Coronavirus: ಕೊರೊನಾ ಸೋಂಕು ನಿಮ್ಮ ಕಿಡ್ನಿಯನ್ನೇ ಡ್ಯಾಮೇಜ್‌ ಮಾಡುತ್ತಂತೆ, ತಜ್ಞರು ಏನು ಹೇಳ್ತಾರೆ ನೋಡಿ

ವೈರಸ್ ಮೂತ್ರಪಿಂಡದ ಜೀವಕೋಶಗಳಿಗೆ ನೇರ ಹಾನಿ ಉಂಟು ಮಾಡಬಹುದು, ರಕ್ತ ಹೆಪ್ಪುಗಟ್ಟುವಿಕೆಯನ್ನು ಹೆಚ್ಚಿಸಬಹುದು,

ಕೊರೋನಾ ವೈರಸ್

ಕೊರೋನಾ ವೈರಸ್

  • Share this:
ಸಾಮಾನ್ಯವಾಗಿ ಕೋವಿಡ್-19 ಸಾಂಕ್ರಾಮಿಕ (Covid-19 pandemic) ರೋಗವು ಒಂದು ಬಾರಿ ಒಬ್ಬ ವ್ಯಕ್ತಿಗೆ ಬಂದರೆ, ಆ ರೋಗ ವಾಸಿಯಾದರೂ ಸಹ ಇದು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಅವರ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುವುದನ್ನು ನಾವು ಈ ಎರಡು ವರ್ಷಗಳಲ್ಲಿ ಅನೇಕ ಸಾರಿ ಕೇಳಿರುತ್ತೇವೆ. ಒಮ್ಮೆ ಈ ಕೋವಿಡ್ ಬಂತೆಂದರೆ ಆ ವೈರಸ್ ಇಡೀ ನಮ್ಮ ಶ್ವಾಸಕೋಶವನ್ನೆ(Lungs Weaker) ದುರ್ಬಲವಾಗಿಸುತ್ತದೆ ಎಂದು ಹೇಳುವುದನ್ನು ಕೇಳಿರುತ್ತೇವೆ. ಆದರೆ ಇಲ್ಲಿ ಮತ್ತೊಂದು ಆಘಾತಕಾರಿ ಮಾಹಿತಿಯನ್ನು ವೈದ್ಯರು ತಿಳಿಸಿದ್ದಾರೆ. ಅದೇನೆಂದರೆ ಮೂತ್ರಪಿಂಡದ ಕಾಯಿಲೆಗಳ ಇತಿಹಾಸವಿಲ್ಲದವರ ಮೂತ್ರಪಿಂಡಗಳಿಗೂ (Kidneys) ಸಹ ಈ ವೈರಸ್ ತೀವ್ರ ಹಾನಿ (Damage) ಉಂಟು ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಮೂತ್ರಪಿಂಡಗಳ ಮೇಲೆ ಸಮಸ್ಯೆ
ಶ್ವಾಸಕೋಶ ಮತ್ತು ಮೂತ್ರಪಿಂಡಗಳಲ್ಲದೆ, ಹೃದಯ ಮತ್ತು ಮೆದುಳಿನಂತಹ ದೇಹದ ಇತರ ಅಂಗಗಳು ಸಹ ಕೋವಿಡ್-19ನಿಂದ ತೀವ್ರವಾಗಿ ಪರಿಣಾಮಕ್ಕೊಳಗಾಗುತ್ತಿವೆ ಎಂದು ಅಧ್ಯಯನಗಳು ತೋರಿಸಿವೆ. ಅಪೋಲೋ ಆಸ್ಪತ್ರೆಗಳ ನೆಫ್ರಾಲಜಿಯ ಹಿರಿಯ ಸಲಹೆಗಾರ ಡಾ. ಸಮೀರ್ ತವಾಕ್ಲೆ ಈಗ ಕೋವಿಡ್-19 ಸೋಂಕು ಹೇಗೆ ಈ ಮೂತ್ರಪಿಂಡಗಳ ಮೇಲೆ ಗಂಭೀರವಾದ ಸಮಸ್ಯೆ ತಂದೊಡ್ಡಬಹುದು ಎಂಬುದನ್ನು ವಿವರಿಸಿದ್ದಾರೆ.

ಇದನ್ನೂ ಓದಿ: Infants Brain: ಮುದ್ದು ಕಂದಮ್ಮಗಳ ಬ್ರೈನ್‌, ಕಿಡ್ನಿ ಮೇಲೆ ಕೊರೊನಾ ಎಫೆಕ್ಟ್..? ತಜ್ಞರು ಏನು ಅಂತಾರೆ..

ಜನಪ್ರಿಯ ಸಾಮಾಜಿಕ ಮಾಧ್ಯಮವಾದ ಫೇಸ್‌ಬುಕ್‌ನಲ್ಲಿ ನಡೆದ ಒಂದು ಲೈವ್ ಸೆಷನ್‌ನಲ್ಲಿ, ಡಾ. ತವಾಕ್ಲೆ ಅವರು ಕೋವಿಡ್-19 ಸೋಂಕು ಪ್ರಾಥಮಿಕವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಂತರ ಇದು ಮೆದುಳು, ಹೃದಯ ಮತ್ತು ಮೂತ್ರಪಿಂಡಗಳನ್ನು ಹಾನಿಗೊಳಿಸುತ್ತದೆ. ಏಕೆಂದರೆ ಈ ಎಲ್ಲಾ ಅಂಗಗಳು ಒಟ್ಟಿಗೆ ಕೆಲಸ ಮಾಡುತ್ತವೆ ಎಂದು ಅವರು ವಿವರಿಸಿದರು.

ರೋಗಲಕ್ಷಣ ಪತ್ತೆ
'ಈ ಹಿಂದೆ ಯಾವುದೇ ರೀತಿಯ ಮೂತ್ರಪಿಂಡ ಕಾಯಿಲೆಯಿಂದ ಬಾಧಿತರಾಗದ ಜನರಲ್ಲಿಯೂ ಸಹ ಈ ಕೋವಿಡ್ ಸೋಂಕು ಅವರಲ್ಲಿ ಸಾಕಷ್ಟು ಗಂಭೀರವಾದ ಮೂತ್ರಪಿಂಡದ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ ಎಂದು ಹೇಳಿದರು.
ಕೋವಿಡ್‌ನಿಂದ ಬಾಧಿತರಾದ ಅನೇಕ ಜನರು ಮೂತ್ರಪಿಂಡದ ಅನೇಕ ಸಮಸ್ಯೆಗಳ ರೋಗಲಕ್ಷಣಗಳನ್ನು ಹೊಂದಿದ್ದಾರೆ. ಕೆಲವರ ಸಮಸ್ಯೆಯು ಡಯಾಲಿಸಿಸ್ ಅಗತ್ಯವಿರುವಷ್ಟರ ಮಟ್ಟಿಗೆ ತೀವ್ರವಾಗಿದೆ. ಕೋವಿಡ್ ಸೋಂಕಿನಿಂದ ಬಳಲುತ್ತಿರುವ ಜನರಲ್ಲಿ ಸುಮಾರು 30 ಪ್ರತಿಶತ ಜನರು ಮೂತ್ರಪಿಂಡದ ಸಮಸ್ಯೆಗಳನ್ನು ಹೊಂದಿದ್ದಾರೆ. ಕೋವಿಡ್ ಸೋಂಕಿಗೆ ಒಳಗಾಗಿದ್ದರೆ ಮೂತ್ರಪಿಂಡದ ಕಾಯಿಲೆಗೆ ಒಳಗಾಗಿದ್ದ ಜನರು, ಕೆಲವೊಮ್ಮೆ ತೀವ್ರ ಕಾಯಿಲೆಗಳಿಂದ ಬಳಲುತ್ತಿರುವುದನ್ನು ನಾವು ನೋಡುತ್ತೇವೆ, ಇದರ ಪರಿಣಾಮವಾಗಿ ಸಾವು ಸಹ ಸಂಭವಿಸುತ್ತದೆ' ಎಂದು ಅವರು ಹೇಳಿದರು.

ಹೃದ್ರೋಗಗ ರೋಗಿಗಳಿಗೆ ಮಾರಕ
ಡಾ. ತವಾಕ್ಲೆ ಅವರು ಕೋವಿಡ್-19 ಅವಧಿಯಲ್ಲಿ ಮೂತ್ರಪಿಂಡದ ಕಾಯಿಲೆಗಳಿಗೆ ಸಂಬಂಧಿಸಿದ ಅಪಾಯದ ಅಂಶಗಳ ಬಗ್ಗೆ ಮತ್ತಷ್ಟು ಮಾತನಾಡಿ “60 ವರ್ಷಕ್ಕಿಂತ ಮೇಲ್ಪಟ್ಟ ಜನರು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ರೋಗಿಗಳು, ಬೊಜ್ಜು ಮತ್ತು ಹೃದ್ರೋಗಗಳಿಂದ ಬಳಲುತ್ತಿರುವ ಜನರು ಮೂತ್ರಪಿಂಡ ಸಂಬಂಧಿತ ಕಾಯಿಲೆಗಳಿಗೆ ತುತ್ತಾಗುವ ಹೆಚ್ಚಿನ ಅಪಾಯದಲ್ಲಿದ್ದಾರೆ” ಎಂದು ವಿವರಿಸಿದರು.

ಹಾನಿಕಾರಕ ಪರಿಣಾಮ
ಕೋವಿಡ್-19 ಸೋಂಕು ನಮ್ಮ ಮೂತ್ರಪಿಂಡಗಳಿಗೆ ಹಾನಿ ಮಾಡುವ ವಿಧಾನಗಳನ್ನು ವಿವರಿಸಿದ ವೈದ್ಯರು ವೈರಸ್ ಮೂತ್ರಪಿಂಡದ ಜೀವಕೋಶಗಳಿಗೆ ನೇರ ಹಾನಿ ಉಂಟು ಮಾಡಬಹುದು, ರಕ್ತ ಹೆಪ್ಪುಗಟ್ಟುವಿಕೆಯನ್ನು ಹೆಚ್ಚಿಸಬಹುದು, ಇದರ ಪರಿಣಾಮವಾಗಿ ಮೂತ್ರಪಿಂಡಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ ಅಥವಾ ರಕ್ತದಲ್ಲಿ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡಬಹುದು, ಇದು ಮೂತ್ರಪಿಂಡದ ರಚನೆಯ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರಬಹುದು ಎಂದು ಹೇಳಿದರು.

ಇದನ್ನೂ ಓದಿ: Omicron ಪ್ರಕರಣಗಳ ಹೆಚ್ಚಳದಿಂದ 5ನೇ ಸ್ಥಾನಕ್ಕೆ ಜಿಗಿದ ಕರ್ನಾಟಕ, ಗೋವಾದಿಂದ ಬರೋರಿಗೆ ಹೊಸ ರೂಲ್ಸ್​

ಫೇಸ್‌ಬುಕ್‌ನ ತಮ್ಮ ಲೈವ್ ಸೆಷನ್‌ನಲ್ಲಿ, ಇವರು ಸ್ಯಾನಿಟೈಸೇಶನ್, ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವಂತಹ ಕೆಲವು ಅಗತ್ಯ ಕ್ರಮಗಳನ್ನು ಪಾಲಿಸಲು ಜನರಿಗೆ ತಿಳಿಸಿದರು. ಅಗತ್ಯವಿದ್ದರೆ ಡಯಾಲಿಸಿಸ್‌ಗೆ ಒಳಗಾಗಲು ಮತ್ತು ಸಂಪೂರ್ಣವಾಗಿ ಲಸಿಕೆ ಪಡೆಯುವಂತೆ ಅವರು ಮೂತ್ರಪಿಂಡ ರೋಗಿಗಳಿಗೆ ಸಲಹೆ ನೀಡಿದರು.
Published by:vanithasanjevani vanithasanjevani
First published: