Covid-19 Prevention: ಮಾಸ್ಕ್​​ ಧರಿಸಿ ಜೀವ ಉಳಿಸಿ; ಕೊರೋನಾ ಜಾಗೃತಿ ಸಾರಲು ವಿಶೇಷ ಡೂಡಲ್​ ನಿರ್ಮಿಸಿದ ಗೂಗಲ್​

Covid-19 prevention, Google Doodle: ಕೊರೋನಾ ಕಾಲಘಟ್ಟದಲ್ಲಿ ಎಲ್ಲರೂ ಮಾಸ್ಕ್​​, ಸ್ಯಾನಿಟೈಸರ್​ ಅನ್ನು ಕಡ್ಡಾಯವಾಗಿ ಬಳಸುತ್ತಿದ್ದಾರೆ. ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದಾರೆ. ಅದರಂತೆ ಗೂಗಲ್​ ಕೂಡ ‘ಮಾಸ್ಕ್​​ ಧರಿಸಿ ಜೀವ ಉಳಿಸಿ’ ಎಂಬ ವಿಶೇಷ ಟ್ಯಾಗ್​ಲೈನ್​ನಲ್ಲಿ ಡೂಡಲ್ ಅನ್ನು​ ವಿನ್ಯಾಸಗೊಳಿಸಿದೆ. ಅದರ ಮೂಲಕ ಕೊರೋನಾ ಜಾಗೃತಿಯನ್ನು ಮೂಡಿಸಿದೆ. ಗೂಗಲ್​ 5 ಅಕ್ಷರಗಳಿಗೆ ಮಾಸ್ಕ್​​ ಧರಿಸಿ ವಿನ್ಯಾಸ ಮಾಡಿದೆ. ಜೊತೆಗೆ ಒಂದೊಂದು ಅಕ್ಷರವನ್ನು ದೂರ ದೂರ ಇರಿಸಿ ಮೂರು ಅಡಿ ಅಂತರವನ್ನು ಕಾಯ್ದುಕೊಳ್ಳಿ ಎಂಬ ಸಂದೇಶವನ್ನು ಸಾರಿದೆ.

ಗೂಗಲ್​ ಡೂಡಲ್

ಗೂಗಲ್​ ಡೂಡಲ್

 • Share this:
  Covid-19 Prevention, Google Doodle: ಜಗತ್ತಿನಾದ್ಯಂತ ಮಹಾಮಾರಿ ಕೊರೋನಾ ತಾಂಡವವಾಡುತ್ತಿದೆ. ಆಯಾ ದೇಶಗಳ ಸರ್ಕಾರಗಳು ಕೊರೋನಾವನ್ನು ದೂರ ಅಟ್ಟುವಲ್ಲಿ ಶ್ರಮಿಸುತ್ತಿದೆ. ಸಾರ್ವಜನಿಕರಲ್ಲಿ ಮುಂಜಾಗೃತ ಕ್ರಮವನ್ನು ಅನುಸರಿಸಲು ಹೇಳಿ ಕೊರೋನಾವನ್ನು ಹಿಮ್ಮೆಟ್ಟುವ ಪ್ರಯತ್ನ ಮಾಡುತ್ತಿದೆ. ಇದೀಗ ಗೂಗಲ್ ತನ್ನ ಸರ್ಚ್​​​​​ ಇಂಜಿನ್​ನಲ್ಲಿ​​ ಕೊರೋನಾ ಸೋಂಕಿನ ಕುರಿತಾಗಿ ಜಾಗೃತಿ ಮೂಡಿಸುವ ವಿಶೇಷ ಡೂಡಲ್​ ಅನ್ನು ವಿನ್ಯಾಸ ಮಾಡಿದೆ.

  ಕೊರೋನಾ ಕಾಲಘಟ್ಟದಲ್ಲಿ ಎಲ್ಲರೂ ಮಾಸ್ಕ್​​, ಸ್ಯಾನಿಟೈಸರ್​ ಅನ್ನು ಕಡ್ಡಾಯವಾಗಿ ಬಳಸುತ್ತಿದ್ದಾರೆ. ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದಾರೆ. ಅದರಂತೆ ಗೂಗಲ್​ ಕೂಡ ‘ಮಾಸ್ಕ್​​ ಧರಿಸಿ ಜೀವ ಉಳಿಸಿ’ ಎಂಬ ವಿಶೇಷ ಟ್ಯಾಗ್​ಲೈನ್​ನಲ್ಲಿ ಡೂಡಲ್ ಅನ್ನು​ ವಿನ್ಯಾಸಗೊಳಿಸಿದೆ. ಅದರ ಮೂಲಕ ಕೊರೋನಾ ಜಾಗೃತಿಯನ್ನು ಮೂಡಿಸಿದೆ. ಗೂಗಲ್​ 5 ಅಕ್ಷರಗಳಿಗೆ ಮಾಸ್ಕ್​​ ಧರಿಸಿ ವಿನ್ಯಾಸ ಮಾಡಿದೆ. ಜೊತೆಗೆ ಒಂದೊಂದು ಅಕ್ಷರವನ್ನು ದೂರ ದೂರ ಇರಿಸಿ ಮೂರು ಅಡಿ ಅಂತರವನ್ನು ಕಾಯ್ದುಕೊಳ್ಳಿ ಎಂಬ ಸಂದೇಶವನ್ನು ಸಾರಿದೆ.

  ಕೊರೋನಾ ಪ್ರಾರಂಭವಾಗಿನಿಂದ ಗೂಗಲ್​ ಹಲವು ಮುಂಜಾಗೃತ ಕ್ರಮಗಳನ್ನು ಜನರಲ್ಲಿ ಮೂಡಿಸಲು ವಿಶೇಷ ಡೂಡಲ್​ಗಳ ರಚನೆ ಮಾಡಿ ಪ್ರಕಟಿಸಿತ್ತು. ಇತ್ತೀಚೆಗೆ ‘ಸ್ಟೇ ಆ್ಯಂಡ್​ ಪ್ಲೇ ಅಟ್​​ ಹೋಮ್​’ ಎಂಬ ಟ್ಯಾಗ್​ಲೈನ್​ ಅಡಿಯಲ್ಲಿ ಕೋಡಿಂಗ್ ಗೇಮ್​ ಅನ್ನು ಪರಿಚಯಿಸಿತ್ತು. ಅದರಂತೆ ಕೊರೋನಾ ವಿರುದ್ಧ ಹಗಲು ರಾತ್ರಿ ದುಡಿಯುತ್ತಿರುವ ವೈದ್ಯರು, ನರ್ಸ್, ಪೊಲೀಸರಿಗೆ ಧನ್ಯವಾದ ಸಮರ್ಪಿಸಲು ವಿಶೇಷ ಡೂಡಲ್​ ವಿನ್ಯಾಸ ಮಾಡಿತ್ತು. ಇದೀಗ ಕೊರೋನಾ ಜಾಗೃತಿ ಮೂಡಿಸಲು ‘ಮಾಸ್ಕ್​ ಧರಿಸಿ ಜೀವ ಉಳಿಸಿ’ ಎಂಬ ಸಂದೇಶ ಸಾರುತ್ತಿದೆ.
  Published by:Harshith AS
  First published: