Covid-19: ಕೋವಿಡ್ ಕುರಿತಾದ ಫೇಕ್​ ನ್ಯೂಸ್​ ಹಂಚಿಕೆಯಲ್ಲಿ ಭಾರತದ್ದೇ ಮೇಲುಗೈ; ಅಧ್ಯಯನ

ಇಂಟರ್ನೆಟ್‌ನಲ್ಲಿ ಹರಿದಾಡುವ ಕೋವಿಡ್‌ ಸಂಬಂಧಿತ ಸುದ್ದಿಗಳು ಸಂಪೂರ್ಣವಾಗಿ ನಿಜವಾಗಿರುವುದಿಲ್ಲ ಅವುಗಳನ್ನು ವಿಶ್ಲೇಷಿಸಿ ಸತ್ಯ ಸುಳ್ಳಿನ ಪರಿಶೀಲನೆ ನಡೆಸಿದ ನಂತರವೇ ನಂಬುವುದು ಒಳಿತು ಎಂಬುದಾಗಿ ಅಧ್ಯಯನ ಕಿವಿಮಾತು ನೀಡಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

    Covid-19: ಕೋವಿಡ್-19 ಕುರಿತಾದ ತಪ್ಪು ಮಾಹಿತಿಗಳನ್ನು ಸಾಮಾಜಿಕ ಜಾಲತಾಣ ಹಾಗೂ ಇಂಟರ್ನೆಟ್​ಗಳ ಮೂಲಕ ವ್ಯಾಪಕವಾಗಿ ಹಂಚಿಕೊಳ್ಳುವ ಕಾರಣಕ್ಕೆ ಇದರಿಂದ ಜನರು ಇನ್ನಷ್ಟು ಭಯಭೀತರಾಗುವ ಸಂಭವಗಳಿವೆ ಎಂಬುದು ಇತ್ತೀಚಿನ ಅಂಕಿಅಂಶಗಳಿಂದ ತಿಳಿದುಬಂದಿದೆ. ಭಾರತವು ತಪ್ಪು ಮಾಹಿತಿಗಳ ಪ್ರಸಾರದಲ್ಲಿ ಮುಂದಿದ್ದು ಇದಕ್ಕೆ ಕಾರಣ ಇಂಟರ್ನೆಟ್ ಜ್ಞಾನದ ಕೊರತೆ ಹಾಗೂ ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆ ಹಾಗೂ ಇಂಟರ್ನೆಟ್‌ ಮೇಲಿನ ಅತಿಯಾದ ವಿಶ್ವಾಸ ಎಂಬುದು ತಿಳಿದು ಬಂದಿದೆ.


    ಕೋವಿಡ್ -19 ತಪ್ಪು ಮಾಹಿತಿಯ ಹರಡುವಿಕೆ ಮತ್ತು ಮೂಲ ವಿಶ್ಲೇಷಣೆ ಎಂಬ ಅಧ್ಯಯನವನ್ನು 138 ದೇಶಗಳಲ್ಲಿ ನಡೆಸಲಾಗಿದ್ದು ಸೇಜ್‌ನ ಇಂಟರ್‌ನ್ಯಾಷನಲ್ ಫೆಡರೇಶನ್ ಆಫ್ ಲೈಬ್ರರಿ ಅಸೋಸಿಯೇಷನ್ಸ್ ಅಂಡ್ ಇನ್‌ಸ್ಟಿಟ್ಯೂಷನ್ಸ್ ಪತ್ರಿಕೆಯಲ್ಲಿ ಮಾಹಿತಿ ಪ್ರಕಟಿಸಲಾಗಿದೆ. ಈ ಅಧ್ಯಯನವು ಕೋವಿಡ್ ಕುರಿತು 138 ದೇಶಗಳಲ್ಲಿ ಈ ಕುರಿತು ಉಂಟಾಗಿದ್ದ ತಪ್ಪುತಿಳುವಳಿಕೆಗಳ ಕುರಿತು ಮಾಹಿತಿ ಕಲೆಹಾಕಲಾಗಿದೆ. ವಿವಿಧ ದೇಶಗಳಲ್ಲಿನ ತಪ್ಪಾದ ಮಾಹಿತಿಗಳ ಹರಡುವಿಕೆ ಮತ್ತು ಸುದ್ದಿಮೂಲಗಳ ವಿಶ್ಲೇಷಣೆಗಳನ್ನು ನಡೆಸಲು ಅವುಗಳು ಕುರಿತಾದ ಸತ್ಯ ಸಂಗತಿಗಳನ್ನು 94 ಸಂಸ್ಥೆಗಳು ಪರಿಶೀಲಿಸಿದ್ದವು.


    ಎಲ್ಲಾ ದೇಶಗಳಿಗೆ ಹೋಲಿಸಿದಾಗ ತಪ್ಪು ಮಾಹಿತಿಗಳ ರವಾನೆಯಲ್ಲಿ ಭಾರತವು 18.7% ತಪ್ಪು ಮಾಹಿತಿಗಳನ್ನು ಉತ್ಪಾದಿಸಿದೆ ಎಂದು ತಿಳಿದು ಬಂದಿದ್ದು ಇದಕ್ಕೆ ಪ್ರಮುಖ ಕಾರಣ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ, ಇಂಟರ್ನೆಟ್ ಜ್ಞಾನದ ಕೊರತೆ ಹಾಗೂ ಇಂಟರ್ನೆಟ್‌ನ ಬಳಕೆಗೆ ತೀವ್ರ ಅಂಟಿಕೊಂಡಿರುವುದು ಪ್ರಮುಖ ಕಾರಣ ಎಂಬುದು ತಿಳಿದು ಬಂದಿದೆ. ಬೇರೆ ದೇಶಗಳಾದ ಅಮೆರಿಕ (9.74%) ಬ್ರೆಜಿಲ್ (8.57%) ಸ್ಪೇನ್ (8.3%) ಹೀಗೆ ತಪ್ಪು ಮಾಹಿತಿಯನ್ನು ಹುಟ್ಟು ಹಾಕಿದ ದೇಶಗಳೆಂದು ಪಟ್ಟಿ ಮಾಡಲಾಗಿದೆ.


    ಕೋವಿಡ್ ಕುರಿತ ತಪ್ಪು ತಿಳುವಳಿಕೆಗಳಿಗೆ ಈ ಆಧಾರಗಳೂ ಕಾರಣವಾಗಿದ್ದು ಸಾಂಕ್ರಾಮಿಕದ ಕುರಿತು ಜನರಲ್ಲಿ ಭಯವನ್ನು ಮೂಡಿಸಲು ಇದನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗಿದೆ ಎಂಬುದಾಗಿ ಅಧ್ಯಯನವು ತಿಳಿಸಿದೆ. ಸಾಮಾಜಿಕ ಜಾಲತಾಣವು 84.94%ನಷ್ಟು ತಪ್ಪು ಮಾಹಿತಿ ಹರಡುತ್ತದೆ ಹಾಗೂ ಇಂಟರ್ನೆಟ್ 90.5% ದಷ್ಟು ತಪ್ಪು ಮಾಹಿತಿಗಳ ರವಾನೆಗೆ ಪ್ರಮುಖ ಹೊಣೆಗಾರ ಎಂದೆನಿಸಿದೆ. ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಫೇಸ್‌ಬುಕ್ 66.87% ತಪ್ಪು ಮಾಹಿತಿಯನ್ನು ರವಾನಿಸುತ್ತದೆ ಎಂಬುದಾಗಿ ಅಧ್ಯಯನ ತಿಳಿಸಿದೆ.


    ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಕೋವಿಡ್ ಕುರಿತಾದ ತಪ್ಪು ಮಾಹಿತಿಗೆ ಸಂಬಂಧಿಸಿದಂತೆ ಎಚ್ಚರಿಕೆ ಸಂದೇಶ ರವಾನಿಸಿತ್ತು. ಈ ತಪ್ಪು ಮಾಹಿತಿಗಳು ಜನರನ್ನು ಅಪಾಯಕ್ಕೆ ಸಿಲುಕಿಸಬಹುದು ಎಂದು ಕಳವಳ ವ್ಯಕ್ತಪಡಿಸಿತ್ತು. ಇಂಟರ್ನೆಟ್‌ನಲ್ಲಿ ಬರುವ ಎಲ್ಲಾ ಸುದ್ದಿಗಳು ಸತ್ಯವಾಗಿರುವುದಿಲ್ಲವೆಂದು ಈ ಕುರಿತು ಜನರು ವಿಶ್ಲೇಷಣೆಗಳನ್ನು ನಡೆಸಿ ನಂತರ ಅದನ್ನು ನಂಬಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿತ್ತು. ಇದೀಗ ಅಧ್ಯಯನಗಳು ಕೂಡ ಕೋವಿಡ್‌ಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಗಳು ರವಾನೆಯಾಗಿರುವುದು ನಿಜ ಎಂಬುದನ್ನು ತಿಳಿಸಿದ್ದೂ ಭಾರತದ ಪಾತ್ರ ಈ ವಿಷಯದಲ್ಲಿ ಅತ್ಯಂತ ಗಂಭೀರವಾದುದು ಎಂಬುದನ್ನು ಸೂಚಿಸಿದೆ.


    ಇದನ್ನೂ ಓದಿ: Kerala: ಕಾಂಗ್ರೆಸ್​ ತೊರೆದ ಹಿರಿಯ ನಾಯಕನನ್ನು ಪಕ್ಷಕ್ಕೆ ಬರ ಮಾಡಿಕೊಂಡ ಸಿಪಿಎಂ

    ಇಂಟರ್ನೆಟ್‌ನಲ್ಲಿ ಹರಿದಾಡುವ ಕೋವಿಡ್‌ ಸಂಬಂಧಿತ ಸುದ್ದಿಗಳು ಸಂಪೂರ್ಣವಾಗಿ ನಿಜವಾಗಿರುವುದಿಲ್ಲ ಅವುಗಳನ್ನು ವಿಶ್ಲೇಷಿಸಿ ಸತ್ಯ ಸುಳ್ಳಿನ ಪರಿಶೀಲನೆ ನಡೆಸಿದ ನಂತರವೇ ನಂಬುವುದು ಒಳಿತು ಎಂಬುದಾಗಿ ಅಧ್ಯಯನ ಕಿವಿಮಾತು ನೀಡಿದೆ.




    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
    Published by:HR Ramesh
    First published: