Covaxin: ಭಾರತದ ಕೋವ್ಯಾಕ್ಸಿನ್​ ಸೂಪರ್ ಎಂದ ಹಂಗೇರಿ!; GMP ಸರ್ಟಿಫಿಕೇಟ್ ಪಡೆದ ಭಾರತ್ ಬಯೋಟೆಕ್

ಕೋವ್ಯಾಕ್ಸಿನ್​​ ಲಸಿಕೆ ಹಂಗೇರಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಸಿ ಮತ್ತು ನ್ಯೂಟ್ರಿಷನ್‌ನಿಂದ ಅನುಮೋದನೆ ಪಡೆದಿದೆ.

ಕೋವ್ಯಾಕ್ಸಿನ್

ಕೋವ್ಯಾಕ್ಸಿನ್

 • Share this:
  ನವದೆಹಲಿ(ಆ.05): ಭಾರತ್​ ಬಯೋಟೆಕ್​​ನ ಕೋವಿಡ್​-19 ಲಸಿಕೆ ಕೋವ್ಯಾಕ್ಸಿನ್​ ಬಗ್ಗೆ ಹಂಗೇರಿ ಮೆಚ್ಚುಗೆ ವ್ಯಕ್ತಪಡಿಸಿದೆ. ಹಂಗೇರಿಯನ್​ ಅಧಿಕಾರಿಗಳು ಭಾರತ್​ ಬಯೋಟೆಕ್​ ಕೋವ್ಯಾಕ್ಸಿನ್​ಗೆ ಉತ್ತಮ ಉತ್ಪಾದನಾ ಪದ್ಧತಿ(ಜಿಎಂಪಿ-GMP) ಪ್ರಮಾಣ ಪತ್ರವನ್ನು ನೀಡಿ ಭೇಷ್ ಎಂದಿದ್ದಾರೆ. ಈ ಬಗ್ಗೆ ಗುರುವಾರ ಭಾರತ್​ ಬಯೋಟೆಕ್ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದೆ. ಜೊತೆಗೆ​ ಮತ್ತೊಂದು ಪ್ರಮುಖ ಮೈಲಿಗಲ್ಲು ಸಾಧಿಸಿದ್ದೇವೆ ಎಂದು ಬರೆದುಕೊಂಡಿದೆ.

  ಕೋವ್ಯಾಕ್ಸಿನ್​​ ಲಸಿಕೆ ಹಂಗೇರಿಯಿಂದ ಜಿಎಂಪಿ ಪ್ರಮಾಣ ಪತ್ರ ಪಡೆದಿದ್ದು, ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದೇವೆ.ಯುರೋಪಿಯನ್​ ರೆಗ್ಯುಲಟೋರೀಸ್​ನಿಂದ ಭಾರತ್​ ಬಯೋಟೆಕ್​​ ಪಡೆದ ಮೊದಲ EUDRAGDMP ಪ್ರಮಾಣ ಪತ್ರ ಇದಾಗಿದೆ ಎಂದು ಭಾರತ್​ ಬಯೋಟೆಕ್ ಹೇಳಿದೆ.

  ಕೋವ್ಯಾಕ್ಸಿನ್​​ ಲಸಿಕೆ ಹಂಗೇರಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಸಿ ಮತ್ತು ನ್ಯೂಟ್ರಿಷನ್‌ನಿಂದ ಅನುಮೋದನೆ ಪಡೆದಿದೆ. ಕೋವ್ಯಾಕ್ಸಿನ್ ತಯಾರಿಕೆಗಾಗಿ ಜಿಎಂಪಿಯನ್ನು ಪ್ರಮಾಣೀಕರಿಸುತ್ತದೆ ಎಂದು ಟ್ವಿಟರ್​ನಲ್ಲಿ ಪೋಸ್ಟ್ ಮಾಡಲಾಗಿದೆ.

  ಇದನ್ನೂ ಓದಿ:IMA Fraud Case: ಮಾಜಿ ಸಚಿವ ರೋಷನ್ ಬೇಗ್​ ಮನೆ ಮೇಲೆ ED ದಾಳಿ

  ಜಿಎಂಪಿಯ ಪ್ರಮಾಣಪತ್ರವನ್ನು ಈಗ EudraGMDP ಡೇಟಾಬೇಸ್​​​​ನಲ್ಲಿ ಇರಿಸಲಾಗಿದೆ. ಇದು ಯುರೋಪಿಯನ್​ ಸಮುದಾಯದ ಉತ್ಪಾದನಾ ದೃಢೀಕರಣಗಳ ದಾಖಲೆಗಳ ಸಂಗ್ರಹ ಮತ್ತು ಉತ್ತಮ ಉತ್ಪಾದನಾ ಅಭ್ಯಾಸದ ಪ್ರಮಾಣ ಪತ್ರ ಎಂದು ಭಾರತ್​ ಬಯೋಟೆಕ್ ಹೇಳಿದೆ.

  ಭಾರತ್​ ಬಯೋಟೆಕ್ ಕಂಪನಿಯು ಕೋವ್ಯಾಕ್ಸಿನ್​​ ತುರ್ತು ಬಳಕೆಯ ದೃಢೀಕರಣಕ್ಕಾಗಿ ವಿಶ್ವಾದ್ಯಂತ ಹಲವಾರು ಹೆಚ್ಚುವರಿ ದೇಶಗಳಿಗೆ ದಾಖಲೆಗಳನ್ನು ಸಲ್ಲಿಸುವ ಉದ್ದೇಶ ಹೊಂದಿದೆ ಎಂದು ತಿಳಿದು ಬಂದಿದೆ.

  ಈ ಅನುಮೋದನೆಯಿಂದಾಗಿ ಭಾರತ್​ ಬಯೋಟೆಕ್​​ ಜಾಗತಿಕ ಗುಣಮಟ್ಟದ ಮಾನದಂಡಗಳಲ್ಲಿ ಲಸಿಕೆಗಳನ್ನು ನವೀಕರಿಸುವ ಮತ್ತು ತಯಾರಿಸುವ ಮೂಲಕ ಕೋವಿಡ್​ -19 ಸಾಂಕ್ರಾಮಿಕ ರೋಗದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.

  ಜಾಗತಿಕ ಮಟ್ಟದ ನಾವೀನ್ಯತೆ ಮತ್ತು ಲಸಿಕೆಗಳ ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯ ಬದ್ಧತೆಯನ್ನು ಈ ಮನ್ನಣೆ ಪ್ರಶಂಸಿಸುತ್ತದೆ.

  ಇದನ್ನೂ ಓದಿ:IMA Scam Case: ಜಮೀರ್ ಅಹ್ಮದ್​ ನಿವಾಸ, ಕಚೇರಿ ಮೇಲೆ ED ಅಧಿಕಾರಿಗಳ ದಾಳಿ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು
  Published by:Latha CG
  First published: