Covid 19 Vaccine: ರಷ್ಯಾ ಬಳಿಕ‌ ಕೊರೋನಾಗೆ ಲಸಿಕೆ ಕಂಡುಹಿಡಿಯಲು ಭಾರತದಲ್ಲೂ ಚುರುಕುಗೊಂಡ ಕಾರ್ಯಾಚರಣೆ

Coronavirus Vaccination: ಲಸಿಕೆ ಆಡಳಿತ ತಜ್ಞರ ಸಮಿತಿಯ ಅಧ್ಯಕ್ಷರೂ ಹಾಗೂ ನೀತಿ ಆಯೋಗದ ಸದಸ್ಯರೂ ಆದ ಡಾ.‌ ವಿ.ಕೆ ಪೌಲ್ ಅವರ ನೇತೃತ್ವದಲ್ಲಿ ನೀತಿ ಆಯೋಗದಲ್ಲಿ ಈ ನಿರ್ಣಾಯಕವಾದ ಸಭೆ ನಡೆಯಲಿದೆ. ಸಭೆಯಲ್ಲಿ ಮುಖ್ಯವಾಗಿ ದೇಶದಲ್ಲಿ ಈಗಾಗಲೇ ವಿವಿಧ ಪ್ರಯೋಗಾಲಯಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳು ಯಾವ ಹಂತದಲ್ಲಿ ಇವೆ? ಎಂಬ ಬಗ್ಗೆ ಚರ್ಚೆಯಾಗಲಿದೆ.

news18-kannada
Updated:August 12, 2020, 10:21 AM IST
Covid 19 Vaccine: ರಷ್ಯಾ ಬಳಿಕ‌ ಕೊರೋನಾಗೆ ಲಸಿಕೆ ಕಂಡುಹಿಡಿಯಲು ಭಾರತದಲ್ಲೂ ಚುರುಕುಗೊಂಡ ಕಾರ್ಯಾಚರಣೆ
ಕೊರೋನಾ ವೈರಸ್
  • Share this:
ನವದೆಹಲಿ (ಆಗಸ್ಟ್ 12): ಜಗತ್ತಿನಲ್ಲಿ ಮೊದಲ ಬಾರಿಗೆ ರಷ್ಯಾ ಯಶಸ್ವಿಯಾಗಿ ಕೊರೋನಾ ಸೋಂಕಿಗೆ ಔಷಧ ಕಂಡುಹಿಡಿಯುತ್ತಿದ್ದಂತೆ ಭಾರತದಲ್ಲೂ ಕೊರೋನಾಗೆ ಮದ್ದು ಕಂಡುಹಿಡಿಯುವ ಕಾರ್ಯಾಚರಣೆ ಚುರುಕುಗೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ನೀತಿ ಆಯೋಗದಲ್ಲಿ ಲಸಿಕೆ ಆಡಳಿತ ತಜ್ಞರ ಸಮಿತಿಯ ಮಹತ್ವದ ಸಭೆ ನಡೆಯಲಿದೆ.

ಲಸಿಕೆ ಆಡಳಿತ ತಜ್ಞರ ಸಮಿತಿಯ ಅಧ್ಯಕ್ಷರೂ ಹಾಗೂ ನೀತಿ ಆಯೋಗದ ಸದಸ್ಯರೂ ಆದ ಡಾ.‌ ವಿ.ಕೆ ಪೌಲ್ ಅವರ ನೇತೃತ್ವದಲ್ಲಿ ನೀತಿ ಆಯೋಗದಲ್ಲಿ ಈ ನಿರ್ಣಾಯಕವಾದ ಸಭೆ ನಡೆಯಲಿದೆ. ಸಭೆಯಲ್ಲಿ ಮುಖ್ಯವಾಗಿ ದೇಶದಲ್ಲಿ ಈಗಾಗಲೇ ವಿವಿಧ ಪ್ರಯೋಗಾಲಯಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳು ಯಾವ ಹಂತದಲ್ಲಿ ಇವೆ? ಎಂಬ ಬಗ್ಗೆ ಚರ್ಚೆಯಾಗಲಿದೆ.

ಸದ್ಯ ದೇಶದಲ್ಲಿ ಮೂರು ಸಂಸ್ಥೆಗಳಿಗೆ ವ್ಯಾಕ್ಸಿನ್ ಸಂಶೋಧನೆ ಮಾಡಲು ಅನುಮತಿ ನೀಡಲಾಗಿದೆ‌. ಅಲ್ಲಿ ಸಂಶೋಧನಾ ಕಾರ್ಯವೂ ನಡೆಯುತ್ತಿದೆ. ಮೊದಲನೆಯದಾಗಿ ಭಾರತ್ ಬಯೋಟೆಕ್ ಹಾಗೂ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಜಂಟಿಯಾಗಿ ಕೊವ್ಯಾಕ್ಸಿನ್ ಸಂಶೋಧನೆ ನಡೆಸುತ್ತಿವೆ. ಈ ಕೋವ್ಯಾಕ್ಸಿನ್ ದ್ವಿತೀಯ ಹಂತದ ಪ್ರಯೋಗದಲ್ಲಿದೆ ಎಂದು ಹೇಳಲಾಗುತ್ತಿದೆ. ಎರಡನೇಯದಾಗಿ ಝಡುಸ್ ಕ್ಯಾಡಿಲಾದ ಡಿಎನ್ಎ ಲಸಿಕೆ ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದ್ದು ಅದೀಗ ಎರಡನೇ ಹಂತದ ಪ್ರಯೋಗಕ್ಕೆ ಮುಂದಾಗಬೇಕಾಗಿದೆ. ಮೂರನೇಯದಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಅಭಿವೃದ್ಧಿ ಪಡಿಸಿರುವ ಲಸಿಕೆಯ ಮೇಲೆ ಭಾರತದ ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಎರಡು ಮತ್ತು ಮೂರನೇ ಹಂತದ ಪ್ರಯೋಗ ನಡೆಸುತ್ತಿದೆ.

ಈ ಪೈಕಿ ಭಾರತದ ಕೊವ್ಯಾಕ್ಸಿನ್ ಮತ್ತು ಆಕ್ಸ್‌ಫರ್ಡ್ ಯೂನಿವರ್ಸಿಟಿ ಲಸಿಕೆಗಳ ಪ್ರಯೋಗ ವರ್ಷಾಂತ್ಯಕ್ಕೆ ಮುಕ್ತಾಯವಾಗಲಿದೆ. ಮುಂದಿನ ವರ್ಷದ ಆರಂಭದಲ್ಲಿ ಝಡುಸ್ ಕ್ಯಾಡಿಲಾದ ಡಿಎನ್ಎ ಲಸಿಕೆ ಪ್ರಯೋಗ ಕೂಡ ಕೊನೆಗೊಳ್ಳಲಿದೆ. ಈಗಾಗಲೇ ಈ ಎರಡೂ ಸಂಸ್ಥೆಯ ಮೊದಲ ಹಂತದ ಪ್ರಯೋಗಗಳು ಯಶಸ್ವಿಯಾಗಿವೆ ಎನ್ನಲಾಗಿದೆ.

ಇದನ್ನೂ ಓದಿ:  ಡಿ.ಜೆ ಹಳ್ಳಿ ಗಲಭೆ ಪ್ರಕರಣ: ದುಷ್ಕರ್ಮಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ‌ - ಸಿಎಂ ಯಡಿಯೂರಪ್ಪ

ಈ ಮೂರು ಸಂಶೋಧನೆಗಳ ಬಗ್ಗೆ ಇಂದಿನ ಲಸಿಕೆ ಆಡಳಿತ ತಜ್ಞರ ಸಮಿತಿಯ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಅಲ್ಲದೆ ಹೊಸದಾಗಿ ವ್ಯಾಕ್ಸಿನ್ ಅಭಿವೃದ್ಧಿ ಪಡಿಸಲು ಅನುಮತಿ ‌ಕೊಡುವ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತದೆ. ಈಗಾಗಲೇ ದೇಶದ 17 ಕಡೆ ವ್ಯಾಕ್ಸಿನ್ ಪರೀಕ್ಷೆ ನಡೆಸಲು ಸಿದ್ದತೆ ನಡೆದಿದ್ದು ಅವುಗಳ ಅನುಮತಿ ನೀಡುವ ಬಗ್ಗೆ ಕೂಡ ಇಂದಿನ ಲಸಿಕೆ ಆಡಳಿತ ತಜ್ಞರ ಸಮಿತಿಯಲ್ಲಿ ನಿರ್ಧರಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಇದಲ್ಲದೆ ಭವಿಷ್ಯದಲ್ಲಿ ದೇಶದಲ್ಲಿ ಕೊರೊನಾ ವ್ಯಾಕ್ಸಿನ್ ಸಂಗ್ರಹಣೆ ಮಾಡುವುದು, ಅದನ್ನು ರಾಜ್ಯಗಳಿಗೆ ಕ್ರಮ ಬದ್ಧವಾಗಿ ಮತ್ತು ನ್ಯಾಯಯುತವಾಗಿ ಹಂಚಿಕೆ ಮಾಡುವುದು, ಲಸಿಕೆ ಉತ್ಪಾದನೆ ಸಂಸ್ಥೆಗಳು ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ರೂಪಿಸುವುದು ಮತ್ತು ಈಗ ರಷ್ಯಾ ಅಭಿವೃದ್ಧಿಪಡಿಸುತ್ತಿರುವ ಲಸಿಕೆಗಳನ್ನು ಆಮದು ಮಾಡಿಕೊಳ್ಳುವ ಬಗ್ಗೆ ಕೂಡ ಇಂದಿನ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಗೊತ್ತಾಗಿದೆ.
Published by: Rajesh Duggumane
First published: August 12, 2020, 10:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading