Share Market: ಉಲ್ಬಣಿಸುತ್ತಿದೆ ಕೊರೋನಾ, ಲಾಕ್​ಡೌನ್ ಸಾಧ್ಯತೆ?; ಕುಸಿಯುತ್ತಿದೆ ಸೆನ್ಸೆಕ್ಸ್​ ಹಾಗೂ ರೂಪಾಯಿ ಮೌಲ್ಯ!

ಭಾರತದಲ್ಲಿ, ಹಲವಾರು ರಾಜ್ಯಗಳು ಈಗ ಹೆಚ್ಚು ಕಠಿಣವಾದ ಲಾಕ್‌ಡೌನ್‌ಗೆ ಹೋಗಲು ಯೋಚಿಸುತ್ತಿವೆ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ಚಟುವಟಿಕೆ ಮತ್ತು ಜಿಡಿಪಿ ಬೆಳವಣಿಗೆಯ ಮೇಲೆ ಅದರ ಪ್ರಭಾವದ ಬಗ್ಗೆ ಮಾರುಕಟ್ಟೆಗಳು ಕಳವಳ ವ್ಯಕ್ತಪಡಿಸಿವೆ.

ಸೆನ್ಸೆಕ್ಸ್

ಸೆನ್ಸೆಕ್ಸ್

 • Share this:
  ಮುಂಬೈ (ಏಪ್ರಿಲ್ 19); ಭಾರತದಲ್ಲಿ ಕೊರೋನಾ ಎರಡನೇ ಅಲೆ ಮಿತಿಮೀರುತ್ತಿದೆ. ಹಲವು ರಾಜ್ಯಗಳಲ್ಲಿ ಆಕ್ಸಿಜನ್ ಹಾಗೂ ಕೊರೋನಾ ಲಸಿಕೆಗಳು ಕೊರತೆಯಾಗಿದ್ದು, ಪರಿಸ್ಥಿತಿ ಕೈಮೀರುವ ಹಂತದಲ್ಲಿದೆ. ಕೊರೋನಾ ತಡೆಗಾಗಿ ಈಗಾಗಲೇ ನೈಟ್​ ಕರ್ಫ್ಯೂ ಜಾರಿ ಮಾಡಲಾಗಿದೆಯಾದರೂ ಲಾಕ್​ಡೌನ್ ಕೂಗು ಸಹ ಕೇಳಿಬರುತ್ತಿದೆ. ಪರಿಣಾಮ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳದಿಂದಾಗಿ ಬಿಎಸ್‌ಇನಲ್ಲಿ (ಬಾಂಬೆ ಸ್ಟಾಕ್ ಎಕ್ಸ್‌ಚೆಂಜ್‌) ಸೆನ್ಸೆಕ್ಸ್ ಸೋಮವಾರ 1,000 ಪಾಯಿಂಟ್‌ಗಳಷ್ಟು ಕುಸಿದಿದೆ. ಅಲ್ಲದೆ, ಸತತ ಮೂರನೇ ವಾರ ಈ ಪ್ರಮಾಣದ ಕುಸಿತ ಅನುಭವಿಸಿದೆ. ಕೋವಿಡ್ ಸಂಖ್ಯೆಗಳು ವಾರಾಂತ್ಯದಲ್ಲಿ ಅಬಾಧಿತವಾಗಿ ಏರಿಕೆಯಾಗಿದ್ದು, ಭಾನುವಾರ ಸಾರ್ವಕಾಲಿಕ ಗರಿಷ್ಠ 2.6 ಲಕ್ಷ ಪ್ರಕರಣಗಳನ್ನು ಮುಟ್ಟಿದ ನಂತರ, ಸೆನ್ಸೆಕ್ಸ್ 1,470 ಪಾಯಿಂಟ್ ಅಥವಾ ಶೇಕಡಾ 3ರಷ್ಟು ಇಳಿಕೆಯಾಗಿ 47,362 ಕ್ಕೆ ತಲುಪಿದೆ. ಜೊತೆಗೆ ಡಾಲರ್ ಎದುರು ರೂಪಾಯಿ ಮೌಲ್ಯವೂ ಕುಸಿತ ಕಂಡಿದೆ ಎಂದು ವರದಿಯಾಗಿದೆ.

  ಈ ಪ್ರಕ್ರಿಯೆಯನ್ನು ‘ಮಂಡೇ ಬ್ಲೂಸ್’ ಎನ್ನುತ್ತಾರೆ. ವಾರಾಂತ್ಯದ ಅಹಿತಕರ ಬೆಳವಣಿಗೆಗಳು ಸೋಮವಾರ ಮುಂಜಾನೆ ಶೇರು ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸನ್ನಿವೇಶ ಇದಾಗಿದೆ.

  ಸೋಮವಾರದ ಆರಂಭಿಕ ವಹಿವಾಟಿನ ವೇಳೆಯಲ್ಲಿ ರೂಪಾಯಿ ಸಹ ಡಾಲರ್ ಎದುರು 47 ಪೈಸೆ ಅಥವಾ ಶೇ. 0.63 ರಷ್ಟು ತೀವ್ರವಾಗಿ ಕುಸಿದು 74.82 ಕ್ಕೆ ವಹಿವಾಟು ನಡೆಸಿತು.
  ಭಾರತದಲ್ಲಿ ಕೋವಿಡ್ ಪ್ರಕರಣಗಳ ತೀವ್ರ ಏರಿಕೆ ಕಳೆದ ಎರಡು ವಾರಗಳಲ್ಲಿ ಪ್ರಮುಖ ಕಳವಳವಾಗಿದೆ. ಹೊಸ ಕೋವಿಡ್ ಪ್ರಕರಣಗಳು ಏಪ್ರಿಲ್ 4 ರಂದು (ಭಾನುವಾರ) ಸುಮಾರು 1 ಲಕ್ಷವಾಗಿದ್ದರೆ, ಏಪ್ರಿಲ್ 11 ರಂದು (ಭಾನುವಾರ) ಇದು ಸುಮಾರು 1.7 ಲಕ್ಷಕ್ಕೆ ಏರಿತು ಮತ್ತು ಇದು ನಿನ್ನೆ ಭಾನುವಾರ ಹೊಸ ಗರಿಷ್ಠ 2.6 ಲಕ್ಷಕ್ಕೆ ತಲುಪಿದೆ.

  ಭಾರತದಲ್ಲಿ, ಹಲವಾರು ರಾಜ್ಯಗಳು ಈಗ ಹೆಚ್ಚು ಕಠಿಣವಾದ ಲಾಕ್‌ಡೌನ್‌ಗೆ ಹೋಗಲು ಯೋಚಿಸುತ್ತಿವೆ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ಚಟುವಟಿಕೆ ಮತ್ತು ಜಿಡಿಪಿ ಬೆಳವಣಿಗೆಯ ಮೇಲೆ ಅದರ ಪ್ರಭಾವದ ಬಗ್ಗೆ ಮಾರುಕಟ್ಟೆಗಳು ಕಳವಳ ವ್ಯಕ್ತಪಡಿಸಿವೆ.

  ಮಾರ್ಚ್ ಆರಂಭದಿಂದಲೂ ಕೋವಿಡ್ ಪ್ರಕರಣಗಳ ಹೆಚ್ಚಳವು ಕೈಗಾರಿಕಾ ಬೆಳವಣಿಗೆ ಮತ್ತು ಉತ್ಪಾದನೆಯ ಮೇಲೆ ಪರಿಣಾಮ ಬೀರಿತು ಮತ್ತು ಮಾರ್ಚ್‌ನಲ್ಲಿ ಭಾರತದ ಉತ್ಪಾದನಾ ವಲಯದ ಚಟುವಟಿಕೆಗಳು ತೀವ್ರವಾಗಿ ದುರ್ಬಲಗೊಂಡವು. ಐಎಚ್‌ಎಸ್ ಮಾರ್ಕೆಟ್ ಇಂಡಿಯಾ ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (ಪಿಎಂಐ) ಏಳು ತಿಂಗಳ ಕನಿಷ್ಠ 55.4 ಕ್ಕೆ ಇಳಿದಿದೆ.

  ಕೋವಿಡ್ ಪ್ರಕರಣಗಳ ಉಲ್ಬಣ ಮತ್ತು ಆರೋಗ್ಯ ಮೂಲಸೌಕರ್ಯಗಳ ಕೊರತೆಯು ಒಂದು ದೊಡ್ಡ ಕಳವಳವಾಗಿ ಹೊರಹೊಮ್ಮಿದೆ ಮತ್ತು ಮಾರುಕಟ್ಟೆಗಳು ಸೇರಿದಂತೆ ಎಲ್ಲೆಡೆ ಇರುವ ಭಾವನೆಗಳ ಮೇಲೆ ಇದು ಪರಿಣಾಮ ಬೀರುತ್ತಿದೆ. ಹಣಕಾಸು ಸಚಿವರು ಭಾನುವಾರ ಕೈಗಾರಿಕಾ ಸಂಘ ಮತ್ತು ಇಂಡಿಯಾ ಇಂಕ್‌ನ ಮುಖಂಡರನ್ನು ಸಂಪರ್ಕಿಸಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಆಗುವುದಿಲ್ಲ ಎಂದು ಭರವಸೆ ನೀಡಿದರೂ, ಮಾರುಕಟ್ಟೆಯಲ್ಲಿ ಭಾಗವಹಿಸುವವರು ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿನ ಏರಿಕೆ ಮಾರುಕಟ್ಟೆ ಚೇತರಿಕೆ ಪ್ರಕ್ರಿಯೆಯನ್ನು ಹಳಿ ತಪ್ಪಿಸುತ್ತದೆ ಮತ್ತು ವೇಗದ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾವಿಸುತ್ತಾರೆ.

  ಇದನ್ನೂ ಓದಿ: Curfew in Delhi: ದೆಹಲಿಯಲ್ಲಿ ಇಂದು ರಾತ್ರಿಯಿಂದಲೇ 6 ದಿನ ಲಾಕ್​ಡೌನ್​ ಜಾರಿ; ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ

  ಸದ್ಯದಲ್ಲಿ ಜೀವನೋಪಾಯ ಮತ್ತು ಆರ್ಥಿಕತೆಯ ಮೇಲೆ ಕೊರೋನಾ ಉಂಟುಮಾಡುವ ಪ್ರಕರಣಗಳ ಹೆಚ್ಚಳದ ಬಗ್ಗೆ ಮಾರುಕಟ್ಟೆಯು ಚಿಂತಿತವಾಗಿದೆ. ಸೋಂಕು ಹೆಚ್ಚಳದ ವೇಗದಲ್ಲಿ ಕುಸಿತ ಕಾಣುವವರೆಗೆ ಅಥವಾ ಹಿಂದಿನ ದಿನಕ್ಕಿಂತ ದೈನಂದಿನ ಉಲ್ಬಣವು ಕ್ಷೀಣಿಸಲು ಪ್ರಾರಂಭವಾಗುವವರೆಗೆ ಮಾರುಕಟ್ಟೆಗಳು ಒತ್ತಡದಲ್ಲಿ ಉಳಿಯುತ್ತವೆ ಎಂದು ಹಲವರು ಭಾವಿಸುತ್ತಾರೆ.

  ದೆಹಲಿಯಲ್ಲೂ ನೈಟ್​ ಕರ್ಫ್ಯೂ:

  ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಇಂದು ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆಯೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿದೆ. ಹೀಗಾಗಿ ವಾರಾಂತ್ಯಕ್ಕೆ ಮಾತ್ರ ನಿಗದಿಯಾಗಿದ್ದ ಕರ್ಫ್ಯೂವನ್ನು ಒಂದು ವಾರ ಕಾಲ ವಿಸ್ತರಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​​ ಆದೇಶ ಹೊರಡಿಸಿದ್ದಾರೆ.
  Published by:MAshok Kumar
  First published: