HOME » NEWS » Coronavirus-latest-news » COVID 19 VACCINE COVISHIELD AND COVAXIN VACCINE INTERESTING FACTS ABOUT TWO CORONAVIRUS VACCINES IN INDIA SCT

Covid-19 Vaccine: ಕೊರೋನಾ ಲಸಿಕೆಗಳಾದ ಕೊವ್ಯಾಕ್ಸಿನ್- ಕೋವಿಶೀಲ್ಡ್​ ಪರಿಣಾಮಗಳ ಬಗ್ಗೆ ಇಲ್ಲಿದೆ ಮಾಹಿತಿ

Covishield vs Covaxin: ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನೆಕಾ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೋವಿಶೀಲ್ಡ್​ ಲಸಿಕೆ ಹಾಗೂ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಗಳಿಗೆ ಇರುವ ವ್ಯತ್ಯಾಸಗಳೇನು? ಇವುಗಳ ಪರಿಣಾಮಗಳೇನು? ಇಲ್ಲಿದೆ ಮಾಹಿತಿ...

Sushma Chakre | news18-kannada
Updated:January 16, 2021, 11:37 AM IST
Covid-19 Vaccine: ಕೊರೋನಾ ಲಸಿಕೆಗಳಾದ ಕೊವ್ಯಾಕ್ಸಿನ್- ಕೋವಿಶೀಲ್ಡ್​ ಪರಿಣಾಮಗಳ ಬಗ್ಗೆ ಇಲ್ಲಿದೆ ಮಾಹಿತಿ
ಕೋವಿಶೀಲ್ಡ್​- ಕೋವ್ಯಾಕ್ಸಿನ್ ಲಸಿಕೆ
  • Share this:
ನವದೆಹಲಿ (ಜ. 16): ಇಂದಿನಿಂದ ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನ ಶುರುವಾಗಲಿದೆ. ಭಾರತದಲ್ಲಿ ಅನುಮೋದನೆಗೊಂಡಿರುವ Covaxin ಮತ್ತು Covishield ಲಸಿಕೆಗಳನ್ನು ನೀಡಲಾಗುತ್ತದೆ. ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನೆಕಾ ಎಂಬ ಬ್ರಿಟಿಷ್ ಕಂಪನಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೋವಿಶೀಲ್ಡ್​ ಲಸಿಕೆ ಹಾಗೂ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಗಳನ್ನು ನೀಡಲು ಭಾರತ ಸರ್ಕಾರ ಅನುಮತಿ ನೀಡಿದೆ. ಹಾಗಿದ್ದರೆ ಈ ಎರಡೂ ಲಸಿಕೆಗಳಿಗೆ ಇರುವ ವ್ಯತ್ಯಾಸಗಳೇನು? ಇವುಗಳ ಅಡ್ಡ ಪರಿಣಾಮಗಳೇನು? ಈ ಬಗ್ಗೆ ಇಲ್ಲಿದೆ ಮಾಹಿತಿ...

ಭಾರತೀಯ ಸಂಸ್ಥೆಯಾದ ಭಾರತ್ ಬಯೋಟೆಕ್ ಸಿದ್ಧಪಡಿಸಿರುವ ಕೋವ್ಯಾಕ್ಸಿನ್ ಹಾಗೂ ಆಕ್ಸ್​ಫರ್ಡ್​ ವಿವಿ ಸಿದ್ಧಪಡಿಸಿರುವ ಕೋವಿಶೀಲ್ಡ್​ ಲಸಿಕೆಗಳನ್ನು ಮೊದಲ ಹಂತವಾಗಿ ಇಂದಿನಿಂದ ದೇಶಾದ್ಯಂತ ವಿತರಿಸಲಾಗುತ್ತದೆ. ಕೊರೋನಾ ವಾರಿಯರ್​ಗಳಾಗಿರುವ ಆರೋಗ್ಯ ಕಾರ್ಯಕರ್ತರು ಹಾಗೂ ಫ್ರಂಟ್​ಲೈನ್ ವರ್ಕರ್​ಗಳಿಗೆ ಮುಂದಿನ 6ರಿಂದ 8 ತಿಂಗಳ ಕಾಲ ಈ ಎರಡು ಲಸಿಕೆಗಳನ್ನು ನೀಡಲಾಗುತ್ತದೆ. ಆದರೆ, ಒಬ್ಬರೇ ಎರಡೂ ಕಂಪನಿಗಳ ಲಸಿಕೆಗಳನ್ನು ಪಡೆಯುವಂತಿಲ್ಲ. ಯಾವ ಲಸಿಕೆ ಪಡೆಯಬೇಕೆಂಬುದು ಫಲಾನುಭವಿಗಳ ಆಯ್ಕೆಯ ವಿಷಯವಾಗಿರುತ್ತದೆ.

ಕೇಂದ್ರ ಸರ್ಕಾರ ಈಗಾಗಲೇ 1.1 ಕೋಟಿ ಕೋವಿಶೀಲ್ಡ್​ ಡೋಸ್​ಗಳನ್ನು ಮತ್ತು 55 ಲಕ್ಷ ಕೊವ್ಯಾಕ್ಸಿನ್ ಡೋಸ್​ಗಳನ್ನು ಖರೀದಿಸಿದೆ. ಕೊರೋನಾ ಲಸಿಕೆಯ ಫಲಾನುಭವಿಗಳು ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್​ ಲಸಿಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಲಸಿಕೆ ಯಾರಿಗೂ ಕಡ್ಡಾಯವಲ್ಲ. ಸ್ವಯಂಪ್ರೇರಿತರಾಗಿ ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಇಚ್ಛಿಸುವವರು ತಮ್ಮ ಹೆಸರು ನೋಂದಣಿ ಮಾಡಿಕೊಂಡು, ಲಸಿಕೆಗಳನ್ನು ಪಡೆಯಬಹುದು. ಹಾಗಿದ್ದರೆ ಈ ಎರಡು ಲಸಿಕೆಗಳ ಉಪಯೋಗವೇನು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ...

ಕೋವಿಶೀಲ್ಡ್​ ಲಸಿಕೆ:
ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್‌ ಲಸಿಕೆಯನ್ನು ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ತಯಾರಿಸುತ್ತಿದೆ. ಕೊವ್ಯಾಕ್ಸಿನ್ ಲಸಿಕೆಯನ್ನು ಭಾರತ ಬಯೋಟೆಕ್‌ ಕಂಪನಿಯು ಐಸಿಎಂಆರ್‌ ಮತ್ತು ಎನ್‌ಐವಿ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಿದೆ. 2ರಿಂದ 3 ತಿಂಗಳ ಅಂತರದೊಳಗೆ 2 ಬಾರಿ ಈ ಲಸಿಕೆಯನ್ನು ಪಡೆದರೆ ಶೇ. 90ರಿಂದ 95ರಷ್ಟು ಪರಿಣಾಮಕಾರಿಯಾಗಲಿದೆ. ಕೊರೋನಾ ಸೋಂಕನ್ನು ಹೊಡೆದೋಡಿಸಲು ಬೇರೆಲ್ಲ ಲಸಿಕೆಗಳಿಗಿಂತ ಕೋವಿಶೀಲ್ಡ್​ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಕೊವ್ಯಾಕ್ಸಿನ್ ಲಸಿಕೆ:

ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಯಿಂದ ಏನಾದರೂ ಅಡ್ಡಪರಿಣಾಮಗಳು ಉಂಟಾದರೆ ಅದಕ್ಕೆ ರಿಹಾರ ನೀಡಲು ಸಿದ್ಧವಿರುವುದಾಗಿ ಭಾರತ್ ಬಯೋಟೆಕ್ ಸಂಸ್ಥೆ ಘೋಷಿಸಿದೆ. ಇದು ಬಹಳ ಹಳೆಯ ಲಸಿಕಾ ವಿಧಾನವಾಗಿದೆ. ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಲಸಿಕೆ ಕೊರೋನಾ ವಿರುದ್ಧವೂ ಹೋರಾಡಲಿದೆ ಎಂದು ಸಂಸ್ಥೆ ದಾಖಲೆಗಳನ್ನು ನೀಡಿ, ಅನುಮತಿ ಪಡೆದಿದೆ. ಕೊವ್ಯಾಕ್ಸಿನ್ ಲಸಿಕೆಗಳನ್ನು ಪಡೆಯುವವರು ಆಸ್ಪತ್ರೆಗಳಲ್ಲಿ ತಮ್ಮ ಪೂರ್ತಿ ಮಾಹಿತಿಯನ್ನು ನೀಡಬೇಕು. ಒಂದುವೇಳೆ ಅವರಿಗೆ ಅಡ್ಡಪರಿಣಾಮಗಳನ್ನು ಉಂಟಾದರೆ ಅದಕ್ಕೆ ಚಿಕಿತ್ಸೆಯ ಜೊತೆಗೆ ಪರಿಹಾರಧನವನ್ನೂ ನೀಡುವುದಾಗಿ ಭಾರತ್ ಬಯೋಟೆಕ್ ಘೋಷಿಸಿದೆ.ಇದನ್ನೂ ಓದಿ: Covid-19 Vaccine: ಬೆಂಗಳೂರಿನ ಎಲ್ಲೆಲ್ಲಿ ಇಂದು ಕೊರೋನಾ ಲಸಿಕೆ ಲಭ್ಯ?; ಇಲ್ಲಿದೆ ಪೂರ್ತಿ ಮಾಹಿತಿ

ಸದ್ಯಕ್ಕೆ ಭಾರತದಲ್ಲಿ ಸೆರಂ​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಕೋವಿಶೀಲ್ಡ್​ ಮತ್ತು ಭಾರತ್ ಬಯೋಟೆಕ್​ ಸಂಸ್ಥೆಯ ಕೊವ್ಯಾಕ್ಸಿನ್​ ಲಸಿಕೆಗಳು ಲಭ್ಯವಿದ್ದು, ಇವೆರಡರಲ್ಲಿ ಯಾವುದು ಉತ್ತಮ ಎನ್ನುವ ಚರ್ಚೆ ಅನೇಕ ದಿನಗಳಿಂದ ನಡೆಯುತ್ತಿದೆ. ಹೀಗಾಗಿ, ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್​ ಲಸಿಕೆಗಳ ನಡುವಿನ ವ್ಯತ್ಯಾಸ, ಗುಣಮಟ್ಟದ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿವರಣೆ ನೀಡಿದೆ. ಆಕ್ಸ್​ಫರ್ಡ್​ ಯೂನಿವರ್ಸಿಟಿ ಮತ್ತು ಬ್ರಿಟಿಷ್- ಸ್ವೀಡಿಷ್ ಫಾರ್ಮಾಸಿಟಿಕಲ್ ಕಂಪನಿ ಆಸ್ಟ್ರಾಜೆನೆಕ್ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್​ ಲಸಿಕೆಯನ್ನು ಇಂದಿನಿಂದ ನೀಡಲಾಗುತ್ತಿದೆ.

ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ತುರ್ತು ಬಳಕೆಗೆ ಅನುಮತಿ ಪಡೆದಿರುವ ಕೊರೊನಾ ಲಸಿಕೆಗಳನ್ನು 18 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಪಡೆಯಬೇಕು. ಕೊರೊನಾ ಲಸಿಕೆ ಪಡೆದ 14 ದಿನಗಳ ಅಂತರದಲ್ಲಿ ಬೇರಾವ ಲಸಿಕೆಯನ್ನೂ ಪಡೆಯದಂತೆ ಎಚ್ಚರ ವಹಿಸಬೇಕು. 2 ಡೋಸ್​ಗಳಲ್ಲಿ ನೀಡಲಾಗುವ ಕೊರೊನಾ ಲಸಿಕೆಯಲ್ಲಿ ಎರಡೂ ಬಾರಿ ಒಂದೇ ಸಂಸ್ಥೆಯ ಲಸಿಕೆಯನ್ನು ಪಡೆಯುವುದು ಕಡ್ಡಾಯ.

ಒಂದುವೇಳೆ ನೀವು ಕೊವ್ಯಾಕ್ಸಿನ್​ ಲಸಿಕೆಯನ್ನು ಆಯ್ದುಕೊಂಡರೆ ಎರಡನೇ ಬಾರಿಯೂ ಕೊವ್ಯಾಕ್ಸಿನ್​ ಲಸಿಕೆಯನ್ನೇ ಪಡೆಯಬೇಕು. ಮೊದಲು ಕೋವಿಶೀಲ್ಡ್​ ಲಸಿಕೆಯನ್ನು ಆಯ್ಕೆ ಮಾಡಿಕೊಂಡರೆ 2ನೇ ಬಾರಿಯೂ ಅದನ್ನೂ ಪಡೆಯಬೇಕು. ಕೊರೋನಾ ಲಸಿಕೆ ಪಡೆಯುವ ವ್ಯಕ್ತಿಗೆ ಯಾವುದೇ ಅಲರ್ಜಿ ಸಮಸ್ಯೆ ಇದೆಯೇ ಅಥವಾ ಇತರ ಲಸಿಕೆಗಳಿಂದ ತೊಂದರೆ ಅನುಭವಿಸುವವರೇ ಎಂದು ಪರಿಶೀಲಿಸಿದ ನಂತರ ವೈದ್ಯರು ಲಸಿಕೆಗಳನ್ನು ನೀಡಬೇಕು. ಗರ್ಭಿಣಿಯರು ಮತ್ತು ಬಾಣಂತಿಯರು ಕೊರೊನಾ ಲಸಿಕೆಯನ್ನು ಸ್ವೀಕರಿಸುವಂತಿಲ್ಲ.
Published by: Sushma Chakre
First published: January 16, 2021, 11:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories