Covid-19 Test Message: ಕೋವಿಡ್-19 ಟೆಸ್ಟ್ ಮಾಡಿಸದಿದ್ರೂ ಮೊಬೈಲ್‌ಗೆ ಬರುತ್ತಿವೆ ಮೆಸೇಜ್‍!

ಕೋವಿಡ್-19 ಟೆಸ್ಟ್ ಮಾಡಿಸದಿದ್ರೂ ಜನರಿಗೆ ಟೆಸ್ಟ್ ಮಾಡಿದ್ದೀರಿ ಎಂದು ಮೆಸೇಜ್‍ಗಳು ಬರುತ್ತಿವೆ. ಆರೋಗ್ಯ ಇಲಾಖೆಯಿಂದ ಬರುತ್ತಿರುವ ಸಂದೇಶ ಮಾತ್ರ ಜನರ ನಿದ್ದೆಗೆಡಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೊನಾ (Corona) ಈ ಹೆಸರು ಕೇಳಿದ್ರೆನೇ ಒಮ್ಮೆ ಬೆಚ್ಚಿ ಬೀಳುವಂತಾಗುತ್ತೆ. ಕೋವಿಡ್-19  (Covid-19) ಈಡೀ ವಿಶ್ವವನ್ನೇ ಇನ್ನಿಲ್ಲದಂತೆ ಕಾಡಿಬಿಟ್ಟಿದೆ. ಆ ಸಾವು ನೋವು ಇನ್ನು ಕಣ್ಮುಂದೆ ಬಂದು ಹೋಗುತ್ತೆ. ಕೋವಿಡ್‍ನಿಂದ ಲಾಕ್‍ಡೌನ್ (Lockdown) ಆಗಿದ್ದನ್ನು ಯಾರು ಮರೆಯುವಂತಿಲ್ಲ. ಲಾಕ್‍ಡೌನ್‍ನಿಂದ ಎಷ್ಟೋ ಕುಟುಂಬಗಳು (Families) ಬೀದಿಗೆ ಬಂದವು. ಸಾಕಪ್ಪ ಈ ಕೊರೊನಾ, ಲಾಕ್‍ಡೌನ್ ಸಹವಾಸ ಎಂದು. ಅದ್ರಲ್ಲೂ ಬೆಂಗಳೂರನ್ನು ಬಿಟ್ಟು ಎಷ್ಟು ಮಂದಿ ತಮ್ಮ ಊರುಗಳಿಗೆ ವಲಸೆ ಹೋದ್ರು. ಸದ್ಯ ಬೆಂಗಳೂರಿನಲ್ಲಿ ಕೊರೊನಾ ಕೇಸ್‍ಗಳು ನಿಯಂತ್ರಣದಲ್ಲಿದ್ದು, ಜನ ನೆಮ್ಮದಿಯಿಂದ ಇದ್ದಾರೆ. ಆದ್ರೆ ಆರೋಗ್ಯ ಇಲಾಖೆಯಿಂದ ಬರುತ್ತಿರುವ ಸಂದೇಶ (Message) ಮಾತ್ರ ಜನರ ನಿದ್ದೆಗೆಡಿಸಿದೆ. ಕೋವಿಡ್-೧೯ ಟೆಸ್ಟ್ ಮಾಡಿಸದಿದ್ರೂ ಜನರಿಗೆ ಟೆಸ್ಟ್ ಮಾಡಿದ್ದೀರಿ ಎಂದು ಮೆಸೇಜ್‍ಗಳು ಬರುತ್ತಿವೆ. ಇದರಿಂದ ಜನ ಕಂಗಾಲಾಗಿ ನಾವ್ ಯಾವಾಗ ಕೋವಿಡ್ ಟೆಸ್ಟ್ ಮಾಡಿಸಿದ್ವಿ ಎಂದು ತಲೆ ಕಡೆಸಿಕೊಳ್ಳುತ್ತಿದ್ದಾರೆ.

ಏನೆಂದು ಸಂದೇಶ ಬರುತ್ತಿದೆ?
ಬೆಂಗಳೂರಿನಲ್ಲಿ ನಿಧಾನಗತಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಾ ಇವೆ. ಈ ಸಂರ‍್ಭದಲ್ಲಿ ಜನರಿಗೆ ಆರೋಗ್ಯ ಇಲಾಖೆಯಿಂದ ಈ ರೀತಿ ಸಂದೇಶ ಬರುತ್ತಿದೆ. ನಿಮ್ಮ ಸ್ಯಾಂಪಲ್ಸ್‍ಗಳನ್ನು ತೆಗೆದುಕೊಂಡಿದ್ದು, ವರದಿ ಬರುವವರೆಗೂ ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿ ಇರುವಂತೆ ಮೆಸೇಜ್ ಬರುತ್ತಿದೆ. ಇದರಿಂದ ಜನ ಭಯಗೊಂಡಿದ್ದಾರೆ. ಇದೇನಪ್ಪಾ ಟೆಸ್ಟ್ ಮಾಡಿಸದಿದ್ರೂ ಮಾಡಿಸಿದ್ದೀರಿ ಎಂದು ಮೆಸೇಜ್ ಬರುತ್ತಿದೆ ಎಂದು ಚಿಂತೆಗೊಳಗಾಗಿದ್ದಾರೆ.

ಪ್ರಥಮ, 2ನೇ ಅಲೆಯಲ್ಲೂ ಇದೇ ರೀತಿ ಸಂದೇಶ!
ಈ ರೀತಿಯ ಮೆಸೇಜ್ ಬರುತ್ತಿರುವುದು ಇದೇ ಮೊದಲೇನಲ್ಲ. ಇದೇ ರೀತಿಯ ಮೆಸೇಜ್‍ಗಳು ಮೊದಲನೇ, ಎರಡನೇ ಅಲೆಯಲ್ಲೂ ಬರುತ್ತಿದ್ದವು. ಜನರು ಪರೀಕ್ಷೆ ಮಾಡಿಸಿಕೊಳ್ಳದಿದ್ದರೂ ಮಾಡಿಸಿಕೊಂಡಿದ್ದೀರಿ. ನಿಮ್ಮ ಸ್ಯಾಂಪಲ್ ತೆಗೆದುಕೊಂಡಿದ್ದೇವೆ. ರಿಪರ‍್ಟ್ ಬರೋವರೆಗೂ ಕ್ವಾರಂಟೈನ್‍ನಲ್ಲಿ ಇರಿ ಎಂದು ಸಂದೇಶಗಳು ಬರುತ್ತಿದ್ವು.

ಇದನ್ನೂ ಓದಿ:  Covid-19: ಪೋಷಕರೇ ಗಮನಿಸಿ, ಸೋಂಕಿತ ಮಕ್ಕಳಲ್ಲಿ ಕೋವಿಡ್ ಎರಡು ತಿಂಗಳ ಕಾಲ ಇರಬಹುದಂತೆ

ಭಯಗೊಂಡು ಪರೀಕ್ಷೆ ಮಾಡಿಸಿಕೊಳ್ಳುತ್ತಿರುವ ಜನ!
ಕೋವಿಡ್-19 ಎಂಬ ಭೂತ ಜನರ ತಲೆಯಿಂದ ಇನ್ನೂ ಹೋಗಿಲ್ಲ. ಎಲ್ಲಿ ಕೊರೊನಾ ಬರುತ್ತೋ ಎಂದು ಜನ ಭಯದಿಂದಲೇ ಬದುಕುತ್ತಿದ್ದಾರೆ. ಬಂದ್ರೆ ಏನಪ್ಪಾ ಮಾಡೋದು ಎಂದು ತಲೆ ಕೆಡಿಸಿಕೊಳ್ಳುತ್ತಾರೆ. ಹೀಗಿರುವಾಗಲೇ ಆರೋಗ್ಯ ಇಲಾಖೆಯ ಈ ರೀತಿಯ ಸಂದೇಶಗಳಿಂದ ಜನ ತಲೆ ಕೆಡಿಸಿಕೊಂಡು ಮತ್ತೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಾರೆ.

ಲಸಿಕೆ ಪಡೆಯದಿದ್ರೂ ಮೆಸೇಜ್!
ಟೆಸ್ಟ್ ಮಾಡಿಸಿರುವುದಾಗಿ ಮಾತ್ರ ಸಂದೇಶಗಳು ಬರುತ್ತಿಲ್ಲ. ಬದಲಿಗೆ ನೀವು ಲಸಿಕೆ ಹಾಕಿಸಿಕೊಂಡಿದ್ದೀರಿ ಎಂಬ ಮೆಸೇಜ್‍ಗಳು ಬರುತ್ತಿವೆ. ಅದು ಕೂಡ ಲಸಿಕೆ ಹಾಕಿಸಿ ಕೊಳ್ಳದವರಿಗೆ. ನೀವು 2ನೇ ಡೋಸ್ ಪಡೆದಿದ್ದೀರಿ. ನೀವು ಬೂಸ್ಟರ್ ಡೋಸ್ ಪಡೆದಿದ್ದೀರಿ ಎಂಬ ಸಂದೇಶಗಳು ರ‍್ತಿವೆ. ಬೂಸ್ಟರ್ ಡೋಸ್ ಹಾಕಿಸಿಕೊಳ್ಳಲು ಇಷ್ಟ ಇರೋರಿಗೆ ಈ ರೀತಿ ಸಂದೇಶ ಬಂದ್ರೆ ಏನ್ ಗತಿ. ನಾವು ಮುಂದೆ ಬೂಸ್ಟರ್ ಡೋಸ್ ಹಾಕಿಸಿಕೊಳ್ಳೋದು ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಸ್ಯಾಂಪಲ್ಸ್ ಸಂಗ್ರಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಲಸಿಕೆ ಪಡೆಯದಿದ್ದರೂ ಪಡೆದಿರುವುದಾಗಿ ಸಂದೇಶ ಬಂದಿರುವ ನಾಗರಿಕರು 1533 ಅಥವಾ 104 ಕರೆ ಮಾಡುವಂತೆ ಬಿಬಿಎಂಪಿ ವಿಶೇಷ ಆಯುಕ್ತ ಡಾ.ವಿ. ತ್ರಿಲೋಕಚಂದ್ರರಿಂದ ಮಾಹಿತಿ.

ಇದನ್ನೂ ಓದಿ: Covovax: 7-11 ವರ್ಷದ ಮಕ್ಕಳಲ್ಲಿ ಕೋವೊವಾಕ್ಸ್ ಲಸಿಕೆ ತುರ್ತು ಬಳಕೆಗಾಗಿ DCGI ಅನುಮತಿ

ಕೋವಿಡ್-19 ಟೆಸ್ಟ್ ಮಾಡಿಸದಿದ್ರೂ ಜನರಿಗೆ ಟೆಸ್ಟ್ ಮಾಡಿದ್ದೀರಿ ಎಂದು ಮೆಸೇಜ್‍ಗಳು ಬರುತ್ತಿವೆ. ಇದರಿಂದ ಜನ ಕಂಗಾಲಾಗಿದ್ದಾರೆ. ಪದೇ ಪದೇ ಈ ರೀತಿ ಆಗುತ್ತಿದೆ. ಸುಳ್ಳು ಸುಳ್ಳು ಸಂದೇಶಗಳು ಬರುತ್ತಿವೆ. ಆರೋಗ್ಯ ಇಲಾಖೆ ಮತ್ತೊಮ್ಮೆ ಈ ರೀತಿಯ ಎಡವಟ್ಟು ಆಗದಂತೆ ನೋಡಿಕಂಡ್ರೆ ಒಳ್ಳೆಯದು. ಆಗ ಜನ ಸ್ವಲ್ಪ ನೆಮ್ಮದಿಯಾಗಿರುತ್ತಾರೆ.
Published by:Savitha Savitha
First published: