ನವದೆಹಲಿ (ಜೂನ್ 16): ಇದುವರೆಗೂ ಕೊರೋನಾ ಲಸಿಕೆ ಪಡೆಯಲು ಕೋವಿನ್ () ಆ್ಯಪ್ನಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳಲೇಬೇಕಾಗಿತ್ತು. ಆನ್ಲೈನ್ನಲ್ಲಿ ಹೆಸರು ನೋಂದಾಯಿಸಿಕೊಂಡವರಿಗೆ ಮಾತ್ರ ಕೋವಿಡ್ ಲಸಿಕೆ ನೀಡುವ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದರಿಂದ ವಿರೋಧ ಪಕ್ಷ ಅದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಸ್ಮಾರ್ಟ್ಫೋನ್ ಬಳಸದ, ಆನ್ಲೈನ್ ಬುಕಿಂಗ್ ಮಾಡಲು ಗೊತ್ತಿಲ್ಲದ ಅಥವಾ ಮೊಬೈಲ್ ಫೋನೇ ಇಲ್ಲದವರಿಗೆ ಕೊರೋನಾ ಲಸಿಕೆ ಪಡೆಯುವ ಅರ್ಹತೆಯಿಲ್ಲವೇ? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಪ್ರಶ್ನೆ ಮಾಡಿದ್ದರು.
ಇದೀಗ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಇನ್ನು ಮುಂದೆ 18 ವರ್ಷ ಮೇಲ್ಪಟ್ಟವರು ಎಲ್ಲರೂ ನೇರವಾಗಿ ಲಸಿಕಾ ಕೇಂದ್ರಕ್ಕೆ ಹೋಗಿ ಕೊರೋನಾ ಲಸಿಕೆ ಪಡೆಯಬಹುದು. ಇದಕ್ಕೆ ಆನ್ಲೈನ್ ಬುಕಿಂಗ್ ಅಥವಾ ಅಪಾಯಿಂಟ್ಮೆಂಟ್ ಬೇಕೆಂಬುದು ಕಡ್ಡಾಯವಲ್ಲ ಎಂದು ಘೋಷಿಸಿದೆ.
GoI is committed to provide #VaccineForAll under world’s #LargestVaccineDrive
Prior registration on #COWIN is not required to get vaccinated.
Walk-in & assisted registrations are being facilitated for citizens above 18y of age at all #COVID19 vaccination centres in the country. pic.twitter.com/3RTtKX8qI9
— Dr Harsh Vardhan (@drharshvardhan) June 15, 2021
ಇದನ್ನೂ ಓದಿ: Karnataka Weather Today: ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ ತತ್ತರ; ಇನ್ನೆರಡು ದಿನ ಭಾರೀ ಮಳೆ
ಹಾಗೇ, ಕೋವಿನ್ ಆ್ಯಪ್ ಕೊರೋನಾ ಲಸಿಕೆ ಪಡೆಯಲು ಹೆಸರು ನೋಂದಣಿ ಮಾಡಿಸಿಕೊಳ್ಳಲು ಒಂದು ಮಾರ್ಗವಷ್ಟೆ. ಅದರಲ್ಲಿ ರಿಜಿಸ್ಟರ್ ಮಾಡಿಸಿದರೆ ಮಾತ್ರ ಲಸಿಕೆ ಸಿಗುತ್ತದೆ ಎಂಬುದು ಸತ್ಯವಲ್ಲ. ಕೋವಿನ್ ಮೂಲಕವೂ ಮುಂಚಿತವಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಸಮಯವನ್ನು ನಿಗದಿ ಮಾಡಿಕೊಳ್ಳಬಹುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಊರಿನಲ್ಲಿ ಕೊರೋನಾ ಲಸಿಕೆ ಪಡೆಯದಿರುವವರಿಗೆ ಈ ಬಗ್ಗೆ ಅರಿವು ಮೂಡಿಸಿ, ಲಸಿಕೆಯ ಸೌಲಭ್ಯ ಪಡೆಯುವಂತೆ ಮಾಡಬೇಕು ಎಂದು ಕೂಡ ಕೇಂದ್ರ ಸರ್ಕಾರ ಸೂಚಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ