ನವದೆಹಲಿ (ಜು. 27): ಕೋವಿಡ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಲಸಿಕೆ ಮಾತ್ರ ಮಹತ್ವದಾಗಿದೆ. ಈಗಾಗಲೆ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯುತ್ತಿದ್ದಾರೆ. ಮೂರನೇ ಅಲೆ ಸೋಂಕಿನಿಂದ ಮಕ್ಕಳನ್ನು ರಕ್ಷಿಸಲು ಲಸಿಕೆ ಅಗತ್ಯವಾಗಿದ್ದು, ಮಕ್ಕಳಿಗೂ ಆದಷ್ಟು ಬೇಗ ಲಸಿಕೆ ವಿತರಣೆ ಕಾರ್ಯಕ್ರಮ ನಡೆಯಬೇಕಿದೆ. ಮಕ್ಕಳ ಲಸಿಕೆಗಳು ಯಾವಾಗ ಬರುತ್ತದೆ ಎಂಬುದು ಈಗ ಎಲ್ಲರ ಪ್ರಶ್ನೆಯಾಗಿದೆ. ಈ ಕುರಿತು ಇಂದು ಸಂಸತ್ತಿನಲ್ಲಿ ಉತ್ತರಿಸಿರುವ ಪ್ರಧಾನಿ ನರೇಂದ್ರ ಮೋದಿ ಇನ್ನೇನು ಕೆಲವೇ ದಿನಗಳಲ್ಲಿ ಮಕ್ಕಳಿಗೂ ಲಸಿಕೆ ಸಿಗಲಿದೆ ಎಂದಿದ್ದಾರೆ. ಬಿಜೆಪಿ ಸಂಸದರ ಸಭೆಯಲ್ಲಿ ಈ ಕುರಿತು ತಿಳಿಸಿರುವ ಕೇಂದ್ರ ಆರೋಗ್ಯ ಸಚಿವರು, ಮುಂದಿನ ತಿಂಗಳು ಮಕ್ಕಳಿಗೆ ಕೋವಿಡ್ ಲಸಿಕೆ ಸಿಗಲಿದ್ದು, ತಕ್ಷಣಕ್ಕೆ ವಿತರಣೆ ಕಾರ್ಯ ನಡೆಯಲಿದೆ ಎಂದಿದ್ದಾರೆ.
ಸಭೆಯಲ್ಲಿ ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಲಸಿಕೆ ಸಿಕ್ಕ ತಕ್ಷಣ ವಿತರಣೆ ಕಾರ್ಯ ನಡೆಯಲಿದೆ. ಮುಂದಿನ ತಿಂಗಳಿನಿಂದಲೇ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಮೂರನೇ ಅಲೆ ಸೋಂಕಿನ ಎಚ್ಚರಿಕೆ ನಡುವೆ ದೇಶದಲ್ಲಿ ಕೋವಿಡ್ ಸರಪಳಿಯನ್ನು ತುಂಡರಿಸುವ ಅಗತ್ಯ ಇದೆ. ಜೊತೆಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಾಲೆ ಪಾತ್ರ ಮಹತ್ವದ್ದಾಗಿದ್ದು, ಮತ್ತೆ ಶಾಲೆಗಳನ್ನು ಪುನರ್ ಆರಂಭಿಸಬೇಕಿದೆ. ಈ ಹಿನ್ನಲೆ ದೊಡ್ಡ ಹೆಜ್ಜೆಯನ್ನು ನಾವು ಇಡಬೇಕಿದೆ ಎಂದು ಕೂಡ ಈಗಾಗಲೇ ತಜ್ಞರು ತಿಳಿಸಿದ್ದಾರೆ.
ಈಗಾಗಲೇ ಗುಜರಾತ್ನ ಅಹ್ಮದಾಬಾದ್ ಮೂಲದ ಫಾರ್ಮಾ ಕಂಪನಿ ಝಡಸ್ ಕ್ಯಾಡಿಲಾ 12 ರಿಂದ 18 ವರ್ಷ ದವರಿಗಾಗಿ ಅಭಿವೃದ್ಧಿಪಡಿಸಿರುವ ಝೈಕೋವಿ-ಡಿ (ZyCoV-D) ಲಸಿಕೆಯ ತುರ್ತು ಬಳಕೆಗೆ ಜು. 1ರಂದು ಅನುಮತಿ ಕೋರಿದೆ. ಮೂರನೇ ಡೋಸ್ ಲಸಿಕೆಯನ್ನು 28 ಸಾವಿರಕ್ಕೂ ಹೆಚ್ಚು ಜನರ ಮೇಲೆ ಪ್ರಯೋಗ ನಡೆಸಿ ಮೌಲ್ಯ ಮಾಪನ ಮಾಡಿದೆ. ಭಾರತ್ ಬಯೋಟೆಕ್ನ ಕೋವಾಕ್ಸಿನ್ ಅನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಎಮ್ಸ್ ಮುಖ್ಯಸ್ಥ ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.
ಭಾರತ್ ಬಯೋಟೆಕ್ನ ಕೊವಾಕ್ಸಿನ್ ಪ್ರಯೋಗಗಳು ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಮುಗಿಯಲಿದ್ದು, ಅನುಮೋದನೆ ಪಡೆಯಬೇಕು. ಫಿಜರ್ ಲಸಿಕೆಯನ್ನು ಈಗಾಗಲೇ ಎಫ್ಡಿಅನುಮೋದಿಸಿದೆ. ಸೆಪ್ಟೆಂಬರ್ ವೇಳೆಗೆ, ನಾವು ಮಕ್ಕಳಿಗೆ ಲಸಿಕೆ ಹಾಕಲು ಪ್ರಾರಂಭಿಸಬೇಕು, ಈ ಮೂಲಕ ಕೋವಿಡ್ ಸರಪಳಿಯನ್ನು ಮುರಿಯಬೇಕಿದೆ ಎಂದು ಗುಲೇರಿಯಾ ತಿಳಿಸಿದ್ದಾರೆ.
ಇದನ್ನು ಓದಿ: ಕೋವಿಡ್ - 19 ಪ್ರತಿಕಾಯಗಳು ದೇಹದಲ್ಲಿ ಎಷ್ಟು ಸಮಯಗಳವರೆಗೆ ಇರುತ್ತವೆ? ಅಧ್ಯಯನದ ವರದಿ ಏನು?
ಝೈಡಸ್ ಕ್ಯಾಡಿಲಾದ ZyCoV-D ಬಳಕೆಗೆ ಡಿಸಿಜಿಐ ಅನುಮತಿ ನೀಡಿದರೆ ದೇಶದಲ್ಲಿ ಕೋವಿಡ್ ಲಸಿಕೆ ಬಳಕೆಗೆ ಅನುಮತಿ ಸಿಕ್ಕ ಐದನೇ ವ್ಯಾಕ್ಸಿನ್ ಇದಾಗಲಿದೆ. ಈಗಾಗಲೇ ಡಿಸಿಜಿಐ ಕೋವಿಶೀಲ್ಡ್ , ಭಾರತ್ ಬಯೋಟೆಕ್ನ ಕೋವಾಕ್ಸಿನ್, ರಷ್ಯಾದ ಸ್ಪುಟ್ನಿಕ್ ವಿ ಮತ್ತು ಯುಎಸ್ ನಿರ್ಮಿಸ ಮಾಡರ್ನಾಗೆ ಲಸಿಕೆ ಬಳಿಕೆಗೆ ದೇಶದಲ್ಲಿ ಅವಕಾಶ ನೀಡಿದೆ.
ಭಾರತದಲ್ಲಿ ಸದ್ಯ 44 ಕೋಟಿ ಲಸಿಕೆ ನೀಡಲಾಗಿದೆ. ದೇಶದ ವಯಸ್ಕರಿಗೆ ಎಲ್ಲಾರಿಗೂ ಈ ವರ್ಷಾಂತ್ಯದಲ್ಲಿ ಲಸಿಕೆ ವಿತರಣೆ ಕಾರ್ಯ ಮುಗಿಯಲಿದೆ.
ಯೂರೋಪಿಯನ್ ಔಷಧ ವಾಚ್ ಡಾಗ್ 12ರಿಂದ 17 ವರ್ಷದ ಮಕ್ಕಳಿಗೆ ಮಾರ್ಡನ್ ಕೊರೋನಾ ವೈರಸ್ ಲಸಿಕೆ ವಿತರಣೆಗೆ ಅನುಮತಿ ನೀಡಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ