ಎಲ್ಲಾ ಸೋಂಕಿತರು ಚೇತರಿಕೆ: ಕೊರೋನಾ ವಿರುದ್ಧ ಜಯಿಸಿತೆ ಅಂಡಮಾನ್ ದ್ವೀಪ?

ಸಾಮಾಜಿಕ ದೂರ ಪಾಲನೆ, ದಿನದ 24 ಗಂಟೆಯೂ ನಿಗಾ ಇರಿಸುವುದು ಮೊದಲಾದ ಕ್ರಮಗಳಿಂದ ಅಂಡಮಾನ್ನಲ್ಲಿ ಕೋವಿಡ್-19 ರೋಗವನ್ನು ನಿಯಂತ್ರಿಸಿದ್ದೇವೆ ಎಂದು ಅಲ್ಲಿಯ ಆಡಳಿತ ತಿಳಿಸಿದೆ.

news18
Updated:April 17, 2020, 3:49 PM IST
ಎಲ್ಲಾ ಸೋಂಕಿತರು ಚೇತರಿಕೆ: ಕೊರೋನಾ ವಿರುದ್ಧ ಜಯಿಸಿತೆ ಅಂಡಮಾನ್ ದ್ವೀಪ?
ಪ್ರಾತಿನಿಧಿಕ ಚಿತ್ರ
  • News18
  • Last Updated: April 17, 2020, 3:49 PM IST
  • Share this:
ಪೋರ್ಟ್ ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕೊರೋನಾ ವೈರಸ್ ಸೋಂಕಿಗೆ ಗುರಿಯಾಗಿದ್ದ ಎಲ್ಲಾ 11 ಜನರು ಚೇತರಿಸಿಕೊಂಡಿದ್ದಾರೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. 11 ಸೋಂಕಿತರಲ್ಲಿ ರಲ್ಲಿ ಎಲ್ಲರೂ ಚೇತರಿಸಿಕೊಂಡಿರುವುದು ಅಂಡಮಾನ್​ನಲ್ಲಿ ಅತಿ ಹೆಚ್ಚು ಚೇತರಿಕೆ ಪ್ರಮಾಣ ಇದೆ. ಇಲ್ಲಿ 11 ಸೋಂಕಿತರಲ್ಲಿ ಎಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ಅಂಡಮಾನ್ಸ್ ಮತ್ತು ನಿಕೋಬಾರ್ ದ್ವೀಪಗಳ ಡಿಜಿಪಿ ದೀಪೇಂದರ್ ಪಾಠಕ್ ಎನ್​ಡಿಟಿವಿಗೆ ತಿಳಿಸಿದ್ದಾರೆ.

11 ಜನರು ಚೇತರಿಸಿಕೊಂಡರೂ ಸಹ ನಾವು ಎಚ್ಚರಿಕೆಯಿಂದ ಇದ್ದೇವೆ. ಮಾರ್ಗಸೂಚಿಗಳ ಪ್ರಕಾರ ವ್ಯವಸ್ಥೆಗಳು ಮುಂದುವರಿಯುತ್ತವೆ ಎಂದು ಅಂಡಮಾನ್ಸ್ ಮುಖ್ಯ ಕಾರ್ಯದರ್ಶಿ ಚೇತನ್ ಸಂಘಿ ಟ್ವೀಟ್ ಮಾಡಿದ್ದಾರೆ. ಈ ಕೇಂದ್ರಾಡಳಿತ ಪ್ರದೇಶದಲ್ಲಿ ಪೂಲ್ ಪರೀಕ್ಷೆಯನ್ನು ಜಾರಿಗೆ ತರುವಲ್ಲಿ ಸಂಘಿ ಅವರ ಪಾತ್ರ ಮಹತ್ವದ್ದು.

ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಪೂಲ್ ಪರೀಕ್ಷೆ ಜಾರಿಗೆ ತಂದ ಭಾರತದ ಕೆಲವೇ ಸ್ಥಳಗಳಲ್ಲಿ ಅಂಡಮಾನ್ಸ್ ಕೂಡ ಒಂದು. ಪೂಲ್ ಟೆಸ್ಟಿಂಗ್​ನಿಂದಾಗಿ ಕೊರೋನಾ ಪತ್ತೆ ಪರೀಕ್ಷೆಯ ವ್ಯಾಪ್ತಿಯನ್ನು ಹೆಚ್ಚಿಸುವಲ್ಲಿ ಸಾಧ್ಯವಾಯಿತು ಎಂದು ಮತ್ತೊಬ್ಬ ಅಧಿಕಾರಿ ಹೇಳುತ್ತಾರೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದ ಶೋಪಿಯಾನ್​ನಲ್ಲಿ ಭದ್ರತಾ ಪಡೆ ಎನ್​ಕೌಂಟರ್: ಇಬ್ಬರು ಉಗ್ರರ ಹತ್ಯೆ

ಏನಿದು ಪೂಲ್ ಟೆಸ್ಟಿಂಗ್?

ಪೂಲ್ ಪರೀಕ್ಷೆಯಲ್ಲಿ ಒಟ್ಟಿಗೆ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗುತ್ತದೆ. ಅಂದರೆ ಒಂದು ನಿರ್ದಿಷ್ಟ ಗುಂಪಿನ ಜನರ ಸ್ವ್ಯಾಬ್ ಮಾದರಿಗಳನ್ನ ಒಟ್ಟಿಗೆ ಇಟ್ಟು ಪರೀಕ್ಷಿಸುವುದು. ಅದರಲ್ಲಿ ನೆಗಟಿವ್ ಬಂದರೆ ಆ ಗುಂಪಿನಲ್ಲಿ ವ್ಯಕ್ತಿಗತವಾಗಿ ಯಾರನ್ನೂ ಪರೀಕ್ಷಿಸುವ ಅಗತ್ಯ ಇರುವುದಿಲ್ಲ. ಒಂದು ವೇಳೆ, ಆ ಪೂಲ್ ಟೆಸ್ಟಿಂಗ್​ನಲ್ಲಿ ಪಾಸಿಟಿವ್ ಬಂದರೆ ಗುಂಪಿನ ಪ್ರತಿಯೊಬ್ಬರದ್ದೂ ಪ್ರತ್ಯೇಕವಾಗಿ ಪರೀಕ್ಷಿಸಬೇಕಾಗುತ್ತದೆ. ಪೂಲ್ ಟೆಸ್ಟಿಂಗ್​ನಲ್ಲಿ ಪರೀಕ್ಷಾ ಕಿಟ್​ಗಳನ್ನ ಸದುಪಯೋಗಪಡಿಸಿಕೊಳ್ಳಲು ಅನುಕೂಲವಾಗುತ್ತದೆ.

ಹಲವು ರಾಜ್ಯಗಳಲ್ಲಿ ಟೆಸ್ಟಿಂಗ್ ಕಿಟ್​ಗಳು ತೀರಾ ಕಡಿಮೆ ಇವೆ. ಈ ಹಿನ್ನೆಲೆಯಲ್ಲಿ ಪೂಲ್ ಟೆಸ್ಟಿಂಗ್ ವಿಧಾನ ಅನುಸರಿಸುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಲಹೆ ನೀಡಿದೆ.ಇದನ್ನೂ ಓದಿ: ಏ. 20ರ ನಂತರ ವಾಹನ ಸಂಚಾರಕ್ಕೆ ಕೇರಳದಲ್ಲಿ ಸಮ-ಬೆಸ ಯೋಜನೆ ಜಾರಿ: ಸಿಎಂ ಪಿಣಾರಯಿ ವಿಜಯನ್

ಅಂಡಮಾನ್​ನಲ್ಲಿ ಸೋಂಕಿತರಲ್ಲದಿದ್ದರೂ 225 ಜನರು ಕ್ವಾರೆಂಟೈನ್​ನಲ್ಲಿದ್ದಾರೆ. ನಾವು ಯಾವುದೇ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಆದ್ದರಿಂದ ನಾವು ಈ ಜನರನ್ನು ಪ್ರತ್ಯೇಕಿಸಿಟ್ಟಿದ್ದೇವೆ. ಇಲ್ಲಿಯವರೆಗೆ ಅವರಲ್ಲಿ ಕೋವಿಡ್-19 ರ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂಡಮಾನ್ಸ್​ನ ಅದೃಷ್ಟಕ್ಕೆ ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡವರಲ್ಲಿ ಕೊರೋನಾ ಸೋಂಕು ಇದೆ ಎಂದು ಮೊದಲು ಪತ್ತೆಯಾಗಿದ್ದು ಇಲ್ಲಿಯೇ. ನಿಜಾಮುದ್ದೀನ್ ಸಭೆ ಮುಗಿಸಿ ವಿಮಾನದ ಮೂಲಕ ಬಂದ ಜನರನ್ನು ಏರ್​ಪೋರ್ಟ್​ನಿಂದ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೊದಲು 9 ಮಂದಿಗೆ ಸೋಂಕು ಇರುವುದು ದೃಢಪಟ್ಟಿತು. ಬಳಿಕ ಈ ಸಂಖ್ಯೆ 11ಕ್ಕೆ ಏರಿದೆ. ಸೋಂಕಿತರನ್ನು ಏರ್​ಪೋರ್ಟ್​ನಿಂದ ನೇರವಾಗಿ ಆಸ್ಪತ್ರೆಗೆ ಸಾಗಿಸಿದ್ದರಿಂದ ಇಲ್ಲಿ ಕೊರೋನಾ ಸಾಮುದಾಯಿಕವಾಗಿ ಹರಡಲು ಸಾಧ್ಯವಾಗಿಲ್ಲ.

- ಸಂಧ್ಯಾ ಎಂ.

First published: April 17, 2020, 3:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading