ದಕ್ಷಿಣ ಭಾರತದ ಕೇರಳ ರಾಜ್ಯವು ಕೋವಿಡ್ ಪ್ರಕರಣಗಳಲ್ಲಿ ಅತಿ ಹೆಚ್ಚು ಸಂಖ್ಯೆಯನ್ನು ದಾಖಲಿಸುತ್ತಿದ್ದು ದೇಶದ ಅರ್ಧದಷ್ಟನ್ನು ಕೇರಳ ದಾಖಲಿಸುತ್ತಿದೆ ಎಂಬುದು ವರದಿಯಿಂದ ತಿಳಿದುಬಂದಿದೆ. ಎರಡನೇ ಅಲೆ ಹೆಚ್ಚಿನ ರಾಜ್ಯಗಳಲ್ಲಿ ಕ್ಷೀಣಿಸುತ್ತಿದ್ದರೂ ಕೇರಳದಲ್ಲಿ ಮಾತ್ರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ, ಇದಕ್ಕೆ ಕಾರಣವೇನು ಎಂಬುದನ್ನು ಬಿಬಿಸಿಯ ಸೌತಿಕ ಬಿಸ್ವಾಸ್ ಹಾಗೂ ವಿಕಾಸ್ ಪಾಂಡೆ ವರದಿಯೊಂದನ್ನು ನೀಡಿದ್ದಾರೆ. ಕೇರಳದಲ್ಲಿ ಮೊದಲು ಕೊರೋನಾ ಕೇಸ್ ಪತ್ತೆಯಾಗಿದ್ದು ಜನವರಿ 2020ರಲ್ಲಿ ಚೀನಾದ ವುಹಾನ್ನಿಂದ ಮರಳಿದ್ದ ವೈದ್ಯಕೀಯ ವಿದ್ಯಾರ್ಥಿಯಿಂದ ಸೋಂಕು ತೀವ್ರಗತಿಯಲ್ಲಿ ಹರಡಲಾರಂಭಿಸಿತು. ಕೆಲವೇ ದಿನಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿತು ಹಾಗೂ ರಾಜ್ಯವನ್ನು ಹಾಟ್ಸ್ಪಾಟ್ ಆಗಿ ಗುರುತಿಸಲಾಯಿತು. ಮಾರ್ಚ್ ತಿಂಗಳಿನಲ್ಲಿ ಹೆಚ್ಚು ಕಡಿಮೆ ಎಲ್ಲಾ ರಾಜ್ಯಗಳು ಕೋವಿಡ್ ಪ್ರಕರಣಗಳಲ್ಲಿ ಏರಿಕೆಯನ್ನು ಕಂಡವು.
ಪ್ರಕರಣಗಳ ಪತ್ತೆ, ಪರೀಕ್ಷೆಗಳ ಏರಿಕೆ, ಐಸೋಲೇಶನ್ ಮೊದಲಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೇರಳ ಸೋಂಕಿನ ಇಳಿಕೆಯಲ್ಲೂ ಸ್ಥಾನ ಪಡೆದುಕೊಂಡಿತು. ಕೇರಳ ಸೋಂಕು ಇಳಿಕೆಯಲ್ಲಿ ಬೇರೆ ರಾಜ್ಯಗಳಿಗೆ ಮಾದರಿ ಎನಿಸಿತು ಹಾಗೂ ಇತರ ಕೆಲವು ರಾಜ್ಯಗಳು ಕೇರಳದ ಮಾದರಿಯನ್ನೇ ಅನುಸರಿಸಿ ಕೋವಿಡ್ ಕೇಸ್ಗಳಲ್ಲಿ ಇಳಿಮುಖವನ್ನು ಕಂಡವು.
ಈ ಬೇಸಿಗೆಯಲ್ಲಿ ಕೋವಿಡ್ನ ಎರಡನೇ ಅಲೆ ತೀವ್ರವಾಗಿ ದಾಳಿ ಮಾಡಲಾರಂಭಿಸಿತು. ದೇಶದ ಎಲ್ಲಾ ಕಡೆಯು ಎರಡನೇ ಅಲೆ ಹೆಚ್ಚಿನ ಸಾವು ನೋವುಗಳನ್ನು ಉಂಟುಮಾಡಲು ಆರಂಭಿಸಿತು. ಅದರೆ ಭಾರತದ ಒಟ್ಟು ಜನಸಂಖ್ಯೆಯ 3%ದಲ್ಲಿ ಅರ್ಧದಷ್ಟು ಪ್ರಕರಣಗಳನ್ನು ಕೇರಳ ರಾಜ್ಯವೊಂದೇ ದಾಖಲಿಸುತ್ತಿದೆ ಎಂಬುದು ಚಿಂತನೀಯ ವಿಷಯವಾಗಿದೆ. ವೈರಸ್ ಹೆಚ್ಚಿನ ಪುನರುತ್ಪಾದನೆಯನ್ನು ಕಾಣುತ್ತಿದ್ದು ಸೋಂಕಿತ ವ್ಯಕ್ತಿಯಿಂದ ಮತ್ತೊಬ್ಬರಿಗೆ ಕ್ಷಿಪ್ರವಾಗಿ ಹರಡುತ್ತಿದೆ.
ಲಾಕ್ಡೌನ್ ಹಾಗೂ ಕೋವಿಡ್ ನಿಯಂತ್ರಣಕ್ಕೆ ಅಗತ್ಯವಾಗಿರುವ ಕೆಲವೊಂದಿಷ್ಟು ಮಾಗರ್ಸೂಚಿಗಳನ್ನು ಹೇರಲಾಯಿತು. ಕೇರಳ ಇದುವರೆಗೆ 3.4 ಮಿಲಿಯನ್ ಸೋಂಕಿತರನ್ನು ಹೊಂದಿದ್ದರೆ ಮರಣ ಸಂಖ್ಯೆ 16,837 ಆಗಿದೆ. ಹೆಚ್ಚಿನ ಟೆಸ್ಟಿಂಗ್ಗಳನ್ನು ನಡೆಸುತ್ತಿರುವುದರಿಂದ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂಬುದು ರಾಜ್ಯದ ಅಭಿಪ್ರಾಯವಾಗಿದೆ.
30 ಬೆಸಸಂಖ್ಯೆಗಳಲ್ಲೊಂದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿರುವ ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯವು ಎರಡು ಸೋಂಕುಗಳಲ್ಲಿ ಒಂದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿದೆ. “ಕೇರಳ ಹೆಚ್ಚಿನ ಸಂಖ್ಯೆಯಲ್ಲಿ ಟೆಸ್ಟಿಂಗ್ ನಡೆಸುತ್ತಿದೆ ಹಾಗೂ ಸ್ಮಾರ್ಟ್ ವಿಧಾನದ ಮೂಲಕ ಟೆಸ್ಟಿಂಗ್ ಕ್ರಿಯೆಯನ್ನು ನಡೆಸುತ್ತಿದೆ. ನೈಜ ಪ್ರಕರಣಗಳನ್ನು ಕಂಡುಹಿಡಿಯಲು ಸಂಪರ್ಕಗಳನ್ನು ಪತ್ತೆಹಚ್ಚುವ ಮೂಲಕ, ಪರೀಕ್ಷೆಯೂ ಉತ್ತಮ ಗುರಿಯಾಗಿದೆ" ಎಂದು ಭಾರತದ ಉನ್ನತ ವೈರಾಲಜಿಸ್ಟ್ಗಳಲ್ಲಿ ಒಬ್ಬರಾದ ಡಾ. ಗಗನ್ ದೀಪ್ ಕಾಂಗ್ ಹೇಳುತ್ತಾರೆ. ಇತ್ತೀಚಿನ ಪ್ರತಿಕಾಯ ಪರೀಕ್ಷೆಗಳ ಸಮೀಕ್ಷೆಯು ಕೇರಳದಲ್ಲಿ ಆರು ವರ್ಷಕ್ಕಿಂತ ಮೇಲ್ಪಟ್ಟ 43% ಜನರು ಮಾತ್ರ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದ್ದು, ದೇಶಾದ್ಯಂತ ಈ ಸಂಖ್ಯೆ 68% ಆಗಿದೆ.
ಭಾರತದ ಇತರ ಭಾಗಗಳಿಗೆ ಹೋಲಿಸಿದರೆ ಕೇರಳವು ಭಿನ್ನವಾಗಿ ಕೊರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಶ್ಲಾಘನೀಯ ಕೆಲಸ ಮಾಡಿದೆ ಎಂಬುದು ಅನೇಕರ ವಾದವಾಗಿದೆ. ಇನ್ನು ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದ್ದರೂ ಅಲ್ಲಿನ ಆಸ್ಪತ್ರೆಗಳು ಕೋವಿಡ್ ರೋಗಿಗಳಿಂದ ಭರ್ತಿಯಾಗಿಲ್ಲ. ಕೇರಳದ ಸಾವಿನ ಪ್ರಮಾಣವು ಭಾರತದ ರಾಷ್ಟ್ರೀಯ ಅಂದಾಜಿನ ಮೂರನೇ ಒಂದು ಭಾಗವಾಗಿದೆ. ಆಸ್ಪತ್ರೆಯ ಅರ್ಧದಷ್ಟು ಕೋವಿಡ್ – 19 ಬೆಡ್ಗಳು ಖಾಲಿಯಾಗಿವೆ ಮತ್ತು ಕೋವಿಡ್ – 19 ಪ್ರಕರಣಗಳ ಮರಣ ಪ್ರಮಾಣವೂ ರಾಜ್ಯದಲ್ಲಿ ಕಡಿಮೆ ಸಂಖ್ಯೆಯಲ್ಲಿ ವರದಿಯಾಗುತ್ತಿದೆ ಎಂಬುದು ಇತ್ತೀಚಿನ ಅಧ್ಯಯನಗಳಿಂದ ತಿಳಿದುಬಂದಿದೆ.
ಕೇರಳವು ತನ್ನ ಜನಸಂಖ್ಯೆಯ 20%ಗೆ ಲಸಿಕೆಯನ್ನು ಪೂರ್ಣಗೊಳಿಸಿದ್ದು ಇನ್ನು 45 ವರ್ಷಕ್ಕಿಂತ ಮೇಲ್ಪಟ್ಟ 70% ಜನರು ಒಳಗೊಂಡಂತೆ ಲಸಿಕೆಯ ಒಂದನೇ ಡೋಸ್ ಅನ್ನು ಪೂರ್ಣಗೊಳಿಸಿದೆ. ಆದ್ದರಿಂದ ರಾಜ್ಯವು ವ್ಯಾಪಕವಾಗಿ ಪರೀಕ್ಷಿಸುತ್ತಿರುವುದು ಕಂಡುಬರುತ್ತದೆ, ಪ್ರಕರಣಗಳನ್ನು ಪ್ರಾಮಾಣಿಕವಾಗಿ ವರದಿ ಮಾಡುವುದು, ತ್ವರಿತವಾಗಿ ಲಸಿಕೆ ಹಾಕುವುದು ಮತ್ತು ಆಸ್ಪತ್ರೆಗಳು ತುಂಬಿಹೋಗದಂತೆ ನೋಡಿಕೊಳ್ಳುವುದು. ಮುಂದಿನ ದಿನಗಳಲ್ಲಿ ಮೂರನೇ ಅಲೆಯು ಎರಡನೇ ಅಲೆಯಷ್ಟು ರಾಜ್ಯದಲ್ಲಿ ತೀವ್ರ ಹಾನಿಯನ್ನುಂಟು ಮಾಡುವುದಿಲ್ಲವೆಂದು ಆರೋಗ್ಯ ಅರ್ಥಶಾಸ್ತ್ರಜ್ಞ ಡಾ ರಿಜೋ ಎಂ ಜಾನ್ ಅಭಿಪ್ರಾಯವಾಗಿದೆ.
ಪ್ರೊಫೆಸರ್ ಮೆನನ್ ಹೇಳುವಂತೆ ದೀರ್ಘಕಾಲದ ಸಾಂಕ್ರಾಮಿಕವು ವೈರಸ್ನ ಹೆಚ್ಚಿನ ರೂಪಾಂತರಗಳ ಸಾಧ್ಯತೆಯನ್ನು ಸೂಚಿಸುತ್ತದೆ, ಇದು ಹೊಸ ಮತ್ತು ಅಪಾಯಕಾರಿ ರೂಪಾಂತರಗಳ ಹೊರಹೊಮ್ಮುವಿಕೆಗೆ ಕಾರಣವಾಗುತ್ತದೆ, ಇದು ಲಸಿಕೆ ಹಾಕದ ಮತ್ತು ಸೋಂಕಿತವಲ್ಲದ ಜನರಿಗೆ ರೋಗವನ್ನು ಹರಡುತ್ತದೆ. "ಇದು ಎಚ್ಚರಿಕೆಯ ಸಮಯ. ಕೇರಳವು ಮುಖ್ಯವಾಗಿ ಕೇಸ್ ಸಂಖ್ಯೆಗಳನ್ನು ಇಳಿಕೆ ಮಾಡುವಲ್ಲಿ ಗಮನ ಹರಿಸಬೇಕಾಗಿದೆ ಎಂದವರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ