Covaxin for Kids| ಮಕ್ಕಳಿಗಾಗಿ ಕೋವ್ಯಾಕ್ಸಿನ್ ಲಸಿಕೆ: ಈ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿಗಳೇನು?

ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯನ್ನು, ಸಂಭಾವ್ಯ ಮೂರನೇ ಅಲೆಗೆ ಮುಂಚಿತವಾಗಿ ಮಕ್ಕಳಿಗೆ ನೀಡಬಹುದು ಎಂಬ ಭರವಸೆಯನ್ನು ಪೋಷಕರಲ್ಲಿ ಹುಟ್ಟುಹಾಕಿದೆ.

ಕೋವ್ಯಾಕ್ಸಿನ್

ಕೋವ್ಯಾಕ್ಸಿನ್

  • Share this:
ಮಕ್ಕಳಿಗೆ ನೀಡಬಲ್ಲಂತಹ ಲಸಿಕೆಯ ಕುರಿತು ಹಿಂದಿನಿಂದಲೂ ತುರ್ತು ಬಳಕೆಗೆ ತಜ್ಞರ ಸಮಿತಿಯಿಂದ ಅನುಮೋದನೆ ಪಡೆದ ಭಾರತ್ ಬಯೋಟೆಕ್‌ನ (Bharat Biotech) ಕೋವ್ಯಾಕ್ಸಿನ್ (Covaxin ) ಲಸಿಕೆಯನ್ನು, ಸಂಭಾವ್ಯ ಮೂರನೇ ಅಲೆಗೆ ಮುಂಚಿತವಾಗಿ ಮಕ್ಕಳಿಗೆ ನೀಡಬಹುದು ಎಂಬ ಭರವಸೆಯನ್ನು ಪೋಷಕರಲ್ಲಿ ಹುಟ್ಟುಹಾಕಿದೆ. ಭಾರತದ ಔಷಧ ನಿಯಂತ್ರಕ ಜನರಲ್ (DCGI) ನಿಂದ ಇನ್ನೂ ಅನುಮೋದನೆ ಪಡೆಯದಿದ್ದರೂ, ಈ ಲಸಿಕೆ ಸಾರ್ವಜನಿಕರಲ್ಲಿ ನಿರೀಕ್ಷೆಗಳನ್ನು ಹೆಚ್ಚಿಸುತ್ತಿದೆ ಎನ್ನುವುದಂತೂ ಸುಳ್ಳಲ್ಲ. ಝೈಡಸ್ ಕ್ಯಾಡಿಲಾದ ZyCoV-D ಸೋಂಕು ತಡೆಗಟ್ಟಲು ಪ್ರಪಂಚದಲ್ಲಿ ಬಳಸಿದ DNA ಲಸಿಕೆಯಾಗಿದ್ದು, 12 ವರ್ಷಗಳಿಗಿಂತ ಮೇಲ್ಪಟ್ಟ ಮಕ್ಕಳಿಗೆ 2 ನೇ ಹಂತದ ಪರೀಕ್ಷೆಯನ್ನು ಸಹ ಮುಕ್ತಗೊಳಿಸಿದೆ. ಡಾ. ಶ್ರೀಕಾಂತ್ ಜೆಟಿ, ಕನ್ಸಲ್ಟೆಂಟ್ - ಪೀಡಿಯಾಟ್ರಿಕ್ಸ್ ಮತ್ತು ಇಂಟರ್‌ವೆನ್ಶನಲ್ ಪಲ್ಮನಾಲಜಿ, ಆಸ್ಟರ್ CMI ಆಸ್ಪತ್ರೆ, ಬೆಂಗಳೂರು ಈಗ ಪೋಷಕರು ಹೊಂದಿರಬಹುದಾದ ಕೆಲವು ಅನುಮಾನಗಳನ್ನು ನಿವಾರಿಸಿದ್ದಾರೆ. ಹಾಗಿದ್ದರೆ ಆ ಪ್ರಶ್ನೆಗಳು ಮತ್ತು ತಜ್ಞರು ನೀಡಿದ ಉತ್ತರಗಳೇನು ಎಂಬುದನ್ನು ನೋಡೋಣ.

ಪ್ರ: ನೀಡಬೇಕಾದ ಡೋಸ್‌ನ ಪ್ರಮಾಣ ಎಷ್ಟು?

ಉ: ವಯಸ್ಕರು ಪಡೆಯುವ ಅರ್ಧದಷ್ಟು ಅನುಪಾತದಲ್ಲಿ ಮಕ್ಕಳಿಗೆ ನೀಡಲಾಗುತ್ತದೆ ಅಂದರೆ ವಯಸ್ಕರಿಗೆ 1ml ನೀಡಿದರೆ ಮಕ್ಕಳಿಗೆ ಇದರ ಅರ್ಧ ಎಂದರೆ 0.5 ml ನೀಡಲಾಗುತ್ತದೆ. ಇತರ ಲಸಿಕೆಗಳಂತೆಯೇ ಇದನ್ನು ಸ್ನಾಯುವಿನೊಳಗೆ ಚುಚ್ಚಲಾಗುತ್ತದೆ. 4 ವಾರಗಳಲ್ಲಿ 2 ಲಸಿಕೆಗಳನ್ನು ನೀಡಲಾಗುತ್ತದೆ (ಮೊದಲ ಡೋಸ್‌ನ ನಂತರ 28 ದಿನಗಳಲ್ಲಿ)

ಪ್ರ: ಮಕ್ಕಳಿಗೆ ಲಸಿಕೆ ಹಾಕುವುದು ಎಂದರೆ ನಾವು ಸಾಂಕ್ರಾಮಿಕ ರೋಗವನ್ನು ಗೆದ್ದಿದ್ದೇವೆ ಎಂದರ್ಥವೇ?

ಉ:ವಯಸ್ಕರಿಗೆ ಹೋಲಿಸಿದರೆ ಮಕ್ಕಳ ಜನಸಂಖ್ಯೆಯಲ್ಲಿ ಸೋಂಕಿನ ತೀವ್ರತೆಯು ಕಡಿಮೆಯಾಗಿದೆ. ಆದರೆ ಮಕ್ಕಳು ಅಸುರಕ್ಷಿತ ಗುಂಪಾಗಿರುವುದರಿಂದ ಮತ್ತು ಸೋಂಕಿಗೆ ಒಳಗಾದಲ್ಲಿ ಅವರು ಸೂಪರ್ ಸ್ಪ್ರೆಡರ್‌ಗಳಾಗಬಹುದು. ಅಲ್ಲದೆ, ದೊಡ್ಡ ಸಮುದಾಯಕ್ಕೆ ಸೋಂಕು ಹರಡುವಾಗ ಅದು ಬಹು ರೂಪಾಂತರಗೊಳ್ಳಬಹುದಾದ ಹೆಚ್ಚಿನ ಅಪಾಯವಿದೆ. ಆದ್ದರಿಂದ ಸೋಂಕಿನ ಮತ್ತಷ್ಟು ಅಲೆಗಳನ್ನು ತಪ್ಪಿಸಲು, ಲಸಿಕೆಯೊಂದೇ ಈಗ ಅತ್ಯುತ್ತಮ ಮತ್ತು ಏಕೈಕ ಪರಿಣಾಮಕಾರಿ ಮಾರ್ಗವೆಂದು ತೋರುತ್ತದೆ.

ಭಾರತದಲ್ಲಿ 140 ಬಿಲಿಯನ್ ಜನರಲ್ಲಿ ನಾವು ಕನಿಷ್ಠ 25-30% ದಷ್ಟು ಮಕ್ಕಳ ಜನಸಂಖ್ಯೆಯನ್ನು ಹೊಂದಿದ್ದೇವೆ ಮತ್ತು ಕರ್ನಾಟಕ ರಾಜ್ಯವೊಂದೇ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 1.7 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಸೋಂಕಿನಿಂದ ಹಾಗೂ ಮೂರನೇ ತರಂಗದಿಂದ ಅವರನ್ನು ತಡೆಗಟ್ಟಲು ಲಸಿಕೆ ಹಾಕುವುದು ಇದು ನಿರ್ಣಾಯಕವಾಗಿದೆ. ಅಲ್ಲದೆ, ಇದು MISC ನಂತಹ ಕೋವಿಡ್ ನಂತರದ ಅನೇಕ ತೊಡಕುಗಳನ್ನು ಮಕ್ಕಳಲ್ಲಿ ತಡೆಗಟ್ಟಲು ಸಹಾಯ ಮಾಡುತ್ತದೆ.

ಪ್ರ: ಲಸಿಕೆ ಪಡೆದ ನಂತರ ಇದರ ಪರಿಣಾಮಗಳಿಂದ ಮಕ್ಕಳು ಬಳಲುತ್ತಾರೆಯೇ? ಹೌದು ಎಂದಾದಲ್ಲಿ ಅವು ಯಾವುವು?

ಉ: ಹೆಚ್ಚಿನ ಮಕ್ಕಳ ಲಸಿಕೆಗಳಂತೆಯೇ, ಜ್ವರ, ಮೈಕೈ ನೋವು ಹಾಗೂ ಚುಚ್ಚುಮದ್ದು ಚುಚ್ಚಿದ ನೋವು ಮೊದಲಾದವುಗಳು ಸಾಮಾನ್ಯವಾಗಿರುತ್ತದೆ. ಆದರೆ ಇದಕ್ಕಿಂತ ಗಂಭೀರ ಪರಿಣಾಮಗಳಾವುದೂ ಉಂಟಾಗಬಾರದು. ಲಸಿಕೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಈ ಸಣ್ಣ ಅಡ್ಡಪರಿಣಾಮಗಳು ಸ್ವೀಕಾರಾರ್ಹವಾಗಿವೆ.

ಇದನ್ನೂ ಓದಿ: Good News: ಭಾರತಕ್ಕೆ ಶುಭ ಸಂಕೇತವಾದ ಮಂಗಳವಾರ; ಕಳೆದ 7 ತಿಂಗಳಲ್ಲಿ ಅತ್ಯಂತ ಕಡಿಮೆ ಕೋವಿಡ್ ಪ್ರಕರಣ ದಾಖಲು

ಪ್ರ: ಇನ್ನೂ ಕೆಲವೊಂದು ಪ್ರದೇಶಗಳಲ್ಲಿ ಕೋವ್ಯಾಕ್ಸಿನ್ ಅನ್ನು ಅಂಗೀಕರಿಸಲಾಗಿಲ್ಲ, ಈ ಸಂದರ್ಭದಲ್ಲಿ ಮಕ್ಕಳಿಗೆ ಇತರ ಆಯ್ಕೆಗಳೇನು?

ಉ: ಕೋವ್ಯಾಕ್ಸಿನ್ ತಯಾರಿಸಲು ಬಳಸುವ ತಂತ್ರಜ್ಞಾನವು ಸುರಕ್ಷತೆಯ ದಾಖಲೆಯನ್ನು ಸಾಬೀತುಪಡಿಸಿದ್ದರಿಂದ ಇದು ಸುರಕ್ಷಿತವೆಂದು ತೋರುತ್ತಿದೆ. ಆದರೆ ಇನ್ನೂ ಸಾಕಷ್ಟು ವಿವರಗಳನ್ನು ಸಾರ್ವಜನಿಕಗೊಳಿಸಿಲ್ಲ. ಹಾಗಾಗಿ ಇದನ್ನು ದೃಢೀಕರಿಸಲು ಕಷ್ಟವಿದೆ. ಪ್ರಸ್ತುತ ಸನ್ನಿವೇಶದಲ್ಲಿ ಈ ಲಸಿಕೆ ಅತ್ಯಂತ ಸುರಕ್ಷಿತವಾದುದು.

ಇದನ್ನೂ ಓದಿ:Covaxin for Children: 2 ರಿಂದ 18 ವರ್ಷದೊಳಗಿನ ಮಕ್ಕಳ ಕೋವ್ಯಾಕ್ಸಿನ್ ಲಸಿಕೆಗೆ SEC ಗ್ರೀನ್ ಸಿಗ್ನಲ್

ಇನ್ನು ಪರ್ಯಾಯ ಆಯ್ಕೆಗಳತ್ತ ನೋಡುವುದಾದರೆ, ಕೋವಿಶೀಲ್ಡ್ ಇನ್ನೂ ಪ್ರಾಯೋಗಿಕ ಹಂತಗಳಲ್ಲಿದೆ. ಫೈಜರ್ ಲಸಿಕೆಯ 2 ನೇ ಡೋಸ್ ನಂತರ ಉಂಟಾಗುವ ಮಯೋಕಾರ್ಡಿಟಿಸ್ (ಹೃದಯ ಸ್ನಾಯುವಿನ ಉರಿಯೂತ) ಬಗ್ಗೆ ಕಳವಳ ಇದೆ. (ಮಕ್ಕಳ ಬಳಕೆಗಾಗಿ ಈ ಲಸಿಕೆ ಭಾರತದಲ್ಲಿ ಇನ್ನೂ ಅನುಮೋದನೆ ಪಡೆದಿಲ್ಲ) ZyCoV- D ಈ ವಿಷಯದಲ್ಲಿ ಅಷ್ಟೊಂದು ಅನುಭವಿ ಲಸಿಕೆಯಲ್ಲ ಹಾಗಾಗಿ ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಇನ್ನಷ್ಟು ವಿವರಗಳಿಗೆ ಕಾಯಬೇಕಾಗಿದೆ.
Published by:MAshok Kumar
First published: