HOME » NEWS » Coronavirus-latest-news » COVID 19 PATIENT HAS RECOVERED THEY SHOULD CHANGE THEIR TOOTHBRUSH SESR

ಸೋಂಕಿನಿಂದ ಗುಣಮುಖರಾದವರು ಟೂತ್​ಬ್ರಶ್​​ ಬದಲಿಸುವುದು ಅವಶ್ಯ; ಯಾಕೆ ಗೊತ್ತಾ?

ಕೋವಿಡ್​ನಿಂದ ಗುಣಮುಖಗೊಂಡ ವ್ಯಕ್ತಿಯು ಮೊದಲು ಅಗತ್ಯವಾಗಿ ತಮ್ಮ ಬ್ರಷ್​ ಅನ್ನು ಬದಲಾಯಿಸಬೇಕು

news18-kannada
Updated:May 7, 2021, 6:22 PM IST
ಸೋಂಕಿನಿಂದ ಗುಣಮುಖರಾದವರು ಟೂತ್​ಬ್ರಶ್​​ ಬದಲಿಸುವುದು ಅವಶ್ಯ; ಯಾಕೆ ಗೊತ್ತಾ?
ಸಾಂದರ್ಭಿಕ ಚಿತ್ರ
  • Share this:
ಕೋವಿಡ್​ ಸೋಂಕು ಅಪಾಯಕಾರಿ ಪ್ರಮಾಣದಲ್ಲಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿಯೂ ಅನೇಕ ಜನರು ಕೊರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಜಯಿಸಿರುವುದು ಇದೆ. ಸೋಂಕಿಗೆ ಚೇತರಿಕೆ ಕಂಡವರು ಮತ್ತೊಮ್ಮೆ ಕೋವಿಡ್​ಗೆ ತುತ್ತಾಗುತ್ತಿರುವುದು ಕೂಡ ಬಂದಿದೆ. ಈ ಹಿನ್ನಲೆ ಅಗತ್ಯ ಕ್ರಮಗಳನ್ನು ವಹಿಸುವುದು ಅಗತ್ಯ. ಇನ್ನು ಸೋಂಕಿನಿಂದ ಗುಣಮುಖರಾದವರು ಮತ್ತೆ ತಮ್ಮ ದೈನಂದಿನ ಜೀವನಕ್ಕೆ ಮರಳುವಾಗ ಹಲವು ಮಾರ್ಪಡುಗಳನ್ನು ಮಾಡಿಕೊಳ್ಳಬೇಕು. ಇದರಲ್ಲಿ ಒಂದು ಅವರು ಹಲ್ಲು ಉಜ್ಜಲು ಬಳಸುವ ಬ್ರಷ್​ ಬದಲಾಯಿಸುವುದಾಗಿ ಎನ್ನುತ್ತಾರೆ ದಂತವೈದ್ಯರು. ಅರೆ, ಹಲ್ಲುಜ್ಜವ ಬ್ರಶ್​​ಗೂ ಇದಕ್ಕೂ ಏನು ಸಂಬಂಧ ಎನ್ನುವುದಾದರೆ ಇಲ್ಲಿದೆ ನೋಡಿ ವಿವರಣೆ...

ದಂತ ವೈದ್ಯರ ಪ್ರಕಾರ ಕೋವಿಡ್​ನಿಂದ ಗುಣಮುಖಗೊಂಡ ವ್ಯಕ್ತಿಯು ಮೊದಲು ಅಗತ್ಯವಾಗಿ ತಮ್ಮ ಬ್ರಶ್​​ ಅನ್ನು ಬದಲಾಯಿಸಬೇಕು ಎಂಬುದನ್ನು ಒತ್ತಿಹೇಳುತ್ತಾರೆ. ಇದಕ್ಕೆ ಕಾರಣ ಹಲ್ಲುಜ್ಜುವ ಬ್ರಶ್​​ಗಳು ಕೂಡ ಮತ್ತೇ ಸೋಂಕನ್ನು ಹರಡುವ ಸಾಧ್ಯತೆ ಇದೆ. ಅಲ್ಲದೇ ಮನೆಯ ಇತರ ಸದಸ್ಯರು ಇದರಿಂದ ಸೋಂಕಿಗೆ ತುತ್ತಾಗುವ ಸಂಭವ ಹೆಚ್ಚು, ಈ ಹಿನ್ನಲೆ ಸೋಂಕಿತರು ಬ್ರಶ್​ ಬದಲಾಯಿಸುವುದು ಅಗತ್ಯವಾಗಿದೆ.

ಮನೆ ಅಥವಾ ಸ್ನೇಹಿತರ ವಲಯದಲ್ಲಿ ಒಟ್ಟಿಗೆ ವಾಸಿಸುತ್ತಿರುವವರು ತಮ್ಮ ಬ್ರಶ್​ ​ಗಳನ್ನು ಬದಲಾಯಿಸುವುದು ಅಗತ್ಯ, ಇದರ ಜೊತೆ ಟಂಗ್​ ಕ್ಲೀನರ್​ಗಳನ್ನು ಬದಲಾಯಿಸಬೇಕು. ಕಾರಣ ಇವು ವೈರಸ್​ಗೆ ಆಶ್ರಯ ನೀಡುವ ತಾಣಗಳಾಗಿದೆ. ಈ ಹಿನ್ನಲೆ ಇವುಗಳನ್ನು ಬದಲಾಯಿಸುವುದು ಉತ್ತಮ ಎನ್ನುತ್ತಾರೆ ದೆಹಲಿಯ ಲೇಡಿ ಹಾರ್ಡಿಂಗ್​ ವೈದ್ಯಕೀಯ ಕಾಲೇಜಿನ ಎಚ್​ಒಡಿ ಡಾ. ಪ್ರವೀಶ್​​ ಮೆಹ್ರಾ.

ಇದನ್ನು ಓದಿ: ಮೂರಲ್ಲ, ಐದಲ್ಲ, ಏಕಕಾಲಕ್ಕೆ 9 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ ಈಕೆ

ಸಾಮಾನ್ಯ ಜ್ವರದಿಂದ ಬಳಲಿದ ರೋಗಿಗಳಿಗೂ ನಾವು ಅದನ್ನೇ ಸೂಚಿಸುತ್ತಿದ್ದೇವು. ಈಗ ಕೋವಿಡ್​ 19 ರೋಗಿಗಳಿಗೂ ಇದನ್ನು ಹೇಳುತ್ತಿದ್ದೇವೆ. ರೋಗಿಗಳು ಮಾತ್ರವಲ್ಲದೇ ಅವರ ಸಂಪರ್ಕಕ್ಕೆ ಒಳಗಾದವರು ಈ ನಿಯಮ ಪಾಲಿಸುವುದು ಒಳಿತು, ರೋಗಿ ಪರೀಕ್ಷೆಗೊಳಪಟ್ಟು 20 ದಿನಗಳ ಬಳಿಕ ಬ್ರಷ್​, ಟಂಗ್​ ಕ್ಲಿನರ್​ ಬದಲಾಯಿಸುವುದು ಅವಶ್ಯ. ಬ್ರಶ್​ ​ಗಳ ಅಡಗಿರುವ ವೈರಸ್​ಗಳು ಶ್ವಾಸೇಂದ್ರಿಯ ಪ್ರದೇಶದ ಸೋಂಕಿಗೆ ಕಾರಣವಾಗುತ್ತದೆ ಎನ್ನುತ್ತಾರೆ

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವೈರಸ್​, ಸೋಂಕಿತನೊಬ್ಬನು ಕೆಮ್ಮಿದಾಗ, ಸೀನಿದಾಗ, ಕೂಗಿದಾಗ, ಮಾತನಾಡುವಾಗ ಆತನ ಬಾಯಿಂದ ಹೊರ ಬರುತ್ತದೆ. ಸೋಂಕಿತರು ಸ್ಪರ್ಶಿಸಿದ ವಸ್ತುಗಳನ್ನು ಮುಟ್ಟಿ ಕಣ್ಣು, ಮೂಗು ಮುಟ್ಟಿಕೊಂಡರು ಸೋಂಕಿಗೆ ತುತ್ತಾಗಬಹುದು. ಈ ಎಲ್ಲಾ ಹಿನ್ನಲೆಯಲ್ಲಿ ಸೋಂಕಿತ ವ್ಯಕ್ತಿಯ ಟೂತ್​ ಬ್ರಶ್​​​, ಟಂಗ್​ ಕ್ಲೀನರ್​ನಲ್ಲಿ ವೈರಸ್​ಗಳು ಇರುವ ಸಾಧ್ಯತೆ ಹೆಚ್ಚಿದೆ. ಇದೇ ಉತ್ಪನ್ನವನ್ನು ನಿರಂತವಾಗಿ ಬಳಸುವುದರಿಂದ ಮತ್ತೆ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ.
Published by: Seema R
First published: May 7, 2021, 6:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories