HOME » NEWS » Coronavirus-latest-news » COVID 19 UPDATES CORONAVIRUS CAN GET FITTER USING GENETIC RECOMBINATION FINDS RESEARCH STG SCT

ಮುಂಬರುವ ದಿನಗಳಲ್ಲಿ ಇನ್ನಷ್ಟು ಬಲಿಷ್ಠವಾಗಲಿದೆ ಕೊರೊನಾ ರೂಪಾಂತರಿ ವೈರಸ್; ಸಂಶೋಧನೆಯಿಂದ ದೃಢ

ಕೊರೊನಾ ವೈರಸ್‌ಗಳು ಅನುವಂಶೀಯವಾಗಿ ಮರುಸಂಯೋಜನೆಗೆ ಒಳಪಟ್ಟು ಇನ್ನಷ್ಟು, ಮತ್ತಷ್ಟು ಬಲಿಷ್ಠ ವೈರಸ್‌ಗಳಾಗಿ ಹೊರಹೊಮ್ಮುತ್ತದೆ ಎನ್ನುವ ಆತಂಕಕಾರಿ ಅಂಶವನ್ನು ಅರೆಸೆಂಟ್ ಅಧ್ಯಯನ ಬಯಲು ಮಾಡಿದೆ.

news18-kannada
Updated:May 5, 2021, 11:09 AM IST
ಮುಂಬರುವ ದಿನಗಳಲ್ಲಿ ಇನ್ನಷ್ಟು ಬಲಿಷ್ಠವಾಗಲಿದೆ ಕೊರೊನಾ ರೂಪಾಂತರಿ ವೈರಸ್; ಸಂಶೋಧನೆಯಿಂದ ದೃಢ
ಪ್ರಾತಿನಿಧಿಕ ಚಿತ್ರ.
  • Share this:
ಕೊರೊನಾ ವೈರಸ್ 2019ರಿಂದ ಇಡೀ ವಿಶ್ವದಲ್ಲಿ ತನ್ನ ರುದ್ರ ನರ್ತನ ಮುಂದುವರೆಸಿಕೊಂಡು ಬಂದಿದೆ. ಭಾರತದಂತಹ ದೈತ್ಯ ದೇಶವನ್ನೇ ಅಲುಗಾಡಿಸಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಒಂದು ರೂಪದಲ್ಲಿದ್ದ ವೈರಸ್ ಈಗ ಎರಡು, ಮೂರು ಎನ್ನುತ್ತಾ ರೂಪಾಂತರಿ ರಾಕ್ಷಸನಾಗಿ ಅಟ್ಟಹಾಸ ಮೆರೆಯುತ್ತಿರುವ ಈ ಕೊರೊನಾ ವೈರಸ್ ಮುಂಬರುವ ದಿನಗಳಲ್ಲಿ ಮನುಕುಲವನ್ನೇ ನಾಶ ಮಾಡುತ್ತದೆಯೇ? ಇಂತಹದ್ದೊಂದು ಪ್ರಶ್ನೆ ಈಗ ಮೂಡಲು ಕಾರಣ ವಿಜ್ಞಾನಿಗಳ ಅದೊಂದು ಸಂಶೋಧನೆ! ಹೌದು! ಕೋವಿಡ್ 19 ಸಾಂಕ್ರಾಮಿಕ ರೋಗವು SARS-CoV-2 ಈ ವೈರಸ್‌ನ ಸಂಯೋಜನೆಯ ಮೂಲಕ ಮನುಷ್ಯನ ರೋಗನಿರೋಧಕ ಶಕ್ತಿಗೆ ಪ್ರಶ್ನೆಯಾಗಿ ನಿಂತಿದೆ. ನಿಮಗೆ ಗೊತ್ತೆ? ಈ ವೈರಸ್‌ಗಳು ಅನುವಂಶೀಯವಾಗಿ ಮರುಸಂಯೋಜನೆಗೆ ಒಳಪಟ್ಟು ಇನ್ನಷ್ಟು, ಮತ್ತಷ್ಟು ಬಲಿಷ್ಠ ವೈರಸ್‌ಗಳಾಗಿ ಹೊರಹೊಮ್ಮುತ್ತದೆ ಎನ್ನುವ ಆತಂಕಕಾರಿ ಅಂಶವನ್ನು ಅರೆಸೆಂಟ್ ಅಧ್ಯಯನ ಬಯಲು ಮಾಡಿದೆ.

ಕೊರೊನಾ ವೈರಸ್ ನಾವು ಎಣಿಸಿದಷ್ಟು ಸುಲಭವಲ್ಲ. ಇದು ಮುಂಬರುವ ದಿನಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸವಾಲೆಸೆಯುವಂತೆ ತಮ್ಮನ್ನು ಸಿದ್ಧ ಮಾಡಿಕೊಳ್ಳುತ್ತಿವೆ. ಇದರಲ್ಲಿರುವ ಅನುವಂಶಿಕ ವಸ್ತುಗಳು ಹೊಸ ಅನುವಂಶೀಯತೆಯನ್ನು ಉತ್ಪಾದಿಸಲು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತವೆ. ಇವುಗಳೇ ರೂಪಾಂತರಿ ವೈರಸ್‌ಗಳಾಗಿ ಬಂದು ನಿಲ್ಲುತ್ತವೆ.

ಇನ್ನು ಈ ಅಧ್ಯಯನದ ಪ್ರಕಾರ ಫೈಲೋಜೆನೆಟಿಕ್ ಟ್ರ್ಯಾಕಿಂಗ್ ಮೂಲಕ ವೈರಸ್‌ನ ರೂಪಾಂತರಗಳನ್ನು ಪರಿಣಾಮಕಾರಿಯಾಗಿ ಮತ್ತು ವೇಗವಾಗಿ ಪತ್ತೆಹಚ್ಚಲು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಈ ರೂಪಾಂತರಿ ವೈರಸ್‌ಗಳನ್ನು ಅತ್ಯಂತ ವೇಗವಾಗಿ ಪತ್ತೆ ಹಚ್ಚಬಹುದು. ಆ ಮೂಲಕ ರೂಪಾಂತರಿಗಳ ಮೇಲೆ ಲಸಿಕೆಗಳನ್ನು ಪರಿಣಾಮಕಾರಿಯಾಗಿ ಬಳಸಬಹುದು. ಈ ನಿಟ್ಟಿನಲ್ಲಿ ಲಸಿಕೆಗಳ ಆವಿಷ್ಕಾರ ಮತ್ತು ಲಸಿಕೆ ತಂತ್ರಗಳನ್ನು ಸುಲಭವಾಗಿ ನಿರ್ವಹಿಸಲು ರಾಷ್ಟ್ರಗಳಿಗೆ ಅನುಕೂಲವಾಗಲಿದೆ.

ಇದನ್ನೂ ಓದಿ: Cabinet Meeting: ಇಂದು ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ; ಲಾಕ್​ಡೌನ್ ಬಗ್ಗೆ ತೀರ್ಮಾನ ಸಾಧ್ಯತೆ

ಸಂಶೋಧನೆಯ ಪ್ರಕಾರ, ಈ ರೂಪಾಂತರಿ ವೈರಸ್ ಜೊತೆಗೆ ಆರ್‌ಎನ್‌ಎ ಆಧಾರಿತ ವೈರಸ್‌ಗಳ ವಿಕಾಸದ ಇತಿಹಾಸದಲ್ಲಿ ಈ ಸಂಯೋಜನೆ ಇದೆ. ಆದರೆ ಜೀವಶಾಸ್ತ್ರದ ಪ್ರೀಪ್ರಿಂಟ್ ಸರ್ವರ್ ಬಗ್ಗೆ ಇತರ ವಿಜ್ಞಾನಿಗಳು ಇನ್ನೂ ಪರಿಶೀಲಿಸಿಲ್ಲ ಎಂದು BioRxiನಲ್ಲಿ ಅಧ್ಯಯನ ಪ್ರಕಟವಾಗಿದೆ. ಆದ್ದರಿಂದ ಇದುವೇ ನಿರ್ಣಾಯಕ ಕಾರ್ಯತಂತ್ರವೆನ್ನಲು ಸಾಧ್ಯವಿಲ್ಲ. ಈ ಅಧ್ಯಯನವು ವೈರಸ್ ವ್ಯತ್ಯಾಸಗಳ ಫೈಲೋಜೆನೆಟಿಕ್ ಟ್ರ್ಯಾಕಿಂಗ್‌ನಲ್ಲಿ ನಮಗೆ ದಾರಿ ತೋರಿಸುತ್ತದೆ. ಮಾರ್ಚ್ 2021 ರಲ್ಲಿ ನೇಚರ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ವಿಜ್ಞಾನಿಗಳ ಗುಂಪು ಈ ರೀತಿ ಅಭಿಪ್ರಾಯ ಪಟ್ಟಿದೆ.

ಈ ಪ್ರಪಂಚದಾದ್ಯಂತ ಈಗಾಗಲೇ ನಾನಾ ರೀತಿಯ ರೂಪಾಂತರಿ ವೈರಸ್‌ಗಳು ಪತ್ತೆಯಾಗಿವೆ. ಅಲ್ಲದೇ ಫೆಬ್ರವರಿಯ ಮಾಧ್ಯಮ ವರದಿಗಳ ಪ್ರಕಾರ, ಭಾರತದಲ್ಲಿಯೇ 7600 ಕ್ಕೂ ಹೆಚ್ಚು ವ್ಯತ್ಯಾಸಗಳುಳ್ಳ 24000 ಕ್ಕೂ ಹೆಚ್ಚು ರೂಪಾಂತರಿ ವೈರಸ್‌ಗಳು ಪತ್ತೆಯಾಗಿವೆ. 2020 ರ ಜೂನ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಬುಲೆಟಿನ್‌ನಲ್ಲಿ ಪ್ರಕಟವಾದ ಲೇಖನದಲ್ಲಿ, ಫೆಬ್ರವರಿ 2020 ರ ವೇಳೆಗೆ ವಿಶ್ವದಾದ್ಯಂತ 65,000 ಕ್ಕೂ ಹೆಚ್ಚು ವೈರಸ್‌ಗಳು ಪತ್ತೆಯಾಗಿವೆ.
ಭಾರತದಲ್ಲಿ COVID-19 ಪ್ರಕರಣಗಳು ಹೆಚ್ಚುತ್ತಿದೆ. ದೇಶ ಆಮ್ಲಜನಕ ಮತ್ತು ವೈದ್ಯಕೀಯ ಸರಬರಾಜಿನ ಕೊರತೆಯಿಂದ ನಲುಗಿದೆ. ಭಾರತದ ವ್ಯಾಕ್ಸಿನೇಷನ್ ಡ್ರೈವ್ ಗೊಂದಲಮಯವಾಗಿದೆ ಎಂದು ತೋರುತ್ತಿದೆ. ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯರಿಗೆ ಲಸಿಕೆಗೆ ಚಾಲನೆ ನೀಡಲಾಗಿದ್ದರೂ ಕೇವಲ ಆರು ರಾಜ್ಯಗಳು ಮಾತ್ರ ಲಸಿಕೆ ನೀಡಲು ಸಾಧ್ಯವಾಗಿದೆ. ಏಕೆಂದರೆ ಲಸಿಕೆ ಕೊರತೆಯನ್ನು ಎದುರಿಸುತ್ತಿದೆ.
First published: May 5, 2021, 11:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories