ಕೊರೋನಾ ಎಫೆಕ್ಟ್​: ಶೇ. 60ರಷ್ಟು ಟಿಕೆಟ್ ಕ್ಯಾನ್ಸಲ್​​ ಮಾಡಿದ​​ ರೈಲ್ವೆ ಇಲಾಖೆ

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 151 ಆಗಿದೆ. ಈ ಪೈಕಿ 25 ವಿದೇಶಿಗರು ಇದ್ಧಾರೆ. ಇದೀಗ ರಾಜ್ಯದಲ್ಲಿ ಮತ್ತೋರ್ವ ವ್ಯಕ್ತಿಗೆ ಮಾರಕು ಸೋಂಕು ತಗುಲಿದೆ. ಇದರೊಂದಿಗೆ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ(ಮಾ.18): ದೇಶಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಕಾರಣ ರೈಲು ನಿಲ್ದಾಣಗಳಲ್ಲಿ ಜನ ಸಂದಣಿ ಕಡಿಮೆ ಮಾಡುವುದಕ್ಕಾಗಿ ರೈಲ್ವೆ ಇಲಾಖೆ 10 ರೂ. ಇದ್ದ ಪ್ಲಾಟ್​​ಫಾರ್ಮ್​​ ಟಿಕೆಟ್​ ದರ 50 ರೂ.ಗೆ ಹೆಚ್ಚಳ ಮಾಡಿತು. ಈ ಬೆನ್ನಲ್ಲೀಗ ಇನ್ನೊಂದು ಹೆಜ್ಜೆ ಮುಂದೋಗಿ ರೈಲ್ವೆ ಇಲಾಖೆಯೂ ಕೊರೋನಾ ತಡೆಗೆ ಶೇ.60ಕ್ಕೂ ಹೆಚ್ಚು ರೈಲು ಟಿಕೆಟ್​​ ರದ್ದುಗೊಳಿಸಿದೆ. ಈ ಕುರಿತಂತೆ ಸಂಸದೀಯ ಸಭೆಗೆ ರೈಲ್ವೆ ಬೋರ್ಡ್ ಮಾಹಿತಿಯೂ ನೀಡಿದೆ.

  ಇತ್ತೀಚೆಗೆ ಪಶ್ಚಿಮ ರೈಲ್ವೆ, ಮುಂಬೈ, ವಡೋದ್ರಾ, ಅಹಮದಾಬಾದ್, ರತ್ನಂ, ರಾಜ್‌ಕೋಟ್, ಭಾವನಗರ ರೈಲ್ವೆ ವಲಯದ ಸುಮಾರು 250 ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಜತೆಗೆ ಬರುವವರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಇಲ್ಲಿಯೂ ಕೊರೋನಾ ಸೋಂಕು ಹರಡುವ ಕಾರಣದಿಂದಲೇ ನಿಲ್ದಾಣಕ್ಕೆ ಬರುವ ಜನರಿಗೆ ನೀಡಲಾಗುವ ಪ್ಲಾಟ್ ಫಾರಂ ಟಿಕೆಟ್ ದರದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿತ್ತು.

  ದೇಶಾದ್ಯಂತ ಆಯ್ದ 250 ರೈಲ್ವೆ ನಿಲ್ದಾಣಗಳಲ್ಲಿ ನೂತನ ಪ್ಲಾಟ್​ಫಾರ್ಮ್ ಟಿಕೆಟ್ ದರ ಜಾರಿಗೆ ಬಂದಿದೆ. ಆಯಾ ಝೋನಲ್ ರೈಲ್ವೇಸ್ ಈ ನಿರ್ಧಾರ ಕೈಗೊಂಡಿವೆ. ಪ್ಲಾಟ್​ಫಾರ್ಮ್ ಟಿಕೆಟ್ ದರ ಏರಿಕೆ ಕಂಡ ನಿಲ್ದಾಣಗಳಲ್ಲಿ ಬೆಂಗಳೂರು, ಮೈಸೂರು ಮೊದಲಾದವೂ ಸೇರಿವೆ ರೈಲ್ವೆ ನಿಲ್ದಾಣಕ್ಕೆ ಪ್ರಯಾಣಿಕರಷ್ಟೇ ಅಲ್ಲದೆ, ಅವರ ಜೊತೆ ಟ್ರೈನ್ ಹತ್ತಿಸಲು ನಿಕಟವರ್ತಿಗಳೂ ಆಗಮಿಸುವುದಿದೆ. ಇದರಿಂದ ರೈಲ್ವೆ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚೇ ಇರುತ್ತದೆ. ಗುಂಪುಗಳಿರುವೆಡೆ ಕೊರೋನಾ ವೈರಸ್ ಸೋಂಕು ಹರಡುವುದು ಸುಲಭವಾದ್ದರಿಂದ ರೈಲ್ವೆ ಇಲಾಖೆ ಈ ಕ್ರಮ ಕೈಗೊಂಡಿರುವ ಸಾಧ್ಯತೆ ಇದೆ.

  ಇದನ್ನೂ ಓದಿ: ಮತ್ತೊಬ್ಬರಲ್ಲಿ ಕೊರೋನಾ ವೈರಸ್ ಪತ್ತೆ; ರಾಜ್ಯದಲ್ಲಿ ಒಟ್ಟು 14ಕ್ಕೆ ಏರಿದ ಸೋಂಕಿತರ ಸಂಖ್ಯೆ

  ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 151 ಆಗಿದೆ. ಈ ಪೈಕಿ 25 ವಿದೇಶಿಗರು ಇದ್ಧಾರೆ. ಇದೀಗ ರಾಜ್ಯದಲ್ಲಿ ಮತ್ತೋರ್ವ ವ್ಯಕ್ತಿಗೆ ಮಾರಕು ಸೋಂಕು ತಗುಲಿದೆ. ಇದರೊಂದಿಗೆ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

  !function(e,i,n,s){var t="InfogramEmbeds",d=e.getElementsByTagName("script")[0];if(window[t]&&window[t].initialized)window[t].process&&window[t].process();else if(!e.getElementById(n)){var o=e.createElement("script");o.async=1,o.id=n,o.src="https://e.infogram.com/js/dist/embed-loader-min.js",d.parentNode.insertBefore(o,d)}}(document,0,"infogram-async");

   
  Loading...

   

  First published: