Coronavirus Updates: ಭಾರತದಲ್ಲಿ ಹೆಚ್ಚುತ್ತಲೇ ಇರುವ ಕೊರೋನಾ ಪೀಡಿತರ ಸಂಖ್ಯೆ: ಒಂದೇ ದಿನ 22,752 ಜನರಿಗೆ ಸೋಂಕು

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊರೋನಾ ಸೋಂಕಿತರ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನ‌ ತಲುಪಿದೆ. ಇದರ ಮಾರನೇ ದಿನವೇ ದೇಶದ ಕೊರೋನಾ ಪೀಡಿತರ ಸಂಖ್ಯೆ ಏಳು ಲಕ್ಷ ದಾಟಿದೆ. ಅಲ್ಲದೆ ಇನ್ನೂ‌ ಹೆಚ್ಚಾಗುತ್ತಲೇ ಇದೆ.

news18-kannada
Updated:July 8, 2020, 10:39 AM IST
Coronavirus Updates: ಭಾರತದಲ್ಲಿ ಹೆಚ್ಚುತ್ತಲೇ ಇರುವ ಕೊರೋನಾ ಪೀಡಿತರ ಸಂಖ್ಯೆ: ಒಂದೇ ದಿನ 22,752 ಜನರಿಗೆ ಸೋಂಕು
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಜು.08): ಕೊರೋನಾ ಸೋಂಕು ಹರಡುವಿಕೆ ವ್ಯಾಪಕವಾಗಿದ್ದರೂ ಲಾಕ್ಡೌನ್ ನಿಯಮಗಳನ್ನು ಸಡಿಲಿಸಿ ಅನ್​​ಲಾಕ್ 1 ಮತ್ತು 2 ಅನ್ನು ಜಾರಿ ಮಾಡಲಾಗಿದೆ. ಇದರ ಪರಿಣಾಮ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊರೋನಾ ಸೋಂಕಿತರ ಪಟ್ಟಿಯಲ್ಲಿ ಮೂರನೇ ಸ್ಥಾನ‌ ತಲುಪಿದೆ. ಇದರ ಮಾರನೇ ದಿನವೇ ದೇಶದ ಕೊರೋನಾ ಪೀಡಿತರ ಸಂಖ್ಯೆ ಏಳು ಲಕ್ಷ ದಾಟಿದೆ. ಅಲ್ಲದೆ ಇನ್ನೂ‌ ಹೆಚ್ಚಾಗುತ್ತಲೇ ಇದೆ.

ಭಾರತದಲ್ಲಿ ಜುಲೈ 1ರಿಂದ 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 2ರಿಂದ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 3ರಿಂದ 22  ಸಾವಿರಕ್ಕೂ ಹೆಚ್ಚು ಪ್ರಕರಣಗಳು ಹಾಗೂ ಜುಲೈ 4ರಿಂದ 24 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಸೋಮವಾರ ಸ್ವಲ್ಪ ಇಳಿಕೆ ಕಂಡಿದ್ದು, 22,252 ಪ್ರಕರಣಗಳು ಮಾತ್ರ ಪತ್ತೆಯಾಗಿದ್ದವು. ಮಂಗಳವಾರ ಕೂಡ‌ ಇದೇ ಟ್ರೆಂಡ್ ಮುಗಿದಿದ್ದು 22,752 ಪ್ರಕರಣಗಳು ಪತ್ತೆಯಾಗಿವೆ. ದೇಶದ ಕೊರೋನಾ ಪೀಡಿತರ ಸಂಖ್ಯೆ 7,42,417ಕ್ಕೆ ಏರಿಕೆಯಾಗಿದೆ.

ಇದಲ್ಲದೆ ಮಂಗಳವಾರ 482 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 20,642ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 4,56,831 ಜನ ಮಾತ್ರ. ದೇಶದಲ್ಲಿ ಇನ್ನೂ 2,64,944 ಜನರಲ್ಲಿ ಕೊರೋನಾ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ‘ಕೊರೋನಾ ಬಂದವರಿಗೆ ಇನ್ನೂ ಕೆಲವು ರೋಗಗಳು ಬರುವ ಸಾಧ್ಯತೆ‘ - ಲಂಡನ್ ವಿವಿಯ‌ ಸಂಶೋಧನೆ

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಜೂನ್ 11ರಂದು 10,956, ಜೂನ್ 12ರಂದು 11,458, ಜೂನ್ 13ರಂದು 11,929, ಜೂನ್ 14ರಂದು 11,502, ಜೂನ್ 15ರಂದು 10,667, ಜೂನ್ 16ರಂದು 10,974, ಜೂನ್ 17ರಂದು 12,881, ಜೂನ್ 18ರಂದು 13,586, ಜೂನ್ 19ರಂದು 14,516, ಜೂನ್ 20ರಂದು 15,413, ಜೂನ್ 21ರಂದು 14,821, ಜೂನ್ 22ರಂದು 14,933, ಜೂನ್ 23ರಂದು 15,968, ಜೂನ್ 24ರಂದು 16,922, ಜೂನ್ 25ರಂದು 17,296, ಜೂನ್ 26ರಂದು 18,552, ಜೂನ್ 27ರಂದು 19,906, ಜೂನ್ 28ರಂದು 19,459, ಜೂನ್ 29ರಂದು 18,522, ಜೂನ್ 30ರಂದು 18,653, ಜುಲೈ 1ರಂದು 19,148, ಜುಲೈ 2ರಂದು 20,903, ಜುಲೈ 3 ರಂದು 22,771, ಜುಲೈ 4ರಂದು 24,850, ಜುಲೈ 5 ರಂದು 24,248, ಜುಲೈ 6ರಂದು 22,252 ಹಾಗೂ ಜುಲೈ 7ರಂದು 22,752 ಹೊಸ ಪ್ರಕರಣಗಳು ಪತ್ತೆಯಾಗಿವೆ.
Published by: Ganesh Nachikethu
First published: July 8, 2020, 10:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading