HOME » NEWS » Coronavirus-latest-news » COVID 19 VACCINE PANACEA BIOTECH TO PRODUCE 100 MILLION DOSES OF SPUTNIK V VACCINE IN INDIA ANNUALLY SCT DBDEL

Coronavirus Vaccine: ಭಾರತದಲ್ಲಿ ವರ್ಷಕ್ಕೆ 100 ಮಿಲಿಯನ್ ಕೊರೋನಾ ಲಸಿಕೆ ಉತ್ಪಾದನೆ; ಪ್ಯಾನೇಸಿಯಾ ಬಯೋಟೆಕ್

Coronavirus Vaccine: ದೇಶದಲ್ಲಿ ವರ್ಷಕ್ಕೆ 100 ಮಿಲಿಯನ್ ಕೊರೋನಾ ಲಸಿಕೆ ಉತ್ಪಾದಿಸುವುದಾಗಿ ಪ್ಯಾನೇಸಿಯಾ ಬಯೋಟೆಕ್ ಸಂಸ್ಥೆ ತಿಳಿಸಿದೆ. ಇದರಿಂದ ಆತಂಕಕ್ಕೆ ಒಳಗಾಗಿರುವ ರಾಜ್ಯಗಳು ಇನ್ನೂ ಹೆಚ್ಚಿನ‌ ಕೊರೋನಾ ಲಸಿಕೆ ಕೊಡಿ ಎಂದು ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿವೆ.

news18-kannada
Updated:April 7, 2021, 9:45 AM IST
Coronavirus Vaccine: ಭಾರತದಲ್ಲಿ ವರ್ಷಕ್ಕೆ 100 ಮಿಲಿಯನ್ ಕೊರೋನಾ ಲಸಿಕೆ ಉತ್ಪಾದನೆ; ಪ್ಯಾನೇಸಿಯಾ ಬಯೋಟೆಕ್
ಕೋವಿಡ್ ಲಸಿಕೆ
  • Share this:
ನವದೆಹಲಿ (ಏ. 7): ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಪ್ರತಿ ದಿನ ಸುಮಾರು 1 ಲಕ್ಷ ಜನರಿಗೆ ಕೊರೋನಾ ಸೋಂಕು ತಗಲುತ್ತಿದೆ.‌ ಇದರಿಂದ ಆತಂಕಕ್ಕೆ ಒಳಗಾಗಿರುವ ರಾಜ್ಯಗಳು ಇನ್ನೂ ಹೆಚ್ಚಿನ‌ ಕೊರೋನಾ ಲಸಿಕೆ ಕೊಡಿ ಎಂದು ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿವೆ. ಈ ನಡುವೆ ದೇಶದಲ್ಲಿ ವರ್ಷಕ್ಕೆ 100 ಮಿಲಿಯನ್ ಕೊರೋನಾ ಲಸಿಕೆ ಉತ್ಪಾದಿಸುವುದಾಗಿ ಪ್ಯಾನೇಸಿಯಾ ಬಯೋಟೆಕ್ ಸಂಸ್ಥೆ ಬುಧವಾರ ತಿಳಿಸಿದೆ.

ಪ್ಯಾನೇಸಿಯಾ ಬಯೋಟೆಕ್ ಸಂಸ್ಥೆ ವರ್ಷಕ್ಕೆ 100 ಮಿಲಿಯನ್ ಕೊರೋನಾ ಲಸಿಕೆ ಉತ್ಪಾದಿಸುವುದಾಗಿ ಹೇಳಿರುವುದು ಸ್ಪುಟ್ನಿಕ್ ವಿ ಲಸಿಕೆಗಳ ಬಗ್ಗೆ. ಸ್ಪುಟ್ನಿಕ್ ಲಸಿಕೆ ರಷ್ಯಾದಲ್ಲಿ ಸಿದ್ದವಾಗಿ ಹೈದರಾಬಾದಿನ ಡಾ. ರೆಡ್ಡಿಸ್ ಲ್ಯಾಬ್ಸ್ ನಿಂದ ಭಾರತದಲ್ಲಿ ಪ್ರಯೋಗವಾಗಿದೆ. ಈಗಾಗಲೇ 3ನೇ ಹಂತದ ಕ್ಲಿನಿಕಲ್ ಪ್ರಯೋಗ ಮಾಡಲಾಗಿರುವ ಸ್ಪುಟ್ನಿಕ್ ತುರ್ತು ಬಳಕ ಅನುಮತಿ ನೀಡಿ ಎಂದು ಕೇಂದ್ರ ಆರೋಗ್ಯ ಇಲಾಖೆ ವ್ಯಾಪ್ತಿಗೆ ಬರುವ ಸ್ಪೆಷಲ್ ಎಕ್ಸಫರ್ಟ್ ಕಮಿಟಿ (SEC) ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (CDSCO) ಮುಂದೆ ಮನವಿ ಮಾಡಿದೆ.

ಸ್ಪುಟ್ನಿಕ್ ಲಸಿಕಾ ಸಂಸ್ಥೆಯ ಮನವಿ ಆಧರಿಸಿ ಸ್ಪೆಷಲ್ ಎಕ್ಸಫರ್ಟ್ ಕಮಿಟಿ ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಕಳೆದ ವಾರ ಸಭೆ ಕರೆದಿತ್ತು. ಆಗ ಸ್ಪುಟ್ನಿಕ್ ಸಂಸ್ಥೆಯು ತಾನು ಮೂರನೇ ಹಂತದಲ್ಲಿ ನಡೆಸಿದ ಪ್ರಯೋಗದ ವರದಿ ಸಲ್ಲಿಕೆ ಮಾಡಿತ್ತು. ಲಸಿಕೆ ಪಡೆದವರ ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ಬಗ್ಗೆ ಡೇಟಾ ಸಲ್ಲಿಕೆ ಮಾಡಿತ್ತು. ಸ್ಪುಟ್ನಿಕ್ ಲಸಿಕಾ ಸಂಸ್ಥೆ ಸಲ್ಲಿಸಿರುವ ಡೆಟಾಗಳ ಬಗ್ಗೆ ಸ್ಪೆಷಲ್ ಎಕ್ಸಫರ್ಟ್ ಕಮಿಟಿ ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಅತೃಪ್ತಿ ವ್ಯಕ್ತಪಡಿಸಿ ಇನ್ನೂ ಹೆಚ್ಚಿನ ಮಾಹಿತಿ ಒದಗಿಸುವುದಾಗಿ ಸ್ಪಟ್ನಿಕ್ ಸಂಸ್ಥೆಗೆ ಸೂಚಿಸಿತ್ತು.

ಇದನ್ನೂ ಓದಿ: KSRTC BMTC Strike: ಬಿಎಂಟಿಸಿ ನೌಕರರ ಮುಷ್ಕರ ಹಿನ್ನೆಲೆ ಖಾಸಗಿ ಬಸ್​ಗಳಿಗೆ ದರ ಪಟ್ಟಿ ಹಂಚಿಕೆ; ಹೆಚ್ಚು ಹಣ ಪಡೆಯದಂತೆ ತಾಕೀತು

ಸ್ಪುಟಿಕ್ ಲಸಿಕಾ ಸಂಸ್ಥೆಯಿಂದ ಸ್ಪೆಷಲ್ ಎಕ್ಸಫರ್ಟ್ ಕಮಿಟಿ ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಕೇಳಿರುವ ಡೆಟಾ ಸಲ್ಲಿಕೆಯಾದ ಮೇಲೆ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತದೆ. ಜೊತೆಗೆ ಸ್ಪುಟ್ನಿಕ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಬೇಕೋ ಬೇಡವೋ ಎಂಬ ಅಂತಿಮ ತಿರ್ಮಾನ ಕೈಗೊಳ್ಳಲಾಗುತ್ತದೆ. ಈ ನಡುವೆಯೇ ದೇಶದಲ್ಲಿ ವರ್ಷಕ್ಕೆ 100 ಮಿಲಿಯನ್ ಕೊರೋನಾ ಲಸಿಕೆ ಉತ್ಪಾದಿಸುವುದಾಗಿ ಪ್ಯಾನೇಸಿಯಾ ಬಯೋಟೆಕ್ ಸಂಸ್ಥೆ ಹೇಳಿರುವುದು ಕುತೂಹಲಕಾರಿಯಾಗಿದೆ.

ಈ ನಡುವೆ ದೇಶದಲ್ಲಿ ಕೊರೋನಾ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯಗಳು ಕೇಂದ್ರ ಸರ್ಕಾರದ ಮೇಲೆ ಹೆಚ್ಚಿನ ಪ್ರಮಾಣದ ಕೊರೋನಾ ಲಸಿಕೆ ಕೊಡಿ ಎಂದು ಒತ್ತಡ ಹೇರುತ್ತಿವೆ. ನಿನ್ನೆ ನಡೆದ ಆರೋಗ್ಯ ಸಚಿವರ ಸಭೆಯಲ್ಲೂ ಈ ವಿಷಯ ಪ್ರಸ್ತಾಪ ಆಗಿದೆ. ಆದುದರಿಂದ ಕೊರೋನಾ ಲಸಿಕೆ ಉತ್ಪಾದನೆ ಹೆಚ್ಚಿಸುವ ಬಗ್ಗೆ ಕೂಡ ಚರ್ಚೆ ನಡೆಯುತ್ತಿವೆ.
Published by: Sushma Chakre
First published: April 7, 2021, 9:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories