HOME » NEWS » Coronavirus-latest-news » COVID 19 VACCINATION REGISTRATION FOR ALL ADULTS TO BEGIN IN NEXT 48 HOURS ON COWIN PLATFORM KVD

Vaccination: ಮೇ 1ರಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ಹೇಗೆ ನೋಂದಾಯಿಸಬೇಕೆಂದು ತಿಳಿಯಿರಿ..

ದೇಶದಲ್ಲಿ ಈವರೆಗೆ 12.70 ಕೋಟಿ ಜನ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದರಲ್ಲಿ 99.96% ಜನರಿಗೆ ಸೋಂಕು ಬಂದಿಲ್ಲ. ಈ ಮೂಲಕ ಲಸಿಕೆಯ ಮಹತ್ವ ಅರಿತುಕೊಳ್ಳಬೇಕು.

news18-kannada
Updated:April 22, 2021, 3:40 PM IST
Vaccination: ಮೇ 1ರಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ಹೇಗೆ ನೋಂದಾಯಿಸಬೇಕೆಂದು ತಿಳಿಯಿರಿ..
ಕೊರೋನಾ ಲಸಿಕೆ.
  • Share this:
ಬೆಂಗಳೂರು: ದೇಶದಲ್ಲಿ ಕೊರೋನಾ ಸಂಕಷ್ಟ ಕರಾಳ ಹಂತ ತಲುಪಿ ಬಿಟ್ಟಿದೆ. ನಿತ್ಯ 3 ಲಕ್ಷಕ್ಕೂ ಹೆಚ್ಚು ಜನ ಕೊರೋನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ಸೋಂಕಿನಿಂದ ಬಚಾವ್​ ಆಗಲು ಲಸಿಕೆ ಅಭಿಯಾನವನ್ನು ಹೆಚ್ಚಿರುವ ಕೇಂದ್ರ ಸರ್ಕಾರ ಮೇ 1ರಿಂದ 18 ವರ್ಷ ಮೇಲ್ಪಟ್ಟವರೆಲ್ಲಾ ವ್ಯಾಕ್ಸಿನ್​ ಪಡೆಯಬಹುದು ಎಂದು ಘೋಷಿಸಿದೆ. ಮೇ 1ರಿಂದ ಲಸಿಕೆ ಪಡೆಯಬೇಕಾದಲ್ಲಿ ಏ.24 ಶನಿವಾರದಿಂದಲೇ ನೋಂದಾಯಿಸಿಕೊಳ್ಳಬೇಕು. ಕೊರೋನಾ ಲಸಿಕೆಗಾಗಿ ಕೋವಿನ್​ (COWIN) ಆ್ಯಪ್​ನಲ್ಲಿ ನೋಂದಣಿಗೆ ಅವಕಾಶ ಮಾಡಿಕೊಳ್ಳಲಾಗಿದೆ.

ಶನಿವಾರದಿಂದಲೇ ಲಸಿಕೆಗಾಗಿ ಕೋವಿನ್​ ಆ್ಯಪ್​ ಮೂಲಕ ನೋಂದಣಿ ಮಾಡಿಕೊಂಡು ಮೇ1ರಿಂದ ಲಸಿಕೆ ಪಡೆಯಬಹುದಾಗಿದೆ. ಹೊಸ ನಿಯಮದ ಪ್ರಕಾರ ರಾಜ್ಯ ಸರ್ಕಾರಗಳು ಹಾಗೂ ಖಾಸಗಿ ಆಸ್ಪತ್ರೆಗಳು ನೇರವಾಗಿ ಲಸಿಕೆ ಖರೀದಿಸಿ ಜನರಿಗೆ ನೀಡಬಹುದಾಗಿದೆ. ಈ ಬಗ್ಗೆ ಮಾತನಾಡಿದ ಲಸಿಕೆ ಸಮಿತಿ ಅಧ್ಯಕ್ಷ ಆರ್​.ಎಸ್​.ಶರ್ಮಾ, ಲಸಿಕೆಗಾಗಿ ಮೊದಲೇ ರಿಜಿಸ್ಟಾರ್​ ಮಾಡಿಕೊಂಡು ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ. ಇದರಿಂದ ಲಸಿಕಾ ಕೇಂದ್ರದಲ್ಲಿ ಕಾಯುವುದನ್ನು ತಪ್ಪಿಸಬಹುದು ಎಂದಿದ್ದಾರೆ.

ದೇಶವನ್ನು ಕೊರೋನಾ 2ನೇ ಅಲೆ ಜರ್ಜರಿತಗೊಳಿಸುತ್ತಿದೆ. ಲಸಿಕೆಯನ್ನು ಪಡೆಯುವ ಮೂಲಕ ಕೊರೋನಾ ವಿರುದ್ಧ ದೇಶ ಸೋಲುವುದನ್ನು ನಾವು ತಪ್ಪಿಸಬಹುದು. ಮೇ 1ರ ನಂತರ ಲಸಿಕಾ ಕೇಂದ್ರಗಳಲ್ಲಿ ಜನಸಂದಣಿ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಪೂರೈಕೆ ಮಾಡಲಾಗುತ್ತಿದೆ. ಲಸಿಕೆ ಉತ್ಪಾದಕ ಕಂಪನಿಗಳು ತಮ್ಮ ಶೇ.50ರಷ್ಟು ಲಸಿಕೆಯನ್ನು ನೇರವಾಗಿ ರಾಜ್ಯ ಸರ್ಕಾರಗಳಿಗೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಮಾರಬಹುದಾಗಿದೆ ಎಂದು ಶರ್ಮಾ ತಿಳಿಸಿದರು.

ಇದನ್ನು ಓದಿ: ನಿನ್ನೆಯಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದ ಶಾಸಕ ಜಮೀರ್​ಗೆ ಕೊರೋನಾ ಪಾಸಿಟಿವ್​!

ಇನ್ನು ಜನರು ಮುಂದೆ ಬಂದು ಲಸಿಕೆ ಪಡೆಯಬೇಕೆಂದು ಆರೋಗ್ಯ ಸಚಿವ ಕೆ.ಸುಧಾಕರ್​ ಮನವಿ ಮಾಡಿದ್ದಾರೆ.  ದೇಶದಲ್ಲಿ ಈವರೆಗೆ 12.70 ಕೋಟಿ ಜನ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದರಲ್ಲಿ 99.96% ಜನರಿಗೆ ಸೋಂಕು ಬಂದಿಲ್ಲ. ಈ ಮೂಲಕ ಲಸಿಕೆಯ ಮಹತ್ವ ಅರಿತುಕೊಳ್ಳಬೇಕು. ಒಂದು ವೇಳೆ ಲಸಿಕೆ ಪಡೆದವರಿಗೆ ಪಾಸಿಟಿವ್ ಬಂದ ಮಾತ್ರಕ್ಕೆ ಸಾವು ಸಂಭವಿಸೋದಿಲ್ಲ ಎಂದು ಸಚಿವ ಡಾ.ಸುಧಾಕರ್ ಭರವಸೆ ನೀಡಿದರು.

ಇನ್ನು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ ಸಂಖ್ಯೆಯಲ್ಲಿ ಪಾಸಿಟಿವ್​ ಪ್ರಕರಣಗಳು ದಾಖಲಾಗಿವೆ. ಒಂದೇ ದಿನ 3,14,835 ಮಂದಿಗೆ ಸೋಂಕು ತಗುಲಿದ್ದರೆ, ದೇಶಾದ್ಯಂತ 2,14 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಆಕ್ಸಿಜನ್​, ಬೆಡ್​ಗಳ ಕೊರತೆಯಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ ಎನ್ನಲಾಗ್ತಿದೆ.
Published by: Kavya V
First published: April 22, 2021, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories