HOME » NEWS » Coronavirus-latest-news » COVAXIN FDA REJECTS EMERGENCY USE AUTHORIZATION FOR INDIAN COVID VACCINE BHARAT BIOTECHS COVAXIN IN AMERICA SCT

FDA rejects Bharat Biotech: ಅಮೆರಿಕದಲ್ಲೂ ಭಾರತ್ ಬಯೋಟೆಕ್​ನ ಕೋವ್ಯಾಕ್ಸಿನ್ ಲಸಿಕೆಗಿಲ್ಲ ಅನುಮತಿ

FDA rejects Bharat Biotech: ವಿಶ್ವ ಆರೋಗ್ಯ ಸಂಸ್ಥೆಯ ಲಸಿಕೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಭಾರತ್ ಬಯೋಟೆಕ್ ಪರದಾಡುತ್ತಿರುವ ಬೆನ್ನಲ್ಲೇ ಅಮೆರಿಕ ಕೂಡ ಕೋವ್ಯಾಕ್ಸಿನ್ ಲಸಿಕೆಯನ್ನು ತಿರಸ್ಕರಿಸಿದೆ.

Sushma Chakre | news18-kannada
Updated:June 11, 2021, 2:28 PM IST
FDA rejects Bharat Biotech: ಅಮೆರಿಕದಲ್ಲೂ ಭಾರತ್ ಬಯೋಟೆಕ್​ನ ಕೋವ್ಯಾಕ್ಸಿನ್ ಲಸಿಕೆಗಿಲ್ಲ ಅನುಮತಿ
ಕೋವಾಕ್ಸಿನ್ ಲಸಿಕೆ.
  • Share this:
ನವದೆಹಲಿ (ಜೂನ್ 11): ಸ್ವದೇಶಿ ಕೊರೋನಾ ಲಸಿಕೆಯಾದ ಕೋವ್ಯಾಕ್ಸಿನ್ ಅನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ಲಸಿಕೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಭಾರತ್ ಬಯೋಟೆಕ್ ಪರದಾಡುತ್ತಿರುವ ಬೆನ್ನಲ್ಲೇ ಅಮೆರಿಕ ಕೂಡ ಈ ಲಸಿಕೆಯನ್ನು ತಿರಸ್ಕರಿಸಿದೆ. ಕೋವ್ಯಾಕ್ಸಿನ್​ ತುರ್ತು ಬಳಕೆಗೆ ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಅಮೆರಿಕದ ಎಫ್​ಡಿಎ (ಆಹಾರ ಮತ್ತು ಔಷಧ ಆಡಳಿತ) ತಿಳಿಸಿದೆ.

ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಬೇಕೆಂದು ಭಾರತ್ ಬಯೋಟೆಕ್ FDAಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಆ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಎಫ್​ಡಿಎ ಅಮೆರಿಕದಲ್ಲಿ ಕೋವ್ಯಾಕ್ಸಿನ್ ಬಳಕೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದಿದೆ. ಈಗಾಗಲೇ ಹಲವು ದೇಶಗಳಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಬೇರೆ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚಿಸಲಾಗುತ್ತಿದೆ.

ಕೋವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ಹಂತದ ಕೊನೆಯ ಘಟ್ಟದಲ್ಲಿ ಇದ್ದಾಗಲೇ ಅದರ ತುರ್ತು ಬಳಕೆಗೆ ನಿರ್ಬಂಧಿತ ಅನುಮತಿ ನೀಡಲಾಗಿತ್ತು. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಕೂಡ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡುವ ಕುರಿತು ಮತ್ತಷ್ಟು ದಾಖಲೆ ಮತ್ತು ಮಾಹಿತಿ ಬೇಕು ಎಂದು ಸೂಚನೆ ನೀಡಿದೆ.

ಇದನ್ನೂ ಓದಿ: Karnataka Lockdown: ಕರ್ನಾಟಕದ 11 ಜಿಲ್ಲೆಗಳಲ್ಲಿ ಲಾಕ್​ಡೌನ್ ವಿಸ್ತರಣೆ; ಸೋಮವಾರದಿಂದ ಯಾವುದಕ್ಕೆ ಅವಕಾಶ? ಯಾವುದಕ್ಕೆ ನಿರ್ಬಂಧ?

ಏಪ್ರಿಲ್ 18ರಂದು ಭಾರತ್ ಬಯೋಟೆಕ್ ಸಂಸ್ಥೆ ಮೇ 18ರಂದು EOI (Expression of Interest) ವ್ಯಾಕ್ಸಿನ್ ತುರ್ತು ಬಳಕೆಯ ಅನುಮತಿ ಕೋರಿ ವಿಶ್ವ ಸಂಸ್ಥೆಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಆದರೆ, ಮೇ 18ರಂದು ವಿಶ್ವ ಆರೋಗ್ಯ ಸಂಸ್ಥೆ ಕೋವ್ಯಾಕ್ಸಿನ್ ಲಸಿಕೆಯ ಕುರಿತು ಹೆಚ್ಚುವರಿ ಮಾಹಿತಿ ನೀಡುವಂತೆ ಕೇಳಿತ್ತು. ಕೋವ್ಯಾಕ್ಸಿನ್ ಕೋವ್ಯಾಕ್ಸಿನ್‌ ಲಸಿಕೆ ತುರ್ತು ಬಳಕೆ ಪಟ್ಟಿ(ಇಯುಎಲ್)ಯಲ್ಲಿ ಸ್ಥಾನ ಪಡೆಯುವ ಸಂಬಂಧ ಈಗಾಗಲೇ ಶೇ.90ರಷ್ಟು ದಾಖಲೆಗಳನ್ನು ಡಬ್ಲ್ಯುಎಚ್‌ಒಗೆ ಸಲ್ಲಿಸಲಾಗಿದೆ ಎಂದು ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) ಈ ಹಿಂದೆ ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು.

ಕೋವ್ಯಾಕ್ಸಿನ್‌ ತುರ್ತು ಬಳಕೆ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆಯ ಅನುಮತಿಯನ್ನು ಪಡೆಯುವ ಕುರಿತ ಚರ್ಚೆಯಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಲಿಮಿಟೆಡ್ ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು. ಅಮೆರಿಕಾದಲ್ಲಿ ಕೋವ್ಯಾಕ್ಸಿನ್ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಅಮೆರಿಕಾದ ಆಹಾರ ಮತ್ತು ಔಷಧ ಆಡಳಿತ (ಎಫ್​ಡಿಎ) ಜೊತೆಗೆ ಮಾತುಕತೆಗೆ ಮುಂದಾಗಿತ್ತು. ಆದರೆ, ಭಾರತ್ ಬಯೋಟೆಕ್​ನ ಪ್ರಸ್ತಾವನೆಯನ್ನು ಎಫ್​ಡಿಎ ತಿರಸ್ಕರಿಸಿದೆ.



ಭಾರತ್ ಬಯೋಟೆಕ್​ನ ಅಮೆರಿಕದ ಪಾರ್ಟನರ್ ಆಗಿರುವ ಆಕ್ಯುಜೆನ್​ಗೆ ಈ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಿರುವ ಎಫ್​ಡಿಎ, ಹೆಚ್ಚುವರಿ ಪ್ರಯೋಗಳನ್ನು ನಡೆಸಿ ಆ ವರದಿಗಳನ್ನು ನೀಡಿದರೆ ಮಾತ್ರ ಅಮೆರಿಕದಲ್ಲಿ ಕೋವ್ಯಾಕ್ಸಿನ್ ಬಳಕೆಗೆ ಅನುಮತಿ ನೀಡಲು ಸಾಧ್ಯ. ಅಲ್ಲಿಯವರೆಗೂ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಎಫ್​ಡಿಎಗೆ ಯಾವ ರೀತಿಯ ಹೆಚ್ಚುವರಿ ದಾಖಲಾತಿಗಳು ಬೇಕೆಂಬ ಬಗ್ಗೆ ಮಾಹಿತಿ ಕೇಳಿದ್ದೇವೆ. ಆ ದಾಖಲೆಗಳನ್ನು ಒದಗಿಸಲಾಗುವುದು ಎಂದು ಭಾರತ್ ಬಯೋಟೆಕ್ ಹೇಳಿದೆ.
Youtube Video

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಶೀಘ್ರದಲ್ಲೇ ಕೋವ್ಯಾಕ್ಸಿನ್​​ಗಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಬಳಕೆ ಪಟ್ಟಿಯನ್ನು (ಇಯುಎಲ್) ಪಡೆಯಲಿದೆ ಎಂದು ಕೇಂದ್ರ ಸರ್ಕಾರ ಭರವಸೆ ವ್ಯಕ್ತಪಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆ ಪಟ್ಟಿ (ಇಯುಎಲ್-Emergency Use Listing) ಕೋವಿಡ್ -19 ಲಸಿಕೆಗಳ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ನಿರ್ಣಯಿಸುತ್ತದೆ ಮತ್ತು ಕೋವಿಡ್ -19 ಲಸಿಕೆಗಳನ್ನು ಆಮದು ಮಾಡಿಕೊಳ್ಳಲು ಇದು ಅನುಮತಿ ನೀಡುತ್ತದೆ. ಕೋವಾಕ್ಸಿನ್ ಈಗಾಗಲೇ 11 ದೇಶಗಳಿಂದ ನಿಯಂತ್ರಕ ಅನುಮೋದನೆ ಪಡೆದಿದೆ.
Published by: Sushma Chakre
First published: June 11, 2021, 10:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories