ಆಸೀಸ್ ನಾಡಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ಕರುನಾಡ ಯುವಕ: ಕೊಂಡಾಡಿದ ಡೇವಿಡ್ ವಾರ್ನರ್

ನಮಸ್ತೆ ಎಲ್ಲರಿಗೂ ಎಂದು ವಾರ್ನರ್ ಶುರು ಮಾಡಿ, ಶ್ರೇಯಸ್ ಶಿಕ್ಷಣ ಹಾಗೂ ಸಾಮಾಜಿಕ ಸೇವೆಯನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಶ್ರೇಯಸ್ ಕಾರ್ಯಕ್ಕೆ ವೈಯಕ್ತಿಕವಾಗಿ ವಾರ್ನರ್ ಧನ್ಯವಾದ ಸಲ್ಲಿಸಿದ್ದಾರೆ.

ಡೇವಿಡ್ ವಾರ್ನರ್ ಹಾಗೂ ಶ್ರೇಯಸ್ ಶ್ರೇಷ್ಟ್

ಡೇವಿಡ್ ವಾರ್ನರ್ ಹಾಗೂ ಶ್ರೇಯಸ್ ಶ್ರೇಷ್ಟ್

 • Share this:
  ಕೊರೋನಾ ಈ ಕಷ್ಟಕಾಲದಲ್ಲಿ ದೇಶಕ್ಕೆ ದೇಶವೇ ವೈರಸ್ ವಿರುದ್ಧದ ಹೋರಾಟಕ್ಕೆ ನಿಂತಿದೆ. ಇದೇ ಸಂದರ್ಭದಲ್ಲಿ ದೂರದ ಆಸ್ಟ್ರೇಲಿಯಾದಲ್ಲಿ ಕರುನಾಡ ಹುಡುಗನ ನಿಸ್ವಾರ್ಥ ಸೇವೆಗೆ ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

  ಕೆಲ ದಿನಗಳವರೆಗೂ ಅಪರಿಚಿತನಾಗಿದ್ದ ಶ್ರೇಯಸ್ ಶ್ರೇಷ್ಟ್ ಸದ್ಯ ಸುದ್ದಿಯ ಮುನ್ನೆಲೆಗೆ ಬಂದಿದ್ದಾರೆ. ಅಷ್ಟಕ್ಕೂ ಅವರು ಒಳ್ಳೆಯ ಕೆಲಸವೇ ಇದಕ್ಕೆ ಕಾರಣ. ಆಸ್ಟ್ರೇಲಿಯಾದ ಕ್ವೀನ್ಸ್​​ಲ್ಯಾಂಡ್ ವಿಶ್ವ ವಿದ್ಯಾನಿಯದಲ್ಲಿ ಕಂಪ್ಯೂಟರ್ ಸೈನ್ಸ್​​ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಶ್ರೇಯಸ್, ಈ‌ ಸಂದರ್ಭದಲ್ಲಿ‌ ಮೆರೆಯುತ್ತಿರುವ ಮಾನವೀಯತೆಗೆ ಆಸೀಸ್ ಕ್ರಿಕೆಟಿಗ ವಾರ್ನರ್ ಖುಷಿಯಾಗಿದ್ದಾರೆ.

  ಅತೀಹೆಚ್ಚು ಕೊರೋನಾ ಇರುವ ದೇಶಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಭಾರತ

  ವಾರ್ನರ್, ಶ್ರೇಯಸ್ ಕಾರ್ಯವನ್ನು ಮೆಚ್ಚಿ ಮಾತನಾಡಿದ್ದು ಈ ವಿಡಿಯೋವನ್ನು ಇಂಟರ್ ನ್ಯಾಶ್ (Internash) ಹೆಸರಿನ ಯುಟ್ಯೂಬ್'ನಲ್ಲಿ ಪೋಸ್ಟ್ ಮಾಡಲಾಗಿದೆ.

  ನಮಸ್ತೆ ಎಲ್ಲರಿಗೂ ಎಂದು ವಾರ್ನರ್ ಶುರು ಮಾಡಿ, ಶ್ರೇಯಸ್ ಶಿಕ್ಷಣ ಹಾಗೂ ಸಾಮಾಜಿಕ ಸೇವೆಯನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಶ್ರೇಯಸ್ ಕಾರ್ಯಕ್ಕೆ ವೈಯಕ್ತಿಕವಾಗಿ ವಾರ್ನರ್ ಧನ್ಯವಾದ ಸಲ್ಲಿಸಿದ್ದಾರೆ. ಮಂಗಳೂರಿನ ಈ ಹುಡುಗ ಕಾಲೇಜಿನ ಸಂಘಟನೆಯೊಂದರ ಮೂಲಕ ಆಹಾರ ವಿತರಣೆ‌ ಸೇರಿದಂತೆ ಅಗತ್ಯ ವಸ್ತುಗಳನ್ನು ಹಂಚುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರೇಯಸ್ ಅವರ ಈ ನಿಸ್ವಾರ್ಥ ಸೇವೆಗೆ ಅವರ ಹೆತ್ತವರು ಹಾಗೂ ಭಾರತ ದೇಶವೇ ಹೆಮ್ಮೆ ಪಡುತ್ತಿದೆ. ದೊಡ್ಡ ಕೆಲಸವನ್ನು ಮುಂದುವರಿಸಿ, ಏಕೆಂದರೆ ನಾವೆಲ್ಲರೂ ಜೊತೆಯಾಗಿರುತ್ತೇವೆ ಎಂದು ವಾರ್ನರ್ ಹೇಳಲಿದ್ದಾರೆ.

     ಪಾಕ್ ಪರ ಘೋಷಣೆ ಕೂಗಿದ್ದ ಪ್ರಕರಣ; ಚಾರ್ಜ್‌ಶೀಟ್ ಸಲ್ಲಿಸಲು ವಿಳಂಬ ಮಾಡಿದ್ದ ಇನ್ಸ್​ಪೆಕ್ಟರ್ ಅಮಾನತು

  ಇದಕ್ಕೂ ಮುನ್ನ ಇತ್ತೀಚೆಗಷ್ಟೆ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಡಂ ಗಿಲ್‌ಕ್ರಿಸ್ಟ್ ಕೂಡ ಭಾರತೀಯ ವಿದ್ಯಾರ್ಥಿಯೋರ್ವಳ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದ್ದರು. ಕೇರಳ ಮೂಲದ ವಿಧ್ಯಾರ್ಥಿನಿ ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ಶರೊನ್ ವರ್ಗೀಸ್ ಎಂಬ ವಿದ್ಯಾರ್ಥಿನಿಯ ಸೇವೆಗೆ ಧನ್ಯವಾದಗಳನ್ನು ಸಲ್ಲಿಸಿದ್ದರು.

   

  First published: