ನವದೆಹಲಿ (ಜೂ. 25): ಕೋವಿಡ್ ಸೋಂಕಿನಿಂದ ಚೇತರಿಕೆ ಪ್ರಮಾಣದಲ್ಲಿ ಭಾರತವು ಗಮನಾರ್ಹ ಸುಧಾರಣೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಭಾರತದಲ್ಲಿ ಗರಿಷ್ಠ ಪ್ರಮಾಣದ ಸೋಂಕಿನ ಪ್ರಕರಣಗಳು ವರದಿಯಾದ ಬಳಿಕ ಅದರ ಚೇತರಿಕೆ ಪ್ರಮಾಣ ಶೇ 83ರಷ್ಟಿದೆ. ಇಲ್ಲಿಯವರೆಗೆ ಸುಮಾರು 30. 79 ಕೋಟಿ ಕೋವಿಡ್ ಲಸಿಕೆಗಳನ್ನು ಜನರಿಗೆ ನೀಡಲಾಗಿದೆ, ಇದರಲ್ಲಿ 45 ವರ್ಷ ಮೇಲ್ಪಟ್ಟ ವರು ಗರಿಷ್ಠ ಪ್ರಮಾಣದ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದರು.
ಮೇ ತಿಂಗಳಲ್ಲಿ 4, 531 ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಕೋವಿಡ್ ಸೋಂಕು ಪ್ರಕರಣ ಕಂಡು ಬಂದಿತ್ತು. ಜೂನ್ 2ನೇ ವಾರದಲ್ಲಿ ಅದರ ಸಂಖ್ಯೆ ಇಳಿಕೆ ಕಂಡು 262 ಆಗಿದೆ. ಪ್ರಸ್ತುತ ದೇಶದ 125 ಜಿಲ್ಲೆಗಳಲ್ಲಿ ಮಾತ್ರ ಸರಿಸುಮಾರು 100 ಪ್ರಕರಣಗಳಿ ಮಾತ್ರ ವರದಿಯಾಗುತ್ತಿವೆ. ದೈನಂದಿನ ಕೋವಿಡ್ ಪ್ರಕರಣಗಳಲ್ಲೂ ಕೂಡ ಗಣನೀಯ ಪ್ರಮಾಣದ ಇಳಿಕೆ ಕಂಡು ಬಂದಿದೆ, ಮೇ 7 ರಂದು ಗರಿಷ್ಠ ಅಂದರೆ 3. 89,803 ಪ್ರಕಣ ಕಂಡುಬಂದರೆ, ಜೂನ್ 19ರಿಂದ 25ರೊಳಗೆ 53,093 ಪ್ರಕರಣಗಳು ಕಂಡು ಬಂದಿದೆ.
Covidshield and Covaxin work against the variants of SARS CoV 2 — alpha, beta, gama as well as delta. Delta Plus is present in 12 countries; 48 cases have been identified in India but more importantly, they have been very localised: Balram Bhargava, Director General, ICMR pic.twitter.com/sTCVe1oXII
— ANI (@ANI) June 25, 2021
ದೇಶದಲ್ಲಿ ಸೋಂಕಿನಿಂದ ಗುಣಮುಖರಾಗುತ್ತಿರುವ ಸರಾಸರಿ ಪ್ರಮಾಣ ಶೇ 96.7ರಷ್ಟಿದೆ. ಕೋವಿಡ್ ಪ್ರಕರಣ ಶೇ 83ರಷ್ಟು ಕುಸಿದಿದೆ ಎಂದರು.
ಲಸಿಕೆ ಪ್ರಮುಖ್ಯತೆ ಕುರಿತು ಮಾತನಾಡಿದ ಅವರು, ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ಡಿಜಿ ಡಾ. ಬಲರಾಮ್ ಭರಗವ ಅವರು ಗರ್ಭಿಣಿ ಮಹಿಳೆಯರಿಗೂ ಲಸಿಕೆ ನೀಡಬಹುದು ಎಂದು ಒತ್ತಿ ಹೇಳಿದ್ದಾರೆ.
The Ministry of Health has given the guideline that vaccine can be given to pregnant women. Vaccination is useful in pregnant women and it should be given: Dr Balram Bhargava, DG, ICMR#COVID19 pic.twitter.com/Mr5vBiRMhz
— ANI (@ANI) June 25, 2021
ಕೋವಿಶೀಲ್ಡ್ ಕೋವಾಕ್ಸಿನ್ ಲಸಿಕೆ SARS CoV 2 -ಆಲ್ಫಾ, ಬೀಟಾ, ಗಾಮಾ ಮತ್ತು ಡೆಲ್ಟಾಗಳ ರೂಪಾಂತರಗಳ ವಿರುದ್ಧವೂ ಕಾರ್ಯನಿರ್ವಹಿಸುತ್ತದೆ. ದೇಶದಲ್ಲಿ ಪ್ರಸ್ತುತ 12 ಡೆಲ್ಟಾ ಪ್ಲಸ್ ಪ್ರಕರಣಗಳಿವೆ. ದೇಶದಲ್ಲಿ 48 ಪ್ರಕರಣಗಳು ಪತ್ತೆಯಾಗಿವೆ . ಇವುಗಳ ಮೇಲೆ ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಪ್ರಯೋಗ ನಡೆಯುತ್ತಿದ್ದು, ಇನ್ನು 7 ರಿಂದ 10 ದಿನಗಳಲ್ಲಿ ವರದಿ ಸಿಗಲಿದೆ ಎಂದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ