• Home
  • »
  • News
  • »
  • coronavirus-latest-news
  • »
  • ಸಿಂಗಾಪುರದಲ್ಲಿ ಒಂದೇ ದಿನ 59 ಭಾರತೀಯರಿಗೆ ಕೊರೋನಾ ಸೋಂಕು

ಸಿಂಗಾಪುರದಲ್ಲಿ ಒಂದೇ ದಿನ 59 ಭಾರತೀಯರಿಗೆ ಕೊರೋನಾ ಸೋಂಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪಂಚತಾರಾ ಕ್ಯಾಸಿನೋ ರೆಸ್ಟೋರೆಂಟ್​, ಮೆಕ್​ಡಿ ಸೇರಿ ವಿವಿಧ ಭಾಗಗಳಲ್ಲಿ ಇವರು ಸುತ್ತಾಟ ನಡೆಸಿದ್ದರು. ಈ ವೇಳೆ ಕೊರೋನಾ ವೈರಸ್​ ಹರಡಿದೆ ಎಂದು ಸಿಂಗಾಪುರ ಸರ್ಕಾರ ಹೇಳಿದೆ.

  • Share this:

    ನವದೆಹಲಿ (ಏ.13): ಸಿಂಗಾಪುರದಲ್ಲಿ ಭಾನುವಾರ 233 ಹೊಸ ಪ್ರಕರಣ ದಾಖಲಾಗಿದ್ದು, ಈ ಪೈಕಿ 59 ಭಾರತೀಯರಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ಈ ಮೂಲಕ ಸಿಂಗಾಪುರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2,532ಕ್ಕೆ ಏರಿಕೆ ಆಗಿದೆ.

    233 ಸೋಂಕಿತರ ಪೈಕಿ 51 ಜನರು ಒಂದೇ ಕಡೆ ಸೇರಿದ್ದರು. ಹೀಗಾಗಿ ಇವರಲ್ಲಿ ಕೊರೋನಾ ವೈರಸ್​ ಕಾಣಿಸಿಕೊಂಡಿದೆ. ಇನ್ನು, 15 ಮಂದಿ ಕೊರೋನಾ ಸೋಂಕಿತರ ಜೊತೆ ನೇರ ಸಂಪರ್ಕ ಹೊಂದಿದ್ದರು. ಆದರೆ, ಉಳಿದ 167 ಮಂದಿ ಯಾರ ಜೊತೆ ಸಂಪರ್ಕದಲ್ಲಿದ್ದರು, ಅವರಿಗೆ ಕೊರೋನಾ ವೈರಸ್​ ಅಂಟಿದ್ದು ಹೇಗೆ ಎನ್ನವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

    ಪಂಚತಾರಾ ಕ್ಯಾಸಿನೋ ರೆಸ್ಟೋರೆಂಟ್​, ಮೆಕ್​ಡಿ ಸೇರಿ ವಿವಿಧ ಭಾಗಗಳಲ್ಲಿ ಇವರು ಸುತ್ತಾಟ ನಡೆಸಿದ್ದರು. ಈ ವೇಳೆ ಕೊರೋನಾ ವೈರಸ್​ ಹರಡಿದೆ ಎಂದು ಸಿಂಗಾಪುರ ಸರ್ಕಾರ ಹೇಳಿದೆ. ಸದ್ಯ, ಸಿಂಗಾಪುರದಲ್ಲಿ ಕೊರೋನಾ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ. ಆದಾಗ್ಯೂ, ಈ ವೈರಸ್​ ಕಾಡ್ಗಿಚ್ಚಿನಂತೆ ಹಬ್ಬುತ್ತಲೇ ಇದೆ. ಸದ್ಯ, ಉತ್ತಮ ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದ್ದು, ಹೀಗಾಗಿ ಸಾವಿನ ಸಂಖ್ಯೆ 8ಕ್ಕೆ ನಿಂತಿದೆ.

    ಇದನ್ನೂ ಓದಿ: ವಿಶ್ವಾದ್ಯಂತ 18 ಲಕ್ಷಕ್ಕೂ ಅಧಿಕ ಮಂದಿಗೆ ಕೊರೋನಾ; 1.14 ಲಕ್ಷ ಮಂದಿ ಸಾವು

    ಇನ್ನು, ವಿಶ್ವಾದ್ಯಂತ ಕೊರೋನಾ ಅಟ್ಟಹಾಸ ಮುಂದುವರಿದಿದೆ. ಇಡೀ ವಿಶ್ವದಲ್ಲಿ 18.5 ಲಕ್ಷ ಜನರಿಗೆ ಕೊರೋನಾ ಅಂಟಿದೆ. ಈ ಮಹಾಮಾರಿ ವೈರಸ್​ನಿಂದ 1.14 ಲಕ್ಷ ಮಂದಿ ಅಸುನೀಗಿದ್ದಾರೆ. ಹೀಗಾಗಿ ಕೊರೋನಾ ಅಟ್ಟಹಾಸ ಸದ್ಯದ ಮಟ್ಟಿಗಂತೂ ನಿಯಂತ್ರಣಕ್ಕೆ ಬರುವ ಲಕ್ಷಣ ಗೋಚರವಾಗುತ್ತಿಲ್ಲ.

    First published: