Covid 19 Health Bulletin; ಕರ್ನಾಟಕದಲ್ಲಿ ಒಂದೇ ದಿನ 1843 ಜನರಿಗೆ ಕೊರೋನಾ ಸೋಂಕು, 30 ಸಾವು; ಬೆಂಗಳೂರಿನಲ್ಲಿ ಭಯದ ವಾತಾವರಣ

ಕೊರೋನಾ ಸೋಂಕು ಬೆಂಗಳೂರಿನಲ್ಲಿ ಸಾಮೂದಾಯಿಕವಾಗಿ ಹರಡಿಯಾಗಿದೆ ಎಂದೂ ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಭಯಕ್ಕೆ ಒಳಗಾಗಿರುವ ಅನೇಕರು ಈಗಾಗಲೇ ಬೆಂಗಳೂರನ್ನು ತ್ಯಜಿಸಿ ಸ್ವಂತ ಊರಿಗೆ ಮರಳಲು ಮುಂದಾಗಿದ್ದಾರೆ. ಈ ನಡುವೆ ಇಂದು ಪತ್ತೆಯಾಗಿರುವ 1,843 ಸೋಂಕಿನ ಪೈಕಿ ಬೆಂಗಳೂರಿನಲ್ಲೇ ಅತ್ಯಧಿಕ ‌981 ಸೋಂಕಿತರು ಕಂಡುಬಂದಿರುವುದು ಜನರಲ್ಲಿ ಮತ್ತಷ್ಟು ಭೀತಿ ಮೂಡಿಸಿದೆ.

news18-kannada
Updated:July 6, 2020, 8:59 PM IST
Covid 19 Health Bulletin; ಕರ್ನಾಟಕದಲ್ಲಿ ಒಂದೇ ದಿನ 1843 ಜನರಿಗೆ ಕೊರೋನಾ ಸೋಂಕು, 30 ಸಾವು; ಬೆಂಗಳೂರಿನಲ್ಲಿ ಭಯದ ವಾತಾವರಣ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜೂನ್‌ 15); ರಾಜ್ಯ ಇಂದು ಒಂದೇ ದಿನ 1,843 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25317ಕ್ಕೆ ಏರಿಕೆಯಾಗಿದೆ. ಅಲ್ಲದೆ, ಇಂದು ಒಂದೇ ದಿನ ರಾಜ್ಯದಲ್ಲಿ ಸುಮಾರು 30 ಜನ ಮಾರಣಾಂತಿಕ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು ಸಾವಿನ ಸಂಖ್ಯೆಯೂ 401ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಇಂದಿನ Heath Bulletienನಲ್ಲಿ ತಿಳಿಸಿದೆ.

ಲಾಕ್‌ಡೌನ್‌ ಸಡಿಲಿಕೆ ಆರಂಭವಾದ ನಂತರ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಊಹೆಗೂ ಮೀರಿ ಏರಿಕೆಯಾಗುತ್ತಲೇ ಇದೆ. ಸರಾಸರಿಯಾಗಿ ಪ್ರತಿದಿನ ಸಾವಿರದಿಂದ ಎರಡು ಸಾವಿರದ ವರೆಗೆ ಸೋಂಕಿತರು ಪತ್ತೆಯಾಗುತ್ತಲೇ ಇದ್ದಾರೆ. ಹೀಗಾಗಿ ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸುವುದು ಮತ್ತು ಸೂಕ್ತ ಚಿಕಿತ್ಸೆ ನೀಡುವುದು ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಕೊರೋನಾ ಸೋಂಕು ಬೆಂಗಳೂರಿನಲ್ಲಿ ಸಾಮೂದಾಯಿಕವಾಗಿ ಹರಡಿಯಾಗಿದೆ ಎಂದೂ ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಭಯಕ್ಕೆ ಒಳಗಾಗಿರುವ ಅನೇಕರು ಈಗಾಗಲೇ ಬೆಂಗಳೂರನ್ನು ತ್ಯಜಿಸಿ ಸ್ವಂತ ಊರಿಗೆ ಮರಳಲು ಮುಂದಾಗಿದ್ದಾರೆ. ಈ ನಡುವೆ ಇಂದು ಪತ್ತೆಯಾಗಿರುವ 1,843 ಸೋಂಕಿನ ಪೈಕಿ ಬೆಂಗಳೂರಿನಲ್ಲೇ ಅತ್ಯಧಿಕ ‌981 ಸೋಂಕಿತರು ಕಂಡುಬಂದಿರುವುದು ಜನರಲ್ಲಿ ಮತ್ತಷ್ಟು ಭೀತಿ ಮೂಡಿಸಿದೆ. ಈವರೆಗೆ ರಾಜಧಾನಿಯಲ್ಲಿ ಮಾತ್ರ ಸುಮಾರು 10,000 ಪ್ರಕರಣಗಳು ಕಂಡುಬಂದಿವೆ.

ಇದನ್ನೂ ಓದಿ : ಕೊರೋನಾ ಓಡಿಸಲು ಜಾಗಟೆ ಬಾರಿಸಿದ ಅಯೋಗ್ಯ ಸರ್ಕಾರಕ್ಕೆ ಕೋವಿಡ್‌ ಪರೀಕ್ಷೆ ನಡೆಸಬೇಕೆಂದು ಗೊತ್ತಿಲ್ಲವೇ?; ಸಿದ್ದರಾಮಯ್ಯ

ಇದಲ್ಲದೆ, ಸೋಂಕಿತರಿಗೆ ಎಲ್ಲಿಂದ ಸೋಂಕು ಹರಡಿತು ಎಂಬ ಸೋಂಕಿನ ಮೂಲವನ್ನೂ ಸಹ ಆರೋಗ್ಯ ಇಲಾಖೆಯಿಂದ ಪತ್ತೆಹಚ್ಚಲು ಸಾಧ್ಯವಾಗದೆ ಇರುವುದು ಮತ್ತಷ್ಟು ತಲೆನೋವಿಗೆ ಕಾರಣವಾಗಿದೆ. ಇನ್ನೂ ರಾಜ್ಯದಲ್ಲಿ ಒಟ್ಟು‌ 279 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಂದು 680 ಸೋಂಕಿತರು ಗುಣಮುಖರಾಗಿ ರಾಜ್ಯದ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

 
Published by: MAshok Kumar
First published: July 6, 2020, 8:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading