HOME » NEWS » Coronavirus-latest-news » COVAXIN PHASE 2 AND 3 CLINICAL TRIALS FOR 2 18 AGE GROUP GET GREEN SIGNAL RHHSN

Covaxin: 2ರಿಂದ 18 ವರ್ಷದವರೆಗೆ ಕೋವಾಕ್ಸಿನ್ ಲಸಿಕೆ 2-3ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಗ್ರೀನ್ ಸಿಗ್ನಲ್!

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು 18 ರಾಜ್ಯಗಳಿಗೆ ಕೊವಾಕ್ಸಿನ್ ಲಸಿಕೆ ಪೂರೈಸುತ್ತಿದೆ. ಆಂಧ್ರ ಪ್ರದೇಶ, ಹರಿಯಾಣ, ಒಡಿಶಾ, ಅಸ್ಸಾಂ, ಜಮ್ಮು, ಕಾಶ್ಮೀರ, ತಮಿಳುನಾಡು, ಬಿಹಾರ, ಜಾರ್ಖಂಡ್ ಮತ್ತು ದೆಹಲಿ, ಛತ್ತೀಸ್‌ಗಡ್, ಕರ್ನಾಟಕ, ತೆಲಂಗಾಣ, ತ್ರಿಪುರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಲಸಿಕೆ ಸರಬರಾಜು ಮಾಡುತ್ತಿದೆ.

news18-kannada
Updated:May 13, 2021, 2:47 PM IST
Covaxin: 2ರಿಂದ 18 ವರ್ಷದವರೆಗೆ ಕೋವಾಕ್ಸಿನ್ ಲಸಿಕೆ 2-3ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಗ್ರೀನ್ ಸಿಗ್ನಲ್!
ಕೋವ್ಯಾಕ್ಸಿನ್ ಲಸಿಕೆ
  • Share this:
ನವದೆಹಲಿ: 2ರಿಂದ 18 ವರ್ಷದ ವಯಸ್ಸಿನವರಿಗೆ ಭಾರತ್ ಬಯೋಟೆಕ್​ನ ಕೋವಿಡ್- 19 ಲಸಿಕೆ ಕೋವ್ಯಾಕ್ಸಿನ್ ನನ್ನು ಎರಡು ಮತ್ತು ಮೂರನೇ ಹಂತದಲ್ಲಿ ಪ್ರಯೋಗ ಮಾಡಲು ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ. ದೆಹಲಿಯ ಏಮ್ಸ್​, ಪಾಟ್ನಾದ ಏಮ್ಸ್​ ಮತ್ತು ನಾಗಪುರ ಮೆಡಿಟ್ರಿನಾ ಇನ್ಸ್​ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್​ ಸಂಸ್ಥೆಗಳನ್ನು ಒಳಗೊಂಡಂತೆ ವಿವಿಧ ಭಾಗಗಳಲ್ಲಿ ಒಟ್ಟು 525 ಸ್ಥಳಗಳಲ್ಲಿ ಈ ಪ್ರಯೋಗ ನಡೆಯಲಿದೆ.

ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್​ಸಿಒ) ಕೋವಿಡ್​ -19 ಕುರಿತು ವಿಷಯ ತಜ್ಞರ ಸಮಿತಿ (ಎಸ್‌ಇಸಿ) ಮಂಗಳವಾರ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅರ್ಜಿಯನ್ನು ಚರ್ಚಿಸಿ ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಅನುಮತಿ ಕೋರಿತು. ಹಾಗೂ 2 ರಿಂದ 18 ವರ್ಷದವರೆಗಿನ ಸುರಕ್ಷತೆ, ಪ್ರತಿಕ್ರಿಯೆ ಮತ್ತು ರೋಗನಿರೋಧಕ ಶಕ್ತಿ ಮೌಲ್ಯಮಾಪನ ಮಾಡಲು ಅನುಮತಿ ಕೋರಿದೆ.

ವಿವರವಾದ ಚರ್ಚೆಯ ನಂತರ, 2 ರಿಂದ 18 ವರ್ಷ ವಯಸ್ಸಿನವರಿಗೆ ಕೊರೋನಾ ವೈರಸ್ ಲಸಿಕೆಯ ಪ್ರಸ್ತಾವಿತ 2 ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ಸಮಿತಿ ಶಿಫಾರಸು ಮಾಡಿದೆ. ಹಂತ 2 ಕ್ಲಿನಿಕಲ್ ಪ್ರಯೋಗದ ಮಧ್ಯಂತರ ಸುರಕ್ಷತಾ ಡೇಟಾವನ್ನು ಸಂಸ್ಥೆಯು ಸಲ್ಲಿಸಬೇಕು ಎಂಬ ಷರತ್ತಿಗೆ ಒಳಪಟ್ಟಿರುತ್ತದೆ. ಹಾಗೂ ಸಿಡಿಎಸ್​ಸಿಒ, ಡಿಎಸ್ಎಂಬಿ ಶಿಫಾರಸುಗಳೊಂದಿಗೆ ಅಧ್ಯಯನದ ಮೂರನೇ ಹಂತ ಮುಂದುವರಿಸಬೇಕು ಎಂದು ಮೂಲಗಳಿ ತಿಳಿಸಿವೆ.

ಈ ಮೊದಲು ಫೆಬ್ರವರಿ 24 ರ ಎಸ್‌ಇಸಿ ಸಭೆಯಲ್ಲಿ ಈ ಪ್ರಸ್ತಾಪವನ್ನು ಚರ್ಚಿಸಲಾಗಿತ್ತು ಮತ್ತು ಪರಿಷ್ಕೃತ ಕ್ಲಿನಿಕಲ್ ಟ್ರಯಲ್ ಪ್ರೋಟೋಕಾಲ್ ಸಲ್ಲಿಸಲು ಸಂಸ್ಥೆಯನ್ನು ಕೇಳಲಾಯಿತು. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಾಕ್ಸಿನ್ ಅನ್ನು ಭಾರತದ ಪ್ರಸ್ತುತ ನಡೆಯುತ್ತಿರುವ COVID-19 ವ್ಯಾಕ್ಸಿನೇಷನ್ ಅಭಿಯಾನದಲ್ಲಿ ವಯಸ್ಕರಲ್ಲಿ ಬಳಸಲಾಗುತ್ತಿದೆ.

ಇದನ್ನು ಓದಿ: Covid-19 Vaccine: ಭಾರತದಲ್ಲಿ ಮಿತಿ ಮೀರಿದ ಕೊರೋನಾ ಲಸಿಕೆಗಳ ಕೊರತೆ; ಇಂದು ಆರೋಗ್ಯ ಸಚಿವರ ಸಭೆಯಲ್ಲಿ ‌ಸಿಗಲಿದೆಯಾ ಪರಿಹಾರ?

ಕೋವ್ಯಾಕ್ಸಿನ್ ಲಸಿಕೆ ಸರಬರಾಜು ಸಂಬಂಧ ಹಲವು ರಾಜ್ಯಗಳು ಉದ್ದೇಶಪೂರ್ವಕವಾಗಿ ದೂರು ನೀಡಿರುವುದು ನಿರಾಸೆ ಉಂಟು ಮಾಡಿದೆ ಎಂದು ಈ ವಾರದ ಮೊದಲು ಭಾರತ್ ಬಯೋಟೆಕ್ ಸಂಸ್ಥೆ ಹೇಳಿತ್ತು. ಸಣ್ಣ ರಾಜ್ಯಗಳು ಸೇರಿದಂತೆ 18 ರಾಜ್ಯಗಳಿಗೆ ಲಸಿಕೆ ಸರಬರಾಜು ಮಾಡಲಾಗುತ್ತಿದೆ. ಕೆಲವು ರಾಜ್ಯಗಳ ಉದ್ದೇಶಪೂರ್ವಕ ದೂರನ್ನು ಕೇಳುವುದಕ್ಕೆ ನಮಗೆ ನಿರಾಸೆಯಾಗುತ್ತದೆ. ನಮ್ಮ ಸಂಸ್ಥೆಯ 50 ಉದ್ಯೋಗಿಗಳು ಕೋವಿಡ್ ಪಾಸಿಟಿವ್​ನಿಂದಾಗಿ ಕೆಲಸದಿಂದ ದೂರ ಉಳಿದಿದ್ದಾರೆ. ಆದರೂ ನಾವು ಸಾಂಕ್ರಾಮಿಕದ ನಡುವೆ, ಲಾಕ್​ಡೌನ್​ ನಡುವೆ ದಿನದ 24 ಗಂಟೆ ನಿಮಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ಎಲ್ಲಾ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
Youtube Video
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು 18 ರಾಜ್ಯಗಳಿಗೆ ಕೊವಾಕ್ಸಿನ್ ಲಸಿಕೆ ಪೂರೈಸುತ್ತಿದೆ. ಆಂಧ್ರ ಪ್ರದೇಶ, ಹರಿಯಾಣ, ಒಡಿಶಾ, ಅಸ್ಸಾಂ, ಜಮ್ಮು, ಕಾಶ್ಮೀರ, ತಮಿಳುನಾಡು, ಬಿಹಾರ, ಜಾರ್ಖಂಡ್ ಮತ್ತು ದೆಹಲಿ, ಛತ್ತೀಸ್‌ಗಡ್, ಕರ್ನಾಟಕ, ತೆಲಂಗಾಣ, ತ್ರಿಪುರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಲಸಿಕೆ ಸರಬರಾಜು ಮಾಡುತ್ತಿದೆ.
Published by: HR Ramesh
First published: May 13, 2021, 2:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories