ರಾಜ್ಯದಲ್ಲಿ ಇಂದು 322 ಹೊಸ ಪ್ರಕರಣ ದಾಖಲು ; ಸೋಂಕಿತರ ಸಂಖ್ಯೆ 9,721ಕ್ಕೆ ಏರಿಕೆ

ಇವತ್ತಿನ 8 ಸಾವು ಸೇರಿ ಈವರೆಗೆ ಮೃತರ ಸಂಖ್ಯೆ 150ಕ್ಕೆ ಏರಿದೆ. ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.

news18-kannada
Updated:June 23, 2020, 7:12 PM IST
ರಾಜ್ಯದಲ್ಲಿ ಇಂದು 322 ಹೊಸ ಪ್ರಕರಣ ದಾಖಲು ; ಸೋಂಕಿತರ ಸಂಖ್ಯೆ 9,721ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜೂ.23): ರಾಜ್ಯದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 8 ಹೊಸ ಸಾವು ಮತ್ತು 322 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 107 ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಸಿಲಿಕಾನ್ ಸಿಟಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೇ 996ರ ಗಡಿ ದಾಟಿದೆ.  

ಇವತ್ತು ಬೆಳಕಿಗೆ ಬಂದ 322 ಸೇರಿ ರಾಜ್ಯದಲ್ಲಿ ಈವರೆಗೆ ದಾಖಲಾಗಿರುವ ಕೊರೋನಾ ಪ್ರಕರಣಗಳ ಸಂಖ್ಯೆ ಈಗ 9,721ಕ್ಕೆ ಏರಿದೆ. ಇವತ್ತಿನ 8 ಸಾವು ಸೇರಿ ಈವರೆಗೆ ಮೃತರ ಸಂಖ್ಯೆ 150ಕ್ಕೆ ಏರಿದೆ. ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಇದೇ ಅವಧಿಯಲ್ಲಿ ಇವತ್ತು ಗುಣಮುಖಗೊಂಡವರ ಸಂಖ್ಯೆ 297 ಇದೆ. ಈವರೆಗೆ 6004 ಮಂದಿ ಡಿಸ್​ಚಾರ್ಜ್ ಆಗಿದ್ಧಾರೆ. ಇದರೊಂದಿಗೆ ರಾಜ್ಯದಲ್ಲಿ ಈಗ 3563 ಸಕ್ರಿಯ ಪ್ರಕರಣಗಳಿವೆ. ರಾಜ್ಯಾದ್ಯಂತ 120 ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : ಕೊರೋನಾದ ಕಮ್ಯೂನಿಟಿ ಸ್ಪ್ರೆಡ್ ನಿಜ; ಹರ್ಡ್ ಇಮ್ಯೂನಿಟಿಯೂ ನಿಜ: ಡಾ. ಮಂಜುನಾಥ್ ಮಾಹಿತಿ

ರಾಜ್ಯದಲ್ಲಿ ಸದ್ಯ  21,429 ಪ್ರಾಥಮಿಕ ಸಂಪರ್ಕ ಹೊಂದಿದವರು ಇದ್ದಾರೆ. ಇದುವರೆಗಿನ ಅಂಕಿ ಅಂಶಗಳ ಪ್ರಕಾರ ಶೇಕಡಾ 10 ರಷ್ಟು ಪ್ರಾಥಮಿಕ ಸಂಪರ್ಕಿತರಲ್ಲಿ ಸೋಂಕು ಕಂಡು ಬಂದಿದೆ. ಈ‌ ನಿಟ್ಟಿನಲ್ಲಿ ಪ್ರಾಥಮಿಕ ಸಂಪರ್ಕದ ಪಟ್ಟಿಯನ್ನು ಕಟ್ಟುನಿಟ್ಟಾಗಿ ತಯಾರಿಸಲಾಗುತ್ತಿದೆ.

ಇಂದು ಪತ್ತೆಯಾದ  ಜಿಲ್ಲಾವಾರು ಪ್ರಕರಣಗಳು :ಬೆಂಗಳೂರು – 107, ಬಳ್ಳಾರಿ – 53, ಕಲಬುರಗಿ – 06, ಯಾದಗಿರಿ – 13, ಉಡುಪಿ – 11, ಬೀದರ್ – 22, ಧಾರವಾಡ – 04, ದಾವಣಗೆರೆ – 02, ದಕ್ಷಿಣ ಕನ್ನಡ – 08, ಹಾಸನ – 07, ಮಂಡ್ಯ – 02, ಗದಗ – 09, ಚಿಕ್ಕಬಳ್ಳಾಪುರ – 05, ಶಿವಮೊಗ್ಗ – 05, ಉತ್ತರ ಕನ್ನಡ – 03, ಮೈಸೂರು – 21, ಕೊಡಗು – 01 ಕೋಲಾರ – 08, ಹಾವೇರಿ – 02, ತುಮಕೂರು – 04, ಕೊಪ್ಪಳ – 04, ವಿಜಯಪುರ – 16, ಬೆಳಗಾವಿ – 02, ಚಾಮರಾಜನಗರ – 04, ರಾಯಚೂರು – 03

 
First published: June 23, 2020, 6:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading