Covid: ಕೋವಿಡ್ 3.0, 2022ರಲ್ಲೂ ಮುಂದುವರಿಯಲಿರುವ ಕೆಲವೊಂದು ಟ್ರೆಂಡ್‌ಗಳು

2021ರ ಕೊನೆಯಲ್ಲಿ ಆಗಮಿಸಿದ ಕೋವಿಡ್‌ನ ಹೊಸ ರೂಪಾಂತರ ಹೊಸ ವರ್ಷದ ಸಂಭ್ರಮಕ್ಕೆ ಕಪ್ಪು ಚುಕ್ಕೆಯಾಗಿ ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

2022ರ ಹೊಸ ವರ್ಷದ ಆಗಮನದ ಹೊಸಿಲಲ್ಲಿ ನಾವಿದ್ದು ಹಳೆಯ ವರ್ಷಗಳ ನೆನಪುಗಳನ್ನು ಇದು ಮರುಕಳಿಸುವಂತೆ (Reminiscent) ಮಾಡಿದೆ. 2020 ಕೋವಿಡ್ ಹಾವಳಿಯಿಂದ ಸಂಪೂರ್ಣ ವಿಶ್ವವೇ ಜರ್ಜಿರಿತಗೊಂಡರೂ, 2021ರ ಲಸಿಕೆ ನೀಡುವಿಕೆ ಸಾಂಕ್ರಾಮಿಕದ ನಡುವೆಯೂ ಹೊಸ ಆಶಾಕಿರಣವನ್ನು ಉಂಟುಮಾಡಿದ ವರ್ಷವಾಗಿದೆ. ಇದೇ ಸಮಯದಲ್ಲಿ ಭಾರತದಲ್ಲಿ ಎರಡನೇ ಅಲೆ ತನ್ನ ಅಟ್ಟಹಾಸ ಉಂಟುಮಾಡಿತು. ಆಸ್ಪತ್ರೆಗಳಲ್ಲಿ ( Hospitals) ಬೆಡ್ ಇಲ್ಲದಿರುವುದು, ಆಕ್ಸಿಜನ್ ಕೊರತೆ ಒಂದು ರೀತಿಯ ಆತಂಕವನ್ನೇ 2021 ಸೃಷ್ಟಿ ಮಾಡಿತ್ತು. ಆರ್ಥಿಕ ಚೇತರಿಕೆ ನಿಧಾನವಾಗಿ ನಡೆಯುತ್ತಿದ್ದ ಸಮಯದಲ್ಲೇ ಲಾಕ್‌ಡೌನ್ ಹೇರಿಕೆ ನಡೆಯಿತು. ಇದರಿಂದಾಗಿ ಆರ್ಥಿಕ ಕ್ಷೇತ್ರಗಳೂ (Financial sector) ಪುನಃ ನೆಲಕಚ್ಚಿದವು. ಸಂಪೂರ್ಣ ಜನರು ನ್ಯೂ ನಾರ್ಮಲ್ ಸಿದ್ಧಾಂತವನ್ನು ತಮ್ಮದಾಗಿಸಿಕೊಂಡರು. ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ (OTT platforms) ಹೊಸ ಚಿತ್ರಗಳು, ವೆಬ್ ಸೀರೀಸ್‌ಗಳು ಪ್ರದರ್ಶನ ಕಂಡವು ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಅನೇಕ ಪರಿವರ್ತನೆಗಳು ಉಂಟಾದವು ಹಾಗೂ ಜನರು ಈ ಹೊಸ ಪರಿವರ್ತನೆಗಳಿಗೆ ಬದಲಾಗತೊಡಗಿದರು.


ಕೋವಿಡ್ 3.0:


2021ರ ಕೊನೆಯಲ್ಲಿ ಆಗಮಿಸಿದ ಕೋವಿಡ್‌ನ ಹೊಸ ರೂಪಾಂತರ ಹೊಸ ವರ್ಷದ ಸಂಭ್ರಮಕ್ಕೆ ಕಪ್ಪು ಚುಕ್ಕೆಯಾಗಿ ಬಂದಿದೆ. ಕೋವಿಡ್-19 ನ ದ್ವಿ ಸೋಂಕು ಇನ್‌ಫ್ಲುಯೆಂಜಾ ಹಾಗೂ ಫ್ಲೋರೋನಾ ಆಗಿ ಇಸ್ರೇಲ್‌ನ ಗರ್ಭಿಣಿಯೊಬ್ಬರಲ್ಲಿ ಪತ್ತೆಯಾಗಿದ್ದು ಆಕೆ ಪ್ರಸವಕ್ಕಾಗಿ ರಾಬಿನ್ ಮೆಡಿಕಲ್ ಸೆಂಟರ್‌ಗೆ ಬಂದಿದ್ದಾಗ ಕಂಡುಬಂದಿದೆ.


ಫ್ಲೋರೋನಾದ ನಡುವೆಯೂ ಇದರ ಹಿಂದೆಯೇ ಬಂದಿದ್ದ ಓಮಿಕ್ರಾನ್ ನಿಧಾನವಾಗಿ ತನ್ನ ಅಬ್ಬರವನ್ನು ಉಂಟುಮಾಡುತ್ತಿದೆ. ಭಾರತದ ಅತ್ಯುನ್ನತ ಸೂಕ್ಷ್ಮರೋಗಾಣು ಶಾಸ್ತ್ರಜ್ಞ ಡಾ. ಗಗನ್‌ದೀಪ್ ಕಾಂಗ್ ಹೇಳಿರುವಂತೆ ನಾವೆಲ್ಲರೂ ಸಾರ್ಸ್-ಕೋವಿಡ್-2 ನೊಂದಿಗೆ ಬದುಕಲು ಕಲಿಯಬೇಕಾಗಿದ್ದು ಇದರ ರೂಪಾಂತರಗಳು ಮುಂದಿನ ದಿನಗಳಲ್ಲಿ ಇನ್ನೂ ಕಾಡಲಿದೆ ಎಂದಿದ್ದಾರೆ. ಭವಿಷ್ಯದಲ್ಲಿ ಹೆಚ್ಚಿನ ಅಲೆಗಳು ಪ್ರತಿಯೊಬ್ಬರನ್ನು ಕಾಡಲಿದ್ದು, ಸಿದ್ಧತೆಯೊಂದೇ ಇದನ್ನು ತಡೆಯಲಿರುವ ಏಕೈಕ ಮಾರ್ಗ ಎಂಬುದನ್ನು ಉಲ್ಲೇಖಿಸಿದ್ದಾರೆ. ಕೋವಿಡ್‌ನ ಹೊಸ ಅಲೆಗಳನ್ನು ಎದುರಿಸಲು ಲಸಿಕೆಗಳು ಹಾಗೂ ಬೂಸ್ಟರ್ ಶಾಟ್‌ಗಳನ್ನು ಆಶ್ರಯಿಸುವುದೇ ಮುಂದಿರುವ ದಾರಿ ಎಂಬುದನ್ನು ಸಾರಿ ಹೇಳಿದ್ದಾರೆ.


ಇದನ್ನೂ ಓದಿ: Covid​​ಗೆ ಹೆದರಿ 11 ಬಾರಿ ಲಸಿಕೆ ಪಡೆದ; Vaccine​ ಪಡೆಯಲು ಹೂಡಿದ್ದ ಪ್ಲಾನ್​ಗೆ ಅಧಿಕಾರಿಗಳು ದಂಗು

ಹೈಬ್ರಿಡ್‌ ಜೀವನ:


ಎರಡು ವರ್ಷಗಳ ಸುದೀರ್ಘ ವರ್ಕ್ ಫ್ರಮ್ ಹೋಮ್‌ನಿಂದ ಉದ್ಯೋಗಿಗಳು ಮರಳಿ ಕಚೇರಿಯತ್ತ ಮರಳಿ ಮಾಡಿದ್ದು, ಆನ್‌ಲೈನ್ ಪಾಠ ಪ್ರವಚನಗಳನ್ನೇ ಶೈಕ್ಷಣಿಕ ಕ್ಷೇತ್ರದಲ್ಲಿಅಳವಡಿಸಿಕೊಂಡಿದ್ದ ಶಾಲಾ ಕಾಲೇಜುಗಳು ಎಂದಿನಂತೆ ಹಿಂದಿನ ಸ್ಥಿತಿಗೆ ಮರಳಿದ್ದವು. ಆದರೆ ಓಮಿಕ್ರಾನ್ ಹಾವಳಿಯಿಂದಾಗಿ ಕಚೇರಿ, ಶಾಲಾ ಕಾಲೇಜುಗಳು ಪುನಃ ಹಿಂದಿನ ವರ್ಕ್ ಫ್ರಮ್ ಹೋಮ್ ಹಾಗೂ ಆನ್‌ಲೈನ್ ಪಾಠ ಪ್ರವಚನಗಳಿಗೆ ಮರಳಿವೆ.


ಒಂದು ರೀತಿಯಲ್ಲಿ ಹೈಬ್ರಿಡ್‌ ವ್ಯವಸ್ಥೆಯನ್ನು ಪ್ರತಿಯೊಂದು ಕ್ಷೇತ್ರಗಳೂ ಅಳವಡಿಸಿಕೊಂಡಿವೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ವಾರದಲ್ಲಿ ಕೆಲವು ದಿನಗಳ ಕಾಲ ಕಚೇರಿಯಲ್ಲಿ ಕೆಲಸ ಮಾಡುವುದು ಇನ್ನುಳಿದ ದಿನ ಮನೆಯಿಂದಲೇ ಕೆಲಸ ಮಾಡುವ ಹೈಬ್ರಿಡ್‌ ವ್ಯವಸ್ಥೆಗೆ ಉಬರ್, ವಿಪ್ರೋ, ಎಚ್‌ಸಿಎಲ್ ಅನ್ವಯಿಸುವ ಯೋಚನೆಯಲ್ಲಿದೆ ಎಂಬುದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.


ಇನ್ನು ಸರಕಾರಿ ವಲಯದಲ್ಲೂ ಹೈಬ್ರಿಡ್‌ ಉದ್ಯೋಗ ವ್ಯವಸ್ಥೆಯ ಜಾರಿಗೊಳಿಸುವ ಮಾತುಗಳು ಕೇಳಿಬರುತ್ತಿವೆ ಎನ್ನಲಾಗಿದೆ.


ಸಾಂಕ್ರಾಮಿಕದ ನಡುವೆಯೇ ಮನರಂಜನೆ:


ನೆಟ್‌ಫ್ಲಿಕ್ಸ್‌ನಲ್ಲಿ ಪ್ರತೀ ಬಾರಿಯೂ ಹೊಸ ಸೀರಿಸ್ ಹಾಗೂ ಚಲನಚಿತ್ರ ಪ್ರದರ್ಶನಗೊಂಡಾಗ ಅದು ವೈರಲ್ ಆಗುವುದು ಸಾಮಾನ್ಯವಾಗಿದೆ. ಯಾವುದೇ ಸೀರಿಸ್ ಕೆಟ್ಟ ಅಂಶಗಳನ್ನೇ ಒಳಗೊಂಡಿರಲಿ ಒಳ್ಳೆಯ ಅಂಶವನ್ನೇ ಹೊಂದಿರಲಿ ನೆಟ್ಟಿಗರು ಈ ಕುರಿತು ಚರ್ಚೆ ಮಾಡುವುದಕ್ಕೆ ಸಾಮಾಜಿಕ ಮಾಧ್ಯಮ ಆಯ್ದುಕೊಳ್ಳುತ್ತಿರುವುದು ಸಾಂಕ್ರಾಮಿಕದ ನಡುವೆ ಹೊಸ ಟ್ರೆಂಡ್ ಆಗಿ ಮಾರ್ಪಟ್ಟಿದೆ.


ಸ್ಕ್ವಿಡ್ ಗೇಮ್‌ನಿಂದ ಹಿಡಿದು ಪವ್ರಿ ಗರ್ಲ್ ಪ್ರದರ್ಶನಗಳಾಗಿರಬಹುದು. ಲಾಕ್ ಡೌನ್ ಸಮಯದಲ್ಲಿ ಜನರು ಪ್ರಯತ್ನಿಸಿದ ಬೇರೆ ಬೇರೆ ಪಾಕ ಪಾಕ ವಿಧಾನಗಳ ಮಾಹಿತಿ ಇರಬಹುದು. ಒಂದು ರೀತಿಯಲ್ಲಿ 2021 ವಿವಿಧ ಮಾಹಿತಿಗಳನ್ನು ಉಣಬಡಿಸಿದೆ. ಇನ್ನು 2022 ಕೂಡ ಇದೇ ರೀತಿಯ ಶೈಲಿಗೆ ಸಾಕ್ಷಿಯಾಗಬಹುದು.


ಹೊಸ ವರ್ಷದ ಆರಂಭದಲ್ಲಿಯೇ ಹೊಸ ರೂಪಾಂತರ ಫ್ಲೊರೋನಾ ಹಾಗೂ IHU ಕುರಿತ ಮೀಮ್‌ಗಳು ಸಾಮಾಜಿಕ ತಾಣದಲ್ಲಿ ಚರ್ಚೆಯ ವಿಷಯಗಳಾಗಿವೆ.


ಹವಾಮಾನ ಪರಿಸ್ಥಿತಿಗಳು:


2022ರ ಹವಾಮಾನ ಬದಲಾವಣೆಗಳನ್ನು ಎದುರಿಸಲು ಭಾರತ ಸಜ್ಜಾಗಬೇಕಿದೆ ಎಂಬುದಾಗಿ ತಜ್ಞರ ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ. ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಹವಾಮಾನ ಸಮಸ್ಯೆಗಳನ್ನು ಎದುರಿಸಲು ಹಲವಾರು ಮಾರ್ಗೋಪಾಯಗಳನ್ನು ನೀಡಿದ್ದು ಅದು ಇನ್ನೂ ಸಂಬಂಧಿತದ ಕಿವಿಗೆ ತಲುಪಿಲ್ಲ ಎಂಬುದು ಎದ್ದು ಕಾಣುತ್ತಿದೆ. ನಮ್ಮ ಗ್ರಹದ ಸರಾಸರಿ ತಾಪಮಾನವು ಈ ಹಿಂದೆ ಊಹಿಸಿದಕ್ಕಿಂತ 10 ವರ್ಷಗಳ ಹಿಂದಿನ ಸ್ಥಿತಿಯಾದ 1.5 ಡಿಗ್ರಿ ಸೆಲ್ಸಿಯಸ್ ಅನ್ನು ತಲುಪುತ್ತದೆ ಎಂದಾಗಿದೆ. ಅಂತೆಯೇ ಅನೇಕ ಸೈಕ್ಲೋನ್ ದಾಳಿಗಳಿಗೂ ಭೂಮಿ ಒಳಗಾಗಲಿದೆ ಎಂಬುದಾಗಿ ವರದಿ ತಿಳಿಸಿದೆ.


ಸ್ಥಳೀಯ ಬುದ್ಧಿಮತ್ತೆಗಳಿಗೆ ಹೆಚ್ಚಿದ ಬೇಡಿಕೆ:


ದೊಡ್ಡ ದೊಡ್ಡ ಹೆಸರಾಂತ ಕಂಪನಿಗಳು ಭಾರತದ ಬುದ್ಧಿವಂತ ವ್ಯಕ್ತಿಗಳಿಗೆ ಮನ್ನಣೆ ನೀಡುತ್ತಿರುವುದು ಭಾರತದ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸುವಂತೆ ಮಾಡಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಟ್ವಿಟ್ಟರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾಯಿಯಾಗಿ ಆಯ್ಕೆಯಾದ ಪರಾಗ್ ಅಗರ್‌ವಾಲ್ ಹಾಗೂ ಚಾನಲ್‌ನ ಮುಖ್ಯಸ್ಥೆ ಲೀನಾ ನಾಯರ್. ಸ್ಥಳೀಯರಿಗೆ ಇರುವ ಬೇಡಿಕೆ, ಉತ್ತಮ ಅವಕಾಶಗಳು, ಕಚೇರಿ-ವೈಯಕ್ತಿಕ ಜೀವನ ಸಮತೋಲನ, ಜೀವನ ಮಟ್ಟಗಳಲ್ಲಿನ ಸುಧಾರಣೆಗಳು, ಅದೇ ರೀತಿ ಸಿಂಗಾಪುರ್‌ನಂತಹ ದೇಶಗಳು ಒದಗಿಸಿರುವ ಅನೇಕ ಸೌಲಭ್ಯಗಳಿಗೆ 2021 ಸಾಕ್ಷಿಯಾಗಿದೆ.


ಇದನ್ನೂ ಓದಿ: Mysore Palace: ಮೈಸೂರು ಅರಮನೆ ನೋಡ್ಬೇಕು ಅಂದ್ರೆ ಎರಡೂ ಲಸಿಕೆ ತೆಗೆದುಕೊಂಡಿರ್ಲೇಬೇಕು

ಎಕ್ಸ್‌ಪಾಟ್ ಇನ್‌ಸೈಡರ್ 2021ರಲ್ಲಿ ಮಾಡಿದ ಸಮೀಕ್ಷೆಯ ಪ್ರಕಾರ 59% ಭಾರತೀಯರು ವೃತ್ತಿಪರ ಕಾರಣಗಳಿಗಾಗಿ ದೇಶ ಬದಲಾಯಿಸಿರುವುದು ಕಂಡುಬಂದಿದ್ದು ಇದು ಸಂಪೂರ್ಣ ವಿಶ್ವದಲ್ಲಿಯೇ ಅತ್ಯಧಿಕವಾಗಿದೆ.


ಭಾರತದ ಪ್ರಮುಖ ಮೈಗ್ರೇಶನ್ ಪರಿಣಿತರಾಗಿರುವ ಮನಿಕಂಟ್ರೋಲ್‌ನ ಎಸ್. ಇರುದಯ ರಾಜನ್ ಹೇಳುವಂತೆ ವಲಸೆಯಾಗುವ ಪದ್ಧತಿ ಇನ್ನಷ್ಟು ಬೆಳವಣಿಗೆಯಾಗಲಿದೆ ಎಂದಾಗಿದೆ.


2022ರ ಹೊಸ ವರ್ಷದಲ್ಲಿ ಕೆಲವು ದಿನಗಳನ್ನು ನಾವು ಕಳೆದಿದ್ದೇವೆ. ಕರ್ನಾಟಕ ಸೇರಿದಂತೆ ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ಕೋವಿಡ್ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಈಗಾಗಲೇ ಹೇರಲಾಗಿದೆ.


ಕೋವಿಡ್‌ನ ಹೊಸ ಅಲೆಗಳಿಗೆ 2022 ಕಾರಣವಾಗಲಿದೆ ಎಂಬ ಹೊಸ ಆತಂಕವನ್ನು ಇದು ಉಂಟುಮಾಡಿದೆ. ಅಂತೂ 2022 ಈ ಹಿಂದಿನ ವರ್ಷಗಳಿಗಿಂತ ಕೊಂಚವಾದರೂ ನಿರಾಳತೆಯನ್ನುಂಟು ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.


Published by:vanithasanjevani vanithasanjevani
First published: