COVID-19 Vaccine: ಮಂಗಗಳ ಮೇಲೆ ಕೋವಿಡ್-19 ಲಸಿಕೆ ಪ್ರಯೋಗಕ್ಕೆ ಮುಂದಾದ ಭಾರತ

ಎನ್​​ಐವಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಭಾಗವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡಿದೆ. ಈಗಾಗಲೇ ಭಾರತವೂ 10ಕ್ಕೂ ಹೆಚ್ಚು ಕೋವಿಡ್​​-19 ಲಸಿಕೆಗಳನ್ನು ಕಂಡು ಹಿಡಿದಿದೆ. ವಾರದ ಹಿಂದೆಯೇ ಡಾ. ಹರೀಶ್​​ ವರ್ಧನ್​​​ ಮುಂದಿನ ಮೂರು ತಿಂಗಳಲ್ಲಿ 4 ಕೋವಿಡ್​​-19 ಲಸಿಕೆಗಳ ಮೊದಲ ಪ್ರಯೋಗ ನಡೆಯುವುದು ಎಂದಿದ್ದರು.

news18-kannada
Updated:June 3, 2020, 3:39 PM IST
COVID-19 Vaccine: ಮಂಗಗಳ ಮೇಲೆ ಕೋವಿಡ್-19 ಲಸಿಕೆ ಪ್ರಯೋಗಕ್ಕೆ ಮುಂದಾದ ಭಾರತ
ಪ್ರಯೋಗಾಲಯದ ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ(ಜೂ.03): ಮಾರಕ ಕೊರೋನಾ ವೈರಸ್​​ ಸೋಂಕಿಗೆ ಲಸಿಕೆ ಕಂಡು ಹಿಡಿಯಲು ಇಡೀ ಪ್ರಪಂಚವೇ ಹೆಣಗುತ್ತಿದೆ. ಇದರ ಮಧ್ಯೆಯೇ ಚೀನಾ ಬೆನ್ನಲ್ಲೀಗ ಭಾರತವೂ ಸದ್ದಿಲ್ಲದೇ ಕೊರೋನಾ ವೈರಸ್ ವಿರುದ್ಧದ ಲಸಿಕೆ ಸಿದ್ದಪಡಿಸಿದೆ. ಇದೀಗ ಕೊರೋನಾ ವೈರಸ್​​​ ಸೋಂಕಿಗಾಗಿ ಕಂಡು ಹಿಡಿದ ಈ ದೇಶಿ ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಮೊದಲಿಗೆ ಪ್ರಾಣಿಗಳ ಮೇಲೆ ಪ್ರಯೋಗ ಮಾಡಲು ಮುಂದಾಗಿದೆ. ಇದಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿಯೂ ಸಿಕ್ಕಿದೆ. 

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಭಾಗಾವಾಗಿರುವ ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್​​ಐವಿ) ಈಗ ಕೊರೋನಾ ಲಸಿಕೆ ಪ್ರಯೋಗವನ್ನು ಮಂಗಗಳ ಮೇಲೆ ನಡೆಸಲಿದೆ. 3-4 ವರ್ಷದ 30 ಹೆಣ್ಣು ಕೋತಿಗಳ ಮೇಲೆ ಈ ಪ್ರಯೋಗ ಆಗಲಿದೆ. ಈ ಪ್ರಯೋಗದಲ್ಲಿ ನಾವೂ ಯಶಸ್ವಿಯೂ ಆಗಲಿದ್ದೇವೆ ಎಂಬ ವಿಶ್ವಾಸವೂ ಎನ್​​ಐವಿ ಹೊಂದಿದೆ.

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತಾಡಿರುವ ಕೇಂದ್ರ ಅರಣ್ಯ ಸಚಿವ ಸಂಜಯ್ ರಾಥೋಡ್​​​, ಮಂಗಗಳ ಮೇಲೆ ಕೋವಿಡ್​​-19 ಲಸಿಕೆ ಪ್ರಯೋಗ ಮಾಡಲು ನಾನು ಅನುಮತಿ ನೀಡಿದ್ದೇನೆ. ಈ ಪ್ರಯೋಗದಿಂದ ಇತರ ಪ್ರಾಣಿಗಳಿಗೆ ತೊಂದರೆಯಾಗದಂತೆ ಎನ್​​ಐವಿ ಮುನ್ನೆಚ್ಚರಿಕೆ ವಹಿಸಬೇಕು. ಹಾಗೆಯೇ ಇದನ್ನು ಕಮರ್ಷಿಯಲ್​​ ಆಗಿ ಬಳಸಿಕೊಳ್ಳಬಾರದು ಎಂದರು.

ಇದನ್ನೂ ಓದಿ: ಕೊರೋನಾ ವೈರಸ್​​ಗೆ ದೇಶಿ ಲಸಿಕೆ ಕಂಡು ಹಿಡಿಯಲು ಮುಂದಾದ ಐಸಿಎಂಆರ್​​: ಬಯೋಕಾನ್ ಜತೆಗೆ ಒಪ್ಪಂದ

ಎನ್​​ಐವಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಭಾಗವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡಿದೆ. ಈಗಾಗಲೇ ಭಾರತವೂ 10ಕ್ಕೂ ಹೆಚ್ಚು ಕೋವಿಡ್​​-19 ಲಸಿಕೆಗಳನ್ನು ಕಂಡು ಹಿಡಿದಿದೆ. ವಾರದ ಹಿಂದೆಯೇ ಡಾ. ಹರೀಶ್​​ ವರ್ಧನ್​​​ ಮುಂದಿನ ಮೂರು ತಿಂಗಳಲ್ಲಿ 4 ಕೋವಿಡ್​​-19 ಲಸಿಕೆಗಳ ಮೊದಲ ಪ್ರಯೋಗ ನಡೆಯುವುದು ಎಂದಿದ್ದರು.

ವಿಶಿಷ್ಟ ವಿಧಾನದ ಮೂಲಕ ಈ ಲಸಿಕೆಯನ್ನು ಕೊರೋನಾ ವೈರಸ್ ಸೋಂಕಿಗೆ ಕಂಡು ಹಿಡಿಯಲಾಗಿದೆ. ಮೊದಲಿಗೆ ದುರ್ಬಲಗೊಂಡ ಕೊರೋನಾ ವೈರಸ್​ ಅನ್ನು ಪ್ರಾಣಿಗಳ ದೇಹಕ್ಕೆ ಸೇರಿಸುವುದು. ನಂತರ ಸಹಜವಾಗಿಯೇ ಕೊರೋನಾ ವಿರುದ್ಧ ಪ್ರತಿಕಾಯಗಳು ಸೃಷ್ಟಿಯಾಗುವಂತೆ ಮಾಡಲಾಗುತ್ತದೆ. ಈ ಪ್ರತಿಕಾಯಗಳು ಸಾಮಾನ್ಯ ವೈರಾಣುಗಳನ್ನೂ ಸಹ ಕೊಲ್ಲಲಿದೆ.
First published: June 3, 2020, 3:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading