಸು ಮಾಡುವಂತಿಲ್ಲ.
-ಮಾರ್ಗಸೂಚಿಗಳ ಪ್ರಕಾರ, ಕೋವಿಡ್-19 ಒಂದು ವೈರಲ್ ಸೋಂಕು. ಕೋವಿಡ್-19 ಸೋಂಕುನಿರ್ವಹಣೆಯಲ್ಲಿ ಆ್ಯಂಟಿಮೈಕ್ರೊಬಿಯಲ್‌ಗಳ ಯಾವುದೇ ಪಾತ್ರವಿಲ್ಲ.
-ಲಕ್ಷಣರಹಿತ ಪ್ರಕರಣಗಳಿಗೆ ಆ್ಯಂಟಿಮೈಕ್ರೊಬಿಯಲ್ ರೋಗನಿರೋಧಕವನ್ನು ಶಿಫಾರಸು ಮಾಡುವಂತಿಲ್ಲ.
-ಸ್ಟೀರಾಯ್ಡ್‌ಗಳು ಹಾನಿಕಾರಕವಾಗಿದ್ದುಅವುಗಳನ್ನು ಸೂಚಿಸುವಂತಿಲ್ಲ. - ಸ್ವಯಂ ಸ್ಟೀರಾಯ್ಡ್‌ಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.

2) ಮಾಸ್ಕ್:
-5 ವರ್ಷ ವಯಸ್ಸಿನ ಕೆಳಗಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯವಲ್ಲ.
-6-11 ವರ್ಷ ವಯಸ್ಸಿನ ಮಕ್ಕಳು ಬೇಕಿದ್ದಲ್ಲಿ ಮಾಸ್ಕ್ ಧರಿಸಬಹುದು
-12 ವರ್ಷ ಮೇಲ್ಪಟ್ಟ ಮಕ್ಕಳು ಮಾಸ್ಕ್ ಅನ್ನು ಧರಿಸಬಹುದು
-ಮಾಸ್ಕ್ ಶುಚಿಯಾಗಿರುವಂತೆ ನೋಡಿಕೊಳ್ಳಬೇಕು, ಕೈಗಳನ್ನು ಆಗಾಗ್ಗೆ ತೊಳೆಯಬೇಕು

3) ಕೋವಿಡ್ ನಂತರದ ಕಾಳಜಿ:
-ಲಕ್ಷಣರಹಿತ ಸೋಂಕು ಅಥವಾ ಲಕ್ಷಣ ಕಂಡುಬಂದಲ್ಲಿ ಮಕ್ಕಳಿಗೆ ದಿನನಿತ್ಯದ ಪಾಲನೆ, ಸೂಕ್ತವಾದ ಲಸಿಕೆ ಕೊಡಿಸಬೇಕು.
-ಕೋವಿಡ್ ಗೆ ಒಳಗಾಗಿರುವ ಮಕ್ಕಳನ್ನು ಪೋಷಕರು ಸರಿಯಾದ ರೀತಿಯಲ್ಲಿ ಕಾಳಜಿ ವಹಿಸಬೇಕು.
-ಮಕ್ಕಳಿಗೆ ಪೌಷ್ಠಿಕ ಆಹಾರಗಳನ್ನು ನೀಡಿ ಮತ್ತೆ ಅವರನ್ನು ಸಧೃಡರನ್ನಾಗಿಸಬೇಕು.
-ಆಗಾಗ್ಗೆ ಮಕ್ಕಳ ಕೈಗಳನ್ನು ಸೋಪಿನಿಂದ ತೊಳಿಯಬೇಕು.
-ಕೋವಿಡ್ ಸೋಂಕು ಇದ್ದ ಸಮಯದಲ್ಲಿ ಮಕ್ಕಳ ಯಾವುದಾದರು ಅಂಗಗಳಿಗೆ ಹಾನಿಯಾದಲ್ಲಿ ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಬೇಕು.

ಇದನ್ನೂ ಓದಿ: ನಿಮಗೆ Corona ಬಂದ್ರೆ ತಿಳಿಸುತ್ತೆ ಈ ಮಾಸ್ಕ್! ಹೊಸ ಮಾಸ್ಕ್ ಆವಿಷ್ಕರಿಸಿದ ಜಪಾನ್

ಕೋವಿಡ್ ಸೋಂಕನ್ನು ನಿರ್ಲಕ್ಷಿಸುವ ಬದಲು ಎಚ್ಚರಿಕೆ ವಹಿಸಬೇಕು. ಕೇಂದ್ರ ಆರೋಗ್ಯ ಸಚಿವಾಲಯದ ನಿಯಮಾವಳಿಗಳ ಪ್ರಕಾರ ಮಕ್ಕಳ ಕಾಳಜಿ ವಹಿಸಬೇಕು. ಮಕ್ಕಳು ಮಾಸ್ಕ್ ಹಾಕಿಕೊಳ್ಳುವ ಮನಸ್ಸು ಮಾಡಿದ್ದಲ್ಲಿ ಅವರಿಗೆ ಮಾಸ್ಕ್ ಹಾಕುವುದು ಸೂಕ್ತ.ಕೋವಿಡ್ -19 ನಿರ್ವಹಣೆಗಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿರುವ ಪರಿಷ್ಕೃತ ಸಮಗ್ರ ಮಾರ್ಗಸೂಚಿಯನ್ನು ಗಾಳಿಗೆ ತೂರದೇ ಮಕ್ಕಳ ಬಗ್ಗೆ ಪೋಷಕರು ಕಾಳಜಿ ವಹಿಸಬೇಕು.
Published by:vanithasanjevani vanithasanjevani
First published: