• ಹೋಂ
  • »
  • ನ್ಯೂಸ್
  • »
  • Corona
  • »
  • ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ, ಸಾವಿನ ಪ್ರಮಾಣ ಇಳಿಕೆ; ಆರೋಗ್ಯ ಸಚಿವ ಕೆ. ಸುಧಾಕರ್ 

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ, ಸಾವಿನ ಪ್ರಮಾಣ ಇಳಿಕೆ; ಆರೋಗ್ಯ ಸಚಿವ ಕೆ. ಸುಧಾಕರ್ 

ಡಾ.ಕೆ. ಸುಧಾಕರ್.

ಡಾ.ಕೆ. ಸುಧಾಕರ್.

ಆಶಾ ಕಾರ್ಯಕರ್ತೆಯ ವೇತನ ನೀಡದ ವಿಚಾರವಾಗಿ ಮಾತನಾಡಿದ ಸಚಿವ ಸುಧಾಕರ್,  17 ಜಿಲ್ಲೆಗಳಲ್ಲಿ ವೇತನ ನೀಡಲಾಗಿದೆ. ಉಳಿದ ಜಿಲ್ಲೆಯವರಿಗೆ ಎರಡು ದಿನದಲ್ಲಿ ವೇತನ ಕೈ ಸೇರಲಿದೆ ಎಂದರು.

  • Share this:

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸ್ಥಿತಿಗತಿ ಪರಾಮರ್ಶೆ ಮಾಡಿದ್ದಾಗ  ಬೆಂಗಳೂರಿನಲ್ಲಿ ಕೇಸ್ ಕಡಿಮೆ ಆಗ್ತಾಯಿದೆ. ರಾಜ್ಯದಲ್ಲಿ ಸಾವಿರಾರು ಕೋವಿಡ್ ಮುಕ್ತ ಗ್ರಾಮಗಳು ಕಂಡು ಬಂದಿವೆ. ಬೆಂಗಳೂರಿನಲ್ಲಿ ಕೋವಿಡ್ ಇಳಿಮುಖವಾಗಿದೆ. ಸೋಂಕಿತರ ಸಂಖ್ಯೆ, ಸಾವಿನ ಪ್ರಮಾಣ ಕೂಡ ಇಳಿದಿದೆ. ಕೆಲವು ಜಿಲ್ಲೆಗಳಲ್ಲೂ ಸೋಂಕು ಕಡಿಮೆಯಾಗುತ್ತಿದೆ. ಕೋವಿಡ್ ಮುಕ್ತ ಗ್ರಾಮಗಳ ಗುರುತಿಸಲು ಜಿಲ್ಲಾಧಿಕಾರಿಗಳಿಗೆ ನಾವು ಸೂಚನೆ ನೀಡಿದ್ದೇವೆ. ಅದರಂತೆ ಸಾವಿರಾರು ಗ್ರಾಮ ಕೋವಿಡ್ ಮುಕ್ತವಾಗಿವೆ. ತುಮಕೂರು, ಗದಗ ಸೇರಿ‌ ಕೆಲವು ಕಡೆ ಭೇಟಿ ಕೊಟ್ಟಿದ್ದೆ. ಹಲವು ಸಲಹೆಗಳನ್ನ ಕೊಟ್ಟಿದ್ದೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಅವರು ಹೇಳಿದರು.


ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಧಾಕರ್ ಅವರು, ರಾಜ್ಯದಲ್ಲಿ ಬ್ಲ್ಯಾಕ್​ ಫಂಗಸ್​ನಿಂದ ಒಟ್ಟು  12 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ 446 ಬ್ಲ್ಯಾಕ್ ಫಂಗಸ್ ಕೇಸ್ ದಾಖಲಾಗಿದೆ. 433 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಜನ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸುವಂತೆ ಸೂಚಿಸಿದ್ದೆ. ಈಗ ಆ 12 ಜನ ಬ್ಲ್ಯಾಕ್ ಫಂಗಸ್ ಗೆ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು 9 ಸಾವಿರ ಬ್ಲ್ಯಾಕ್ ಫಂಗಸ್ ಪ್ರಕರಣ ಕಂಡುಬಂದಿದೆ. ಈ ಕಾಯಿಲೆಗೆ ಔಷಧ ಬರುತ್ತಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಔಷಧಿ ಕಳಿಸುತ್ತಿದೆ. ಬೇರೆಡೆಯಿಂದ 18 ಸಾವಿರ ವಯಲ್ಸ್ ಔಷಧಿ ಬಂದಿದೆ. ಅದರಲ್ಲಿ ನಮಗೆ 1 ಸಾವಿರ ವಯಲ್ಸ್ ಕಳುಹಿಸುತ್ತಿದ್ದಾರೆ ಎಂದು ತಿಳಿಸಿದರು.


ಆಸ್ಪತ್ರೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಕೆಲವು ಕಡೆ ಸಿಸಿಟಿವಿ ಅಳವಡಿಕೆ ಇನ್ನೂ ಅನುಷ್ಠಾನವಾಗಿರಲಿಲ್ಲ. ಈಗ ಅಲ್ಲೆಲ್ಲ ಸಿಸಿಟಿವಿ ಅಳವಡಿಸುವಂತೆ ಸೂಚಿಸಿದ್ದೇವೆ. ಸೋಂಕಿತರ ಚಿಕಿತ್ಸೆಯನ್ನು ಸಂಬಂಧಿಕರು ನೋಡಬಹುದು. ಸಂಬಂಧಿಕರನ್ನು ಒಳಗೆ ಬಿಡದಿರಲು ನಿರ್ಧರಿಸಲಾಗಿದೆ. ಬ್ಲ್ಯಾಕ್ ಫಂಗಸ್ ಬರುವ ಸಾಧ್ಯತೆಯಿಂದ ಬಿಡುವುದಿಲ್ಲ ಎಂದರು.


ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ವೆಂಟಿಲೇಟರ್ ಕೊರತೆ ವಿಚಾರವಾಗಿ ಕೆಲವು ದೂರುಗಳು ಬಂದಿದ್ದವು. ಹಲವು ವರ್ಷಗಳಿಂದ ತಜ್ಞರ ಸ್ಥಾನ ನೇಮಕಾತಿಯಾಗದೆ ಖಾಲಿ ಉಳಿದಿದ್ದವು. ಈಗ 1763 ವೈದ್ಯರ ನೇಮಕ ಪ್ರಕ್ರಿಯೆ ಮುಗಿದಿದೆ. ಗೆಜೆಟ್​ನಲ್ಲಿ ಈಗಾಗಲೇ ಪ್ರಕಟಿಸಲಾಗಿದೆ.  700 ತಜ್ಙ ವೈದ್ಯರು, 40 ಇಎನ್​ಟಿ ವೈದ್ಯರು ಹಾಗೂ 40 ಗೈನಕಾಲಜಿಸ್ಟ್. 30 ಡರ್ಮಟಾಲಜಿಸ್ಟ್, 142 ಅರಿವಳಿಕೆ ತಜ್ಙರು. 153 ಮಕ್ಕಳ ತಜ್ಙರು, 51 ನೇತ್ರ ತಜ್ಞರನ್ನು ನೇಮಕ ಮಾಡಿಕೊಂಡಿದ್ದೇವೆ. ರೆಡಿಯಾಲಜಿಸ್ಟ್ ಗಳ ನೇಮಕಾತಿ ಬಾಕಿ ಇದೆ. ಕೇವಲ 17 ಜನ ರೆಡಿಯಾಲಜಿಸ್ಟ್ ನೇಮಕವಾಗಿದೆ. 1048 ಜನರಲ್ ವೈದ್ಯರನ್ನ ನೇಮಕ ಮಾಡಿದ್ದೇವೆ ಎಂದು ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದರು.


ರಾಜ್ಯಕ್ಕೆ ಹೆಚ್ಚು ಆಕ್ಸಿಜನ್ ಪೂರೈಕೆ ಮಾಡುವಂತೆ ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದೆವು. ಈಗ 1200 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿದೆ. ಟಿಲಿಐಸಿಯು ಸಿಸ್ಟಂ ಮೂಲಕ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಮರಣ ಪ್ರಮಾಣ ಕಡಿಮೆಗೆ ಪ್ರಯತ್ನ ಮಾಡಲಾಗುತ್ತಿದೆ. ಕೇಂದ್ರದಿಂದ 1 ಕೋಟಿ 5 ಲಕ್ಷ ಲಸಿಕೆ ಬಂದಿದೆ. ರಾಜ್ಯವೇ 13 ಲಕ್ಷ ಲಸಿಕೆ ಖರೀದಿಸಿದೆ. ಕೋವ್ಯಾಕ್ಸಿನ್ 13.10 ಲಕ್ಷ ಡೋಸ್ ಪಡೆಯಲಾಗಿದೆ. 1.22ಕೋಟಿ ಜನರಿಗೆ ಲಸಿಕೆ‌ ವಿತರಿಸಲಾಗಿದೆ. ನಮ್ಮಲ್ಲಿ 11.46 ಲಕ್ಷ ಡೋಸ್ ದಾಸ್ತಾನಿದೆ ಎಂದು ಮಾಹಿತಿ ನೀಡಿದರು.


ಇದನ್ನು ಓದಿ: ರಾಜ್ಯಕ್ಕೆ ಮಾದರಿಯಾಗಿದೆ ಪುತ್ತೂರಿನ ಈ ಕೋವಿಡ್ ಕೇರ್ ಸೆಂಟರ್! ಇಲ್ಲಿನ ವ್ಯವ್ಯಸ್ಥೆ ಹೇಗಿದೆ ಗೊತ್ತಾ?


ನರ್ಸಿಂಗ್​ನವರಿಗೆ ಪದನಾಮ ನೀಡಬೇಕು ಎಂಬ ನಿವೇದನೆ ಇತ್ತು. ಕಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು, ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ಹೀಗೆ ಪದನಾಮ ನೀಡಲಾಗಿದೆ. ಆರೋಗ್ಯ ಸಿಬ್ಬಂದಿ ಹಾಗೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ವಿಶೇಷ ಭತ್ಯೆ ನೀಡಲಾಗುವುದು. ವೇತನ ಪಡೆಯುತ್ತಿರುವ ವೈದ್ಯರಿಗೆ ಪ್ರತಿ ತಿಂಗಳು 10000 ನೀಡಲಾಗುತ್ತದೆ. ಗ್ರೂಪ್ ಡಿ ವರ್ಕರ್ಸ್​ಗೆ 10000 ನೀಡಲಾಗುತ್ತದೆ. ಏಪ್ರಿಲ್ ಒಂದರಿಂದ ಆದೇಶ ಮಾಡಿರೋದ್ರಿಂದ ಈಗ 2 ತಿಂಗಳು ನೀಡಲಾಗುತ್ತದೆ ಎಂದರು.


ಆಶಾ ಕಾರ್ಯಕರ್ತೆಯ ವೇತನ ನೀಡದ ವಿಚಾರವಾಗಿ ಮಾತನಾಡಿದ ಸಚಿವ ಸುಧಾಕರ್,  17 ಜಿಲ್ಲೆಗಳಲ್ಲಿ ವೇತನ ನೀಡಲಾಗಿದೆ. ಉಳಿದ ಜಿಲ್ಲೆಯವರಿಗೆ ಎರಡು ದಿನದಲ್ಲಿ ವೇತನ ಕೈ ಸೇರಲಿದೆ ಎಂದರು.

First published: