HOME » NEWS » Coronavirus-latest-news » COVID INFECTED DEAD BODIES BODIES FLOATED IN RIVER GANGA IN BIHAR SESR

River Ganga: ಶಾಕಿಂಗ್​ : ಗಂಗಾ ನದಿಯಲ್ಲಿ ತೇಲುತ್ತಿವೆ ಕೋವಿಡ್ ಸೋಂಕಿತರ​ ಮೃತ ದೇಹಗಳು

ಕಳೆದ ಲಾಕ್​ಡೌನ್​ನಲ್ಲಿ ಎಲ್ಲಾ ಚಟುವಟಿಕೆಗಳು ಬಂದ್​ ಆದ ಕಾರಣ ಗಂಗೆ ನೀರಿನ ಗುಣಮಟ್ಟ ವೃದ್ಧಿಯಾಗಿತ್ತು. ಕೊರೋನಾ ಎರಡನೇ ಅಲೆಯಲ್ಲಿ ಸೋಂಕಿತರ ಮೃತದೇಹ ಗಂಗೆಯ ಒಡಲಲ್ಲಿ ತೇಲುವ ಮೂಲಕ ಆಘಾತ ತಂದಿದೆ.

news18-kannada
Updated:May 10, 2021, 6:27 PM IST
River Ganga: ಶಾಕಿಂಗ್​ : ಗಂಗಾ ನದಿಯಲ್ಲಿ ತೇಲುತ್ತಿವೆ ಕೋವಿಡ್ ಸೋಂಕಿತರ​ ಮೃತ ದೇಹಗಳು
ಗಂಗಾ ನದಿ ಸಾಂದರ್ಭಿಕ ಚಿತ್ರ
  • Share this:
 ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಇದೇ ವೇಳೆ ಅವರ ಅಂತ್ಯಕ್ರಿಯೆಗೆ ಸಾಲುಗಳು ಕಂಡು ಬಂದಿದ್ದು, ಇಂತಹ ವೇಳೆಯನ್ನು ಅಂತ್ಯ ಸಂಸ್ಕಾರದ ಸಿಬ್ಬಂದಿಗಳು ಸುಲಿಗೆಗೆ ನಿಂತಿದ್ದಾರೆ. ಸೋಂಕಿತರ ಸಂಸ್ಕಾರಕ್ಕೆ ದುಬಾರಿ ವೆಚ್ಚ ವಿಧಿಸುತ್ತಿರುವುದು ಅನೇಕ ರಾಜ್ಯಗಳಲ್ಲಿ ಕಂಡು ಬಂದಿದೆ. ಬಿಹಾರದಲ್ಲೂ ಕೂಡ ಇಂತಹ ಘಟನೆ ನಡೆದಿದ್ದು, ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗದ ಅನೇಕ ಮಂದಿ ಶವಗಳನ್ನು ಪವಿತ್ರ ಗಂಗಾ ನದಿಯಲ್ಲಿ ಎಸೆಯುತ್ತಿರುವ ಘಟನೆ ನಡೆದಿದ್ದು, ಇದು ದೇಶದ ಜನರಲ್ಲಿ ಆಘಾತ ಮೂಡಿಸಿದೆ. ಗಂಗಾ ನದಿಯಲ್ಲಿ ಕೋವಿಡ್​ ಮೃತ ದೇಶಗಳು ತೇಲುತ್ತಿರುವ ದೃಶ್ಯಗಳು ಕಂಡು ಬಂದಿದೆ.

ಅಂತ್ಯಕ್ರಿಯೆಗೆ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಹಿನ್ನಲೆ ಕುಟುಂಬಸ್ಥರು ಸೋಂಕಿತರ ಮೃತದೇಹವನ್ನು ಗಂಗಾ ನದಿಗೆ ಬಿಡುತ್ತಿದ್ದಾರೆ. ಬಿಹಾರದ ಬುಕ್ಸರ್​ ಗ್ರಾಮದ ಗಂಗಾ ನದಿ ತಟದಲ್ಲಿ 150ಕ್ಕೂ ಹೆಚ್ಚು ಮೃತದೇಹಗಳು ತೇಲುತ್ತಿದ್ದು, ಇದು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. ಈ ಕುರಿತು ತನಿಖೆ ನಡೆಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶದ ಪೂರ್ವದ ಗಡಿಗೆ ಹೊಂದಿಕೊಂಡಿರುವ ಬಕ್ಸಾರ್​ನ ಚೌಸಾ ಗ್ರಾಮದಲ್ಲಿ ಈ ಘಟನೆ ನಡೆಯುತ್ತಿದೆ.

ಈ ಘಟನೆ ಬೆಳಕಿಗೆ ಬಂದಾಕ್ಷಣದ ಗ್ರಾಮಸ್ಥರು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ನದಿಯಲ್ಲಿ 30 ರಿಂದ 40 ಹೆಣಗಳು ತೇಲುತ್ತಿದ್ದು, ಬೀದಿನಾಯಿಗಳು ತಡದಲ್ಲಿಯೇ ಅಲೆಯುತ್ತಿವೆ. ಇದರಲ್ಲಿ ಅನೇಕ ಶವಗಳು ಕೋವಿಡ್​ ಸೋಂಕಿತರದ್ದು ಎಂದು ಸಾಮಾಜಿಕ ಹೋರಾಟಗಾರ ಮತ್ತು ಸ್ಥಳೀಯ ವಕೀಲ ಅಶ್ವಿನ್ ವರ್ಮ ತಿಳಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.

ಶವಸಂಸ್ಥಾರದ ದುಬಾರಿ ವೆಚ್ಚದಿಂದ ಬಡವರು ಶವಗಳನ್ನು ನದಿಗೆ ತೇಲಿಬಿಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಶವ ಸಂಸ್ಕಾರಕ್ಕೆ 30 ರಿಂದ 40 ಸಾವಿರವನ್ನು ಕೇಳುತ್ತಿದ್ದಾರೆ. ಇದು ಬಡವರಿಗೆ ಬಲು ಹೊರೆಯಾಗಿದ್ದು, ವಿಧಿಯಿಲ್ಲದೇ ಅವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಶವಗಳನ್ನು ಬೀದಿ ನಾಯಿಗಳು ಒಂದು ವೇಳೆ ತಿಂದರೆ ಅವುಗಳಿಗೂ ಸೋಂಕು ತಗಲುವ ಸಾಧ್ಯತೆ ಇದೆ ಎಂದಿದ್ದಾರೆ.

ಇದನ್ನು ಓದಿ: ನಟ ಜ್ಯೂ. ಎನ್​ಟಿಆರ್​ಗೆ ಕೊರೋನಾ ಸೋಂಕು ದೃಢ

ಸ್ಥಳೀಯ ಅಧಿಕಾರಿಗಳು ಅನಧಿಕೃತವಾಗಿ ಇವು ಸೋಂಕಿತರ ಮೃತದೇಹಗಳು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಈಗಲೇ ಏನು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ

ಇದನ್ನು ಓದಿ: ಕೋವಿಡ್​ ಸಂಕಷ್ಟ: ಎರಡು ಕೋಟಿ ರೂ ನೆರವು ನೀಡಿದ ಅಮಿತಾಬ್​ ಬಚ್ಚನ್ಇನ್ನು ನದಿಯಲ್ಲಿ ತೇಲುತ್ತಿರುವ ಮೃತದೇಹಗಳಿಂದಾಗಿ ಉತ್ತರ ಪ್ರದೇಶ ಮತ್ತು ಬಿಹಾರ ನಡುವೆ ಆರೋಪ- ಪ್ರತ್ಯಾರೋಪ ಶುರುವಾಗಿದೆ.

ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದ್ದು, ಕಳೆದ ಮೂರು ವಾರಗಳಲ್ಲಿ ದೇಶದಲ್ಲಿ 4000 ಸಾವಿರಕ್ಕೂ ಅಧಿಕ ಮಂದಿ ಕೋವಿಡ್​ನಿಂದಾಗಿ ಮೃತ ಪಟ್ಟಿದ್ದಾರೆ. ಎಲ್ಲಡೆ ಶವಗಳ ಅಂತ್ಯಕ್ರಿಯೆಗೆ ಸಾಲುಗಳು ಕಂಡು ಬಂದಿದ್ದು, ಶಾಂತವಾಗಿದ್ದ ಚಿತಾಗಾರಗಳು ಗಿಜಿಗುಡುತ್ತಿವೆ. ಅಲ್ಲಿನ ಸಿಬ್ಬಂದಿಗಳು ಕೂಡ ದಿನ ಬಿಡುವಿಲ್ಲದ ಅಂತ್ಯಕ್ರಿಯೆಯಿಂದ ರೋಸಿದ್ದಾರೆ.

ಕಳೆದ ವರ್ಷ ದೇಶಾದ್ಯಂತ ಲಾಕ್​ಡೌನ್​ ವಿಧಿಸಿದ ವೇಳೆ ಕಾರ್ಖಾನೆ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ತಡೆ ನೀಡಲಾಗಿತ್ತುಇದರಿಂದ  ರಾಸಾಯನಿಕ, ಮಾಲಿನ್ಯಕಾರಕಗಳು ಕೂಡ ಗಂಡೆ ಒಡಲು ಸೇರುತ್ತಿರಲಿಲ್ಲ . ಇದರಿಂದಾಗಿ ಲಾಕ್​ಡೌನ್​ ಬಳಿಕ ಗಂಗಾ ನದಿಯ ನೀರಿನ ಗುಣಮಟ್ಟ ಗಣನೀಯವಾಗಿ ವರ್ಧಿಸಿದೆ. ಇದೀಗ ಆ ನೀರು ಕುಡಿಯಲು ಯೋಗ್ಯವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ, ಈಗ ಕೊರೋನಾ ಎರಡನೇ ಅಲೆಯಲ್ಲಿ ಸೋಂಕು ಹೆಚ್ಚಾಗಿದ್ದು, ಸಾವು ಹೆಚ್ಚಳಗೊಂಡಿದ್ದು, ಗಂಗೆಯಲ್ಲಿ ಮೃತದೇಹಗಳು ಸೇರುವ ಮೂಲಕ ಜನರಲ್ಲಿ ಆತಂಕ ಮೂಡಿಸಿದೆ.
Published by: Seema R
First published: May 10, 2021, 6:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories