• ಹೋಂ
  • »
  • ನ್ಯೂಸ್
  • »
  • Corona
  • »
  • ದೆಹಲಿಯಲ್ಲಿ ಕೊರೋನಾ ನಿಯಮ ಉಲ್ಲಂಘನೆ ದಂಡ: ಜೂನ್‌ನಲ್ಲಿ 25 ಕೋಟಿ, ಜುಲೈನಲ್ಲಿ 36 ಕೋಟಿ ಸಂಗ್ರಹ

ದೆಹಲಿಯಲ್ಲಿ ಕೊರೋನಾ ನಿಯಮ ಉಲ್ಲಂಘನೆ ದಂಡ: ಜೂನ್‌ನಲ್ಲಿ 25 ಕೋಟಿ, ಜುಲೈನಲ್ಲಿ 36 ಕೋಟಿ ಸಂಗ್ರಹ

ಜನನಿಬಿಡ ಪ್ರದೇಶ

ಜನನಿಬಿಡ ಪ್ರದೇಶ

ಜುಲೈ 26 ರಿಂದ ದೆಹಲಿ ಮೆಟ್ರೋ ಮತ್ತು ಸಾರ್ವಜನಿಕ ಬಸ್ಸುಗಳು ಪೂರ್ಣ ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಡಿಡಿಎಂಎ ಅನುಮತಿ ನೀಡಿದ್ದು, ಚಿತ್ರಮಂದಿರಗಳು, ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳನ್ನು ಶೇಕಡಾ 50 ರಷ್ಟು ತೆರೆಯಲು ಅನುಮತಿಸಲಾಗಿದೆ.

  • Share this:

ಜುಲೈ ತಿಂಗಳೊಂದರಲ್ಲೇ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಸಂಬಂಧಿತ ನಿಯಮ ಉಲ್ಲಂಘನೆಗಳಿಂದ ದೆಹಲಿ ಪೊಲೀಸರು ರೂ. 36.2 ಕೋಟಿ ದಂಡ ಸಂಗ್ರಹಿಸಿದ್ದಾರೆ. ಈ ವಿಚಾರವನ್ನು ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿದೆ. ಈ ವರದಿಯ ಪ್ರಕಾರ, ಜೂನ್ ತಿಂಗಳಲ್ಲಿ ಆಗಿರುವ ಸಂಗ್ರಹಕ್ಕಿಂತ 11 ಕೋಟಿ ರೂಪಾಯಿಗಳ ಹೆಚ್ಚುವರಿ ದಂಡವನ್ನು ಜುಲೈ ತಿಂಗಳಲ್ಲಿ ವಸೂಲಿ ಮಾಡಲಾಗಿದೆ.


ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಶುಕ್ರವಾರ ನಡೆದ ಸಾಂಕ್ರಾಮಿಕ ಪರಿಶೀಲನಾ ಸಭೆಯಲ್ಲಿ ಮಂಡಿಸಿದ ಅಂಕಿಅಂಶಗಳು, ದೆಹಲಿ ಸರ್ಕಾರವು ಆರ್ಥಿಕ ಚಟುವಟಿಕೆಗಳಲ್ಲಿ ಕೊಂಚ ಸಡಿಲಿಕೆ ಮಾಡಿ ನಂತರ ಎಲ್ಲಾ ರೀತಿಯ ಚಟುವಟಿಕೆಗಳಿಗೆ ಅನುಮತಿಸಿದ ನಂತರ ಕೋವಿಡ್ ನಿಯಮಗಳನ್ನು ಕಠಿಣವಾಗಿ ಜಾರಿಗೊಳಿಸುವುದಾಗಿ ಸಾರ್ವಜನಿಕರಿಗೆ ಸೂಚಿಸಿದೆ. ಜೂನ್ ತಿಂಗಳಲ್ಲಿ ದಂಡ 25.2 ಕೋಟಿ ಮತ್ತು ಮೇ ತಿಂಗಳಲ್ಲಿ 15.1 ಕೋಟಿ ರೂ ದಂಡ ವಸೂಲಿ ಮಾಡಲಾಗಿತ್ತು.


"ಜಿಲ್ಲಾ ಮಟ್ಟದ ಅಧಿಕಾರಿಗಳು ನಿಯಮ ಉಲ್ಲಂಘಿಸುವುದನ್ನು ಎಂದಿಗೂ ಸಹಿಸಲಾರರು,  ಏಕೆಂದರೆ ನಿಯಮ ಉಲ್ಲಂಘಿಸುವವರು ಮಾತ್ರ ಆರೋಗ್ಯ ಹಾಳು ಮಾಡಿಕೊಳ್ಳುವುದಿಲ್ಲ. ಇತರರ ಆರೋಗ್ಯ ಮತ್ತು ಜೀವಕ್ಕೂ ಅಪಾಯವನ್ನುಂಟುಮಾಡುತ್ತಾರೆ" ಎಂದು ವರದಿಯನ್ನು ಉಲ್ಲೇಖೀಸಿ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ.

ಜುಲೈ 26 ರಿಂದ ದೆಹಲಿ ಮೆಟ್ರೋ ಮತ್ತು ಸಾರ್ವಜನಿಕ ಬಸ್ಸುಗಳು ಪೂರ್ಣ ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಡಿಡಿಎಂಎ ಅನುಮತಿ ನೀಡಿದ್ದು, ಚಿತ್ರಮಂದಿರಗಳು, ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳನ್ನು ಶೇಕಡಾ 50 ರಷ್ಟು ತೆರೆಯಲು ಅನುಮತಿಸಲಾಗಿದೆ.


ಹೆಚ್ಚುವರಿ ದೆಹಲಿ ಪೊಲೀಸ್ ಪಿಆರ್‌ಒ ಅನಿಲ್ ಮಿತ್ತಲ್ ಮಾಹಿತಿ ನೀಡುತ್ತಾ, ಅಧಿಕೃತ ಮಾಹಿತಿಯ ಪ್ರಕಾರ ದೆಹಲಿ ಪೊಲೀಸರು ಈ ವರ್ಷ ಏಪ್ರಿಲ್ 19 ಮತ್ತು ಆಗಸ್ಟ್ 6 ರ ನಡುವೆ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರಿಗೆ ಎರಡು ಲಕ್ಷ ಚಲನ್‌ಗಳನ್ನು ನೀಡಿದ್ದಾರೆ ಎಂದು ಹೇಳಿದರು.


2,00,691 ಚಲನ್‌ಗಳಲ್ಲಿ, 1,69,659 ಚಲನ್ ಗಳನ್ನು ಮಾಸ್ಕ್ ಧರಿಸದವರಿಗೆ, 26,744 ಸಾಮಾಜಿಕ ಅಂತರದ ನಿಯಮಗಳನ್ನು ಉಲ್ಲಂಘಿಸಿದವರಿಗೆ, 1,842 ಮದ್ಯ, ಪಾನ್, ಗುಟ್ಖಾ ಸೇವನೆಗಾಗಿ 1,562 ದೊಡ್ಡ ಸಾರ್ವಜನಿಕ ಕೂಟಗಳನ್ನು ಅಥವಾ ಸಭೆಗಳನ್ನು ನಡೆಸಲು ಪಡೆಯದವರಿಗೆ ಹಾಗೂ 884 ಅನ್ನು ಎಲ್ಲೆಂದರಲ್ಲಿ ಉಗುಳಿದವರಿಗೆ ಚಲನ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಶನಿವಾರ, ಕೋವಿಡ್ -19 ನಿಯಮಾನುಸಾರ ಆಗಸ್ಟ್ 9 ರಿಂದ ವಾರದ ಎಲ್ಲಾ ದಿನವೂ ಮಾರುಕಟ್ಟೆಗಳನ್ನು ಮತ್ತೆ ತೆರೆಯುವುದಾಗಿ ಘೋಷಿಸಿದರು.


ಸರ್ಕಾರವು ಬಡ ಜನರ ಜೀವನೋಪಾಯದ ಬಗ್ಗೆ ಕಾಳಜಿ ಹೊಂದಿದೆ ಮತ್ತು ಮಾರುಕಟ್ಟೆಗಳು ಮತ್ತೆ ತೆರೆದಾಗ ಪ್ರತಿಯೊಬ್ಬರೂ ಕೋವಿಡ್ ನಿಯಾಮವಳಿ ಪ್ರಕಾರ ಎಲ್ಲಾ ನಡೆಯನ್ನು ಅನುಸರಿಸುವಂತೆ ಮನವಿ ಮಾಡಿಕೊಂಡು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಬಿಜೆಪಿ ಸರ್ಕಾರದಲ್ಲಿ ಯಾವುದೂ ಸರಿ ಇಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಆರೋಗ್ಯ ಇಲಾಖೆಯು ಹಂಚಿಕೊಂಡ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ 72 ಹೊಸ ಕೋವಿಡ್ -19 ಪ್ರಕರಣಗಳು ಮತ್ತು ಒಂದು ಸಾವು ಶನಿವಾರ ಸಂಭವಿಸಿದೆ ಎಂದು ಹೇಳಲಾಗಿದೆ, ಆದರೆ ಪಾಸಿಟಿವಿಟಿ ದರವು ಶೇಕಡಾ 0.10 ಕ್ಕೆ ಏರಿದೆ.





ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

top videos
    First published: