HOME » NEWS » Coronavirus-latest-news » COVID 19 POSITIVITY RATE LOWEST IN A MONTH BUT INDIA CANT AFFORD LAXITY SAYS GOVT MAK

CoronaVirus: ಕೋವಿಡ್​ ಪ್ರಕರಣಗಳ ಸಂಖ್ಯೆ ಕ್ರಮೇಣ ಇಳಿಮುಖವಾಗಿದೆ, ಆದರೂ ನಿರ್ಲಕ್ಷ್ಯತೆ ಸಾಧ್ಯವಿಲ್ಲ; ಕೇಂದ್ರ ಸರ್ಕಾರ

ದೇಶದಲ್ಲಿ ಸಕ್ರಿಯ ಪ್ರಕರಣಗಳಲ್ಲಿ ನಿರಂತರ ಇಳಿಕೆ ಕಂಡುಬಂದಿದೆ. ಚೇತರಿಕೆ ಪ್ರಮಾಣ ಶೇ.86.7 ರಷ್ಟಿದೆ. 21 ರಾಜ್ಯಗಳು ದೈನಂದಿನ ಕೋವಿಡ್ -19 ಪ್ರಕರಣಗಳಿಗಿಂತ ಹೆಚ್ಚಿನ ಚೇತರಿಕೆ ವರದಿಗಳು ಕಂಡು ಬರುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ.

news18-kannada
Updated:May 20, 2021, 6:41 PM IST
CoronaVirus: ಕೋವಿಡ್​ ಪ್ರಕರಣಗಳ ಸಂಖ್ಯೆ ಕ್ರಮೇಣ ಇಳಿಮುಖವಾಗಿದೆ, ಆದರೂ ನಿರ್ಲಕ್ಷ್ಯತೆ ಸಾಧ್ಯವಿಲ್ಲ; ಕೇಂದ್ರ ಸರ್ಕಾರ
ಪ್ರಾತಿನಿಧಿಕ ಚಿತ್ರ
  • Share this:
ನವ ದೆಹಲಿ (ಮೇ 20); ದೇಶದಲ್ಲಿ ಕೋವಿಡ್ -19 ಪ್ರಕರಣಗಳ ಸಕಾರಾತ್ಮಕ ಪ್ರಮಾಣವು ಶೇ.13.31 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಇದು ಒಂದು ತಿಂಗಳಲ್ಲಿ ದಾಖಲಾದ ಅತ್ಯಂತ ಕಡಿಮೆ ಪ್ರಕರಣವಾಗಿದೆ. ಆದಾಗ್ಯೂ, ತಮಿಳುನಾಡು, ಮೇಘಾಲಯ, ತ್ರಿಪುರ, ಮಣಿಪುರ, ನಾಗಾಲ್ಯಾಂಡ್, ಸಿಕ್ಕಿಂ, ಮತ್ತು ಮಿಜೋರಾಂನಂತಹ ಏಳು ರಾಜ್ಯಗಳಲ್ಲಿ ಕೊರೋನಾ ವೈರಸ್ ಪ್ರಕರಣಗಳ ಹೆಚ್ಚುತ್ತಲೇ ಇದೆ. ಹೀಗಾಗಿ ಭಾರತ ಸರ್ಕಾರ ಒಂದು ದಿನವೂ ಸಹ ಇನ್ನು ನಿರ್ಲಕ್ಷ್ಯವಾಗಿರಲು ಸಾಧ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಇಂದು ತಿಳಿಸಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್, "ದೇಶದಲ್ಲಿ ಸಕ್ರಿಯ ಪ್ರಕರಣಗಳಲ್ಲಿ ನಿರಂತರ ಇಳಿಕೆ ಕಂಡುಬಂದಿದೆ. ಚೇತರಿಕೆ ಪ್ರಮಾಣ ಶೇ.86.7 ರಷ್ಟಿದೆ. 21 ರಾಜ್ಯಗಳು ದೈನಂದಿನ ಕೋವಿಡ್ -19 ಪ್ರಕರಣಗಳಿಗಿಂತ ಹೆಚ್ಚಿನ ಚೇತರಿಕೆ ವರದಿಗಳು ಕಂಡು ಬರುತ್ತಿವೆ. ನಾವು ಕಳೆದ 13 ದಿನಗಳಿಂದ ಈ ಕುಸಿತವನ್ನು ನೇರವಾಗಿ ನೋಡಿದ್ದೇವೆ. ಸಾವಿನ ಮಾಹಿತಿಯೂ ಈಗ ಕಡಿಮೆಯಾಗುತ್ತಿದೆ. ದೇಶದ ಎಂಟು ರಾಜ್ಯಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ, ಒಂಬತ್ತು ರಾಜ್ಯಗಳಲ್ಲಿ 50,000 ರಿಂದ 1 ಲಕ್ಷ ಸಕ್ರಿಯ ಪ್ರಕರಣಗಳಿವೆ ಮತ್ತು 19 ರಾಜ್ಯಗಳು 50,000 ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳನ್ನು ಹೊಂದಿವೆ. ಈ ಪೈಕಿ ತಮಿಳುನಾಡು ಆತಂಕಕ್ಕೆ ಕಾರಣವಾಗಿದೆ" ಎಂದು ಅವರು ತಿಳಿಸಿದ್ದಾರೆ.

ಲಾಕ್​ಡೌನ್ ಬಗ್ಗೆಯೂ ಗಮನ ಸೆಳೆದ ಲಾವ್ ಅಗರ್ವಾಲ್, "ಸೋಂಕಿನ ಹರಡುವಿಕೆಯನ್ನು ತಡೆಯಲು ಕಟ್ಟುನಿಟ್ಟಾದ ಪ್ರೋಟೋಕಾಲ್‌ಗಳು ಪ್ರಮುಖವಾಗಿವೆ. ಫೆಬ್ರವರಿ ಮಧ್ಯದಿಂದ ಭಾರತವು ಸಾಪ್ತಾಹಿಕ ಪರೀಕ್ಷೆಗಳಲ್ಲಿ ಸ್ಥಿರವಾದ ಮೇಲ್ಮುಖ ಪ್ರವೃತ್ತಿಯನ್ನು ಕಂಡಿದೆ, ಕಳೆದ 12 ವಾರಗಳಲ್ಲಿ ಸರಾಸರಿ ದೈನಂದಿನ ಪರೀಕ್ಷೆಗಳು 2.3 ಪಟ್ಟು ಹೆಚ್ಚಾಗಿದೆ. 10 ವಾರಗಳ ವರೆಗೆ ಕೇಸ್ ಸಕಾರಾತ್ಮಕತೆಯಲ್ಲಿ ಸ್ಥಿರವಾದ ಹೆಚ್ಚಳದ ನಂತರ, ಕಳೆದ ಎರಡು ವಾರಗಳಿಂದ ಕೇಸ್ ಸಕಾರಾತ್ಮಕತೆಯ ಕುಸಿತವು ವರದಿಯಾಗಿದೆ.

ಶೇ.13.31 ರಷ್ಟು ಒಂದು ತಿಂಗಳಲ್ಲಿ ದಾಖಲಾದ ಅತಿ ಕಡಿಮೆ ಪ್ರಕರಣವಾಗಿದೆ.  ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ಗುಜರಾತ್, ಛತ್ತೀಸ್‌ಗಢ, ಬಿಹಾರ, ಮಧ್ಯಪ್ರದೇಶ, ದೆಹಲಿ ಮತ್ತು ಜಾರ್ಖಂಡ್ ಸೇರಿದಂತೆ 10 ರಾಜ್ಯಗಳಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ. ಆದರೆ ನಾವು ಇನ್ನೂ ಒಂದು ದಿನದ ಸಡಿಲತೆಯನ್ನು ಸಹ ಭರಿಸಲಾಗುವುದಿಲ್ಲ.

ಇದನ್ನೂ ಓದಿ: Viral Video; ವಿವಾಹ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಂದ ಲಾಕ್​ಡೌನ್ ಉಲ್ಲಂಘನೆ; ಪೊಲೀಸರು ನೀಡಿದ ಶಿಕ್ಷೆ ಏನು ಗೊತ್ತಾ?

ಕೋವಿಡ್ -19 ಪ್ರಕರಣಗಳಲ್ಲಿ ಏಳು ರಾಜ್ಯಗಳಲ್ಲಿ ಸಂಖ್ಯೆ ಏರುತ್ತಿದೆ. ತಮಿಳುನಾಡು, ಮೇಘಾಲಯ, ತ್ರಿಪುರ, ಮಣಿಪುರ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಪಾಸಿಟಿವ್ ಪ್ರಕರಣಗಳನ್ನು ನಿಯಂತ್ರಿಸಲು ಲಾಕ್​ಡೌನ್ ಅಗತ್ಯವಾಗಿದೆ" ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Mamata Banerjee: ಪ್ರಧಾನಿ ಮೋದಿ ಕೋವಿಡ್​ ಸಭೆಯಲ್ಲಿ ಸಿಎಂಗಳೇನು ಗೊಂಬೆಗಳೇ?; ಕೇಂದ್ರದ ವಿರುದ್ದ ಮಮತಾ ಬ್ಯಾನರ್ಜಿ ಕಿಡಿದೇಶದ ಗ್ರಾಮೀಣ ಭಾಗಗಳಲ್ಲಿ ಕೊರೊನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಮಾತನಾಡಿದ ಅವರು, "ಒಂದು ಅಧ್ಯಯನದಂತೆ ದೇಶದಲ್ಲಿ ಶೇ.50 ರಷ್ಟು ಜನರು ಫೇಸ್‌ ಮಾಸ್ಕ್ ಧರಿಸತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳಲು ಇದೂ ಒಂದು ಕಾರಣ. ಹೀಗಾಗಿ ಶೀಘ್ರದಲ್ಲಿ ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ ವ್ಯವಸ್ಥೆಯನ್ನು ಉತ್ತಮಗೊಳಿಸುವ ಅಗತ್ಯ ಇದೆ" ಎಂದು ಅವರು ತಿಳಿಸಿದ್ದಾರೆ.
Youtube Video

ಈ ನಡುವೆ ಇಂದು ಒಂದೇ ದಿನದಲ್ಲಿ ಭಾರತದಲ್ಲಿ 2,76,110 ಹೊಸ ಕೋವಿಡ್ -19 ಸೋಂಕುಗಳ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 2,57,72,440 ಕ್ಕೆ ಏರಿಕೆಯಾಗಿದೆ. ನಾಲ್ಕು ದಿನಗಳ ನಂತರ ದೈನಂದಿನ ಸಾವುಗಳ ಸಂಖ್ಯೆ 4,000 ಕ್ಕಿಂತ ಕಡಿಮೆಯಾಗಿದೆ. ಸಾವಿನ ಸಂಖ್ಯೆಯೂ 2,87,122 ಕ್ಕೆ ಏರಿದೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
Published by: MAshok Kumar
First published: May 20, 2021, 6:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories