ಇಂದು ಕೋವಿಡ್​​-19 ಟಾಸ್ಕ್​​ ಫೋರ್ಸ್​​​ ಮಹತ್ವದ ಸಭೆ: ಲಾಕ್​ಡೌನ್​​​​ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ

ಟಾಸ್ಕ್​​ ಫೋರ್ಸ್​ ಸಭೆಯಲ್ಲಿ ಡಿಸಿಎಂ ಡಾ. ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಬಿ. ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ ಭಾಸ್ಕರ್ ಭಾಗಿಯಾಗಲಿದ್ದಾರೆ.

ಸಚಿವ ಬಿ. ಶ್ರೀರಾಮುಲು

ಸಚಿವ ಬಿ. ಶ್ರೀರಾಮುಲು

  • Share this:
ಬೆಂಗಳೂರು: ಇಂದು ಕೊರೋನಾ ಟಾಸ್ ಫೋರ್ಸ್‌ನ ಮಹತ್ವದ ಸಭೆ ನಡೆಯಲಿದೆ. ವಿಧಾನಸೌಧದಲ್ಲಿ ಸಂಜೆ‌ 4 ಗಂಟೆಗೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಶ್ರೀರಾಮುಲು ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಪ್ರಮುಖವಾಗಿ ಲಾಕ್​​ಡೌನ್ ಮುಂದುವರಿಕೆ ಮಾಡಬೇಕಾ ಅಥವಾ ಬೇಡವಾ ಎಂಬುದರ ಬಗ್ಗೆ ತೀರ್ಮಾನ ವಾಗಲಿದೆ.

ಈಗಾಗಲೇ ಬೆಂಗಳೂರಿನಲ್ಲಿ ಜಾರಿಯಲ್ಲಿರುವ ಲಾಕ್​​ಡೌನ್ ಜುಲೈ 22ಕ್ಕೆ ಮುಕ್ತಾಯ ವಾಗಲಿದೆ. ಹೀಗಾಗಿ ಅದನ್ನು ಮುಂದುವರಿಸಬೇಕಾ ಬೇಡವಾ ಎಂಬುದನ್ನು ಈ ಸಭೆಯಲ್ಲಿ ಬಗ್ಗೆ ಚರ್ಚಿಸಿ ಅದನ್ನು ಸಿಎಂಗೆ ತಿಳಿಸಲಿದ್ದಾರೆ. ನಂತರ ಸಿಎಂ ಯಡಿಯೂರಪ್ಪ ಲಾಕ್​ಡೌನ್​​ ಬಗ್ಗೆ ಅಂತಿಮ ತೀರ್ಮಾನ ಸಿಎಂ ತೆಗೆದುಕೊಳ್ಳಲಿದ್ದಾರೆ.

ಆದರೆ ಸದ್ಯಕ್ಕಂತೂ ಲಾಕ್​​ಡೌನ್ ಮುಂದುವರೆಸಲು ಸಿಎಂ ಯಡಿಯೂರಪ್ಪ ಯಾವುದೇ ಆಲೋಚನೆ ಮಾಡಿಲ್ಲ. ತಜ್ಞರು ಮಾತ್ರ ಲಾಕ್​​ಡೌನ್ ಮುಂದುವರೆಸಿದ್ರೆ ಒಳ್ಳೆಯದು ಎಂದು ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ತಜ್ಞರ ಸಲಹೆ ಹಾಗೂ ನಾಳೀನ ಟಾಸ್ಕ್ ಫೋರ್ಸ್ ಕೊಟ್ಟ ರಿಪೋರ್ಟ್ ಬಗ್ಗೆ ಸಮಾಲೋಚನೆ ನಡೆಸಿ ಲಾಕ್​​ಡೌನ್ ಮುಂದುವರಿಕೆ ಕುರಿತು ಸಿಎಂ ತೀರ್ಮಾನ ಮಾಡಲಿದ್ದಾರೆ.

ಇನ್ನು, ಲಾಕ್​ಡೌನ್​​ ಜತೆಗೆ ಕೊರೋನಾ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಸೇರಿದಂತೆ ಹಲವು ಕ್ರಮಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಮೀಸಲಿಡುವುದು, ವೆಂಟಿಲೇಟರ್ ಸೇರಿದಂತೆ ಹಲವು ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ.

ಟಾಸ್ಕ್​​ ಫೋರ್ಸ್​ ಸಭೆಯಲ್ಲಿ ಡಿಸಿಎಂ ಡಾ. ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಬಿ. ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ ಭಾಸ್ಕರ್ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ‘ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ರಾಜೀನಾಮೆ ನೀಡಲಿ’ - ಕಾಂಗ್ರೆಸ್‌ ಒತ್ತಾಯ

ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ ಕೇಳಿಬರುತ್ತಿದ್ದು, ಈ ಬಗ್ಗೆಯೂ ಚರ್ಚೆ ನಡೆಯಲಿದೆ.
Published by:Ganesh Nachikethu
First published: