Covid-19 cases in Russia: ರಷ್ಯಾದಲ್ಲಿ ಹೆಚ್ಚಾದ ಕೋವಿಡ್ ಪ್ರಕರಣ; ಸಂಬಳ ಸಹಿತ ವಾರದ ರಜೆ ಆದೇಶಿಸಿದ ಪುಟಿನ್

ಕೆಲಸ ರಹಿತ ವಾರವನ್ನು ಘೋಷಿಸುವ ಹಾಗೂ ಉದ್ಯೋಗಿಗಳನ್ನು ಅವರ ಕಚೇರಿಗಳಿಂದ ದೂರವಿರಿಸುವ ನಿಟ್ಟಿನಲ್ಲಿ ಕ್ಯಾಬಿನೆಟ್ ಪ್ರಸ್ತಾಪಕ್ಕೆ ರಷ್ಯಾದ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ಬೆಂಬಲ ಸೂಚಿಸಿದ್ದಾರೆ

Vladimir Putin, Russian President

Vladimir Putin, Russian President

  • Share this:

ರಷ್ಯಾದಲ್ಲಿ ಕೊರೋನಾ ವೈರಸ್‌ನಿಂದ (Covid Cases in Russia) ಸಂಭವಿಸುತ್ತಿರುವ ಸಾವು ನೋವುಗಳು ದೈನಂದಿನ ದಾಖಲೆ ಮೀರಿಸುತ್ತಿರುವುದರಿಂದ, ಕೆಲಸ ರಹಿತ ವಾರವನ್ನು ಘೋಷಿಸುವ ಹಾಗೂ ಉದ್ಯೋಗಿಗಳನ್ನು ಅವರ ಕಚೇರಿಗಳಿಂದ ದೂರವಿರಿಸುವ ನಿಟ್ಟಿನಲ್ಲಿ ಕ್ಯಾಬಿನೆಟ್ ಪ್ರಸ್ತಾಪಕ್ಕೆ ರಷ್ಯಾದ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ (Vladimir Putin) ಬೆಂಬಲ ಸೂಚಿಸಿದ್ದಾರೆ. ಸರಕಾರಿ ಟಾಸ್ಕ್ ಫೋರ್ಸ್ ಸಮಿತಿಯು ಕಳೆದ 24 ಗಂಟೆಗಳಲ್ಲಿ 1,028 ಕೊರೋನಾ ವೈರಸ್ ಮರಣಗಳನ್ನು ವರದಿ ಆಗಿದ್ದು, ಸಾಂಕ್ರಾಮಿಕ ಆರಂಭದ ನಂತರ ಇದು ಅತಿ ಹೆಚ್ಚು ಪ್ರಕರಣ ಎಂದೆನಿಸಿದೆ. ಯುರೋಪ್‌ನಲ್ಲಿ ಅತಿ ಹೆಚ್ಚು ಪ್ರಕರಣವೆಂದು ದಾಖಲಾಗಿರುವ ಒಟ್ಟು 226,353 ಮರಣ ಪ್ರಮಾಣದಲ್ಲಿ ರಷ್ಯಾ ಪಾಲು ಹೆಚ್ಚಿದೆ.


ರಷ್ಯಾದಲ್ಲಿ ಹೆಚ್ಚಾದ ಸೋಂಕು

ಅಕ್ಟೋಬರ್ 30ರಿಂದ ಆರಂಭಗೊಂಡು ಮುಂದಿನ ವಾರದವರೆಗೆ ಅನ್ವಯವಾಗುವ ಇದರಲ್ಲಿ ನಾಲ್ಕು ದಿನಗಳು ಈಗಾಗಲೇ ರಾಜ್ಯ ರಜಾದಿನಗಳಾಗಿದ್ದು, ಕೆಲಸ ರಹಿತ ಅವಧಿಯನ್ನು ಕ್ಯಾಬಿನೆಟ್ ಪ್ರಸ್ತಾವಿಸಿದ್ದು ಇದಕ್ಕೆ ನನ್ನ ಬೆಂಬಲವಿದೆ ಎಂದು ಪುಟಿನ್ ತಿಳಿಸಿದ್ದಾರೆ. ಕೆಲವೊಂದು ಪ್ರದೇಶಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದು ಕೆಲಸ ರಹಿತ ಅವಧಿಯು ಆದಷ್ಟು ಶೀಘ್ರದಲ್ಲೇ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.


ಆರೋಗ್ಯ ಸೇವೆ ಸಾಮರ್ಥ್ಯ ಹೆಚ್ಚಿಸಲು ಆದೇಶ

ಕೆಲವೊಂದು ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಸೋಂಕುಗಳ ಕಾರಣ ಆರೋಗ್ಯ ಸೌಲಭ್ಯಗಳ ಹೆಚ್ಚು ಬಳಕೆ ಅಗತ್ಯವಿರುವುದರಿಂದ ಸಾಮಾನ್ಯ ಜನರಿಗೆ (ಕೋವಿಡ್ ರಹಿತ) ಒದಗಿಸುತ್ತಿದ್ದ ವೈದ್ಯಕೀಯ ಸಹಾಯ ಸ್ಥಗಿತಗೊಳಿಸಿ ಕೊರೋನಾ ಪೀಡಿತ ರೋಗಿಗಳನ್ನು ಉಪಚರಿಸುವ ಕಾರ್ಯದಲ್ಲಿ ವೈದ್ಯಾಧಿಕಾರಿಗಳು ತೊಡಗಿದ್ದಾರೆ.


ನಿಯಮ ನಿರ್ಲಕ್ಷ್ಯ ಸೋಂಕಿಗೆ ಕಾರಣ?

ರಷ್ಯಾದಲ್ಲಿ ಕೊರೋನಾ ಸಾವಿನ ಪ್ರಕರಣಗಳು ವಾರಗಳಿಂದ ಏರಿಕೆಯಾಗುತ್ತಿವೆ ಹಾಗೂ ಇದೇ ಮೊದಲ ಬಾರಿಗೆ ವಾರಾಂತ್ಯದಲ್ಲಿ 1,000ಕ್ಕೆ ಏರಿಕೆ ಕಂಡಿದೆ ಇದಕ್ಕೆ ಪ್ರಮುಖ ಕಾರಣ ನಿಧಾನಗತಿಯಲ್ಲಿ ಸಾಗುತ್ತಿರುವ ಲಸಿಕಾ ಕ್ರಮಗಳು, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಲ್ಲಿ ಸಾರ್ವಜನಿಕರ ನಿರ್ಲಕ್ಷ್ಯ, ನಿರ್ಬಂಧಗಳನ್ನು ಕಠಿಣಗೊಳಿಸುವಲ್ಲಿ ಹಿಂಜರಿಯುತ್ತಿರುವ ಸರಕಾರ ಎಂಬ ಅಂಶಗಳಾಗಿರಬಹುದು ಎಂಬುದು ತಿಳಿದುಬಂದಿದೆ.


ಇದನ್ನು ಓದಿ: 100 ಕೋಟಿ ಡೋಸ್ ಕೋವಿಡ್-19 ಲಸಿಕೆ ವಿತರಣೆ; ಕೆಂಪು ಕೋಟೆಯಲ್ಲಿ ಹಾರಾಡಲಿದೆ 1,400 ಕೆಜಿ ತೂಕದ ತಿರಂಗ!

ಲಸಿಕೆ ಪಡೆಯಲು ಹಿಂಜರಿಕೆ

45 ಮಿಲಿಯನ್ ರಷ್ಯನ್ ಪ್ರಜೆಗಳಲ್ಲಿ ಅಥವಾ ದೇಶದ ದೇಶದ ಜನಸಂಖ್ಯೆಯಲ್ಲಿ ಕೇವಲ 32% ಜನರು ಅಥವಾ 146 ಮಿಲಿಯನ್ ಜನರು ಪೂರ್ಣಪ್ರಮಾಣದಲ್ಲಿ ಲಸಿಕೆಗಳನ್ನು ತೆಗೆದುಕೊಂಡಿದ್ದಾರೆ. ರಷ್ಯಾ, ಆಗಸ್ಟ್ 2020ರಲ್ಲಿ ಕೊರೋನಾ ವೈರಸ್ ಲಸಿಕೆಯನ್ನು ಅಧಿಕೃತಗೊಳಿಸಿದ ವಿಶ್ವದ ಮೊದಲ ರಾಷ್ಟ್ರವಾಗಿದ್ದರೂ ಲಸಿಕೆಗಳ ಕೊರತೆ ಇಲ್ಲದೇ ಇದ್ದರೂ, ರಷ್ಯಾದ ಜನರು ವ್ಯಾಕ್ಸಿನೇಶನ್‌ ತೆಗೆದುಕೊಳ್ಳಲು ಹಿಂಜರಿದಿದ್ದಾರೆ. ಅಧಿಕಾರಿಗಳು ಲಸಿಕೆಗಳ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರಿಂದ ರಷ್ಯನ್ನರು ಲಸಿಕೆಗಳನ್ನು ತೆಗೆದುಕೊಳ್ಳಲು ಮುಂದಾಗಿಲ್ಲ ಎಂದು ತಿಳಿದು ಬಂದಿದೆ.


ಇದನ್ನು ಓದಿ: ತಾಂತ್ರಿಕ ದೋಷದಿಂದ IAF Mirage 2000 ಪತನ;. ಪೈಲಟ್​ ರಕ್ಷಣೆ

ಸ್ಪುಟ್ನಿಕ್ V ಹಾಗೂ ಇತರ ಸ್ಥಳೀಯ ಲಸಿಕೆಗಳನ್ನು ಶ್ಲಾಘಿಸುವಾಗ, ರಾಜ್ಯ ನಿಯಂತ್ರಿತ ಮಾಧ್ಯಮಗಳು ಪಾಶ್ಚಿಮಾತ್ಯ-ನಿರ್ಮಾಣದ ಲಸಿಕೆಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದವು. ಇದರಿಂದ ಸಾಮಾನ್ಯವಾಗಿ ಜನರಲ್ಲಿ ಕೂಡ ಲಸಿಕೆಗಳ ಬಗ್ಗೆ ಹಲವಾರು ಗೊಂದಲಗಳು ಮೂಡಿವೆ ಎಂದು ತಿಳಿದು ಬಂದಿದೆ.


ಇಲ್ಲಿಯವರೆಗೆ ರಷ್ಯಾ ಸರಕಾರವು (Kremlin) ಸಾಂಕ್ರಾಮಿಕದ ಆರಂಭದಲ್ಲಿ ಹೇರಿದ್ದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಅನ್ನು ತಿರಸ್ಕರಿಸಿದೆ. ಇದರಿಂದ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿತ್ತು ಹಾಗೂ ಪುಟಿನ್ ಜನಪ್ರಿಯತೆಯನ್ನು ಮಂಕಾಗಿಸಿದೆ ಎಂಬ ಕಾರಣಕ್ಕೆ ಲಾಕ್‌ಡೌನ್‌ಗೆ ಒಲವು ತೋರುತ್ತಿಲ್ಲ. ಬದಲಿಗೆ ದೇಶದ ಪ್ರಾದೇಶಿಕ ಅಧಿಕಾರಿಗಳಿಗೆ ಆಯಾಯ ಪ್ರದೇಶದ ಪರಿಸ್ಥಿತಿಗಳನ್ನು ನೋಡಿಕೊಂಡು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.


First published: