HOME » NEWS » Coronavirus-latest-news » COVID 19 ASHOK GEHLOT URGES PM TO PROVIDE RS 1 LAKH CRORE FOR STATES GNR

ಕೊರೋನಾ ತಡೆಗೆ ರಾಜ್ಯ ಸರ್ಕಾರಗಳಿಗೆ 1 ಲಕ್ಷ ಕೋಟಿ ರೂ. ಅನುದಾನ ನೀಡಬೇಕು; ಪ್ರಧಾನಿಗೆ ಸಿಎಂ ಅಶೋಕ್ ಗೆಹ್ಲೋಟ್ ಮನವಿ

ಲಾಕ್ ಡೌನ್ ಅವಧಿ ಮುಗಿದ ನಂತರ ಕೊರೋನಾ ಸೋಂಕು ಹರಡದಂತೆ ಯಾವ್ಯಾವ ನಿರ್ಬಂಧಗಳನ್ನ ಮುಂದುವರಿಸಬಹುದು ಎಂದು ಒಂದು ಸಾಮಾನ್ಯ ಕಾರ್ಯತಂತ್ರ (ಎಕ್ಸಿಟ್ ಸ್ಟ್ರಾಟಿಜಿ) ರೂಪಿಸಲು ರಾಜ್ಯ ಸರ್ಕಾರಗಳಿಗೆ ಪ್ರಧಾನಿ ಕರೆ ನೀಡಿದರು.

news18-kannada
Updated:April 2, 2020, 8:37 PM IST
ಕೊರೋನಾ ತಡೆಗೆ ರಾಜ್ಯ ಸರ್ಕಾರಗಳಿಗೆ 1 ಲಕ್ಷ ಕೋಟಿ ರೂ. ಅನುದಾನ ನೀಡಬೇಕು; ಪ್ರಧಾನಿಗೆ ಸಿಎಂ ಅಶೋಕ್ ಗೆಹ್ಲೋಟ್ ಮನವಿ
ಅಶೋಕ್ ಗೆಹ್ಲೋಟ್
  • Share this:
ನವದೆಹಲಿ(ಏ.02): ಕೊರೋನಾ ವೈರಸ್ ತಡೆಯಲು ರಾಜ್ಯ ಸರ್ಕಾರಗಳಿಗೆ 1 ಲಕ್ಷ ಕೋಟಿ ರೂ. ಅನುದಾನ ನೀಡಿ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ. ಇಂದು ದೇಶಾದ್ಯಂತ ಕೋವಿಡ್​​-19 ವೈರಸ್ ಸೋಂಕು ಪರಿಸ್ಥಿತಿ ಹೇಗಿದೆ ಎಂಬುದನ್ನು ಅವಲೋಕಿಸಲು ಮೋದಿ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದರು. ಈ ವೇಳೆ ಅಶೋಕ್​​ ಗೆಹ್ಲೋಟ್​​ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ 1 ಲಕ್ಷ ಕೋಟಿ ರೂ. ಅನುದಾನ ನೀಡಿ ಎಂದು ವಿನಂತಿಸಿದರು.

ಭಾರತದಲ್ಲಿ ಕೊರೋನಾ ವೈರಸ್​​ ತೀವ್ರಗೊಳ್ಳುತ್ತಿದ್ದಂತೆಯೇ ಇಡೀ ದೇಶವನ್ನು ಲಾಕ್​​ಡೌನ್ ಮಾಡಲಾಗಿದೆ. ಇದರಿಂದ ದೇಶದ ಬುಹತೇಕ ರಾಜ್ಯಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ಕೊರೋನಾ ವೈರಸ್​​ ತಡೆಗಟ್ಟಲು ನೀವು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ಒಂದು ಲಕ್ಷ ಕೋಟಿ ಅನುದಾನ ನೀಡುವ ಮೂಲಕ ಆರ್ಥಿಕ ಸಹಾಯ ಮಾಡಿ ಎಂದು ಸಿಎಂ ಅಶೋಕ್​​ ಗೆಹ್ಲೋಟ್​​ ಪ್ರಧಾನಿಗೆ ವಿವರಿಸಿದರು.​​​

ಕೊರೋನಾ ವೈರಸ್ ಸೋಂಕು ಪರಿಸ್ಥಿತಿ ಹೇಗಿದೆ ಎಂಬುದನ್ನು ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ಇವತ್ತು ಗುರುವಾರ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಮಾತನಾಡಿದರು. ಸೋಂಕು ಹರಡುವುದನ್ನು ತಡೆಯಬಲ್ಲ ವಿಧಾನಗಳ ಕುರಿತು ಚರ್ಚೆ ನಡೆಸಿದರು. ಏಪ್ರಿಲ್ 14ರಂದು ಲಾಕ್ ಡೌನ್ ಅವಧಿ ಮುಗಿಯಲಿದ್ದು, ಅಲ್ಲಿಂದಾಚೆ ಪರಿಸ್ಥಿತಿ ಹೇಗೆ ನಿಭಾಯಿಸಬಹುದು ಎಂಬುದನ್ನು ನಿರ್ಧರಿಸಿ ಎಂದು ಪ್ರಧಾನಿ ಸೂಚಿಸಿದರು.

ಲಾಕ್ ಡೌನ್ ಅವಧಿ ಮುಗಿದ ನಂತರ ಕೊರೋನಾ ಸೋಂಕು ಹರಡದಂತೆ ಯಾವ್ಯಾವ ನಿರ್ಬಂಧಗಳನ್ನ ಮುಂದುವರಿಸಬಹುದು ಎಂದು ಒಂದು ಸಾಮಾನ್ಯ ಕಾರ್ಯತಂತ್ರ (ಎಕ್ಸಿಟ್ ಸ್ಟ್ರಾಟಿಜಿ) ರೂಪಿಸಲು ರಾಜ್ಯ ಸರ್ಕಾರಗಳಿಗೆ ಪ್ರಧಾನಿ ಕರೆ ನೀಡಿದರು.

ಇದನ್ನೂ ಓದಿ: ಸಿಎಎ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ರಾಜಸ್ಥಾನ ಸರ್ಕಾರ

ಮುಂದಿನ ಕೆಲ ವಾರಗಳು ಕೊರೋನಾ ವೈರಸ್ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲು ಆದ್ಯತೆ ಕೊಡಬೇಕು. ಸೋಂಕು ಪತ್ತೆ, ಪರೀಕ್ಷೆ, ಐಸೋಲೇಶನ್, ಕ್ವಾರಂಟೈನ್ ಇವುಗಳತ್ತ ಹೆಚ್ಚು ಗಮನ ಇರಲಿ. ಕೊರೋನಾ ರೋಗಿಗಳಿಗೆ ಪ್ರತ್ಯೇಕ ಆಸ್ಪತ್ರೆಗಳು ಸಿದ್ಧವಿರಲಿ. ಅವಶ್ಯ ವೈದ್ಯಕೀಯ ಸಿಬ್ಬಂದಿ ತಯಾರಾಗಿರಲಿ. ಆಯುಷ್ ವೈದ್ಯರನ್ನು ಬಳಕೆ ಮಾಡಿಕೊಳ್ಳಿ. ಅರೆವೈದ್ಯಕೀಯ ಸಿಬ್ಬಂದಿ, ಎನ್​ಸಿಸಿ ಮತ್ತು ಎನ್​ಎಸ್​ಎಸ್ ಕಾರ್ಯಕರ್ತರಿಗೆ ತರಬೇತಿ ನೀಡಿ ಅವರನ್ನೂ ನಿಮ್ಮ ಕಾರ್ಯಗಳಿಗೆ ಜೋಡಿಸಿಕೊಳ್ಳಿ ಎಂದು ಮೋದಿ ಸಲಹೆ ನೀಡಿದರು.
Youtube Video
First published: April 2, 2020, 8:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories